ರ‍್ಯಾಂಪ್ ವಾಕ್​ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದ Aishwarya Rai

Published : Feb 22, 2023, 04:59 PM IST
ರ‍್ಯಾಂಪ್ ವಾಕ್​ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದ  Aishwarya Rai

ಸಾರಾಂಶ

ವಿಶ್ವ ಸುಂದರಿಯಾಗುವುದಕ್ಕೂ ಮುನ್ನ ರೂಪದರ್ಶಿಯಾಗಿದ್ದ ನಟಿ ಐಶ್ವರ್ಯ ರೈ ಅವರ ರ‍್ಯಾಂಪ್ ವಾಕ್ ವಿಡಿಯೋ ವೈರಲ್​ ಆಗಿದ್ದು, ಜನರ ಮನಸೂರೆಗೊಳ್ಳುತ್ತಿದೆ.  

ಐಶ್ವರ್ಯ ರೈ (aishwarya rai) ಎಂದರೆ ಅದೇನೋ ಖದರ್​. ಯಾವುದೇ ಸುಂದರಿಯನ್ನು ನೋಡಿದರೂ ಐಶ್ವರ್ಯ ರೈಗೆ ಹೋಲಿಸುವುದು ಇದೆ. ಈಕೆಯ ಬಳಿಕ ಅಥವಾ  ಮುಂಚೆ ಭಾರತದ ಸುಂದರಿ, ಭುವನ ಸುಂದರಿ, (Miss world) ವಿಶ್ವ ಸುಂದರಿಯಾದವರು ಹಲವರಿದ್ದರೂ ಐಶ್ವರ್ಯ ರೈ ಅವರಿಗೆ ಅವರದ್ದೇ ಆದ ಹಿರಿಮೆ ಗರಿಮೆಗಳಿವೆ.  1973ರ ನವೆಂಬರ್ 1ರಂದು  ಮಂಗಳೂರಿನಲ್ಲಿ ಜನಿಸಿರುವ ಈ ಕನ್ನಡತಿಗೆ ಈಗ 49 ವರ್ಷ ವಯಸ್ಸು. ವಯಸ್ಸು ಇಷ್ಟಾದರೂ ಈಕೆಯ ಸೌಂದರ್ಯಕ್ಕೇನೂ ಕೊರತೆಯಿಲ್ಲ. ಈಗಲೂ ಚಿತ್ರರಂಗದಲ್ಲಿಯೇ ಅಷ್ಟೇ ಬೇಡಿಕೆ ಕುದುರಿಸಿಕೊಂಡಿರುವ ನಟಿ. ಅಂದಹಾಗೆ ಈಕೆ, ಮುಂಬೈನ ಡಿ ಜಿ ರೂಪಾರೆಲ್ ಕಾಲೇಜ್ ಮತ್ತು ಆರ್ಯ ವಿದ್ಯಾ ಕಾಲೇಜಿನಲ್ಲಿ ಓದುತ್ತಿರುವಾಗ  ಒಂಬತ್ತನೆಯ ತರಗತಿಯಲ್ಲಿ ಇರುವಾಗಲೇ ಕ್ಯಾಮೆಲಿನ್ ಸಂಸ್ಥೆಗೆ ಮಾಡೆಲ್ (Model) ಆಗಿ ಕೆಲಸ ಮಾಡಿದ್ದರು. ನಂತರ ಅನೇಕ ಜಾಹೀರಾತುಗಳಲ್ಲಿ ನಟಿಸಿರೋ  ಐಶ್ವರ್ಯಾ, 1994ರಲ್ಲಿ ಭಾರತ ಸುಂದರಿ ಸ್ಪರ್ಧೆಯನ್ನು ಗೆದ್ದು ಅದೇ  ವರ್ಷ ವಿಶ್ವಸುಂದರಿ ಸ್ಪರ್ಧೆಯನ್ನು ಗೆದ್ದ ಮೇಲೆ ಅವರು ಸಕತ್​ ಫೇಮಸ್​ ಆಗಿದ್ದಾರೆ.  

