ಗೋಲ್ಡ್ ಕೇಕ್, ಡೈಮಂಡ್ ರೋಸ್; ಬರ್ತಡೇ ಸೆಲೆಬ್ರೇಷನ್‌ಗೆ 93 ಲಕ್ಷ ರೂ. ಖರ್ಚು ಮಾಡಿದ ಊರ್ವಶಿ, ಫೋಟೋ ವೈರಲ್

By Shruthi KrishnaFirst Published Feb 27, 2023, 3:53 PM IST
Highlights

ನಟಿ ಊರ್ವಶಿ ರೌಟೇಲಾ ತನ್ನ ಹುಟ್ಟುಹಬ್ಬ ಆಚರಣೆಗೆ ಬರೋಬ್ಬರು 93 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. 

ನಟಿ ಊರ್ವಶಿ ರೌಟೇಲಾ ಒಂದಲ್ಲೊಂದು ವಿಚಾರದ ಮೂಲಕ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗೆ ಕ್ರಿಕೆಟಿಗ ರಿಷಬ್ ಪಂತ್ ವಿಚಾರವಾಗಿ ಭಾರಿ ಸದ್ದು ಮಾಡಿದ್ದ ಊರ್ವಶಿ ಇದೀಗ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಇತ್ತೀಚಿಗಷ್ಟೆ ನಟಿ ಊರ್ವಶಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಊರ್ವಶಿಯ ಬರ್ತಡೇ ಸೆಲೆಬ್ರೇಷನ್ ನೋಡಿ ಅಭಿಮಾನಿಗಳು ಬೆರಗಾಗಿದ್ದಾರೆ. ಯಾವಾಗಲೂ ವಿಭಿನ್ನವಾಗಿರುವ ಊರ್ವಶಿ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಅದ್ದೂರಾಯಾಗಿ ಆಚರಿಸಿಕೊಂಡು ಸುದ್ದಿಯಾಗಿದ್ದಾರೆ.  

ನಟಿ ಊರ್ವಶಿ ಸ್ಟೈಲಿಸ್ ಲುಕ್ ಮೂಲಕ ಹೆಚ್ಚು ಗಮನ ಸೆಳೆಯುತ್ತಿರುತ್ತಾರೆ. ಸ್ಟೈಲಿಶ್ ನಟಿಯ ಸ್ಟೈಲಿಶ್ ಹುಟ್ಟುಹಬ್ಬ ಆಚರಣೆಯ ಫೋಟೋಗಳು ವೈರಲ್ ಆಗಿದೆ. ಅಂದಹಾಗೆ ನಟಿ ಊರ್ವಶಿ ಪ್ಯಾರಿಸ್ ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಊರ್ವಶಿಯ ಐಷಾರಾಮಿ ಹುಟ್ಟುಹಬ್ಬದಕ್ಕೆ ಬರೋಬ್ಬರಿ 1 ಕೋಟಿ ರೂಪಾಯಿ ಅಷ್ಟು ಖರ್ಚು ಮಾಡಿದ್ದಾರೆ. ಮೂಲಗಳ ಪ್ರಕಾರ 93 ಲಕ್ಷ ರೂಪಾಯಿ ಖರ್ಚಾಗಿದೆಯಂತೆ. ತಮ್ಮ ಹುಟ್ಟುಹಬ್ಬ ಆಚರಣೆಯ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಸಂಭ್ರಮಿಸಿದ್ದಾರೆ. 

