ಹೀಗಾದ್ರೂ ಹಣ ಮಾಡಿ: ರೆಡ್ ಲೆಹಂಗಾ ಧರಿಸಿ ನೋರಾ ಜೊತೆ ಕುಣಿದ ಅಕ್ಷಯ್ ಕುಮಾರ್ ಸಖತ್ ಟ್ರೋಲ್

Published : Mar 05, 2023, 04:33 PM IST
ಹೀಗಾದ್ರೂ ಹಣ ಮಾಡಿ: ರೆಡ್ ಲೆಹಂಗಾ ಧರಿಸಿ ನೋರಾ ಜೊತೆ ಕುಣಿದ ಅಕ್ಷಯ್ ಕುಮಾರ್ ಸಖತ್ ಟ್ರೋಲ್

ಸಾರಾಂಶ

ಕೆಂಪು ಲೆಂಹಗಾ ಧರಿಸಿ ನೋರಾ ಫತೇಹಿ ಜೊತೆ ಅಕ್ಷಯ್ ಕುಮಾರ್ ಡಾನ್ಸ್ ಮಾಡಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. 

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಅಕ್ಷಯ್ ಏನೆ ಮಾಡಿದ್ರು ನೆಟ್ಟುಗರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳ ಸೋಲಿನ ಸುಳಿಯಲ್ಲಿ ಸಿಲುಕಿರುವ ಅಕ್ಷಯ್ ಇದೀಗ ಖ್ಯಾತ ಡಾನ್ಸರ್ ನೋರಾ ಜೊತೆ ಕುಣಿದು ಮತ್ತೆ ಟ್ರೋಲ್ ಆಗಿದ್ದಾರೆ. ನೋರಾ ಜೊತೆ ಸಖತ್ ಹಾಟ್ ಆಗಿ ಹೆಜ್ಜೆ ಹಾಕಿರುವ ಅಕ್ಷಯ್ ಕುಮಾರ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಕ್ಷಯ್ ಮತ್ತು ನೋರಾ ಡಾನ್ಸ್ ನೋಡಿ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.  ಇನ್ನೂ ಕೆಲವರು ಅಕ್ಷಯ್ ಅವರನ್ನು ತರಾಟೆ ತೆಗೆದುಕೊಂಡರು.

ಅಕ್ಷಯ್ ಕುಮಾರ್ ಸದ್ಯ ನೋರಾ ಫತೇಹಿ, ದಿಶಾ ಪಟಾನಿ, ಮೌನಿ ರಾಯ್ ಮತ್ತು ಇತರರೊಂದಿಗೆ USAನಲ್ಲಿ 'ದಿ ಎಂಟರ್‌ಟೈನರ್ಸ್ ಟೂರ್' ನಲ್ಲಿದ್ದಾರೆ. ಅಲ್ಲಿ ಕಾರ್ಯಕ್ರಮವೊಂದರಲ್ಲಿ ಅಕ್ಷಯ್ ಕುಮಾರ್ ನಟಿ ನೋರಾ ಜೊತೆ ಹೆಜ್ಜೆ ಹಾಕಿದ್ದಾರೆ. ಅಕ್ಷಯ್ ಕುಮಾರ್ ಕೆಂಪು ಬಣ್ಣದ ಲೆಹಂಗಾ ಧರಿಸಿ ಹೆಜ್ಜೆ ಹಾಕಿದ್ದಾರೆ. ನೋರಾ ಫತೇಹಿ ಕೆಂಪು ಬಣ್ಣದ ಮಿನಿ ಧರಿಸಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ನೋರಾ ಜೊತೆ ಹಾಟ್ ಡಾನ್ಸ್ ಮಾಡಿರುವ ಅಕ್ಷಯ್ ಸಖತ್ ಟ್ರೋಲ್ ಆಗುತ್ತಿದ್ದಾರೆ. ವೇದಿಕೆ ಮೇಲೆ ಡಾನ್ಸ್ ಮಾಡುತ್ತಾ ಅಕ್ಷಯ್ ಲೆಹಂಗಾ ಬಿಚ್ಚಿ ಹಾಕಿ ನೋರಾ ಅವರನ್ನು ಎಳೆದಕೊಳ್ಳುತ್ತಾರೆ. ಈ ವಿಡಿಯೋ ಈ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 