ಐಶ್ವರ್ಯ ರೈ ಮೊದಲ ಬಾರಿಗೆ ಮಣಿರತ್ನಂ ನಿರ್ದೇಶನದ ತಮಿಳು ಸಿನಿಮಾ 'ಇರುವರ್' (Iruvan) ನಟಿಸಿದ್ದರು. ಆದರೆ, ಈ ಸಿನಿಮಾ ಯಶಸ್ವಿಯಾಗಲಿಲ್ಲ. 2000ರಲ್ಲಿ ಬಿಡುಗಡೆಯಾದ ತಮಿಳು ಚಿತ್ರ 'ಕಂಡುಕೊಂಡೇನ್ ಕಂಡುಕೊಂಡೇನ್' ಯಶಸ್ವಿಯಾಯಿತು. ಬಾಲಿವುಡ್​ನಲ್ಲಿ ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಈಕೆ,  ಕೆಲವು ತಮಿಳು ಮತ್ತು ಒಂದು ಬೆಂಗಾಲಿ ಚಿತ್ರದಲ್ಲಿಯೂ ನಟಿಸಿದ್ದಾರೆ. 'ದೇವದಾಸ್' (Devdas) ಮತ್ತು 'ಹಮ್ ದಿಲ್ ದೇ ಚುಕೇ ಸನಮ್' (Hum Dil De chuke Sanam) ಚಿತ್ರಗಳು ಬ್ಲಾಕ್​ಬಸ್ಟರ್​ ಆದವು.  ಫ್ರಾನ್ಸ್ ದೇಶದ ಕ್ಯಾನ್ಸ್​ನಲ್ಲಿ ನಡೆಯುವ ವಾರ್ಷಿಕ ಚಲನಚಿತ್ರೋತ್ಸವದ ಸಮಿತಿಯಲ್ಲಿ ಕೆಲಸ ಮಾಡಿರುವ ಏಕೈಕ ಭಾರತೀಯರು ಎನಿಸಿಕೊಂಡಿದ್ದಾರೆ ಈ ನಟಿ.

ಖಾಸಗಿ ವಿಡಿಯೋ ವೈರಲ್​: ನೋವು ತೋಡಿಕೊಂಡ ಖ್ಯಾತ ನಟಿ Priyanka

 ಬಚ್ಚನ್​ ಮನೆಯ ಸೊಸೆಯಾಗಿ ಸುಂದರವಾದ ಹೆಣ್ಣುಮಗುವಿಗೆ ಜನ್ಮ ನೀಡಿ ತಾಯಿಯಾದ ಮೇಲೆ ಐಶ್ವರ್ಯಾ ಸುದೀರ್ಘ ವಿರಾಮ ತೆಗೆದುಕೊಂಡರು. 'ನನ್ನ ಆದ್ಯತೆ ನನ್ನ ಕುಟುಂಬ ಮತ್ತು ಮಗಳು. ಮಣಿರತ್ನಂ ಅವರ 'ಪೊನ್ನಿಯಿನ್ ಸೆಲ್ವನ್' ಚಿತ್ರವು ಬಹಳ ಪ್ರಯತ್ನದಿಂದ ಪೂರ್ಣಗೊಂಡಿದೆ. ನನ್ನ ಕುಟುಂಬ ಮತ್ತು ಆರಾಧ್ಯಗಾಗಿ ನನ್ನ ಗಮನವನ್ನು ಬದಲಾಯಿಸಲು ನಾನು ಬಯಸುವುದಿಲ್ಲ' ಎಂದು ಹೇಳಿದ್ದರು.  ಮತ್ತೆ ಕಮ್​ಬ್ಯಾಕ್ ಮಾಡಿದರು.  ತಮಿಳಿನ ಪೊನ್ನಿಯ ಸೆಲ್ವನ್ ಚಿತ್ರದಲ್ಲಿ ನಂದಿನಿಯಾಗಿ ನಟಿಸಿದರು.  ಅದಾದ ಮೇಲೆ ಸಾಮಾಜಿಕ ಜಾಲತಾಣದಲ್ಲಿ (Social media) ಅವರ ಹಳೆಯ ಪಾಸ್‌ಪೋರ್ಟ್‌ ಒಂದು ವೈರಲ್​ ಆಗಿತ್ತು. ಅದರಲ್ಲಿ ಆಕೆಯ ಹಲವು ದಶಕಗಳ ಹಳೆಯ ಚಿತ್ರವನ್ನು ನೋಡಿದ ಅಭಿಮಾನಿಗಳು ತುಂಬಾ ಆಶ್ಚರ್ಯಚಕಿತರಾಗಿದ್ದರು. ಅವರ ರೂಪ ನೋಡಿ ಬೆರವಾಗಿದ್ದರು. 

