ಸೋನಾಕ್ಷಿ ಕೂಲಿಂಗ್​ ಗ್ಲಾಸ್​ ತೆಗೆಸಿದ ಏರ್​ಪೋರ್ಟ್​ ಸಿಬ್ಬಂದಿ! ಇದಕ್ಕೂ ಮದ್ವೆಗೂ ಏನಪ್ಪಾ ಸಂಬಂಧ?

Published : Jul 28, 2024, 03:22 PM IST
ಸೋನಾಕ್ಷಿ ಕೂಲಿಂಗ್​ ಗ್ಲಾಸ್​ ತೆಗೆಸಿದ ಏರ್​ಪೋರ್ಟ್​ ಸಿಬ್ಬಂದಿ! ಇದಕ್ಕೂ ಮದ್ವೆಗೂ ಏನಪ್ಪಾ ಸಂಬಂಧ?

ಸಾರಾಂಶ

ವಿಮಾನ ನಿಲ್ದಾಣದಲ್ಲಿ ನಟಿ ಸೋನಾಕ್ಷಿ ಸಿನ್ಹಾ ಅವರ ಕೂಲಿಂಗ್​ ಗ್ಲಾಸ್​ ಅನ್ನು ಏರ್​ಪೋರ್ಟ್​ ಸಿಬ್ಬಂದಿ ತೆಗೆಸಿದ್ದಾರೆ. ಅವರ ಕರ್ತವ್ಯ ಅವರು ಮಾಡಿದರೆ, ಮದುವೆಯನ್ನು ಎಳೆದು ತರೋದಾ ನೆಟ್ಟಿಗರು!  

 ಬಾಲಿವುಡ್‌ ನಟ ಶತ್ರುಘ್ನ ಸಿನ್ಹಾ ಪುತ್ರಿ, ನಟಿ  ಸೋನಾಕ್ಷಿ ಸಿನ್ಹಾ ಮತ್ತು  ಜಹೀರ್ ಇಕ್ಬಾಲ್ ಮದುವೆಯ ಲೈಫ್​ ಎಂಜಾಯ್ ಮಾಡುತ್ತಿದ್ದಾರೆ. ಆದರೂ ಹಿಂದೂ-ಮುಸ್ಲಿಂ ಮದುವೆಯಾದ್ದರಿಂದ ಜೊತೆಗೆ ಅಪ್ಪನಿಗೆ ತಿಳಿಸದೇ ನಟಿ ಮದುವೆಯಾಗಿದ್ದರಿಂದಲೂ ಇವರ ಬಗ್ಗೆ ಇನ್ನೂ ಸುದ್ದಿಯಾಗುತ್ತಲೇ ಇದೆ. ಹೋದಲ್ಲಿ, ಬಂದಲ್ಲಿ ಇವರ ಮೇಲೆ ಕ್ಯಾಮೆರಾ ಕಣ್ಣು ನೆಟ್ಟಿರುತ್ತದೆ. ಅಷ್ಟಕ್ಕೂ ಇವರೇನೂ ದಿಢೀರ್‌ ಮದುವೆಯಾಗಿದ್ದಲ್ಲ. ಆರೇಳು ವರ್ಷ ಒಟ್ಟಿಗೇ ಇದ್ದು, ಡೇಟಿಂಗ್‌ ಮಾಡಿದ ಬಳಿಕ ಮದುವೆಯಾಗಿದ್ದಾರೆ. ಇವರು ಡೇಟಿಂಗ್‌ ಮಾಡುತ್ತಿದ್ದ ವಿಷಯ ಅಷ್ಟೊಂದು ಬೆಳಕಿಗೆ ಬಂದಿರದ ಹಿನ್ನೆಲೆಯಲ್ಲಿ ಮದುವೆಯಾದ ಮೇಲೆ ದಿಢೀರನೆ ಸಾಕಷ್ಟು ಚರ್ಚೆಗಳಿಗೆ ಗ್ರಾಸವಾಗಿದೆ. ಈ ಮದುವೆ ಲವ್‌ ಜಿಹಾದ್‌ ಎನ್ನುವ ಮಟ್ಟಕ್ಕೂ ಚರ್ಚೆಯಾಗಿ ಬಿಟ್ಟಿತು. ಸಾಲದು ಎನ್ನುವುದಕ್ಕೆ ಸೋನಾಕ್ಷಿ ತಮ್ಮ ತಂದೆಗೇ ತಿಳಿಸದೇ ಈ ಮದುವೆಯಾಗಿರುವುದು ಮತ್ತಷ್ಟು ವಿವಾದಕ್ಕೆ ಈಡಾಗಿತ್ತು. ಈಗ ಎಲ್ಲವೂ ಒಂದು ಹಂತಕ್ಕೆ ಬಂದಿದ್ದರೂ, ಸೋನಾಕ್ಷಿ ಮದುವೆಯ ವಿಷಯವನ್ನು ಕೆದಕುವುದು ಎಂದು ನೆಟ್ಟಿಗರಿಗೆ ಇನ್ನಿಲ್ಲದ ಖುಷಿ ಎನ್ನಿಸುತ್ತಿದೆ.

