ಸೆನ್ಸಾರ್ ಬೋರ್ಡ್ ಕಿತ್ತು ಹಾಕಿದ್ದ 'ಶೋಲೆ' ಸಿನಿಮಾದ ಈ ದೃಶ್ಯ 50 ವರ್ಷಗಳ ಬಳಿಕ ಈಗ ವೈರಲ್ ಆಗಿದೆ. ಏನಿದು ಸೀನ್ ನೋಡಿ...
1975ರ ಆಗಸ್ಟ್ 15ರಂದು ಬಿಡುಗಡೆಯಾದ ಅಮಿತಾಭ್ ಬಚ್ಚನ್ ಮತ್ತು ಧರ್ಮೇಂದ್ರ ಅವರ ಟೈಮ್‌ಲೆಸ್ ಬ್ಲಾಕ್‌ಬಸ್ಟರ್ ಶೋಲೆ ಬಿಡುಗಡೆಯಾಗಿ 50 ವರ್ಷಗಳಾಗುತ್ತಾ ಬಂದಿದೆ. ಆದರೆ ಈ ಚಿತ್ರ ಇಂದಿಗೂ ಹಚ್ಚ ಹಸಿರಾಗಿಯೇ ಉಳಿದಿದೆ.ಈ ಚಿತ್ರವು ಹಲವು ಅಳಿಸಲಾಗದ ದಾಖಲೆಗಳನ್ನು ಬರೆದಿದೆ. ಈ ಚಿತ್ರಕ್ಕೂ ಕರ್ನಾಟಕಕ್ಕೂ ನಂಟಿದೆ. ಅದೇನೆಂದರೆ, ಈ ಚಿತ್ರದಲ್ಲಿನ ಕಾಲ್ಪನಿಕ ಗ್ರಾಮ ರಾಮಘಡ್ನ ನಿರ್ಮಾಣ ಸಿನಿಮಾದ ಚಿತ್ರೀಕರಣ ನಡೆದಿದ್ದು ರಾಮನಗರದಲ್ಲಿ. ಗಬ್ಬರ್ ಸಿಂಗ್ನ ದೃಶ್ಯಗಳ ಚಿತ್ರೀಕರಣ ನಡೆದ ಈ ಬೆಟ್ಟ ಇವತ್ತಿಗೂ ಶೋಲೆ ಬೆಟ್ಟ ಎಂದೇ ಫೇಮಸ್ ಆಗಿದೆ.
ಈ ಚಿತ್ರ ಬಿಡುಗಡೆಯಾಗಿ 50 ವರ್ಷಗಳ ಬಳಿಕ, ಅಂದು ಸೆನ್ಸಾರ್ ಬೋರ್ಡ್ನಿಂದ ಕಿತ್ತು ಹಾಕಲಾಗಿದ್ದ ಒಂದು ದೃಶ್ಯ ಇದೀಗ ವೈರಲ್ ಆಗಿದೆ. ಆ ದೃಶ್ಯ ಠಾಕೂರ್ ಗಬ್ಬರ್ ಸಿಂಗ್ ಅನ್ನು ಕೊಲ್ಲುವಂತೆ ಚಿತ್ರೀಕರಿಸಲಾಗಿತ್ತು, ಆದರೆ ಸೆನ್ಸಾರ್ ಬೋರ್ಡ್ನವರ ಸಲಹೆ ಮೇರೆಗೆ ಮತ್ತೊಮ್ಮೆ ಕ್ಲೈಮ್ಯಾಕ್ಸ್ ಚಿತ್ರೀಕರಿಸಿ ಗಬ್ಬರ್ ಸಿಂಗ್ ಅನ್ನು ಪೊಲೀಸರಿಗೆ ಒಪ್ಪಿಸುವಂತೆ ದೃಶ್ಯ ಬದಲಾಯಿಸಲಾಗಿಯ್ತು. ಇದು ಅತ್ಯಂತ ಕ್ರೂರತ್ವವನ್ನು ಬಿಂಬಿಸುತ್ತದೆ ಎನ್ನುವ ಕಾರಣಕ್ಕೆ ಆಗ ಇದನ್ನು ಡಿಲೀಟ್ ಮಾಡಲು ಸೆನ್ಸಾರ್ ಮಂಡಳಿ ಸಲಹೆ ಇತ್ತಿತ್ತು. ಆದರೆ ಇಂದು ಕೆಲವು ಸಿನಿಮಾಗಳು ಮೊದಲಿನಿಂದ ಕೊನೆಯವರೆಗೂ ಇಂಥ ಕ್ರೂರತ್ವವನ್ನೇ ಬಿಂಬಿಸಿ ಬ್ಲಾಕ್ ಬಸ್ಟರ್ ಆಗುತ್ತಿರುವುದು ಮಾತ್ರ ಸೋಜಿಗ. ಅದೇನೇ ಇರಲಿ. ಇದೀಗ ಶೋಲೆಯ ಈ ಚಿತ್ರಗಳು ವೈರಲ್ ಆಗಿವೆ.