ಇದೀಗ ಅವರ ಮಾಡೆಲಿಂಗ್​ ದಿನಗಳ ವಿಡಿಯೋ ಒಂದು ಈಗ ವೈರಲ್​ ಆಗಿದ್ದು, ಆಕೆಯ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. ಅದು ಅವರು ರ‍್ಯಾಂಪ್ ವಾಕ್ (Ramp Walk) ಮಾಡುವ ವಿಡಿಯೋ ಆಗಿದೆ. ತುಂಬಾ ಹಳೆಯ ವಿಡಿಯೋ ಇದಾಗಿದ್ದು, ಮತ್ತೆ ವೈರಲ್​  ಆಘುತ್ತದೆ.  ಈ ವಿಡಿಯೋದಲ್ಲಿ ಐಶ್ವರ್ಯಾ, ವಿವಿಧ ಕಾರ್ಯಕ್ರಮಗಳಲ್ಲಿ ರ‍್ಯಾಂಪ್ ವಾಕ್ ಮಾಡುತ್ತಿರುವುದನ್ನು ಕಾಣಬಹುದು. ಇದರೊಂದಿಗೆ ನಟಿಯ ಹಲವು ಲುಕ್‌ಗಳು ವಿಭಿನ್ನ ಡ್ರೆಸ್‌ಗಳಲ್ಲಿ (Dress) ಕಾಣಿಸಿಕೊಳ್ಳುತ್ತಿವೆ. ಈ ವೈರಲ್ ವೀಡಿಯೊದಲ್ಲಿ, ‘ಮಿಸ್ ವರ್ಲ್ಡ್’ ಸ್ಪರ್ಧೆಯ ಈಜುಡುಗೆ ಸುತ್ತಿನಲ್ಲಿ ಐಶ್ವರ್ಯಾ ಅವರ ರ‍್ಯಾಂಪ್ ವಾಕ್‌ನ ಒಂದು ನೋಟವೂ ಇದ್ದು ಹಲವು ನೆಟ್ಟಿಗರಿಗೆ ಇದು ವಿಶೇಷ ಗಮನ ಸೆಳೆಯುತ್ತಿದೆ. ಈಕೆಯ ಹಳೆಯ ವಿಡಿಯೋ ನೋಡಿ ಹಲವರು ತಮ್ಮ ನಿದ್ದೆ ಹಾರಿಹೋಗಿದೆ ಎಂದು ಕಮೆಂಟ್​ ಮಾಡಿದ್ದಾರೆ. 

ಬಾಲಿವುಡ್​ನ ನಾಲ್ವರು ಖ್ಯಾತ ನಟಿಯರ ಬುಟ್ಟಿಗೆ ಹಾಕಿಕೊಂಡಿದ್ದ ಈ ಮಾಜಿ ಪ್ರಧಾನಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?
ಅಪರಿಚಿತನಿಗೆ ಬಿಸ್ಕಿಟ್‌ ನೀಡಲು ಹೋಗಿ ಪೇಚಿಗೆ ಸಿಲುಕಿದ ಸಾರಾ ಅಲಿ ಖಾನ್