BIGGBOSS 2: ಆಕಾಂಕ್ಷಾಪುರಿಯನ್ನು ಎಲ್ಲೆಂದರಲ್ಲಿ ಮುಟ್ಟಿದ ಸ್ಪರ್ಧಿ- ಛೀ ಅಂತಿದ್ದಾರೆ ನೆಟ್ಟಿಗರು

Published : Jun 27, 2023, 02:19 PM IST
BIGGBOSS 2: ಆಕಾಂಕ್ಷಾಪುರಿಯನ್ನು ಎಲ್ಲೆಂದರಲ್ಲಿ ಮುಟ್ಟಿದ ಸ್ಪರ್ಧಿ- ಛೀ ಅಂತಿದ್ದಾರೆ ನೆಟ್ಟಿಗರು

ಸಾರಾಂಶ

ಬಿಗ್​ಬಾಸ್​ ಮನೆಯಲ್ಲಿ ಅಶ್ಲೀಲ ಎನ್ನುವಂಥ ಘಟನೆ ನಡೆದಿದ್ದು, ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ. ಅದೇನು ಘಟನೆ?  

ಸಲ್ಮಾನ್ ಖಾನ್ ನಡೆಸಿಕೊಡುವ 'ಬಿಗ್ ಬಾಸ್' ಓಟಿಟಿ (Biggboss OTT) ಸೀಸನ್‌ 1 ಬಹಳ ಖ್ಯಾತಿ ಗಳಿಸಿತ್ತು. ಇದೀಗ ಸೀಸನ್​ 2 ಶುರುವಾಗಿದೆ. ಜೂನ್ 17ರಂದು ಇದಕ್ಕೆ ಚಾಲನೆ ದೊರೆತಿದೆ. ಸದ್ಯ ಬಿಗ್​ಬಾಸ್​ ಮನೆಯಲ್ಲಿ ಪೂಜಾ ಭಟ್ (Pooja Bhat), ಪಾಲಕ್ ಪುರ್ಸ್ವಾಮಿ, ಅವಿನಾಶ್ ಸಚ್‌ದೇವ್, ಬೇಬಿಕಾ ಧುರ್ವೆ, ಆಲಿಯಾ ಸಿದ್ಧಿಕಿ, ಜಾಡ್‌ ಹದೀದ್, ಮನಿಷಾ ರಾಣಿ, ಸೈರಸ್, ಅಕಾಂಕ್ಷಾ ಪುರಿ, ಅಭಿಷೇಕ್ ಮಲ್ಹಾನ್, ಜಿಯಾ ಶಂಕರ್ ಮುಂತಾದವರು ಸ್ಪರ್ಧಿಗಳು ಇದ್ದಾರೆ. ಅವರಲ್ಲಿ ಸಕತ್​ ಸುದ್ದಿ ಮಾಡುತ್ತಿರುವವರು  ಮಾಜಿ ನೀಲಿ ತಾರೆ ಮಿಯಾ ಖಲೀಫಾ. ಮಿಯಾ ಖಲೀಫಾ ಅವರು ಬ್ಲ್ಯೂ ಫಿಲ್ಮ್​  ಮೂಲಕ ಫೇಮಸ್ ಆದವರು. ಇವರೀಗ ಸೆನ್ಸೇಷನಲ್ ಸೃಷ್ಟಿಸುತ್ತಿದ್ದಾರೆ. 