Latest Videos

ತನ್ನ ಹುಟ್ಟುಹಬ್ಬಕ್ಕೆ ಲಕ್ಷಾಂತರ ಖರ್ಚು ಮಾಡಿದ ಊರ್ವಶಿ 24-ಕ್ಯಾರೆಟ್ ಚಿನ್ನದ ಕಪ್‌ಕೇಕ್‌ಗಳ ಜೊತೆಗೆ 100 ವಜ್ರದ ರೋಸ್ ಮತ್ತು ಡೈಮಂಡ್ ಕೇಕ್‌ಗಳನ್ನು ಮಾಡಿಸಿದ್ದಳು. ಇಡೀ ಅಲಂಕಾರವನ್ನು ಹೀಲಿಯಂ ಬಲೂನ್‌ಗಳು, ಗುಲಾಬಿಗಳು ಮತ್ತು ಅದ್ದೂರಿ ಮೇಣದಬತ್ತಿಗಳಿಂದ ಅಲಂಕರಿಸಲಾಗಿತ್ತು. ಗ್ಲಾಮ್ ಕ್ವೀನ್ ಊರ್ವಶಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸ್ವೀಟ್ ಲೆಟರ್ ಕೂಡ ಬರೆದಿದ್ದಾರೆ. ರಾಯಲ್ ಬ್ಲೂ ಮಿನಿ ಡ್ರೆಸ್ ತೊಟ್ಟ ಫೋಟೋಗೆ ಪೋಸ್ ನೀಡಿದ್ದಾರೆ.  

ರಿಷಬ್ ಪಂತ್ ಬಿಟ್ಟು ರಿಷಬ್ ಶೆಟ್ಟಿ ಭೇಟಿಯಾದ ಊರ್ವಶಿ ರೌಟೇಲಾ; 'ಕಾಂತಾರ-2' ಲೋಡಿಂಗ್.. ಎಂದ ನಟಿ

ಊರ್ವಶಿ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪ್ರೀತಿ ವ್ಯಕ್ತಪಡಿಸಿ ಕಾಮೆಂಟ್ ಮಾಡುತ್ತಿದ್ದಾರೆ. ತನ್ನ ಹುಟ್ಟುಹಬ್ಬವನ್ನು ಮೆಮೋರಬಲ್ ಆಗಿರಲು ಊರ್ವಶಿ ಜೋರಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ. ಲಕ್ಷ ಲಕ್ಷ ಖರ್ಚು ಮಾಡಿ ಬರ್ತಡೇ ಆಚರಿಸಿರುವ ಊರ್ವಶಿ ಯಾರೆಲ್ಲಾ ಹಾಜರಾಗಿದ್ದರು ಎನ್ನುವ ಮಾಹಿತಿ ರಿವೀಲ್ ಮಾಡಿಲ್ಲ. ಕೇವಲ ತನ್ನ ಫೋಟೋಗಳನ್ನು ಮಾತ್ರ ಶೇರ್ ಮಾಡಿದ್ದಾರೆ.

ರಿಷಬ್​ ಪಂತ್​ರನ್ನು ಕಾಡುತ್ತಿರೋ ನಟಿ ಊರ್ವಶಿ ರೌಟೇಲಾ ಮತ್ತೆ ಸುದ್ದಿಯಲ್ಲಿ!

ಸಿನಿಮಾ ವಿಚಾರಕ್ಕೆ ಬರುವುದಾದರೆ, ಊರ್ವಶಿ ರೌಟೇಲಾ ತೆಲುಗು ನಟ ರಾಮ್ ಪೋತಿನೇನಿ ಜೊತೆ ನಟಿಸುತ್ತಿದ್ದಾರೆ. ಇನ್ನೂ ರಣದೀಪ್ ಹೂಡಾ ಜೊತೆ  'ಇನ್‌ಸ್ಪೆಕ್ಟರ್ ಅವಿನಾಶ್' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗು, ಹಿಂದಿ ಜೊತೆ ಹಾಲಿವುಡ್‌ಗೂ ಹಾರುತ್ತಿದ್ದಾರೆ ಎನ್ನಲಾಗಿದೆ. ಹಾಲಿವುಡ್ ಪ್ರಾಜೆಕ್ಟ್ ಬಗ್ಗೆ ಊರ್ವಶಿ ಹೆಚ್ಚಿನ ಮಾಹಿತಿ ರಿವೀಲ್ ಮಾಡಿಲ್ಲ.  

click me!