ಪಾಪರಾಜಿಗಳ ಘಟನೆ ಬಳಿಕ ಭದ್ರತಾ ಸಿಬ್ಬಂದಿಯನ್ನು ಕೆಲಸದಿಂದ ಕಿತ್ತು ಹಾಕಿದ್ರಾ ಸೈಫ್? ಸ್ಪಷ್ಟನೆ ನೀಡಿದ ನಟ

Published : Mar 05, 2023, 03:41 PM IST
ಪಾಪರಾಜಿಗಳ ಘಟನೆ ಬಳಿಕ ಭದ್ರತಾ ಸಿಬ್ಬಂದಿಯನ್ನು ಕೆಲಸದಿಂದ ಕಿತ್ತು ಹಾಕಿದ್ರಾ ಸೈಫ್?  ಸ್ಪಷ್ಟನೆ ನೀಡಿದ ನಟ

ಸಾರಾಂಶ

ಪಾಪರಾಜಿಗಳ ಘಟನೆ ಬಳಿಕ ಭದ್ರತಾ ಸಿಬ್ಬಂದಿಯನ್ನು ಸೈಫ್ ಅಲಿ ಖಾನ್ ಕೆಲಸದಿಂದ ಕಿತ್ತು ಹಾಕಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ  ಬಗ್ಗೆ ಕರೀನಾ ಪತಿ ಪ್ರತಿಕ್ರಿಯೆ ನೀಡಿದ್ದಾರೆ. 

ಪಾಪರಾಜಿಗಳಿಂದ ಬೇಸತ್ತಿರುವ ಬಾಲಿವುಡ್ ಸ್ಟಾರ್ಸ್ ಕಿಡಿಕಾರುತ್ತಿದ್ದಾರೆ. ಅನುಷ್ಕಾ ಶರ್ಮಾ, ಅಲಿಯಾ ಭಟ್ ಹಾಗೂ ಇತ್ತೀಚೆಗೆ ಸೈಫ್ ಅಲಿ ಖಾನ್ ಪಾಪರಾಜಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ವೈಯಕ್ತಿಕ ಜೀವನಕ್ಕೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಸೈಫ್ ಅಲಿ ಖಾನ್ ತನ್ನ ಪತ್ನಿ ಕರೀನಾ ಜೊತೆ ಮನೆಗೆ ಬರುತ್ತಿರುವಾಗ ಪಾಪರಾಜಿಗಳು ಮುತ್ತಿಕೊಂಡರು. ಕ್ಯಾಮರಾಗೆ ಪೋಸ್ ನೀಡುವಂತೆ ಕೇಳಿಕೊಂಡರು. ಆದರೆ ಕಿರಿಕಿರಿಯಾದ ಕಾರಣ ಸೈಫ್ ಅಲಿ ಖಾನ್ ಗರಂ ಆಗಿದ್ದಾರೆ. ಬೆಡ್ ರೂಮಿಗೂ ಬಂದು ಬಿಡಿ ಎಂದು ರೇಗಿದ್ದಾರೆ. ಈ ಘಟನೆ ಬಳಿಕ ಸೈಫ್ ಅಲಿ ಖಾನ್ ತನ್ನ ನಿವಾಸದ ಭದ್ರತ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಿದ್ದಾರೆ, ಪಾಪರಾಜಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ ಬಗ್ಗೆ ನಟ ಸೈಫ್ ಅಲಿ ಖಾನ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.  

ರಾತ್ರಿ 2 ಗಂಟೆಗೆ 20 ಕ್ಯಾಮರಾಗಳು ತಮ್ಮ ಮನೆಯ ಕಾಂಪೌಂಡ್ ದಾಟಿ ಬಂದಿದ್ದರು ಎಂದು ಸೈಫ್ ಹೇಳಿದ್ದಾರೆ. ಈ ಬಗ್ಗೆ  ಪ್ರತಿಕ್ರಿಯೆ ನೀಡಿರುವ ಸೈಫ್ ತನ್ನ ಹೇಳಿಕೆಯಲ್ಲಿ 'ಕಟ್ಟಡದ ಭದ್ರತಾ ಸಿಬ್ಬಂದಿಯನ್ನು ವಜಾ ಮಾಡಿಲ್ಲ, ಅದು ಅವರ ತಪ್ಪಲ್ಲ ಮತ್ತು ಪಾಪರಾಜಿ ವಿರುದ್ಧ ಯಾರೂ ಕಾನೂನು ಕ್ರಮ ತೆಗೆದುಕೊಳ್ಳುತ್ತಿಲ್ಲ ಏಕೆಂದರೆ ನಾವು ಆ ರೀತಿ ಮಾಡಲು ಬಯಸಲ್ಲ' ಎಂದು ಹೇಳಿದ್ದಾರೆ. 

