ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಮಲಯಾಳಂ ಸ್ಟಾರ್ ಮೋಹನ್ ಲಾಲ್ ಇಬ್ಬರೂ ಭಾಂಗ್ರಾ ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಮಲಯಾಳಂ ಸ್ಟಾರ್ ನಟ ಮೋಹನ್ ಲಾಲ್ ಮತ್ತು ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಇಬ್ಬರೂ ಕುಣಿದು ಕುಪ್ಪಳಿಸಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಬ್ಬರೂ ಪಂಜಾಬ್‌ನ ಸಾಂಪ್ರದಾಯಿಕ ಜಾನಪದ ನೃತ್ಯವಾಗಿರುವ ಭಾಂಗ್ರಾ ಡಾನ್ಸ್ ಮಾಡಿದ್ದಾರೆ. ಇಬ್ಬರು ಖ್ಯಾತ ಕಲಾವಿದರು ಹೆಜ್ಜೆ ಹಾಕಿರುವ ವಿಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಸೌತ್ ಮತ್ತು ಬಾಲಿವುಡ್ ಸ್ಟಾರ್‌ಗಳ ಮಸ್ತ್ ಡಾನ್ಸ್‌ಗೆ ಅಭಿಮಾನಿಗಳಿಂದ ತರಹೇವಾರಿ ಕಾಮೆಂಟ್ ಹರಿದು ಬರುತ್ತಿದೆ. ಅಷ್ಟಕ್ಕೂ ಇಬ್ಬರೂ ಈ ಪರಿ ಡಾನ್ಸ್ ಮಾಡಿದ್ದು ಜೈಪುರದ ಮದುವೆಯೊಂದರಲ್ಲಿ. ಸುಂದರ ವಿಡಿಯೋವನ್ನು ಅಕ್ಷಯ್ ಕುಮಾರ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಶೇರ್ ಮಾಡಿ ಮರೆಯಲಾಗದ ಕ್ಷಣ ಎಂದು ಹೇಳಿದ್ದಾರೆ.
ಇಬ್ಬರೂ ಗ್ರ್ಯಾಂಡ್ ಆಗಿ ರೆಡಿಯಾಗಿದ್ದಾರೆ. ಮೋಹನ್ ಲಾಲ್ ನೀಲಿ ಮತ್ತು ಮತ್ತು ಬಳಿ ಬಣ್ಣದ ಶೇರ್ವಾನಿ ಧರಿಸಿದ್ದಾರೆ. ಅಕ್ಷಯ್ ಕುಮಾರ್ ಬಳಿ ಕುರ್ತ ಮತ್ತು ಪೈಜಾಮಾ ಧರಿಸಿದ್ದಾರೆ. ಇಬ್ಬರೂ ಪಂಜಾಬಿ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಇಬ್ಬರೂ ಒಬ್ಬರಿಗೊಬ್ಬರು ಪಾದ ಜೋಡಿ ಭಾಂಗ್ರಾ ನೃತ್ಯ ಮಾಡಿದ್ದಾರೆ. ಿಬ್ಬರ ಡಾನ್ಸ್ ನೋಡಿ ಅಲ್ಲಿದ್ದವರೆಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿ ಸಂಭ್ರಮಿಸಿಸದರು. ಬಳಿಕ ಇಬ್ಬರೂ ತಬ್ಬಿಕೊಂಡು ಪ್ರೀತಿ ವ್ಯಕ್ತಪಡಿಸಿದರು.
ಡಾನ್ಸ್ ವಿಡಿಯೋವನ್ನು ಅಕ್ಷಯ್ ಕುಮಾರ್ ಶೇರ್ ಮಾಡಿ, 'ನಿಮ್ಮ ಜೊತೆಗಿನ ಈ ಡಾನ್ಸ್ ಶಾಶ್ವತವಾಗಿ ನೆನಪಿನಲ್ಲಿರುತ್ತದೆ ಮೋಹನ್ ಲಾಲ್ ಸರ್. ಇದು ಸಂಪೂರ್ಣವಾಗಿ ಸ್ಮರಣೀಯ ಕ್ಷಣವಾಗಿದೆ' ಎಂದು ಹೇಳಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಬ್ಬರೂ ಒಟ್ಟಿಗೆ ಸಿನಿಮಾ ಮಾಡಿ ಎಂದು ಅನೇಕರು ಹೇಳುತ್ತಿದ್ದಾರೆ. ಇಬ್ಬರನ್ನು ಒಟ್ಟಿಗೆ ತೆರೆಮೇಲೆ ನೋಡಲು ಕಾಯುತ್ತಿದ್ದೀವಿ ಎಂದು ಹೇಳುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, ಇಬ್ಬರನ್ನು ಹೀಗೆ ಒಟ್ಟಿಗೆ ನೋಡಲು ತುಂಬಾ ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ.
