ಬಾಲಿವುಡ್ ಜೋಡಿ ಅಭಿಷೇಕ್ ಮತ್ತು ಐಶ್ವರ್ಯ ಒಂದಾಗಿದ್ದಾರೆ. ಇವರಿಬ್ಬರ ಮುದ್ದಿನ ಮಗಳು ಆರಾಧ್ಯ ಮಾತ್ರ ಟ್ರೋಲರ್ ಬಾಯಿಗೆ ಆಹಾರವಾಗಿದ್ದಾಳೆ. ವಿಮಾನ ನಿಲ್ದಾಣದಲ್ಲಿ ಆರಾಧ್ಯ ಏನ್ ಮಾಡಿದ್ಲು, ಐಶ್ ರಿಯಾಕ್ಷನ್ ಹೇಗಿತ್ತು, ಎಲ್ಲದಕ್ಕೆ ಉತ್ತರ ಇಲ್ಲಿದೆ.
ಬಾಲಿವುಡ್ ಪವರ್ ಫುಲ್ ಫ್ಯಾಮಿಲಿ (Bollywood's powerful family)ಯ ಮೊಮ್ಮಗಳು, ಸ್ಟಾರ್ ಕಿಡ್ ಆರಾಧ್ಯ ಬಚ್ಚನ್ (star kid Aaradhya Bachchan) ಹೇಗಿರಬೇಕು? ಸದ್ಯ ಕಾಡ್ತಿರುವ ಪ್ರಶ್ನೆ ಇದು. ನಟ ಅಭಿಷೇಕ್ ಬಚ್ಚನ್ (actor Abhishek Bachchan) ಹಾಗೂ ಐಶ್ವರ್ಯ ರೈ ಬಚ್ಚನ್ (Aishwarya Rai Bachchan) ಮಗಳು ಆರಾಧ್ಯ ಎಲ್ಲಿಗೆ ಹೋದ್ರೂ ಕಾಂಟ್ರವರ್ಸಿ ಕ್ರಿಯೇಟ್ ಆಗುತ್ತೆ. ಆರಾಧ್ಯ ಏನ್ ಮಾಡ್ಲಿ, ಬಿಡಲಿ, ಆಕೆ ಟ್ರೋಲ್ ಆಗ್ತಾನೆ ಇರ್ತಾಳೆ. ಐಶ್ವರ್ಯ ರೈ ಜೊತೆ ಸದಾ ಸುತ್ತಾಡುವ ಆರಾಧ್ಯ, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು ಇದೇ ಮೊದಲಲ್ಲ. ಹೊಸ ವರ್ಷದ ಸಂಭ್ರಮದಲ್ಲಿ ಆರಾಧ್ಯ ಮಾಡಿದ ಒಂದೇ ಒಂದು ಜಪ್, ನೆಟ್ಟಿಗರ ಕಮೆಂಟ್ ಸುರಿಮಳೆಗೆ ಕಾರಣವಾಗಿದೆ.
ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ದೂರವಾಗಿದ್ದಾರೆ ಎಂಬ ಸುದ್ದಿ ಪೀಕ್ ನಲ್ಲಿದ್ದಾಗ್ಲೇ ಇಬ್ಬರು ಒಟ್ಟಿಗೆ ಕಾಣಿಸಿಕೊಂಡು ಅಭಿಮಾನಿಗಳನ್ನು ಖುಷಿಗೊಳಿಸಿದ್ರು. ಆರಾಧ್ಯ ಹುಟ್ಟುಹಬ್ಬದಲ್ಲಿ ಇಬ್ಬರು ಒಟ್ಟಿಗೆ ಫೋಟೋಕ್ಕೆ ಪೋಸ್ ನೀಡದೆ ಹೋದ್ರೂ ಪಾರ್ಟಿಯಲ್ಲಿ ಅಭಿಷೇಕ್ ಕೂಡ ಪಾಲ್ಗೊಂಡಿದ್ದಾರೆ ಎಂಬುದು ಸ್ಪಷ್ಟವಾಗಿತ್ತು. ನಂತ್ರ ಆರಾಧ್ಯ ಸ್ಕೂಲ್ ಕಾರ್ಯಕ್ರಮದಲ್ಲಿ ಇಬ್ಬರು ಒಟ್ಟಿಗೆ ಕುಳಿತು, ಮಗಳ ಆಕ್ಟಿಂಗ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಅದಾದ್ಮೇಲೆ ಹೊಸ ವರ್ಷವನ್ನು ಈ ಜೋಡಿ ಒಂದಾಗಿ ವೆಲ್ ಕಂ ಮಾಡಿದೆ. ಇಯರ್ ಆಂಡ್ ಡ್ರಿಪ್ ನಲ್ಲಿದ್ದ ಐಶ್ವರ್ಯ ರೈ ಹಾಗೂ ಅಭಿಷೇಕ್ ತಡರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ನಿಲ್ದಾಣದಿಂದ ಹೊರ ಬಂದ ಅಭಿಷೇಕ್ ಎಲ್ಲರಿಗೆ ಕೈ ಮುಗಿದ್ರೆ, ಐಶ್ವರ್ಯ ಹಾಗೂ ಆರಾಧ್ಯ, ಪಾಪರಾಜಿಗಳಿಗೆ ಹೊಸ ವರ್ಷದ ಶುಭಾಷಯ ಕೋರಿದ್ದಾರೆ. ನಂತ್ರ ಒಂದೇ ಕಾರಿನಲ್ಲಿ ಮನೆ ಕಡೆ ಪ್ರಯಾಣ ಬೆಳೆಸಿದ್ದಾರೆ. ಆದ್ರೆ ಈ ಮಧ್ಯೆ ಆರಾಧ್ಯ ಮಾಡಿದ ಒಂದು ಕೆಲಸ ಹಾಗೂ ಅದಕ್ಕೆ ಐಶ್ವರ್ಯ ನೀಡಿದ ರಿಯಾಕ್ಷನ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಬುಕ್ ಮೈ ಶೋದಲ್ಲಿ ಅಪರೂಪದ ವಿನೂತನ ದಾಖಲೆ ಬರೆದ ಪುಷ್ಪಾ-2
ವಿಮಾನ ನಿಲ್ದಾಣದಿಂದ ಕಾರ್ ಪಾರ್ಕಿಂಗ್ ಕಡೆ ಬರ್ತಿದ್ದ ಆರಾಧ್ಯ, ಒಂದು ಜಪ್ ಮಾಡಿದ್ದಾಳೆ. ಇದನ್ನು ನೋಡಿದ ಐಶ್ವರ್ಯ, ಭಯಗೊಂಡಿದ್ದಾರೆ. ಮಗಳ ವರ್ತನೆಯಿಂದ ದಂಗಾದ ಅವರು, ಯಾರೋ ತಳ್ಳಿದ್ದಾರೆಂದು ಭಾವಿಸಿದ್ದಾರೆ. ತಕ್ಷಣ ಯಾರು ತಳ್ಳಿದ್ದು ಅಂತ ಕೇಳುವ ಐಶ್ವರ್ಯ, ಪಾಪರಾಜಿಗಳ ಮೇಲೆ ಮುನಿಸಿಕೊಳ್ತಾರೆ. ನೋಡ್ಕೊಂಡು ಓಡಾಡು ಎಂದು ಮಗಳಿಗೆ ಸಲಹೆ ನೀಡಿ, ಕೂಲ್ ಆಗುವ ಐಶ್ವರ್ಯ, ನ್ಯೂ ಇಯರ್ ವಿಶ್ ಮಾಡ್ತಾರೆ. ಇತ್ತ ಆರಾಧ್ಯ ಕೂಡ ನ್ಯೂ ಇಯರ್ ವಿಶ್ ಮಾಡಿ ಅಪ್ಪನ ಜೊತೆ ಕಾರು ಹತ್ತಿದ್ದಾಳೆ. ಆರಾಧ್ಯ ಈ ವರ್ತನೆ ಕೆಲ ಬಳಕೆದಾರರಿಗೆ ಇಷ್ಟವಾಗಿಲ್ಲ. ಮತ್ತೆ ಕೆಲವರು ಆರಾಧ್ಯ ಪರ ಮಾತನಾಡಿದ್ದಾರೆ.
ಆರಾಧ್ಯ, ಅಬ್ನಾರ್ಮಲ್ ಅಂತೆ ಕಾಣಿಸ್ತಾಳೆ. ಆಕೆ ವಿಶ್ ಮಾಡಿದ್ದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಆಗ್ಲಿಲ್ಲ, ಆರಾಧ್ಯಳನ್ನು ಐಶ್ವರ್ಯ ಹಾಳು ಮಾಡಿದ್ದಾರೆ, ಐಶ್ ಅಂತೆ ಆರಾಧ್ಯ ಸುಂದರವಾಗೂ ಇಲ್ಲ, ಟ್ಯಾಲೆಂಟ್ ಕೂಡ ಇಲ್ಲ, ಐಶ್ವರ್ಯ ತನ್ನ ಮಗಳಿಗೆ ಸರಿಯಾದ ಸಂಸ್ಕಾರ ನೀಡಿಲ್ಲ. ಸದಾ ಐಶ್ ಮಗಳನ್ನು ಹಿಡಿದು ನಡೆಯೋದು ಏಕೆ ಎಂದೆಲ್ಲ ಕಮೆಂಟ್ ಮಾಡಿದ್ದಾರೆ.
ಮಾಧುರಿ ದೀಕ್ಷಿತ್ ಅವರ ₹48 ಕೋಟಿ ಮನೆ ನೋಡಿದ್ದೀರಾ?: ಒಳಗೆ ಹೇಗಿದೆ!
ಮತ್ತೆ ಕೆಲವರಿಗೆ ಆರಾಧ್ಯ ಅಬ್ನಾರ್ಮಲ್ ಎನ್ನುವ ಮಾತು ಇಷ್ಟವಾಗಿಲ್ಲ. ಆರಾಧ್ಯ ಚಿಕ್ಕ ಹುಡುಗಿ. ಮಕ್ಕಳು ಮಾಡುವ ಕೆಲಸವನ್ನು ಮಾಡ್ತಿದ್ದಾಳೆ. ಅದಕ್ಕೆ ನಮ್ಮಂತೆ ಅಮ್ಮನಾದ ಐಶ್ವರ್ಯ ರಿಯಾಕ್ಟ್ ಮಾಡಿದ್ದಾರೆ. ಸ್ಕೂಲ್ ಸಮಾರಂಭದಲ್ಲಿ ಆರಾಧ್ಯ ಆಕ್ಟಿಂಗ್ ನೋಡಿದ್ರೆ ನಿಮಗೆ ಸ್ಪಷ್ಟವಾಗುತ್ತೆ, ಆರಾಧ್ಯ ಅಬ್ ನಾರ್ಮಲ್ ಅಲ್ಲ, ನಾರ್ಮಲ್ ಎಂಬುದು ಅಂತ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.