ಕನ್ನಡದ ಖ್ಯಾತ ನಟ ದಿವಂಗತ ಕಲ್ಯಾಣ್ ಕುಮಾರ್ ಅವರ ಸೊಸೆ ಪ್ರಿಯದರ್ಶಿನಿ ನಿಧನ ಹೊಂದಿದ್ದಾರೆ. ಕಲ್ಯಾಣ್ ಕುಮಾರ್ ಪುತ್ರ ಭರತ್ ಕಲ್ಯಾಣ್ ಅವರ ಪತ್ನಿ ಪ್ರಿಯದರ್ಶಿನಿ ತನ್ನ ಪ್ಯಾಲಿಯೋ ಡಯಟ್ ನಿಂದ ನಿಧನರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕನ್ನಡದ ಖ್ಯಾತ ನಟ ದಿವಂಗತ ಕಲ್ಯಾಣ್ ಕುಮಾರ್ ಅವರ ಸೊಸೆ ಪ್ರಿಯದರ್ಶಿನಿ ನಿಧನ ಹೊಂದಿದ್ದಾರೆ. ಕಲ್ಯಾಣ್ ಕುಮಾರ್ ಪುತ್ರ ಭರತ್ ಕಲ್ಯಾಣ್ ಅವರ ಪತ್ನಿ ಪ್ರಿಯದರ್ಶಿನಿ ತನ್ನ ಪ್ಯಾಲಿಯೋ ಡಯಟ್ ನಿಂದ ನಿಧನರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಭರತ್ ಕಲ್ಯಾಣ್ ಸದ್ಯ ತಮಿಳು ಕಿರುತೆರೆಯಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. 43 ವರ್ಷದ ಪ್ರಿಯದರ್ಶಿನಿ ಕೆಲವು ವಾರಗಳ ಹಿಂದೆ ಕೋಮಾಗೆ ಜಾರಿದ್ದರು. ತೀವ್ರ ನಿಗಾಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆಚಿಕಿತ್ಸೆ ಫಲಕಾರಿಯಾಗದೆ ಇಂದು (ನವೆಂಬರ್ 2) ಮುಂಜಾನೆ 5 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಪ್ರಿಯದರ್ಶಿನಿ ನಿಧನಕ್ಕೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ.
ದಪ್ಪ ಇದ್ದ ಕಾರಣ ಪ್ರಿಯದರ್ಶನಿ ಡಯಲ್ ಫಾಲೋ ಮಾಡುತ್ತಿದ್ದರು ಎನ್ನಲಾಗಿದೆ. ಕೆಲವು ತಿಂಗಳ ಹಿಂದೆ ಪ್ಯಾಲಿಯೋ ಆಹಾರ ಕ್ರಮವನ್ನು ಅನುಸರಿಸುತ್ತಿದ್ದರು. ಡಯಟ್ ನಲ್ಲಿ ಹಠಾತ್ ಬದಲಾವಣೆಯಿಂದ ಅವರ ಮಧುಮೇಹ ಒಮ್ಮೆಗೆ ಏರಿಕೆಗೆ ಕಾರಣವಾಗಿತ್ತು. ಇದೇ ಪ್ರಿಯದರ್ಶನಿ ಅವರ ಸಾವಿಗೆ ಕಾರಣವಾಗಿದೆ ಎನ್ನಲಾಗಿದೆ.
Syed Ashraf Death ಹೃದಯಾಘಾತದಿಂದ ಕಿರುತೆರೆ ಖ್ಯಾತ ನಿರ್ದೇಶಕ ಸಯ್ಯದ್ ಅಶ್ರಫ್ ಇನ್ನಿಲ್ಲ
ಮೂರು ತಿಂಗಳ ಹಿಂದೆ ಪ್ರಿಯದರ್ಶಿನಿ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಸ್ಥಿತಿ ಗಂಭೀರವಾಗಿತ್ತು ನಂತರ ಅವರು ಕೋಮಾಕ್ಕೆ ಹೋದರು. ವೈದ್ಯರು ಎಷ್ಟೇ ಪ್ರಯತ್ನ ಪಟ್ಟರೂ ಮತ್ತೆ ಪ್ರಜ್ಞೆಗೆ ಮರಳಲಿಲ್ಲ. ಇಂದು ಪ್ರಯದರ್ಶನಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ಖಚಿತಪಡಿಸಿವೆ. ಅವರ ಪಾರ್ಥಿವ ಶರೀರವನ್ನು ಪ್ರಸ್ತುತ ಚೆನ್ನೈನಲ್ಲಿರುವ ಅವರ ನಿವಾಸದಲ್ಲಿ ಕುಟುಂಬ ಮತ್ತು ಸ್ನೇಹಿತರ ಅಂತಿಮ ನಮನ ಸಲ್ಲಿಸಲು ಇರಿಸಲಾಗಿದೆ. ಪ್ರಿಯದರ್ಶಿನಿ ಅವರು ಭರತ್ ಕಲ್ಯಾಣ್ ದಂಪತಿಗೆ ಇಬ್ಬರು ಮಕ್ಕಳು. ಒಬ್ಬ ಮಗ ಮತ್ತು ಮಗಳನ್ನು ಅಗಲಿದ್ದಾರೆ.
ಅತ್ಯಾಚಾರವೆಸಗಿ ನೆನಪಿಗಾಗಿ ರುಂಡ ಸಂಗ್ರಹಿಸುತ್ತಿದ್ದ: ಇಲ್ಲಿದೆ ವಿಶ್ವದ 10 ಭಯಾನಕ ಸಿರಿಯಲ್ ಕಿಲ್ಲರ್ಸ್ ಕಹಾನಿ
ನಟ ಭರತ್, ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟ ಕಲ್ಯಾಣ್ ಕುಮಾರ್ ಅವರ ಪುತ್ರ. ಭರತ್ ಕಲ್ಯಾಣ್ ನಟನಾಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಆದರೆ ಸಿನಿಮಾ ಅಷ್ಟಾಗಿ ಕೈ ಹಿಡಿಯದ ಕಾರಣ ಕಿರುತೆರೆಗೆ ಎಂಟ್ರಿ ಕೊಟ್ಟರು. ಕಿರುತೆರೆಯಲ್ಲಿ ಭರತ್ ಕಲ್ಯಾಣ್ ದೊಡ್ಡ ಮಟ್ಟದ ಖ್ಯಾತಿ ಗಳಿಸಿದ್ದಾರೆ. ಸದ್ಯ ಕಲರ್ಸ್ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಅಪೂರ್ವ ರಾಂಗಲ್ ನಲ್ಲಿ ನಟಿಸುತ್ತಿದ್ದಾರೆ. ಇನ್ನು ವಂಶಂ ಮತ್ತು ಜಮೀಲಾ ಧಾರಾವಾಹಿಗಳಲ್ಲಿ ನಟಿಸಿ ಹೆಚ್ಚು ಖ್ಯಾತಿಗಳಿಸಿದ್ದಾರೆ.