ಕಿಯಾರಾ ಫೋಟೋಗೆ ಸಿದ್ಧಾರ್ಥ್​ ಕಮೆಂಟ್: ಕಾಲೆಳೆಯದೇ ಬಿಡ್ತಾರಾ ನೆಟ್ಟಿಗರು?

Published : Mar 05, 2023, 03:34 PM IST
ಕಿಯಾರಾ ಫೋಟೋಗೆ ಸಿದ್ಧಾರ್ಥ್​ ಕಮೆಂಟ್: ಕಾಲೆಳೆಯದೇ ಬಿಡ್ತಾರಾ ನೆಟ್ಟಿಗರು?

ಸಾರಾಂಶ

ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ನಟಿ ಕಿಯಾರಾ ಅಡ್ವಾಣಿ ನಂತರ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಶೇರ್​  ಮಾಡಿಕೊಂಡಿದ್ದಾರೆ. ಇವರಿಗೆ ಸಿದ್ಧಾರ್ಥ್​  ಮಲ್ಹೋತ್ರಾ ಮಾಡಿದ ಕಮೆಂಟ್​  ಏನು?  

ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿ ಉದ್ಘಾಟನಾ ಸಮಾರಂಭದ ನಿಮಿತ್ತ ನಿನ್ನೆ ಮುಂಬೈನ ಡಿವೈ ಪಾಟೀಲ್  ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಬಾಲಿವುಡ್ ನಟಿ ಕೃತಿ ಸನನ್, ಕಿಯಾರಾ ಅಡ್ವಾಣಿ ಹಾಗೂ ಕೆನಡಾ ಸಿಂಗರ್ ಎಪಿ ದಿಲ್ಲೋನ್ ಕಾರ್ಯಕ್ರಮಗಳು ಮಹಿಳಾ ಐಪಿಎಲ್ ಟೂರ್ನಿ ಕಳೆ ಹೆಚ್ಚಿಸಿತ್ತು. ಕಿಯಾರಾ ಅಡ್ವಾಣಿ ತಮ್ಮ ಅದ್ಧೂರಿ ಡ್ಯಾನ್ಸ್ ಪರ್ಫಾಮೆನ್ಸ್ ನೊಂದಿಗೆ ಎಲ್ಲರನ್ನೂ ರಂಜಿಸಿದ್ದರು.  ಕಿಯಾರಾ ಡ್ಯಾನ್ಸ್ ಬಳಿಕ ಕೃತಿ ಸನನ್ ಹಾಗೂ ಬಳಗ ಮತ್ತೊಂದು ಹೈ ಎನರ್ಜಿಟಿಕ್ ಪರ್ಫಾಮೆನ್ಸ್ ಮೂಲಕ ಎಲ್ಲರನ್ನು ರಂಜಿಸಿದರು. ಗುಲಾಬಿ ಬಣ್ಣದ ಡ್ರೆಸ್​ನಲ್ಲಿ ಕಿಯಾರಾ (Kiara Advani) ಮಿಂಚಿದರು. ಈ ಉದ್ಘಾಟನಾ ಕಾರ್ಯಕ್ರಮದ ಬಳಿಕ ಇದೇ ಡ್ರೆಸ್​ನಲ್ಲಿ ಫೋಟೋಶೂಟ್​ ಮಾಡಿಸಿಕೊಂಡ ಅವರು, ಅದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ಮಾಡಿದ್ದರು.

ಈ ಫೋಟೋಗೆ ಈಕೆಯ ಪತಿ  ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಕಮೆಂಟ್ ಮಾಡಿದ್ದಾರೆ. ಅದೀಗ ಭಾರಿ ವೈರಲ್​ ಆಗಿದ್ದು, ಈ ಫೋಟೋ ಹಾಗೂ ಕಮೆಂಟ್​ಗೆ ಅಭಿಮಾನಿಗಳ ಸಂದೇಶಗಳ ಮಹಾಪೂರವೇ ಹರಿದು ಬರುತ್ತಿದೆ. ನಟರಾದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಫೆಬ್ರವರಿ 7 ರಂದು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ವಿವಾಹವಾದರು. ಮದುವೆ, ಹನಿಮೂನ್​ ಬಳಿಕ ಇಬ್ಬರೂ ಕೆಲಸಕ್ಕೆ ಮರಳಿದ್ದಾರೆ. ವಿವಿಧ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದಾರೆ. ಇದೀಗ ಪ್ರೀಮಿಯರ್ ಲೀಗ್‌ನಲ್ಲಿ  ಕಿಯಾರ, ಬ್ಯಾಕ್‌ಲೆಸ್ ಗುಲಾಬಿ ಉಡುಪಿನಲ್ಲಿ ಧರಿಸಿರುವ ಫೋಟೋಗಳ ಸರಣಿಯನ್ನು ಹಂಚಿಕೊಂಡರು. ಸಿದ್ಧಾರ್ಥ್ ಅವರ ಪೋಸ್ಟ್‌ಗೆ ಮುದ್ದಾದ ಕಾಮೆಂಟ್ ಮಾಡಿದ್ದಾರೆ. 