ಬಿಗ್​ಬಾಸ್​ ಎಂದರೆನೇ ಅಶ್ಲೀಲ ಚಟುವಟಿಕೆಗಳ ಮನೆ ಎನ್ನುವಂಥ ಸ್ಥಿತಿ ನಿರ್ಮಾಣವಾಗಿದೆ. ಪ್ರೇಕ್ಷಕರನ್ನು ಸೆಳೆಯಲು ಅಶ್ಲೀಲ ತಂತ್ರಗಳ ಮೊರೆ ಹೋಗಿರುವುದರಿಂದ ಹಲವರು ಇದನ್ನು ನೋಡುವುದನ್ನು ಬಿಟ್ಟಿದ್ದರೆ, ಇಂಥ ದೃಶ್ಯಗಳನ್ನು ನೋಡುವುದಕ್ಕಾಗಿಯೇ ಬಿಗ್​ಬಾಸ್​ ಆಸೆ ಪಡುವವರೂ ಇದ್ದಾರೆ. ಇದರಲ್ಲಿ ಸ್ಪರ್ಧಿಗಳು ಮಾಡುವ ಪ್ರಕ್ರಿಯೆಗಳು ಸಹಜ ಎಂದು ತೋರಿಸಲಾಗುತ್ತದೆಯಾದರೂ ಎಲ್ಲವು ಸ್ಕ್ರಿಪ್ಟೆಡ್ಡ್​ (scripted) ಎನ್ನುವುದು ಪ್ರೇಕ್ಷಕರಿಗೂ ಅರಿವಾಗಿದೆ. ತೀರಾ ಅಸಭ್ಯವಾಗಿ ವರ್ತಿಸುವುದು, ಕೀಳುಮಟ್ಟದ ಡೈಲಾಗ್​ ಹೊಡೆಯುವುದು, ಕುಟುಂಬಸ್ಥರು ಕುಳಿತು ನೋಡುವಂಥ ಬಟ್ಟೆ ಧರಿಸದೇ ಇರುವುದು, ತಬ್ಬಿಕೊಳ್ಳುವುದು, ಕಿಸ್​ ಕೊಡುವುದು... ಹೀಗೆ ಎಲ್ಲವೂ ನಡೆಯುತ್ತಲೇ ಇರುತ್ತದೆ. ಈಗ ತೀರಾ ಅಶ್ಲೀಲ ಎನ್ನುವ ಘಟನೆಯೊಂದು ನಡೆದಿದ್ದು, ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್​ ಮಾಡುತ್ತಿದ್ದಾರೆ. 

BIGGBOSS OTT: 12 ಗಂಟೆಯಲ್ಲೇ ಔಟಾಗಿ ದಾಖಲೆ ಮಾಡಿದ ಪುನೀತ್​- ಎಂಟ್ರಿ ಕೊಟ್ಟ ನೀಲಿ ತಾರೆ!

ಆಗಿದ್ದೇನೆಂದರೆ,  ಈ ಮಧ್ಯೆ ಮಹಿಳಾ ಸ್ಪರ್ಧಿಯೊಬ್ಬರ ಖಾಸಗಿ ಭಾಗವನ್ನು ಮುಟ್ಟಿದ ಘಟನೆ ನಡೆದಿದ್ದು, ಇದರ ವಿಡಿಯೋ ವೈರಲ್​ ಆಗಿದೆ. ಸ್ಪರ್ಧಿಯಾಗಿರುವ ಆಕಾಂಕ್ಷಾ ಪುರಿ ಅವರನ್ನು ಜದ್​ ಹದೀದ್​ ಎನ್ನುವ ಸ್ಪರ್ಧಿ ಎಲ್ಲೆಂದರಲ್ಲಿ ಮುಟ್ಟಿದ್ದು, ಇದು ಆಕಾಂಕ್ಷಾ ಅವರಿಗೆ  ಮುಜುಗರ ತಂದಿದೆ.  ಈ ವಿಡಿಯೋ ವೈರಲ್ ಆಗುತ್ತಿದೆ. ಈ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಸಲಿಗೆ, ಜದ್ ಹದೀದ್​ ಹಾಗೂ ಆಕಾಂಕ್ಷಾ ಮಧ್ಯೆ ಯಾವುದೋ ವಿಚಾರಕ್ಕೆ ಮಾತುಕತೆ ನಡೆಯುತ್ತಾ ಇರುವ ಸಂದರ್ಭದಲ್ಲಿ  ಆಕಾಂಕ್ಷಾ ಅವರನ್ನು ಜದ್ ಎಳೆದುಕೊಂಡಿದ್ದಾರೆ. ಜದ್ ಅವರ ಕೈ ಎಲ್ಲೆ ಮೀರಿದ್ದು ಆಕಾಂಕ್ಷಾಗೆ ಅರ್ಥವಾಗಿದೆ. ‘ಆ ರೀತಿ ಮಾಡಬೇಡಿ. ನನಗೆ ಯಾರಾದರೂ ಮುಟ್ಟಿದರೆ ಆಗುವುದಿಲ್ಲ’ ಎಂದು ಹೇಳಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.  ಷೋ ಆರಂಭಕ್ಕೂ ಮೊದಲು ಮಾತನಾಡಿದ್ದ ಸಲ್ಮಾನ್ ಖಾನ್ ಯಾವುದೂ ಮಿತಿ ಮೀರದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದರು. ಆದರೆ ಈ ರೀತಿ ಅಸಭ್ಯ ನಡೆಯುತ್ತಿದೆ ಎಂದು ಹಲವರು ಹೇಳಿದ್ದರೆ, ಇನ್ನು ಹಲವರು ಇವೆಲ್ಲವೂ ಸ್ಕ್ರಿಪ್ಟೆಡ್​ ಎಂದು ಹೇಳುತ್ತಿದ್ದಾರೆ. 

