Meera Jasmine: ಮದ್ವೆಯಾಗಿ ಕಣ್ಮರೆಯಾಗಿದ್ದ ಮುದ್ದು ಮೊಗದ ಸುಂದರಿ ಹೋಗಿದ್ದೆಲ್ಲಿ? ಮತ್ತೆ ಎಂಟ್ರಿ ಕೊಡ್ತಾರಾ?

Published : Feb 10, 2023, 12:19 PM IST
Meera Jasmine: ಮದ್ವೆಯಾಗಿ ಕಣ್ಮರೆಯಾಗಿದ್ದ ಮುದ್ದು ಮೊಗದ ಸುಂದರಿ ಹೋಗಿದ್ದೆಲ್ಲಿ? ಮತ್ತೆ ಎಂಟ್ರಿ ಕೊಡ್ತಾರಾ?

ಸಾರಾಂಶ

ಕನ್ನಡ ಸೇರಿದಂತೆ ಹಲವಾರು ಚಿತ್ರಗಳಲ್ಲಿ  ನಟಿಸಿರುವ ಮೀರಾ ಜಾಸ್ಮಿನ್​  ಮದುವೆಯಾದ ನಂತರ ದಿಢೀರ್​ ನಾಪತ್ತೆಯಾಗಿದ್ದರು. ಇದೀಗ ಮತ್ತೆ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಅವರು ಮರಳಿ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರಾ?  

ಜಾಸ್ಮಿನ್​ (ಮಲ್ಲಿಗೆ) ಹೂವಿನಷ್ಟೇ ಸುಂದರವಾಗಿರುವ ನಟಿ ಬಹುಭಾಷಾ ತಾರೆ ಮೀರಾ ಜಾಸ್ಮಿನ್ (Meera Jasmine)​. ಬೆಳ್ಳಿತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ ಇವರು. ಮೌರ್ಯ, ಅರಸು ಕನ್ನಡದ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಈ ನಟಿ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾದದ್ದು ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರ ಜೋಡಿಯಾಗಿ ಕಾಣಿಸಿಕೊಂಡಾಗ. ಅದೇ ಇನ್ನೊಂದೆಡೆ, 2000ರ ಸಮಯದಲ್ಲಿ ನಾಯಕಿಯಾಗಿ ಮೀರಾಗೆ ಸಿಕ್ಕಾಪಟ್ಟೆ ಬೇಡಿಕೆಯಿತ್ತು. ಹೀಗಾಗಿ ಅವರು ದಕ್ಷಿಣ ಭಾರತದ ಅನೇಕ ಸಿನಿಮಾಗಳಲ್ಲಿ ಲೀಡ್ ಪಾತ್ರದಲ್ಲಿ ಮಿಂಚಿದರು. ತೆಲುಗಿನಲ್ಲಿ ಮೀರಾ ಜಾಸ್ಮಿನ್ ಗುಡುಂಬಾ ಶಂಕರ್, ಭದ್ರ, ಮಹಾರಥಿ, ರಾರಾಜು, ಯಮಗೋಳ , ಗೊರಿಂಟಾಕು, ಮಾ ಆಯ ಚಂಟಿ ಪಿಲ್ಲಡು, ಬಂಗಾರು ಬಾಬು, ಎ ಎ ಇ ಈ ಇ, ಆಕಾಶ ರಾಮಣ್ಣ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಕೊನೆಯಾದಾಗಿ ಮೋಕ್ಷ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