ಈ ಸೋಲು ನನಗೆ ಹೊಸದಲ್ಲ; ಸತತ ಸೋಲಿನ ಹೊಣೆ ಹೊತ್ತುಕೊಂಡ ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್ ಡಾನ್ಸ್ ನೋಡಿ ನೆಟ್ಟಿಗರು ಇದೊಂದು ಬಾಕಿ ಎಂದು ಹೇಳುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ ಸಿನಿಮಾದಿಂದ ಅಂತೂ ಹಣ ಬರ್ತಿಲ್ಲ, ಹಾಗಾಗಿ ಹಿಂಗಾದ್ರು ಹಣ ಮಾಡಿ' ಎದು ಕಾಮೆಂಟ್ ಮಾಡಿದ್ದಾರೆ. ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದರು ಅಕ್ಷಯ್ ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ನೋರಾ ಜೊತೆ ಅಕ್ಷಯ್ ಹಾಟ್ ಡಾನ್ಸ್ ಇದೇ ಮೊದಲಲ್ಲ. ಈ ಮೊದಲು ಸಹ ರೊಮ್ಯಾಂಟಿಕ್ ಡಾನ್ಸ್ ಮಾಡಿ ಸದ್ದು ಮಾಡಿದ್ದರು. ನೋರಾ ಮತ್ತು ಅಕ್ಷಯ್ ಕುಮಾರ್ ರೊಮ್ಯಾಂಟಿಕ್ ಡಾನ್ಸ್ ನೋಡಿ ನೆಟ್ಟಿಗರು ಟ್ವಿಂಕಲ್ ಖನ್ನಾಗಿ ಮಾಡಿ ಎಂದು ಕಾಲೆಳೆದಿದ್ದರು. ಇದೀಗ ಮತ್ತೆ ನೋರಾ ಜೊತೆ ಕುಣಿದು ಸಂಭ್ರಮಿಸಿದ್ದಾರೆ.

ನೋರಾ ಜೊತೆ ಅಕ್ಷಯ್ ಕುಮಾರ್ ರೊಮ್ಯಾಂಟಿಕ್ ಡಾನ್ಸ್; ಟ್ವಿಂಕಲ್‌ ಖನ್ನಾಗೆ ಟ್ಯಾಗ್ ಮಾಡಿ ಕಾಲೆಳೆದ ಫ್ಯಾನ್ಸ್

ಸತತ ಸೋಲಿನ ಬಗ್ಗೆ ಅಕ್ಷಯ್ ಪ್ರತಿಕ್ರಿಯೆ 

ಸತತ ಸೋಲಿನ ಬಗ್ಗೆ ಮಾತನಾಡಿದ ಅಕ್ಷಯ್, 'ಈ  ಸೋಲು ನನಗೆ ಮೊದಲ್ಲ. ನನ್ನ ವೃತ್ತಿ ಜೀವನದಲ್ಲಿ ನಾನು ಒಂದೇ ಬಾರಿಗೆ 16 ಸತತ ಫ್ಲಾಪ್‌ಗಳನ್ನು ಕಂಡಿದ್ದೆ. ಒಂದು ಸಮಯವಿತ್ತು. ಸತತ ಎಂಟು ಚಿತ್ರಗಳು ಸೋತಿತ್ತು. ಈಗ ನಾನು ಸತತವಾಗಿ ಮೂರು-ನಾಲ್ಕು ಚಿತ್ರಗಳನ್ನು ಹೊಂದಿದ್ದೇನೆ ಅವು ಕೆಲಸ ಮಾಡಲಿಲ್ಲ. ಅದು ನಿಮ್ಮ ಸ್ವಂತ ತಪ್ಪಿನಿಂದ ನಡೆಯುತ್ತದೆ. ಪ್ರೇಕ್ಷಕರು ಬದಲಾಗಿದ್ದಾರೆ, ನೀವು ಬದಲಾಗಬೇಕು. ನೀವು ಮತ್ತೆ ಹೊಸದಾಗಿ ಪ್ರಾರಂಭಿಸಬೇಕು ಏಕೆಂದರೆ ಪ್ರೇಕ್ಷಕರು ಬೇರೆ ಏನನ್ನೋ ಬಯಸುತ್ತಿದ್ದಾರೆ' ಎಂದು ಹೇಳಿದರು. 


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2026ರ ಆರಂಭದಲ್ಲೇ ಖ್ಯಾತ ನಟಿ ಬದುಕಲ್ಲಿ ಬಿರುಗಾಳಿ, ಮದ್ವೆಯಾದ ಎರಡೇ ವರ್ಷಕ್ಕೆ ಡಿವೋರ್ಸ್
ತನ್ನ ಮಾತನ್ನೇ ಮುರಿದ ಸಾಯಿ ಪಲ್ಲವಿ.. ಬಾಲಿವುಡ್‌ನಲ್ಲಿ ಇನ್ನೂ ಮಾಡದೇ ಇರುವುದನ್ನು ಮಾಡಿಬಿಟ್ರು!