ಐಶ್ವರ್ಯಾ ರೈ ಥರ ಕಾಣಿಸೋ ಚೆಲುವೆಗೆ ಈಗ ಅವಕಾಶಗಳ ಹೊಳೆ!

Suvarna News   | Asianet News
Published : Mar 05, 2021, 03:44 PM IST
ಐಶ್ವರ್ಯಾ ರೈ ಥರ ಕಾಣಿಸೋ ಚೆಲುವೆಗೆ ಈಗ ಅವಕಾಶಗಳ ಹೊಳೆ!

ಸಾರಾಂಶ

ವಿಶ್ವಸುಂದರಿ ಐಶ್ವರ್ಯ ರೈ ಥರವೇ ಕಾಣಿಸುವ ಪಾಕಿಸ್ತಾನದ ಚೆಲುವೆಗೆ ತನ್ನನ್ನು ಐಶ್‌ಗೆ ಹೋಲಿಸಿದ್ದರಿಂದ ಬಹಳ ಖುಷಿಯಾಗಿದೆಯಂತೆ!  

ಇತ್ತೀಚೆಗೆ ಪಾಕಿಸ್ತಾನದ ಸುಂದರಿಯೊಬ್ಬಳು ಇನ್‌ಸ್ಟಗ್ರಾಮ್, ಟ್ವಿಟರ್‌, ಫೆಸ್‌ಬುಕ್‌ನಲ್ಲಿ ಸಕತ್ ಆಕ್ಟಿವ್ ಆಗಿಬಿಟ್ಟಳು. ಕಾರಣ ಆಕೆಯ ಲುಕ್ಕು. ನೋಡಲು ಐಶ್ವರ್ಯ ರೈ ಹೇಗಿದ್ದಾಳೋ ಹಾಗೇ ಇದ್ದಾಳೆ. ಅಕ್ಕ ಪಕ್ಕ ನಿಲ್ಲಿಸಿದರೆ ಅವಳಿ ಜವಳಿ ಎನ್ನಬಹುದು. ಅಷ್ಟೂ ಸಾಮ್ಯತೆ. ಈಕೆಯ ಹೆಸರು ಆಮ್ನಾ ಇಮ್ರಾನ್. ಪಾಕಿಸ್ತಾನದ ಮೆಡಿಕ್ ಮತ್ತು ಬ್ಯೂಟಿ ಬ್ಲಾಗರ್. ಹೆಂಗಳೆಯರಿಗೆ ಆರೋಗ್ಯ ಹಾಗೂ ಬ್ಯೂಟಿ ಟಿಪ್‌ಗಳನ್ನು ಕೊಡುತ್ತಾ ಇರುತ್ತಾಳೆ. 

ಇದ್ದಕ್ಕಿದ್ದಂತೆ ಜನ ಆಕೆಯ ಲುಕ್ಕು ಐಶ್ವರ್ಯ ರೈ ಜೊತೆ ಸಿಮಿಲರ್ ಆಗಿದೆ ಎಂದು ಗುರುತಿಸಲು ಶುರು ಮಾಡಿದರು. ಐಶ್ ಥರವೇ ಕಾಣಿಸಿಕೊಳ್ಳುವಂತೆ ಆಕೆ ಫೊಟೋಶೂಟ್ ಮಾಡಿಸಿಕೊಂಡಿದ್ದಲ್ಲ, ಆಕೆ ಇರುವುದೇ ಹಾಗೆ. ಆ ಕಣ್ಣು, ತುಟಿ, ಗಾಢ ಕಪ್ಪು ರೆಪ್ಪೆಗಳು, ಎಲ್ಲವೂ ಆಕೆಯಂತೆಯೇ. ಜನ ಯಾವಾಗ ಆಕೆಯನ್ನು ಹೀಗೆ ಗುರುತಿಸಿದರೋ, ಆಕೆ ಏಕ್‌ದಂ ಪಾಪ್ಯುಲರ್ ಆಗಿಬಿಟ್ಟಳು. ಆಕೆಯ ಫಾಲೋವರ್‌ಗಳ ಸಂಖ್ಯೆ ಎರಡೇ ದಿನದಲ್ಲಿ ಇಪ್ಪತ್ತು ಸಾವಿರ ದಾಟಿಬಿಟ್ಟಿತು. 