ಇದೀಗ ಸೋನಾಕ್ಷಿ ಅವರು ವಿಮಾನ ನಿಲ್ದಾಣದ ಚೆಕಿಂಗ್​ ಸಂದರ್ಭದಲ್ಲಿ ಕೂಲಿಂಗ್​ ಗ್ಲಾಸ್​ ತೆಗೆಸಿದ್ದಾರೆ. ಭದ್ರತಾ ಸಿಬ್ಬಂದಿ ತಮ್ಮ ಕೆಲಸ ನಿರ್ವಹಿಸಿದ್ದಾರೆ. ಪಾಸ್​ಪೋರ್ಟ್​ನಲ್ಲಿ ಇರುವ ಫೋಟೋ ಪರಿಶೀಲನೆ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಹೀಗೆ ಮಾಡುವುದು ಮಾಮೂಲು. ಆದ್ದರಿಂದ ಅವರು ತಮ್ಮ ಕರ್ತವ್ಯ ಮಾಡಿದ್ದಾರೆ. ಗ್ಲಾಸ್​ ತೆಗೆಯುವಂತೆ ಹೇಳಿದಾಗ, ಸೋನಾಕ್ಷಿ ಅವರು ನಗುತ್ತಲೇ ಗ್ಲಾಸ್​ ತೆಗೆದಿದ್ದಾರೆ. ಆಗಿದ್ದು ಇಷ್ಟೇ. ಇದರ ವಿಡಿಯೋ ವೈರಲ್​ ಆಗಿದೆ. ಆದರೆ ನೆಟ್ಟಿಗರಿಗೆ ಅದೇನೋ ಸೋನಾಕ್ಷಿಯ ಮದುವೆ ಮೇಲೆ ಕಣ್ಣೋ ಗೊತ್ತಿಲ್ಲ. ಸಿಬ್ಬಂದಿ ಹೀಗೆ ಗ್ಲಾಸ್​ ತೆಗೆಸಿರುವುದಕ್ಕೂ, ಇವರ ಮದುವೆಗೂ ಏನಪ್ಪಾ ಸಂಬಂಧ? ಆದರೂ ಟ್ರೋಲ್​  ಮಾಡುವುದನ್ನು ಬಿಟ್ಟಿಲ್ಲ.

ಇವತ್ತು ರಾತ್ರಿಯ ಮಜಾ... ಎನ್ನುತ್ತಲೇ ಸೋನಾಕ್ಷಿ ಸಿನ್ಹಾ ಕ್ಯಾಟ್​ ವಾಕ್​! ಸೈಜ್​ ತಲೆ ಕೆಡಿಸಿಕೊಂಡ ಫ್ಯಾನ್ಸ್​

 ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿರುವ ಕಾರಣಕ್ಕೆ, ನಟಿಯ ಮೇಲೆ ಭದ್ರತಾ ಸಿಬ್ಬಂದಿಗೆ ಡೌಟ್​ ಶುರುವಾಗಿದೆ. ಈಕೆ ಮೊದಲಿನ ಹಾಗೆ ಇಲ್ಲ. ಏನು ಬೇಕಾದರೂ ಮಾಡಬಹುದು ಎನ್ನುವ ಕಾರಣಕ್ಕೆ ಹೀಗೆ ಚೆಕ್​ ಮಾಡುತ್ತಿದ್ದಾರೆ ಎಂದು ಕಮೆಂಟ್​ನಲ್ಲಿ ಒಬ್ಬರು ತಿಳಿಸಿದ್ದರೆ, ಇವಳು ಮುಸಲ್ಮಾನನ ಹೆಂಡತಿಯಾದುದಕ್ಕೆ, ಒಬ್ಬ ಮುಸಲ್ಮಾನ ಹುಡುಗಿಯ ಸಹಾಯದಿಂದ ಏನು ಬೇಕಾದರೂ ಮಾಡಬಹುದು ಎಂಬ ಅನುಮಾನ ಬಂದಿರಬೇಕು ಎಂದು ಇನ್ನೋರ್ವ ನೆಟ್ಟಿಗ ಕಮೆಂಟ್​  ಮಾಡಿದ್ದಾರೆ.  ನಮ್ಮ ಹಿಂದೂ ಹುಡುಗಿಗೆ ಏನಾದ್ರೂ ಮೋಸ ಆಗ್ತಿದೆಯೋ ಎಂದು ಪಾಪ ಸಿಬ್ಬಂದಿ ಕಣ್ಣಿನಲ್ಲಿ ಕಣ್ಣು ಇಟ್ಟು ನೋಡ್ತಿರಬೇಕು ಎಂದು ಮತ್ತೊಬ್ಬರು ಬರೆದಿದ್ದಾರೆ. ಇನ್ನು ಕೆಲವರು ಭದ್ರತಾ ಸಿಬ್ಬಂದಿಗೆ ಹ್ಯಾಟ್ಸ್​ ಆಫ್​ ಹೇಳಿದ್ದಾರೆ. ಆದರೆ ಹೆಚ್ಚಿನವರು ನಟಿಯ ಮದುವೆ ವಿಷಯವನ್ನೇ ಕೆದಕಿದ್ದಾರೆ. 