ಕಿಯಾರಾಳನ್ನು ಮದ್ವೆಯಾಗಿ ಸಿಕ್ಕಾಪಟ್ಟೆ ಖುಷಿಯಾಗಿರುವೆ; ಪೋಸ್ಟ್‌ ವೆಡ್ಡಿಂಗ್ ಗ್ಲೋ ಬಗ್ಗೆ ಸಿದ್ಧಾರ್ಥ್ ಮಲ್ಹೋತ್ರಾ

ಇನ್‌ಸ್ಟಾಗ್ರಾಮ್‌ನಲ್ಲಿ (Instagram) ತನ್ನ ಫೋಟೋಗಳನ್ನು ಹಂಚಿಕೊಂಡ ಕಿಯಾರಾ, 'ಇಂದು ರಾತ್ರಿ ನಾನು ಗುಲಾಬಿ ಬಣ್ಣವನ್ನು ಅನುಭವಿಸುತ್ತಿದ್ದೇನೆ' ಎಂದು ತನ್ನ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಇದಕ್ಕೆ ಸಿದ್ಧಾರ್ಥ್ ಮಲ್ಹೋತ್ರಾ, 'ನಂಗೂ ಪಿಂಕ್ ಕಲರ್ ಕೊಡಿ' ಎಂದು ಕಮೆಂಟ್ ಮಾಡಿದ್ದಾರೆ. ಇದಕ್ಕೆ ಅವರು  ಬೆಂಕಿಯ ಮತ್ತು ಹೃದಯ ಕಣ್ಣುಗಳ ಎಮೋಜಿಗಳನ್ನು ಕೂಡ ಸೇರಿಸಿದ್ದಾರೆ. ತಮ್ಮ ಪತ್ನಿಯ ಪೋಸ್ಟ್​ಗೆ ಪ್ರೀತಿಯ ಕಮೆಂಟ್​ ಮಾಡಿದ ಸಿದ್ಧಾರ್ಥ್​ ಅವರ ಕಮೆಂಟ್​ ಅನ್ನು ಅಭಿಮಾನಿಗಳನ್ನು ಮೆಚ್ಚಿಕೊಂಡಿದ್ದು,  ಪ್ರೀತಿಯಿಂದ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಹೀಗೆ ನೂರು ಕಾಲ ಚೆನ್ನಾಗಿರಿ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದರೆ, ಈ ಗುಲಾಬಿ ಬಣ್ಣ (Pink color) ಸದಾ ನಿಮ್ಮ ಬಳಿಯೇ ಇರಲಿ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಆಹಾ! ಎಂಥ ರೊಮ್ಯಾಂಟಿಕ್​ ಪತಿ (romantic husband) ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದರೆ, ಖುಲ್ಲಂಖುಲ್ಲಾ ಆಗಿ ಹೀಗೆ ಹೇಳಬಹುದಾ ಎಂದು ಇನ್ನೊಬ್ಬರು ಸಿದ್ಧಾರ್ಥ್​ ಕಾಲೆಳೆದಿದ್ದಾರೆ.

ಅಂದಹಾಗೆ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಫೆಬ್ರವರಿ 7 ರಂದು ಸೂರ್ಯಗಢ ಅರಮನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಜೈಸಲ್ಮೇರ್‌ನಲ್ಲಿ (Jaisalmer) ನಡೆದ ಕಿಯಾರಾ ಮತ್ತು ಸಿದ್ಧಾರ್ಥ್ ಅವರ ವಿವಾಹ ಸಮಾರಂಭದಲ್ಲಿ ಇಶಾ ಅಂಬಾನಿ, ಕರಣ್ ಜೋಹರ್, ಶಾಹಿದ್ ಕಪೂರ್, ಮೀರಾ ರಜಪೂತ್, ಜೂಹಿ ಚಾವ್ಲಾ ಮತ್ತು ಇತರರು ಭಾಗವಹಿಸಿದ್ದರು.  ರಾಜಸ್ಥಾನದಲ್ಲಿ ನಡೆದ ಮದುವೆಯ ಬಳಿಕ  ಸಿದ್ಧಾರ್ಥ್ ಅವರ ತವರು ಮುಂಬೈನಲ್ಲಿ  ಫೆಬ್ರವರಿ 12 ರಂದು  ಅದ್ಧೂರಿ ಬಾಲಿವುಡ್ ಆರತಕ್ಷತೆ ನಡೆಯಿತು. ಇದರಲ್ಲಿ ಆಕಾಶ್ ಅಂಬಾನಿ (Akash Ambani), ಶ್ಲೋಕಾ ಮೆಹ್ತಾ, ಆಲಿಯಾ ಭಟ್ (Alia Bhatt) ಕರೀನಾ ಕಪೂರ್ (Kareena kapoor) ಮತ್ತು ಅನೇಕ ಸೆಲೆಬ್ರಿಟಿಗಳು (Celebrities) ಭಾಗವಹಿಸಿದ್ದರು. 

ಹನಿಮೂನ್‌ನಿಂದ ಬಂದ ಕಿಯಾರ-ಸಿದ್ಧಾರ್ಥ್: ಕಿಯಾರ ನೋಡಿ ಫ್ಯಾನ್ಸ್ ಬೇಜಾರಾಗಿದ್ದು ಯಾಕೆ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?