 ಚಿತ್ರರಂಗಕ್ಕೆ ಕಾಲಿಟ್ಟಿದ್ದರಿಂದ ದಕ್ಷಿಣ ಭಾರತದಲ್ಲಿ ಹೆಚ್ಚು ಜನಪ್ರಿಯವಾದರು. ಆಕೆ ನಟಿಸಿದ ತಮಿಳು ಚಲನಚಿತ್ರ ರನ್  ಮತ್ತು ಬಾಲ  (2002) ಚಿತ್ರಗಳ ಯಶಸ್ಸಿನಿಂದಾಗಿ ತಮಿಳು ಚಿತ್ರರಂಗದಲ್ಲಿ ನೆಲೆಯೂರಿದ ಉತ್ತಮ ನಟರ ಜೊತೆಯಲ್ಲಿ ನಟಿಸುವ ಅವಕಾಶಗಳು ಆಕೆಯನ್ನು ಹುಡುಕಿಕೊಂಡು ಬಂದವು. ಪದಮ್​ ಒನ್ನು: ಒರು ವಿಲಪಮ್​(Paadam Onnu: Oru Vilapam) ಸಿನಿಮಾದಲ್ಲಿನ ಅದ್ಭುತ ನಟನೆಗೆ ಅವರಿಗೆ ರಾಷ್ಟ್ರ ಪ್ರಶಸ್ತಿಯೂ ಸಿಕ್ಕಿದೆ. ಹಾಸ್ಯಚಿತ್ರಗಳು ಮತ್ತು ಭಾವನಾತ್ಮಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ಕಸ್ತೂರಿಮಾನ್ ಚಿತ್ರದ ತಮ್ಮ ಅಭಿನಯಕ್ಕಾಗಿ ಮೊದಲ ಫಿಲ್ಮ್ ಫೇರ್ ಅವಾರ್ಡ್ ಸ್ವೀಕರಿಸಿದರು. 

Amitabh Bachchan: ಫಿಲ್ಮ್​ ಟಾಕೀಸ್​ನಲ್ಲಿ ಅಮಿತಾಭ್​ ಪ್ಯಾಂಟ್​ ಒಳಗೆ ಇಲಿ ಹೊಕ್ಕಾಗ....

ಇಂತಿಪ್ಪ ಮೀರಾ, ಕಳೆದ ಕೆಲವು ವರ್ಷಗಳಿಂದ ಬೆಳ್ಳಿತೆರೆಯಿಂದ ದೂರ ಉಳಿದಿದ್ದಾರೆ. ಅಂದಹಾಗೆ, 1984ರ ಫೆಬ್ರವರಿ 15ರಂದು ಕೇರಳದ ಪಥನಮ್‌ತಿಟ್ಟ ಜಿಲ್ಲೆಯ ತಿರುವಲ್ಲದ ಕುಟ್ಟಪುಝಾದಲ್ಲಿ ಜನಿಸಿರುವ ಈ ನಟಿಯ  ಜನ್ಮನಾಮ  ಜಾಸ್ಮಿನ್ ಮೇರಿ ಜೋಸೆಫ್. (Jasmine Mery Joseph) ದಕ್ಷಿಣ ಭಾರತದ ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2001 ರಲ್ಲಿ ಲೋಹಿತದಾಸ್ ಅವರ 'ಸೂತ್ರಧಾರನ್' ಚಿತ್ರದ ಮೂಲಕ ಪದಾರ್ಪಣೆ ಮಾಡಿದರು.

