ಬಸ್ ಹಾರುತ್ತೆ ಅನ್ಕೊಂಡಿದ್ದೆ; ಮೊದಲ ವಿಮಾನ ಹಾರಾಟದ ಅನುಭವ ಬಿಚ್ಚಿಟ್ಟ ಅಕ್ಷಯ್ ಕುಮಾರ್

Published : Feb 27, 2023, 04:28 PM IST
ಬಸ್ ಹಾರುತ್ತೆ ಅನ್ಕೊಂಡಿದ್ದೆ; ಮೊದಲ ವಿಮಾನ ಹಾರಾಟದ ಅನುಭವ ಬಿಚ್ಚಿಟ್ಟ ಅಕ್ಷಯ್ ಕುಮಾರ್

ಸಾರಾಂಶ

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ತಮ್ಮ ಮೊದಲ ವಿಮಾನ ಪ್ರಯಾಣದ್ಅನುಭವ ಬಿಚ್ಚಿಟ್ಟಿದ್ದಾರೆ. ತುಂಬಾ ಫನ್ನಿಯಾಗಿತ್ತು ಎಂದು ಹೇಳಿದ್ದಾರೆ. 

ಜೀವನದ ಮೊದಲುಗಳು ಯಾವಾಗಲೂ ವಿಶೇಷವಾಗಿರುತ್ತದೆ. ಹಾಗೆ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಮೊದಲ ವಿವಾನ ಪ್ರಯಾಣದ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಬಾಲ್ಯದಲ್ಲಿ ಮುಂಬೈನಿಂದ ದೆಹಲಿಗೆ ವಿಮಾನದಲ್ಲಿ ಹಾರಿದ ಮೊದಲ ಅನುಭವ ಹೇಗಿತ್ತು ಎಂದು ಹೇಳಿದ್ದಾರೆ. ಇತ್ತೀಚೆಗಷ್ಟೆ ಕಪಿಲ್ ಶರ್ಮಾ ಶೋನಲ್ಲಿ ಭಾಗಿಯಾಗಿದ್ದ ಅಕ್ಷಯ್ ಕುಮಾರ್ ಅಕ್ಷಯ್ ಕುಮಾರ್ 10 ಅಥವಾ 11ನೇ ವರ್ಷದಲ್ಲಿ ತಾನು ಮೊದಲ ವಿಮಾನ ಪ್ರಯಾಣ ಮಾಡಿರುವ ಮೋದಿ ತುಂಬಾ ಫನ್ನಿಯಾಗಿತ್ತು ಎಂದು ಹೇಳಿದ್ದಾರೆ. 

'ನಾನು ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡಿದಾಗ ಬಹುಶಃ ನನಗೆ 10 ರಿಂದ 11 ವರ್ಷ. ಪ್ರಮುಖ ಕೆಲಸಕ್ಕಾಗಿ ಬಾಂಬೆಯಿಂದ ದೆಹಲಿಗೆ ಪ್ರಯಾಣಿಸಿದ್ದೆ. ನನ್ನ ತಂದೆ ನನ್ನನ್ನು ವಿಮಾನದಲ್ಲಿ ಕರೆದುಕೊಂಡು ಹೋಗುವುದಾಗಿ ಹೇಳಿ ಗಗನಸಖಿಯೊಂದಿಗೆ ಕಳುಹಿಸಿದರು' ಎಂದು ಹೇಳಿದರು. 