ಮದ್ಯ, ಹೆಣ್ಣಿನ ವಿಷ್ಯದಲ್ಲಿ ರಾಮಗೋಪಾಲ್ ವರ್ಮಾ ಹೊಸ ವರ್ಷದ ರೆಸಲ್ಯೂಷನ್ ಕೇಳಿ ಸಿನಿ ಇಂಡಸ್ಟ್ರಿ ಶಾಕ್!
ಬಿಡುಗಡೆಯಾದ 50 ವರ್ಷಗಳ ನಂತರವೂ ಹೆಚ್ಚು ಪ್ರೀತಿಸಲ್ಪಟ್ಟಿರುವ ಶೋಲೆ ಥಿಯೇಟರ್‌ಗಳಲ್ಲಿ ಮರು-ಬಿಡುಗಡೆಯಾಗಿದ್ದು, ಜನರನ್ನು ಸೆಳೆಯುತ್ತಲೇ ಇದೆ. ಅದರ ಆಕರ್ಷಕ ಕಥೆಯು ಹೃದಯಗಳನ್ನು ಗೆದ್ದಿದೆ. ಪ್ರೇಕ್ಷಕರನ್ನು ಜೀವಮಾನದ ಅಭಿಮಾನಿಗಳಾಗಿ ಪರಿವರ್ತಿಸಿತು. 'ಓಲ್ಡ್ ಈಸ್ ಗೋಲ್ಡ್' ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯು ಇತ್ತೀಚೆಗೆ ಅಂತಹ ಅಳಿಸಲಾದ ದೃಶ್ಯದ ಫೋಟೋವನ್ನು ಹಂಚಿಕೊಂಡಿದೆ. ಈ ದೃಶ್ಯದಲ್ಲಿ ಅಮ್ಜದ್ ಖಾನ್ ನಿರ್ವಹಿಸಿದ ಗಬ್ಬರ್ ಸಿಂಗ್ ಪಾತ್ರವು, ಸಚಿನ್ ಪಿಲ್ಗಾಂವ್ಕರ್ ಪಾತ್ರದ ಅಹ್ಮದ್ ಅವರನ್ನು ಕೂದಲಿನಿಂದ ಎಳೆಯುವ ದೃಶ್ಯ ಇದಾಗಿದೆ. ಆ ಸಂದರ್ಭದಲ್ಲಿ ಅವರನ್ನು ಡಕಾಯಿತರ ದಂಡು ಸುತ್ತುವರೆದಿರುವುದನ್ನು ನೋಡಬಹುದು. ಅತಿಯಾದ ಹಿಂಸೆ ಮತ್ತು ಗಬ್ಬರ್‌ನ ಕ್ರೂರ ಚಿತ್ರಣದಿಂದಾಗಿ ಸೆನ್ಸಾರ್ ಮಂಡಳಿಯು ಈ ದೃಶ್ಯವನ್ನು ತೆಗೆದುಹಾಕಿದ್ದು, ನಂತರ ದೃಶ್ಯವನ್ನು ಬದಲಾಯಿಸಲಾಗಿತ್ತು.
ಇನ್ನು ಈ ಚಿತ್ರ ಹಲವು ದಾಖಲೆಗಳನ್ನು ಬರೆದಿದೆ. 2 ವರ್ಷ ಚಿತ್ರೀಕರಣ ನಡೆದ ಈ ಸಿನಿಮಾ 70 ಎಂಎಂನಲ್ಲಿ ಚಿತ್ರೀಕರಣ ಮಾಡಿದ ಭಾರತದ ಮೊದಲ ಸಿನಿಮಾ ಎನಿಸಿಕೊಂಡಿದೆ. 25 ವಾರಗಳ ಸತತ ಪ್ರದರ್ಶನ ಕಂಡ ಭಾರತದ ಮೊದಲ ಸಿನಿಮಾ ಎಂಬ ಖ್ಯಾತಿಯೂ ಇದಕ್ಕಿದೆ. ರಾಷ್ಟ್ರಮಟ್ಟದ ಮಾತ್ರವಲ್ಲದೇ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನೂ ಮುಡಿಲಿಗೇರಿಸಿಕೊಂಡಿರುವ ‘ಶೋಲೆ’, ಮಿಲೇನಿಯಮ್ನ ಅತ್ಯುತ್ತಮ ಸಿನಿಮಾಗಳು ಎಂಬ ಬಿಬಿಸಿ ತಯಾರಿಸಿದ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಮಾತ್ರವಲ್ಲದೇ, ಸಿನಿ ರಂಗದ ಹಲವು ದಾಖಲೆಗಳನ್ನು ಮುರಿದಿದೆ.
ರಿಷಬ್ ಶೆಟ್ಟಿ ಟ್ವೀಟ್ಗೆ ರಶ್ಮಿಕಾ ಮಂದಣ್ಣ ಫ್ಯಾನ್ಸ್ ಕಿಡಿಕಿಡಿ: ಜಾಲತಾಣದಲ್ಲಿ ಪರ-ವಿರೋಧಗಳ ಬಿಸಿಬಿಸಿ ಚರ್ಚೆ!