ನನ್ನ ತಲೆಯಲ್ಲಿ ಇನ್ನೂ ಉಳಿದಿದೆ; ಅಕ್ಷಯ್ ಕುಮಾರ್ ಜೊತೆಗಿನ ನಿಶ್ಚಿತಾರ್ಥ ಮುರಿದ ಬಗ್ಗೆ ಮೌನ ಮುರಿದ ರವೀನಾ ಟಂಡನ್
ಅಂದಹಾಗೆ ಮೋಹನ್ ಲಾಲ್ ಮತ್ತು ಅಕ್ಷಯ್ ಕುಮಾರ್ ಯಾರ ಮುದುವೆಯಲ್ಲಿ ಭಾಗಿಯಾಗಿದ್ದರು ಎನ್ನುವ ಬಗ್ಗೆ ರಿವೀಲ್ ಮಾಡಿಲ್ಲ. ಇದು ನಿಜಕ್ಕೂ ಮದುವೆನಾ ಅಥವಾ ಜಾಹೀರಾತು ಚಿತ್ರೀಕರಣ ಎನ್ನುವುದು ಇನ್ನೂ ರಿವೀಲ್ ಆಗಿಲ್ಲ. ಮೋಹನ್ ಲಾಲ್ ಇತ್ತೀಚಿಗಷ್ಟೆ ಜೈಪುರದ ಜೈಸಲ್ಮೇರ್‌ನಲ್ಲಿದ್ದರು. ಅಂದಹಾಗೆ ಮೋಹನ್ ಲಾಲ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾದದಲ್ಲಿ ನಟಿಸುತ್ತಿದ್ದು ಈ ಸಿನಿಮಾದ ಶೂಟಿಂಗ್‌ಗಾಗಿ ಜೈಪುರ ಹೋಗಿದ್ದರು ಎನ್ನಲಾಗಿದೆ.
ಜೈಸಲ್ಮೇರ್‌ನಲ್ಲಿ ಬಾಲಿವುಡ್ ಸ್ಟಾರ್‌ಗಳಾದ ಸಿದ್ಧಾರ್ಥ್ ಮತ್ತು ಕಿಯಾರಾ ಇಬ್ಬರೂ ಅದ್ದೂರಿಯಾಗಿ ಹಸೆಮಣೆ ಏರಿದ್ದರು. ಸ್ಟಾರ್ ಜೋಡಿಯ ಮದುವೆಗೆ ಹೋಗಿದ್ದರಾ ಎನ್ನುವ ಪ್ರಶ್ನೆ ಎದುರಾಗಿತ್ತು. ಈ ಬಗ್ಗೆ ಆದರೆ ಪಾಪರಾಜಿಗಳ ಪ್ರಶ್ನೆಗೆ ಉತ್ತರಿಸಿದ್ದ ಮೋಹನ್ ತನಗೆ ಆಹ್ವಾನವಿಲ್ಲ ಎಂದು ಹೇಳಿದ್ದರು. ಬಳಿಕ ಕರಣ್ ಜೋಹರ್ ಜೊತೆಗೆ ಫೋಟೋವನ್ನು ಶೇರ್ ಮಾಡಿದ್ದರು ಮೋಹನ್ ಲಾಲ್. ಎಲ್ಲರೂ ಒಟ್ಟಿಗೆ ಮದುವೆಗೆ ಹೋಗಿದ್ರಾ ಅಥವಾ ಬೇರೆ ಏನಾದರೂ ದೊಡ್ಡದಾಗಿ ಪ್ಲಾನ್ ಮಾಡಿದ್ದಾರಾ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಮೋಹನ್‌ಲಾಲ್ ಜೊತೆ ನಟಿಸೋ ಆಫರ್‌ನ ರಿಷಬ್ ಶೆಟ್ಟಿ ತಿರಸ್ಕರಿಸಿದ್ಯಾಕೆ?
ಮೋಹನ್ ಲಾಲ್ ಸದ್ಯ ಮಲೈಕೊಟ್ಟೈ ವಾಲಿಬನ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ರಿಜನಿಕಾಂತ್ ಜೊತೆ ಜೈಲರ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಇತ್ತೀಚಿಗಷ್ಟೆ ಮೋಹನ್ ಲಾಲ್ ರಾಮ್ ಸಿನಿಮಾ ಮೊದಲ ಹಂತದ ಶೂಟಿಂಗ್ ಮುಗಿಸಿದ್ದಾರೆ. ದೃಶ್ಯಂ ಸೀರಿಸ್ ಕೂಡ ಮುಂದುವರೆಯುವ ಸಾಧ್ಯತೆ ಇದೆ. ಇನ್ನು ಅನೇಕ ಸಿನಿಮಾಗಳಲ್ಲಿ ಮೋಹನ್ ಲಾಲ್ ಬ್ಯುಸಿಯಾಗಿದ್ದಾರೆ. ಇನ್ನು ಅಕ್ಷಯ್ ಕುಮಾರ್ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.