ಆಮ್ನಾ ಇಮ್ರಾನ್ ಹುಟ್ಟಿದ್ದು ಬೆಳೆದದ್ದು ಎಲ್ಲ ಅಮೆರಿಕದಲ್ಲಿ. ಈಗ ಪ್ರೊಫೆಷನ್ ನಡೆಸುತ್ತಿರುವುದೂ ಅಮೆರಿಕದಲ್ಲೇ. ಈಕೆ ನೆಫ್ರಾಲಜಿಸ್ಟ್. ಈಕೆಗೆ ಇಬ್ಬರು ಸೋದರಿಯರೂ ಇದ್ದಾರೆ. ಅವರೂ ಅಮೆರಿಕದಲ್ಲಿದ್ದಾರೆ. ಅಂದಹಾಗೆ ಈಕೆಗೆ ಭಾರತ ಕನೆಕ್ಷನ್ ಕೂಡ ಇದೆ. ಹೇಗೆ ಅಂತೀರಾ? ಈಕೆಯ ತಾಯಿ ಅಫಘಾನಿಸ್ತಾನ ಮೂಲದವಳು. ತಂದೆ ಪಾಕಿಸ್ತಾನದವರು. ಇವರಿಬ್ಬರ ದಾಂಪತ್ಯ ಶುರುವಾದುದು ಪಾಕ್‌ನಲ್ಲಿ. ಆದರೆ ತಂದೆಯ ತಂದೆ ತಾಯಿ ಭಾರತ ಮೂಲದವರು. ಹೀಗಾಗಿ ಈಕೆಯ ಮೂಲ ಭಾರತವೇ ಎಂದರೂ ಅಡ್ಡಿಯಿಲ್ಲ. ತನಗಿರುವ ಭಾರತೀಯ ಮೂಲವನ್ನು ಈಕೆ ಅಡ್ಡಿಯಿಲ್ಲದೆ ಹೇಳಿಕೊಳ್ಳುತ್ತಾಳೆ. 

ಐಶ್ವರ್ಯಾ ರೈ ಕಾಪಿಯಂತಿದ್ದಾಳೆ ಈ ಪಾಕ್ ಚೆಲುವೆ ...

ಮೆಡಿಕಲ್ ಪ್ರೊಫೆಷನ್‌ನಲ್ಲಿ ಮುಂದುವರಿಯಬೇಕು ಎಂಬ ಆಸೆ ಈಕೆಗೆ ಇದೆ. ಆದರೆ ಈಕೆ ಸೋಶಿಯಲ್ ಸೈಟ್‌ಗಳಲ್ಲಿ ಐಶ್ ಥರಾ ಎಂದು ಪಾಪ್ಯುಲರ್ ಆದುದೇ ತಡ, ಇದ್ದಕ್ಕಿದ್ದಂತೆ ಆಕೆಗೆ ಆಫರ್‌ಗಳ ಹೊಳೆ ಹರಿಯಲು ಆರಂಭಿಸಿದೆ. ಆಕ್ಟಿಂಗ್ ಅವಕಾಶಗಳು ಧಾರಾಕಾರ ಬರಲು ಆರಂಭಿಸಿವೆ. ಮಾಡೆಲಿಂಗ್ ಹಾಗೂ ಸಿನಿಮಾ ಅಭಿನಯದ ಅವಕಾಶಗಳು ಬಂದಿವೆ. ಎಲ್ಲವನ್ನೂ ಪರಿಶೀಲಿಸಿ ಕೆಲವನ್ನು ಒಪ್ಪಿಕೊಂಡು ಮುಂದುವರಿಯಬೇಕು ಎಂದುಕೊಂಡಿದ್ದಾಳೆ. ನಟನೆಯಲ್ಲೂ ಒಂದು ಚಾನ್ಸ್ ನೋಡಿಬಿಡೋಣ ಎಂಬ ಆಸೆ ಆಕೆಗೆ ಇದೆ. ಆದರೆ ಕೆರಿಯರ್ ಆಗಿ ಈಗಲೇ ಸ್ವೀಕರಿಸುವ ಬಗ್ಗೆ ಏನೂ ಅಂದುಕೊಂಡಿಲ್ಲ. ಫಾಲೋವರ್‌ಗಳು ಹಾಗೂ ಇತ್ತೀಚೆಗೆ ಹುಟ್ಟಿಕೊಂಡಿರುವ ಅಭಿಮಾನಿಗಳು ಆಕೆಯನ್ನು ನಟಿಸುವಂತೆ ಪ್ರೋತ್ಸಾಹಿಸುತ್ತಿದ್ದಾರೆ. 