ಇದರ ನಡುವೆಯೇ ಸೋನಾಕ್ಷಿ ತಮ್ಮ ಮುಂಬರುವ ಚಿತ್ರ ಕಕುಡಾದ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ಆದಿತ್ಯ ಸರ್ಪೋತದಾರ್ ನಿರ್ದೇಶನದ ಈ ಚಿತ್ರವು ಹಾರರ್​ ಹಾಗೂ ಹಾಸ್ಯ ಮಿಶ್ರಿತವಾಗಿರುವುದಾಗಿ ಹೇಳಲಾಗಿದೆ. ರಿತೇಶ್ ದೇಶ್‌ಮುಖ್, ಸೋನಾಕ್ಷಿ ಸಿನ್ಹಾ ಮತ್ತು ಸಾಕಿಬ್ ಸಲೀಮ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಮದುವೆಯಾಗಲು ಬಯಸುವ ಯುವ ಜೋಡಿಗಳಾದ ಇಂದಿರಾ (ಸೋನಾಕ್ಷಿ ಸಿನ್ಹಾ) ಮತ್ತು ಸನ್ನಿ (ಸಾಕಿಬ್ ಸಲೀಂ) ಹಲವಾರು  ಅಡೆತಡೆಗಳನ್ನು ಎದುರಿಸುತ್ತಾರೆ.  ಸಂಪ್ರದಾಯಕ್ಕೆ ಅಂಟಿಕೊಂಡಿರುವ ಇಂದಿರಾ ಅವರ ತಂದೆಗೆ ಇಂಗ್ಲಿಷ್ ಮಾತನಾಡುವ ಅಳಿಯ ಬೇಕು. ಸನ್ನಿ ಭಾಷಾ ಪರೀಕ್ಷೆಯಲ್ಲಿ ವಿಫಲವಾದಾಗ, ಅವನು ಮತ್ತು ಇಂದಿರಾ ಓಡಿಹೋಗಲು ನಿರ್ಧರಿಸುತ್ತಾರೆ.  ಆದರೆ ವಿಧಿಯಾಟ ಬೇರೆಯಾಗುತ್ತದೆ. ಮುಂದೇನಾಗುತ್ತದೆ ಎನ್ನುವ ಚಿತ್ರ ಇದಾಗಿದೆ.

ಸುಂದರ ಕಾಲಿದ್ದರೆ ನಟ ಸಾಕಿಬ್​ ಸಲೀಂನನ್ನು ಇಂಪ್ರೆಸ್​ ಮಾಡ್ಬೋದು! ಸೋನಾಕ್ಷಿ ಮಾತು ಸಕತ್​ ಟ್ರೋಲ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನದಿಗೆ ಹಾರಿ ಆತ್ಮ*ಹತ್ಯೆ ಮಾಡ್ಕೊಂಡ ನಿರ್ಮಾಪಕ; ಡ್ರೈವರ್‌ ಬಳಿ ಕೊನೆಯದಾಗಿ ಹೇಳಿದ ಮಾತೇನು?
ತೆರೆ ಹಿಂದೆಯೂ ಭೇಷ್‌ ಎನ್ನೋ ಕೆಲಸ ಮಾಡಿದ Karuppu Movie ನಟ; Age Is Just Number-ಸಾಬೀತುಪಡಿಸಿದ ಇಂದ್ರನ್ಸ್!