Sakshi Chopra: ರಿಯಾಲಿಟಿ ಷೋನ ಲೈಂಗಿಕ ದೌರ್ಜನ್ಯ ಬಿಚ್ಚಿಟ್ಟ ರಮಾನಂದ್​ ಸಾಗರ್​ ಮರಿಮೊಮ್ಮಗಳು!

ಈ ಸೀಸನ್ 2ರ ಶೋ ಶುರುವಾದ 12 ಗಂಟೆಯಲ್ಲೇ ಸ್ಪರ್ಧಿ ಪುನೀತ್ ಕುಮಾರ್​​ ಸೂಪರ್​ಸ್ಟಾರ್​ ಮನೆಯಿಂದ ಎಲಿಮಿನೇಟ್ ಆಗಿ ಇದಾಗಲೇ ದಾಖಲೆ ನಿರ್ಮಿಸಿದ್ದಾರೆ.  ಬಿಗ್​ಬಾಸ್​ ಮನೆಯೊಳಗೆ ಸ್ಪರ್ಧಿಗಳು ಹೋಗಿ ಇನ್ನೂ 12 ಗಂಟೆಗಳೂ ಕಳೆದಿರಲಿಲ್ಲ. ಅಷ್ಟರಲ್ಲಿಯೇ ಅವರು ಎಲಿಮಿನೇಟ್​ (Eliminate) ಆಗಿದ್ದಾರೆ. ಕುತೂಹಲದ ಸಂಗತಿ ಏನೆಂದರೆ, ಇವರು  ಬಿಗ್ ಬಾಸ್ ಓಟಿಟಿ ಸೀಸನ್‌ 2ರ ಕೊನೆಯ ಸ್ಪರ್ಧಿಯಾಗಿ ಮನೆಯೊಳಗೆ ಹೋಗಿದ್ದರು. ಆದರೆ, ಕೊನೆಗೆ ಮನೆಯಿಂದ ಹೊರಬಿದ್ದ ಮೊದಲ ಸ್ಪರ್ಧಿ ಅವರಾಗಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Abhishek Bachchan: ಮಗಳು ಆರಾಧ್ಯಾ ಗೂಗಲ್‌ನಲ್ಲಿ ಈ ಡಿವೋರ್ಸ್ ಸುದ್ದಿ ಓದಿದರೇ ಏನಾಗುವುದೋ ಏನೋ..!?
ಪ್ರೀತಿಸಿದ ಹುಡುಗಿ ಮೋಸ ಮಾಡಿದ್ರೆ ತಿರುಗಿ ನೋಡದ ಹುಡುಗರು; ದ್ರೋಹ ಮಾಡಿದೋಳ ಹಿಂದೆ ಹೋದ Bigg Boss ಸ್ಪರ್ಧಿ