'ನಾನು ಏರ್‌ಬಸ್‌ನಲ್ಲಿ ಹೋಗುತ್ತಿದ್ದೇನೆ ಎಂದು ನನಗೆ ಹೇಳಲಾಯಿತು. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ವಿಮಾನದ ಕಡೆಗೆ ಕರೆದೊಯ್ಯುವ ಬಸ್‌ಗೆ ಹತ್ತಿದಾಗ ನಾನು ನಿಜವಾಗಿಯೂ ಬಸ್ ಹಾರುತ್ತದೆ ಎಂದು ಭಾವಿಸಿದ್ದೆ. ನನ್ನ ಕೈಯಲ್ಲಿದ್ದ ಚಿಕ್ಕ ಬ್ಯಾಗ್‌ಅನ್ನು ಬಿಗಿಯಾಗಿ ಹಿಡಿದುಕೊಂಡಿದ್ದೆ. ಆದರೆ ಸಹಜವಾಗಿ ಆಗ ನನಗೆ ಏನು ಗೊತ್ತಿರಲಿಲ್ಲ, ಏನು ತಿಳಿದಿರಲಿಲ್ಲ. ಅದೊಂದು ಫನ್ನಿ ಘಟನೆಯಾಗಿತ್ತು. ಆದರೆ ಹೊಸ ವಿಷಯಗಳನ್ನು ಪ್ರಯತ್ನಿಸುವುದು ಮತ್ತು ಹೊಸ ಅನುಭವಗಳನ್ನು ಹೊಂದುವುದು ಯಾವಾಗಲೂ ಒಳ್ಳೆಯದು' ಎಂದು ಹೇಳಿದ್ದಾರೆ. 

ಮುಂದುವರೆದ ಅಕ್ಷಯ್ ಕುಮಾರ್ ಸೋಲಿನ ಸರಣಿ; ನೆಲಕಚ್ಚಿದ ವರ್ಷದ ಮೊದಲ ಸಿನಿಮಾ, ಕಾಲೆಳೆದ ಕಂಗನಾ ರಣಾವತ್

ಅಕ್ಷಯ್ ಕುಮಾರ್ ಸದ್ಯ ಸೆಲ್ಫಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸೆಲ್ಫಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿದೆ. ಅಕ್ಷಯ್ ಸದ್ಯ ಸಾಲು ಸಾಲು ಸಿನಿಮಾಗಳ ಸೋಲಿನ ಸುಳಿಯಲ್ಲಿದ್ದಾರೆ. ಕಳೆದ ವರ್ಷದಿಂದ ಅಕ್ಷಯ್ ಕುಮಾರ್ ಸಿನಿಮಾಗಳು ಯಾವುದೂ ಸಹ ಹಿಟ್ ಆಗಿಲ್ಲ.  ಬಂದ ರಕ್ಷಾ ಬಂಧನ, ಸಾಮ್ರಾಟ್ ಪೃಥ್ವಿರಾಜ್ ಸೇರಿದಂತೆ ಇತ್ತೀಚೆಗಷ್ಟೆ ಬಂದ ಸೆಲ್ಫಿ ಸಿನಿಮಾದ ವರೆಗೂ ಯಾವ ಸಿನಿಮಾಗಳು ಹಿಟ್ ಆಗಿಲ್ಲ. ಸೆಲ್ಫಿ ಸಿನಿಮಾ ಮೊದಲ ದಿವನೇ ನೀರಸ ಪ್ರತಿಕ್ರಿಯೆ ಕಂಡಿದೆ. 

ಈ ಸೋಲು ನನಗೆ ಹೊಸದಲ್ಲ; ಸತತ ಸೋಲಿನ ಹೊಣೆ ಹೊತ್ತುಕೊಂಡ ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್ ಬಳಿ ಇರುವ ಸಿನಿಮಾಗಳು 

ಸಾಲು ಸಾಲು ಸೋಲು ಕಂಡರೂ ಅಕ್ಷಯ್ ಕೈಯಲ್ಲಿ ಅನೇಕ ಸಿನಿಮಾಗಳಿವೆ. ಓ ಮೈ ಗಾಡ್-2, ಸೂರರೈ ಪೋಟ್ರು ಹಿಂದಿ ರಿಮೇಕ್,  ಬಡೆ ಮಿಯನ್ ಚೋಟೆ ಮಿಯನ್, ಹೇರಾ ಫೆರಿ, ಮರಾಠಿ ಸಿನಿಮಾ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ಜೊತೆ ರೊಮ್ಯಾಂಟಿಕ್ ಹನಿಮೂನ್ ಟ್ರಿಪ್ ಪ್ಲಾನ್ ಮಾಡಿದ ಸಮಂತಾ.. ಎಲ್ಲಿಗೆ ಹೋಗ್ತಿದ್ದಾರೆ?
ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?