ಅಂತೂ ಸಿಕ್ಕೇಬಿಟ್ಲು ಪ್ರಭಾಸ್ ಹೈಟ್ ಮ್ಯಾಚ್ ಮಾಡೋ ಚೆಲುವೆ ...

ಅಂದಹಾಗೆ ಐಶ್ವರ್ಯಾ ರೈ, ಆಮ್ನಾ ಇಮ್ರಾನ್‌ಗೆ ಅಪರಿಚಿತಳೇನಲ್ಲ. ಐಶ್ವರ್ಯಳ ಹಲವು ಫಿಲಂಗಳನ್ನು ಆಕೆ ಚಿಕ್ಕಂದಿನಲ್ಲೇ ನೋಡಿದ್ದಾಳೆ. ಐಶ್‌ನ ಫ್ಯಾನ್ ಕೂಡ ಹೌದು. ಐಶ್ ಹೀರೋಯಿನ್ ಆಗಿ ನಟಿಸಿದ ಮೊಹಬ್ಬತೇಂ ಹಾಗೂ  ದೇವದಾಸ್ ಫಿಲಂಗಳನ್ನು ಮತ್ತೆ ಮತ್ತೆ ನೋಡಿದ್ದಾಳಂತೆ. ಐಶ್ ಹಾಗೆ ಅಭಿನಯಿಸಲು ತನಗೆ ಸಾಧ್ಯವಾಗದು. ಯಾಕೆಂದರೆ ತಾನು ಆಕ್ಟಿಂಗ್ ಕೋರ್ಸ್ ಎಲ್ಲಾ ಮಾಡಿದದವಳಲ್ಲ. ಲುಕ್ಕು ಆಕೆಯ ಹಾಗೆ ಇದೆ ಎಂದಮಾತ್ರಕ್ಕೆ ಆಕೆಯ ಥರ ಸಕ್ಸಸ್ ಆಗ್ತೇನೆ ಎಂದಲ್ಲ ಎಂಬ ಅರಿವೂ ಈಕೆಗೆ ಇದೆ.

ಐಶ್ ಥರವೇ ಇನ್ನೊಬ್ಬಳು ಇದ್ದುದನ್ನು ಇಲ್ಲಿ ನೆನಪಿಸಬಹುದು. ಆಕೆಯ ಹೆಸರು ಸ್ನೇಹಾ ಉಳ್ಳಾಲ್. ಐಶ್‌ನಿಂದ ಡಿಚ್ ಆಗಿದ್ದ ಸಲ್ಮಾನ್ ಖಾನ್, ಆಕೆಗೆ ಸೆಡ್ಡು ಹೊಡೆಯಲು ಬಾಲಿವುಡ್‌ಗೆ ತಂದ ಸುಂದರಿಯೇ ಸ್ನೇಹಾ ಉಳ್ಳಾಲ್‌. ಆದರೆ ಆಕೆಯ ಪ್ರತಿಭೆ ಒಂದೇ ಸಿನಿಮಾಗೆ ಸೀಮಿತವಾಯಿತು ಎಂಬುದನ್ನು ಇಲ್ಲಿ ನೆನಪಿಸಬಹುದು. ಲುಕ್ ಒಂದೇ ಎಲ್ಲವೂ ಅಲ್ಲ. ಪ್ರತಿಭೆ ಕೂಡ ಅಗತ್ಯ ಅಂತ ಜನ ಹೇಳೋದು ಸುಳ್ಳಲ್ಲ ಅಲ್ವೇ?

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಮಮ್ಮುಟ್ಟಿ ಮಗ: ನಟ ದುಲ್ಖರ್ ವಿಡಿಯೋ ವೈರಲ್ ...

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!