ಪಾಪರಾಜಿಗಳಿಗೆ ಬೆಡ್‌ರೂಮಿಗೇ ಇನ್ವೈಟ್ ಮಾಡಿದ್ದೇಕೆ ಸೈಫ್ ಆಲಿ ಖಾನ್?

'ಅದು  ಅವರ ಹಕ್ಕು ಎಂಬಂತೆ ನಮ್ಮ ಮೇಲೆ ಕ್ಯಾಮರಾ ಇಡುವುದು ಅವರ ತಪ್ಪು ವರ್ತನೆ. ಪ್ರತಿಯೊಬ್ಬರು ತಮ್ಮ ಮಿತಿಯಲ್ಲಿ ಇರಬೇಕು. ನಾವೂ ಕೂಡ ಪಾಪರಾಜಿಗಳಿಗೆ ಸಹಕರಿಸುತ್ತೇವೆ. ನಮಗೂ ಅರ್ಥವಾಗುತ್ತದೆ. ಮನೆಯ ಹೊರಗೆ, ಗೇಟ್ ಬಳಿ ಆದರೆ ಅದನ್ನೂ ದಾಟಿ ಬಂದರೆ ಹೇಗೆ. ಹಾಗಾಗಿ ನಾನು ಮಲಗುವ ಕೊಣೆಗೆ ಬನ್ನಿ ಎಂದು ಹೇಳಿದ್ದು. ಈಗಾಗಲೇ ಲೈನ್ ದಾಟಿದ್ದೀರಿ. ಮಕ್ಕಳನ್ನು ಶೂಟ್ ಮಾಡುತ್ತೀರಿ. ಅವರು ಕ್ಲಾಸ್‌ಗೆ ಹೋಗುತ್ತಾರೆ, ಪಠ್ಯೇತರ ತರಗತಿಗಳಿಗೆ ಹೋಗುತ್ತಾರೆ. ಈಗ ಅವರಿಗೆ ಇದೆಲ್ಲ ಅಗತ್ಯವಿಲ್ಲ. ಪಾಪರಾಜಿಗಳು ಶಾಲೆಯೊಳಗೂ ಬರಬಾರದು. ಸತ್ಯ ಏನೆಂದು ಯಾರಿಗೂ ಗೊತ್ತಿಲ್ಲ. ಆದರೆ ಇದೇ ಸತ್ಯ'ಎಂದು ಹೇಳಿದ್ದಾರೆ. 

Sharmila Tagore: ಸೈಫ್​ ಅಲಿ ಅಮ್ಮನ ಬಿಕಿನಿ ಫೋಟೋ ನೋಡಿ ಪತಿಯ ರಿಯಾಕ್ಷನ್​ ಹೇಗಿತ್ತು?

ಮಲೈಕಾ ಅರೋರಾ ಅವರ ಮನೆಯಿಂದ  ಪಾರ್ಟಿ ಮುಗಿಸಿ ಕರೀನಾ ಮತ್ತು ಸೈಫ್ ಮನೆಗೆ ವಾಪಸಾಗುತ್ತಿದ್ದರು.  ಕಾರಿನಿಂದ ಇಳಿಯುತ್ತಿದ್ದಂತೆಯೇ ಫೋಟೋ ಕ್ಲಿಕ್ಕಿಸಲಾಗಿತ್ತು. ಮೊದಲಿಗೆ ಚೆನ್ನಾಗಿಯೇ ಪೋಸ್​ ಕೊಡುತ್ತಲೇ ದಂಪತಿ ಬಂದರು. ಆದರೆ ಫೋಟೋಗ್ರಾಫರ್​ಗಳು ಸರ್​ ಸರ್​ ಸರ್​ ಎನ್ನುತ್ತಾ ಮತ್ತಷ್ಟು ಫೋಟೋಗೆ ಪೋಸ್​ ಕೇಳಿದರು. ಇದರಿಂದ ಸೈಫ್​ ಅಲಿಗೆ ಕಿರಿಕಿರಿಯಾಗಿದೆ. ಸಹನೆ ಕಳೆದುಕೊಂಡು ಬಂದುಬಿಡಿ ನಮ್ಮ ಬೆಡ್​ರೂಂಗೆ ಎನ್ನುತ್ತಲೇ ಬಾಗಿಲು ಹಾಕಿಕೊಂಡರು. ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್