ಇವರ ಸುತ್ತಲೂ ಯಾವಾಗಲೂ ಮದುವೆಯೆಂಬ ವಿವಾದದ ಸುಳಿ ಸುತ್ತುತ್ತಲೇ ಇರುತ್ತದೆ. 2008 ರಲ್ಲಿ ಸಂದರ್ಶನವೊಂದರಲ್ಲಿ ಶಾಸ್ತ್ರೀಯ ಸಂಗೀತ ಕಲಾವಿದ ಮ್ಯಾಂಡೋಲಿನ್ ರಾಜೇಶ್ ಅವರನ್ನು ಮದುವೆಯಾಗುವುದಾಗಿ ಹೇಳಿದ್ದರು. ಆದರೆ ಮೀರಾ ಜಾಸ್ಮಿನ್, ಅನಿಲ್ ಎಂಬುವವರ ಜೊತೆ ಮದುವೆ ಆಗಿ ದುಬೈನಲ್ಲಿ ನೆಲೆಸಿದ್ದರು. ಅನಿಲ್‌ಗೆ (Anil) ಈ ಹಿಂದೆ ಮದುವೆ ಆಗಿದ್ದು, ಪೊಲೀಸ್ ರಕ್ಷಣೆ ಪಡೆದು ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮೊದಲ ಪತ್ನಿ ಜೊತೆ ಡಿವೋರ್ಸ್ ಫೈನಲ್ ಆಗುವ ಮುನ್ನವೇ ಮೀರಾರನ್ನು ಮದುವೆಯಾಗಿದ್ದರು ಅನಿಲ್​. ಯಾವುದೇ ಕ್ಷಣದಲ್ಲಿ ಮೊದಲ ಪತ್ನಿಯ ಸಂಬಂಧಿಕರು ಮದುವೆಗೆ ಅಡ್ಡಿಪಡಿಸಲು ಪ್ರಯತ್ನಿಸಬಹುದು ಎಂಬ ಭಯದಿಂದ ಪೊಲೀಸ್​ ರಕ್ಷಣೆ ಕೋರಲಾಗಿತ್ತು. ಮದುವೆ ನಂತರ ದಪ್ಪಗಾಗಿದ್ದ ಮೀರಾ, ಸಣ್ಣಗಾಗಿ ಅಚ್ಚರಿ ಮೂಡಿಸಿದ್ದಾರೆ. ಅವರ ವೈಯಕ್ತಿಕ ಜೀವನದ ಕುರಿತು ಅಂತೆ-ಕಂತೆ ಪುರಾಣಗಳು ಹೆಚ್ಚಾಗಿ ಕೇಳಿಬಂದಿದೆಯಾದರೂ ಕೂಡ, ಮೀರಾ ಅವಕ್ಕೆಲ್ಲ ಉತ್ತರವೇ ನೀಡಿರಲಿಲ್ಲ. ನಂತರ ನೋಂದಣಿ ಅಧಿಕಾರಿಗಳು ವಿವಿಧ ಕಾರಣಗಳನ್ನು ನೀಡಿ ಅವರ ವಿವಾಹವನ್ನು ನೋಂದಾಯಿಸಲು ನಿರಾಕರಿಸಿದರು.

ಇದಾದ ಬಳಿಕ ಅಂತೂ ಇಂತೂ  ಪತಿ ಅನಿಲ್  ಮೊದಲ ಹೆಂಡತಿಯಿಂದ ವಿಚ್ಛೇದನ ಪಡೆದುಕೊಂಡಿದ್ದರು. ಇದಾದ ಬಳಿಕೆ  ಮೀರಾ ನಟನೆ ಬಿಟ್ಟು ದುಬೈಗೆ (Dubai) ಹೋಗಿದ್ದರು. ಇಷ್ಟಕ್ಕೆ ಸುಮ್ಮನಿರದಿದ್ದ ಮೀರಾ, ಖುದ್ದು ಕುಟುಂಬದವ ವಿರುದ್ಧ ಕೇಸ್​ ದಾಖಲಿಸಿದ್ದರು.  ಡಿಐಜಿಗೆ ಅವರು ನೀಡಿದ್ದ ದೂರಿನಲ್ಲಿ, ನನ್ನ ಕುಟುಂಬ ಸದಸ್ಯರು ನನ್ನ ಹಣವನ್ನು ತೆಗೆದುಕೊಂಡು ಮಾಧ್ಯಮಗಳಲ್ಲಿ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದಿದ್ದರು. ನಟಿ ಮೀರಾ ಜಾಸ್ಮಿನ್ ರೀ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಇವರು, ಮತ್ತೆ  ಬಣ್ಣ ಹಚ್ಚಲು ರೆಡಿಯಾಗಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿದೆ.ಸ್ಟುಡಿಯೋದಲ್ಲಿ ಡಬ್ಬಿಂಗ್ ಮಾಡುತ್ತಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ (Social Media) ಹಂಚಿಕೊಂಡಿದ್ದಾರೆ. ಆದರೆ ಇದು ಯಾವ ಸಿನಿಮಾ ಡಬ್ಬಿಂಗ್ ಎಂದು ಅವರು ತಿಳಿಸಿಲ್ಲ.

Titanic: ಟೈಟಾನಿಕ್​ ಚಿತ್ರ ಬಿಡುಗಡೆಯಾದಾಗ ಹುಟ್ಟೇ ಇರದವಳ ಜೊತೆ ಹೀರೋ ಡೇಟಿಂಗ್​!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!