
ಕಮಲ್ ಹಾಸನ್ (Kamal Hassan) ಅವರ ವಿಕ್ರಮ್ ಸಿನಿಮಾ ಬಾಕ್ಸ್ ಆಫೀಸ್ (Vikram Box office collection) ನಲ್ಲಿ ಅತ್ಯುತ್ತಮವಾದ ಚಲನಚಿತ್ರವಾಗಿದ್ದು ಕೋಟಿ ಕೋಟಿ ಹಣ ಗಳಿಸುತ್ತಿದೆ. ಮೊದಲ ವಾರಕ್ಕಿಂತಲು ಎರಡನೇ ವಾರದ ಗಳಿಕೆ ಸರಿಸುಮಾರು ರೂ.71 ಕೋಟಿಗಳು ಹೊಂದಿದ್ದು ಅದು ಮೊದಲ ವಾರದಿಂದ ಶೇಕಡಾ 57% ಕ್ಕಿಂತ ಕಡಿಮೆಯಾಗಿದೆ. ದೇಶದಾದ್ಯಂತ ಚಿತ್ರದ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ಸ್ ರೂ. 235.50 ಕೋಟಿ ಆಗಿದೆ. ಈ ವಾರದ ಅಂತ್ಯದಲ್ಲಿ 250 ಕೋಟಿ ಗಳಿಸಿ, ರೂ. 280-290 ಕೋಟಿಯ ನಿರೀಕ್ಷೆಯಲ್ಲಿದೆ. ಇತ್ತೀಚೆಗೆ ದಕ್ಷಿಣ ಭಾರತದ ಚಿತ್ರಗಳು ಹಿಂದಿ ಭಾಷಿಕರ ರಾಜ್ಯಗಳಲ್ಲೂ ಉತ್ತಮ ಗಳಿಕೆ ಮಾಡುತ್ತಿದೆ. ಅಲ್ಲು ಅರ್ಜುನ್ ಅವರ ಪುಷ್ಪ ದಿ ರೈಸ್ (Allu Arjun's Pushpa The Rise), ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ (Rocking Star Yash starrer KGF) ಮತ್ತು ಎಸ್‌ಎಸ್ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ (SS Rajamouli's RRR) ಬಾಕ್ಸ್ ಆಫೀಸ್ ಧೂಳಿಪಟಮಾಡಿತ್ತು.
ವಿಕ್ರಮ್ ಚಿತ್ರದ ಬಾಕ್ಸ್ ಆಫೀಸ್ ಸಂಗ್ರಹಗಳು ಈ ಕೆಳಗಿನಂತಿವೆ:
ಒಂದನೇ ವಾರ - ರೂ. 164 ಕೋಟಿ
2 ನೇ ಶುಕ್ರವಾರ - ರೂ. 11 ಕೋಟಿ
2 ನೇ ಶನಿವಾರ - ರೂ. 17 ಕೋಟಿ
2ನೇ ಭಾನುವಾರ - ರೂ. 18.50 ಕೋಟಿ
2 ನೇ ಸೋಮವಾರ - ರೂ. 7.50 ಕೋಟಿ
2 ನೇ ಮಂಗಳವಾರ - ರೂ. 6.75 ಕೋಟಿ
2 ನೇ ಬುಧವಾರ - ರೂ. 5.75 ಕೋಟಿ
2 ನೇ ಗುರುವಾರ - ರೂ. 5 ಕೋಟಿ
ಒಟ್ಟು - ರೂ. 235.50 ಕೋಟಿ:
ತಮಿಳುನಾಡಿನ ಥಿಯೇಟರ್‌ಗಳಲ್ಲಿ ಹಾಗೂ ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳಲ್ಲಿ ವಿಕ್ರಮ್ ಚಿತ್ರವು ಅತಿ ಹೆಚ್ಚು ಹಣ ಗಳಿಕೆ ಮಾಡಿದ ಕಾಲಿವುಡ್ ಚಲನಚಿತ್ರವಾಗಿ ಹೊರಹೊಮ್ಮಿದೆ. ಮಾಸ್ಟರ್ ಚಿತ್ರವನ್ನು ಹಿಂದಿಕ್ಕಿ ಅಂದಾಜು ರೂ. 142.25 ಕೋಟಿ ಗಳಿಸಿ ಚಿತ್ರವು ಎರಡನೇ ವಾರದಲ್ಲಿ ರೂ. 44.25 ಕೋಟಿ ದಾಟಿದ್ದು ಇದೇ ಮೊದಲು. ಇದಕ್ಕಿಂತ ಹಿಂದೆ ಹೆಚ್ಚಾಗಿ ಹಣ ಗಳಿಸಿದ ಹೆಗ್ಗಳಿಕೆ ಇರುವದು ಬಾಹುಬಲಿ 2 ಚಿತ್ರಕ್ಕೆ ಮಾತ್ರ. ವಿಕ್ರಮ್ ಚಿತ್ರವು ಈಗ ರಾಜ್ಯದಲ್ಲಿ ಬಾಹುಬಲಿ 2 ಹಿಂದೆ ನಿಂತಿದೆ ಮತ್ತು ಶನಿವಾರದಂದು ಸಾರ್ವಕಾಲಿಕ ದಾಖಲೆಯನ್ನು ತೆಗೆದುಕೊಳ್ಳುವ ನಿರೀಕ್ಷೆಯ ಚಿತ್ರ ಇದಾಗಿದೆ. ಭಾನುವಾರದ ನಂತರ 150 ಕೋಟಿಯ ಮೈಲಿಗಲ್ಲು ದಾಟಲಿದೆ ಮತ್ತು ಚಿತ್ರವು ಹೊಸ ದಾಖಲೆಯನ್ನು ಬರೆದು ಸುಮಾರು ರೂ.175 ಕೋಟಿಯ ವರೆಗೂ ಗಳಿಕೆ ಆಗಬಹುದೆಂಬ ಊಹೆಯಲ್ಲಿದ್ದಾರೆ.
ಇದನ್ನೂ ಓದಿ: ಹೂವಿನ ಬಿಕಿನಿ ತೊಟ್ಟು ಬಂದ ಉರ್ಫಿ ಹೊಸ ಅವತಾರ ನೋಡಿ ನೆಟ್ಟಿಗರು ಶಾಕ್!
ಭಾರತದಲ್ಲಿನ ವಿಕ್ರಮ್ ಗಲ್ಲಾಪೆಟ್ಟಿಗೆಯ ಗಳಿಕೆಯ ಪ್ರಾದೇಶಿಕ ಕುಸಿತ ಈ ಕೆಳಗಿನಂತಿದೆ:
ತಮಿಳುನಾಡು - ರೂ. 142.25 ಕೋಟಿ
ಆಂಧ್ರ ಪ್ರದೇಶ - ರೂ. 29.50 ಕೋಟಿ
ತೆಲಂಗಾಣ - ರೂ. 29.50 ಕೋಟಿ
ಕರ್ನಾಟಕ - ರೂ. 20.25 ಕೋಟಿ
ಕೇರಳ - ರೂ. 33.75 ಕೋಟಿ
ಭಾರತದ ಉಳಿದ ಭಾಗ - ರೂ. 9.75 ಕೋಟಿ
ಇದನ್ನೂ ಓದಿ: ವಿಕ್ರಾಂತ್ ರೋಣ ಸಿನಿಮಾ ಟ್ರೈಲರ್ ರಿಲೀಸ್ ಡೇಟ್ ಅನೌನ್ಸ್!
ಒಟ್ಟು - ರೂ. 235.50 ಕೋಟಿ:
ಒಟ್ಟು ರೂ.235.50 ಕೋಟಿಯಾಗಿದ್ದು ಇನ್ನು ಜಾಸ್ತಿ ಹಣ ಗಳಿಕೆಯಾಗಬಹುದೆಂಬ ಚಿತ್ರ ತಂಡವು ನಿರೀಕ್ಷೆಯಲ್ಲಿದೆ. ಕಮಲ್ ಹಾಸನ್ ಚಿತ್ರರಂಗದ ಜತೆಜತೆಗೆ ರಾಜಕೀಯದಲ್ಲೂ ಕಾಲಿಟ್ಟಿದ್ದಾರೆ. ಮಕ್ಕಳ್ ನೀತಿ ಮಯ್ಯಂ ಪಕ್ಷವನ್ನು ಎರಡು ವರ್ಷಗಳ ಹಿಂದೆ ಆರಂಭಿಸಿದ ಅವರು ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಜತೆಗೆ ವರ್ಷಕ್ಕೊಂದು ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.