ಚಿಂತೆ ಮಾಡ್ಬೇಡ ಮಗ, ದೇವರು ನಿನ್ನೊಂದಿಗೆ ಇದ್ದಾನೆ; ತಾಯಿಯನ್ನು ನೆನೆದು ಕಣ್ಣೀರಿಟ್ಟ ಅಕ್ಷಯ್ ಕುಮಾರ್

Published : Feb 24, 2023, 12:47 PM IST
ಚಿಂತೆ ಮಾಡ್ಬೇಡ ಮಗ, ದೇವರು ನಿನ್ನೊಂದಿಗೆ ಇದ್ದಾನೆ; ತಾಯಿಯನ್ನು ನೆನೆದು ಕಣ್ಣೀರಿಟ್ಟ ಅಕ್ಷಯ್ ಕುಮಾರ್

ಸಾರಾಂಶ

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ತನ್ನ ತಾಯಿಯನ್ನು ನೆನೆದು ಕಣ್ಣೀರಾಕಿದ್ದಾರೆ. 

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಕೆನಡಾ ಪೌರತ್ವ ತ್ಯಜಿಸಿ ಭಾರತದ ಪ್ರಜೆ ಆಗುತ್ತಿದ್ದಾರೆ. ಈ ಬಗ್ಗೆ ಅಕ್ಷಯ್ ಕುಮಾರ್ ಅವರೇ ಬಹಿರಂಗ ಪಡಿಸಿದ್ದಾರೆ. ಇತ್ತೀಚಿಗಷ್ಟೆ ಆಜ್‌ತಕ್‌ನ ‘ಸೀಧಿ ಬಾತ್‌’ ಸಂವಾದದಲ್ಲಿ ಮಾತನಾಡಿದ ಅಕ್ಷಯ್ ಕುಮಾರ್ ಅನೇಕ ವಿಚಾರಗಳ ಬಗ್ಗೆ ಬಹಿರಂಗ ಪಡಿಸಿದರು. ಇದೇ ವೇಳೆ ಪುತ್ರ ಆರವ್ ಸಿನಿಮಾರಂಗ ಪ್ರವೇಶ ಮಾಡುವ ಬಗ್ಗೆಯೂ ಮಾತನಾಡಿದರು. ಅಕ್ಷಯ್ ಕುಮಾರ್ ಪುತ್ರ ಸಿನಿಮಾರಂಗಕ್ಕೆ ಎಂಟ್ರಿ ಕೊಡ್ತಾರಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿತ್ತು. ಇದಗ ಈ ಬಗ್ಗೆ ಸ್ವತಃ ಅಕ್ಷಯ್ ಕುಮಾರ್ ಅವರೆ ಬಹಿರಂಗ ಪಡಿಸುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. 

ಈಗಾಗಲೇ ಅನೇಕ ಸ್ಟಾರ್ ಮಕ್ಕಳು ಬಾಲಿವುಡ್  ಎಂಟ್ರಿ ಕೊಟ್ಟಿದ್ದಾರೆ. ಜಾನ್ವಿ ಕಪೂರ್, ಸಾರಾ ಅಲಿ ಖಾನ್, ಅನನ್ಯಾ ಪಾಂಡೆ, ಸುಹಾನಾ ಖಾನ್ ಸೇರಿದಂತೆ ಅನೇಕರು ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದಾರೆ. ಈ ನಡುವೆ ಅಕ್ಷಯ್ ಕುಮಾರ್ ಪುತ್ರನ ಸಿನಿಮಾ ಎಂಟ್ರಿ ಕೂಡ ಸದ್ದು ಮಾಡುತ್ತಿತ್ತು. ಇದೀಗ ಈ ಬಗ್ಗೆ ಅಕ್ಷಯ್ ಕುಮಾರು ಪ್ರತಿಕ್ರಿಯೆ ನೀಡಿದ್ದಾರೆ. ಆರವ್ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಾರಾ ಎಂದು ಕೇಳಿದ ಪ್ರಶ್ನೆಗೆ ಅಕ್ಷಯ್ ಕುಮಾರ್, 'ಅವನಿಗೆ ಇಷ್ಟವಿಲ್ಲ' ಎಂದು ಹೇಳಿದರು. ನಿಮ್ಮ ಪರಂಪರೆಯನ್ನು ಮಗ ಮುಂದುವರೆಸುದಿಲ್ವಾ ಎಂದು ಕೇಳಿದ ಪ್ರಶ್ನೆಗೆ ಅಕ್ಷಯ್ ಕುಮಾರ್, ನನ್ನ ಮಗ ಸಂತೋಷವಾಗಿರಲು ನಾನು ಬಯಸುತ್ತೇನೆ ಎಂದು ಹೇಳಿದರು. 

