ಕೆಲಸ ಕಳೆದುಕೊಂಡಿದ್ದ ಮಹಿಳಾ ಬಸ್ ಡ್ರೈವರ್‌ಗೆ ಕಾರ್ ಗಿಫ್ಟ್ ನೀಡಿದ ಕಮಲ್ ಹಾಸನ್

Published : Jun 27, 2023, 01:13 PM ISTUpdated : Jun 27, 2023, 01:15 PM IST
ಕೆಲಸ ಕಳೆದುಕೊಂಡಿದ್ದ ಮಹಿಳಾ ಬಸ್ ಡ್ರೈವರ್‌ಗೆ ಕಾರ್ ಗಿಫ್ಟ್ ನೀಡಿದ ಕಮಲ್ ಹಾಸನ್

ಸಾರಾಂಶ

ಸಂಸದೆ ಕನಿಮೋಳಿಗೆ ಬಸ್ ಟಿಕೆಟ್ ನೀಡಿದ ವಿವಾದದಲ್ಲಿ ಕೆಲಸ ಕಳೆದುಕೊಂಡಿದ್ದ ಮಹಿಳಾ ಬಸ್ ಡ್ರೈವರ್‌ ಶರ್ಮಿಳಾ ಅವರಿಗೆ ನಟ, ರಾಜಕಾರಣಿ ಕಮಲ್ ಹಾಸನ್ ಕಾರ್ ಅನ್ನು ಗಿಫ್ಟ್ ನೀಡಿದ್ದಾರೆ. 

ಡಿಎಂಕೆ ಸಂಸದೆ ಕನಿಮೊಳಿ ಅವರಿಗೆ ಬಸ್ ಟಿಕೆಟ್ ನೀಡಿದ ವಿವಾದದಲ್ಲಿ ಕೆಲಸ ಬಿಟ್ಟಿದ್ದ ಕೊಯಮತ್ತೂರಿನ  ಮೊದಲ ಮಹಿಳಾ ಬಸ್ ಡ್ರೈವರ್‌ ಶರ್ಮಿಳಾ ಅವರಿಗೆ ನಟ, ರಾಜಕಾರಣಿ ಕಮಲ್ ಹಾಸನ್ ಕಾರ್ ಗಿಫ್ಟ್ ಆಗ ನೀಡಿದ್ದಾರೆ. ಶರ್ಮಿಳಾ ಅವರು ಕೇವಲ ಡ್ರೈವರ್ ಆಗಿ ಉಳಿಯಬಾರದು ಉದ್ಯಮಿಯಾಗಬೇಕು ಎಂದು ಕಮಲ್ ಹಾಸನ್ ಹೇಳಿದ್ದಾರೆ. 'ನಾನು ಮಹಿಳೆಯರ ಜೊತೆ ನಿಲ್ಲಲು ಬಯಸುತ್ತೇನೆ ಮತ್ತು ಶತಮಾನಗಳಿಂದ ಅವರನ್ನು ತಡೆಹಿಡಿದಿರುವ ಅಡೆತಡೆಗಳನ್ನು ಮುರಿಯಲು ಅವರಿಗೆ ಸಹಾಯ ಮಾಡಲು ನಾನು ಬಯಸುತ್ತೇನೆ' ಎಂದು ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ) ಮುಖ್ಯಸ್ಥ ಕಮಲ್ ಹೇಳಿದ್ದಾರೆ. 'ಶರ್ಮಿಳಾ ಕೇವಲ ಡ್ರೈವರ್ ಆಗಿ ಉಳಿಯಬಾರದು. ಅನೇಕ ಶರ್ಮಿಳಾರನ್ನು ಸೃಷ್ಟಿಸುವುದು ನನ್ನ ನಂಬಿಕೆ' ಕಮಲ್ ಹಾಸನ್ ಹೇಳಿಕೆ ನೀಡಿದ್ದಾರೆ. 

ಕಳೆದ ವಾರ ಶರ್ಮಿಲಾ ಚಲಾಯಿಸುತ್ತಿದ್ದ ಬಸ್‌ನಲ್ಲಿ ಡಿಎಂಕೆ ಸಂಸೆದ ಕನಿಮೊಳಿ ಪ್ರಯಾಣ ಮಾಡಿದ್ದರು. ಕೆಲವೇ ನಿಮಿಷಗಳಲ್ಲಿ ಶರ್ಮಿಳಾ ತನ್ನ ಕೆಲಸ ಕಳೆದುಕೊಂಡರು. ಡಿಎಂಕೆ ನಾಯಕನಿಗೆ ಅಗೌರವ ತೋರಿದ ಆರೋಪದ ಮೇರೆಗೆ ತನ್ನ ಕನಸಿನ ಕೆಲಸವನ್ನು ಕಳೆದುಕೊಂಡರು. ಆದರೆ ಈ ಬಗ್ಗೆ ಸಾರಿಗೆ ಸಂಸ್ಥೆ ಶರ್ಮಿಳಾ ತನ್ನ ಸ್ವಂತ ಇಚ್ಛೆಯ ಮೇರೆಗೆ ಕೆಲಸ ಬಿಟ್ಟಿದ್ದಾರೆ ಎಂದು ಹೇಳಿಕೆ ನೀಡಿದೆ. ಈ ಎಲ್ಲಾ ಬಳೆವಣಿಗೆಯ ಬಳಿಕ ಕಮಲ್ ಹಾಸನ್ ಕೆಲಸ ಕಳೆದುಕೊಂಡಿದ್ದ ಶರ್ಮಿಳಾ ಅವರಿಗೆ ನೆರರವಾಗಿದ್ದಾರೆ. 

ಮೂರು ಮದುವೆ, ಹಲವರ ಜೊತೆ ಲಿವ್​ ಇನ್​... ಹೀಗಿದ್ರೂ ಕಮಲ ಹಾಸನ್​ ಒಂಟಿಯಾಕೆ?

ಶರ್ಮಿಳಾ ಅವರಿಗೆ ಮಾರುತಿ ಸುಜುಕಿ ಎರ್ಟಿಗಾ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಕನಿಮೋಳಿ ಅವರನ್ನು ಗಾಂಧಿಪುರಂನಿಂದ ಪೀಲಮೇಡುವಿಗೆ ತಲುಪಿಸುವ ಜವಾಬ್ದಾರಿಯನ್ನು ಬಸ್ ಚಾಲಕಿ ಶರ್ಮಿಳಾ ವಹಿಸಿಕೊಂಡಿದ್ದರು. ಆದರೆ ಡಿಎಂಕೆ ಸಂಸದೆಯ ಮೇಲೆ ತನ್ನ ಸಹೋದ್ಯೋಗಿಗಳು ಅಗೌರವ ತೋರಿದ ಆರೋಪದ ಮೇರೆಗೆ ಕೆಲಸಕ್ಕೆ ಗುಡ್ ಬೈ ಹೇಳಿದರು. 

Project K: 600 ಕೋಟಿ ಬಜೆಟ್, ಪ್ರಭಾಸ್, ಅಮಿತಾಭ್, ಕಮಲ್, ದೀಪಿಕಾ ಪಡೆದ ಸಂಭಾವನೆ ಎಷ್ಟು?

ಶರ್ಮಿಳಾ ಅವರಿಗೆ ಕಾರನ್ನು ಗಿಫ್ಟ್ ಮಾಡುವ ಮೂಲಕ ಕಮಲ್ ಉದ್ಯಮಶೀಲತೆಯ ಪ್ರಯತ್ನಗಳನ್ನು ಅನ್ವೇಷಿಸಲು ಅವಕಾಶ ಒದಗಿಸಿದ್ದಾರೆ. ಶರ್ಮಿಳಾ ಮುಂದೊಂದು ದಿನ ದೊಡ್ಡ ಉದ್ಯಮಿಯಾಗಿ ಬೆಳೆದು ನಿಂತು ಅನೇಕ ಮಹಿಳೆಯರಿಗೆ ಸ್ಫೂರ್ತಿಯಾಗಬೇಕು ಎನ್ನುವುದು ಕಮಲ್ ಹಾಸನ್ ಅವರ ಉದ್ದೇಶವಾಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Abhishek Bachchan: ಮಗಳು ಆರಾಧ್ಯಾ ಗೂಗಲ್‌ನಲ್ಲಿ ಈ ಡಿವೋರ್ಸ್ ಸುದ್ದಿ ಓದಿದರೇ ಏನಾಗುವುದೋ ಏನೋ..!?
ಪ್ರೀತಿಸಿದ ಹುಡುಗಿ ಮೋಸ ಮಾಡಿದ್ರೆ ತಿರುಗಿ ನೋಡದ ಹುಡುಗರು; ದ್ರೋಹ ಮಾಡಿದೋಳ ಹಿಂದೆ ಹೋದ Bigg Boss ಸ್ಪರ್ಧಿ