Selfie: ಸೆಲ್ಫಿ ಮೂಲಕವೇ ಗಿನ್ನೆಸ್​ ದಾಖಲೆ ಬರೆದ ಅಕ್ಷಯ್​ ಕುಮಾರ್​

ಅದೇ ಸಂದರ್ಶನದಲ್ಲಿ ಅಕ್ಷಯ್ ಕುಮಾರ್ ತಾಯಿಯನ್ನು ನೆನೆದು ಕಣ್ಣೀರಾಕಿದರು. ಅಕ್ಷಯ್ ಕುಮಾರ್ ತಾಯಿ ಅರುಣಾ ಭಾಟಿಯಾ ಸೆಪ್ಟಂಬರ್ 8, 2021ರಲ್ಲಿ ನಿಧನ ಹೊಂದಿದರು. ತಾಯಿ ನಿಧನದ ಬಳಿಕ ಅಕ್ಷಯ್ ಕುಮಾರ್ ಅವರ ಯಾವ ಸಿನಿಮಾಗಳು ಹಿಟ್ ಆಗಿಲ್ಲ. ಈ ಬಗ್ಗೆ ಮಾತನಾಡುತ್ತಾ ಅಕ್ಷಯ್ ಕುಮಾರ್ ಭಾವುಕರಾದರು. ಮಾತನಾಡಲು ಸಾಧ್ಯವಾಗದೆ ಸೈಲೆಂಟ್ ಆದರು. ಚಿತ್ರೀಕರಣ ಮುಗಿಸಿ ಮನೆಗೆ ಬಂದಾಗ ಪ್ರತಿದಿನ ತನ್ನ ತಾಯಿಯ ಕೋಣೆಗೆ ಹೋಗಿ ಎಲ್ಲಾ ವಿಚಾರಗಳನ್ನು ಚರ್ಚೆ ಮಾಡುತ್ತಿದ್ದರು ಎಂದು ಹೇಳುತ್ತಾ ಬಿಕ್ಕಿ ಬಿಕ್ಕಿ ಅತ್ತರು.  

ಬಾಕ್ಸ್ ಆಫೀಸ್ ನಲ್ಲಿ ಅಕ್ಷಯ್ ಕುಮಾರ್ ಸಿನಿಮಾಗಳು ಸಾಲು ಸಾಲು ಕಂಡಿವೆ. ಸೋಲಿನ ಬಗ್ಗೆ ತಾಯಿ ಹೇಗೆ ಪ್ರತಿಕ್ರಿಯೆ ನೀಡುತ್ತಿದ್ದರು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಕ್ಷಯ್ ಕುಮಾರ್, 'ಅವರು ಪ್ರಸಿದ್ಧವಾದ ಸಾಲನ್ನು ಹೇಳುತ್ತಿದ್ದರು. ಚಿಂತೆ ಮಾಡಬೇಡ ಮಗ, ದೇವರು ನಿನ್ನೊಂದಿಗೆ ಇದ್ದಾನೆ' ಎಂದು ಹೇಳಿದ್ದರು ಎಂದು ಹೇಳಿದರು. 

ಕೊನೆಗೂ ಕೆನಡಾ ಪೌರತ್ವ ತ್ಯಜಿಸಿ ಭಾರತದ ಪ್ರಜೆ ಆಗ್ತಿದ್ದಾರೆ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್ ಸದ್ಯ ಸೆಲ್ಫಿ ಸಿನಿಮಾದ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾದಲ್ಲಿ ಇಮ್ರಾನ್ ಹಶ್ಮಿ ಜೊತೆ ತೆರೆಹಂಚಿಕೊಂಡಿದ್ದಾರೆ. ಇಬ್ಬರೂ ಸಿಕ್ಕಾಪಟ್ಟೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅಕ್ಷಯ್ ಕುಮಾರ್‌ಗೆ 2022 ಭಾರಿ ನಿರಾಸೆಯ ವರ್ಷವಾಗಿತ್ತು. ಈ ವರ್ಷವಾದರೂ  ಉತ್ತಮ ವರ್ಷವಾಗುತ್ತಾ ಎಂದು ಎದುರು ನೋಡುತ್ತಿದ್ದಾರೆ. ಓ ಮೈ ಗಾಡ್-2, ಸೂರರೈ ಪೋಟ್ರು ಹಿಂದಿ ರಿಮೇಕ್,  ಬಡೆ ಮಿಯನ್ ಚೋಟೆ ಮಿಯನ್, ಹೇರಾ ಫೆರಿ, ಮರಾಠಿ ಸಿನಿಮಾ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?