ಐಶ್ವರ್ಯಾ ನಟಿಸಬೇಕಿದ್ದ ಫನಾ ಸಿನಿಮಾ ಕಾಜೋಲ್ ಪಾಲಾಗಿದ್ದು ಹೇಗೆ? ಇದ್ರಲ್ಲಿದೆ ಆಮೀರ್ ಕೈವಾಡ

Published : May 27, 2023, 04:47 PM IST
ಐಶ್ವರ್ಯಾ ನಟಿಸಬೇಕಿದ್ದ ಫನಾ ಸಿನಿಮಾ ಕಾಜೋಲ್ ಪಾಲಾಗಿದ್ದು ಹೇಗೆ? ಇದ್ರಲ್ಲಿದೆ ಆಮೀರ್ ಕೈವಾಡ

ಸಾರಾಂಶ

ಐಶ್ವರ್ಯಾ ರೈ ನಟಿಸಬೇಕಿದ್ದ ಫನಾ ಸಿನಿಮಾದಲ್ಲಿ ಕಾಜೋಲ್ ನಾಯಕಿಯಾಗಿ ಮಿಂಚಿದರು.ಫನಾ ರಿಲೀಸ್ ಆಗಿ 17 ವರ್ಷಗಳು ಕಳೆದಿವೆ. 

'ಫನಾ' ಈ ಸೂಪರ್ ಹಿಟ್ ಹಿಂದಿ ಸಿನಿಮಾ ಮರೆಯಲೂ ಸಾಧ್ಯನಾ. ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಮತ್ತು ಕಾಜೋಲ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾವಿದು. ಟಬು ಮತ್ತು ರಿಷಿ ಕಪೂರ್ ಪೋಷಕ ಪಾತ್ರದಲ್ಲಿ ಮಿಂಚಿದ್ದರು. ಆದಿತ್ಯ ಚೋಪ್ರಾ ನಿರ್ಮಾಣದಲ್ಲಿ ಬಂದ ಈ ಸಿನಿಮಾ ರಿಲೀಸ್ ಆಗಿ 17 ವರ್ಷಗಳಾಗಿದೆ. 2006 ಮೇ 26ರಂದು ಫನಾ ಸಿನಿಮಾ ಅದ್ದೂರಿಯಾಗಿ ರಿಲೀಸ್ ಆಗಿತ್ತು. ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುವ ಮೂಲಕ ಬಾಕ್ಸ್ ಆಫೀಸ್ ಉತ್ತಮ ಕಮಾಯಿ ಮಾಡಿತ್ತು. ಆಮೀರ್ ಖಾನ್ ಮತ್ತು ಕಾಜೋಲ್ ಕಾಂಬಿನೇಷ್‌ಗೆ ಅಭಿಮಾನಿಗಳು ಫಿದಾ ಆಗಿದ್ದರು. ಅಂದಹಾಗೆ ಈ ಸಿನಿಮಾಗೆ ಮೊದಲ ಆಯ್ಕೆಯಾಗಿದ್ದು ಐಶ್ವರ್ಯಾ ರೈ ಮತ್ತು ಸುಶ್ಮಿತಾ ಸೇನ್.  ಕುನಲ್ ಕೊಹ್ಲಿ ಸಾರಥ್ಯದಲ್ಲಿ ಈ ಸಿನಿಮಾ ಮಾಡಿ ಬಂದಿತ್ತು. 

ಯಶ್ ರಾಜ್ ಫಿಲ್ಮ್, ಕಾಜೋಲ್ ಆಯ್ಕೆಯಾಗುವ ಮೊದಲು ಐಶ್ವರ್ಯಾ ರೈ ಮತ್ತು ಸುಶ್ಮಿತಾ ಸೇನ್ ಅವರನ್ನು ಆಯ್ಕೆ ಮಾಡಿತ್ತು. ಕಾಜೋಲ್ ನಟಿಸಿದ್ದ ಪಾತ್ರಕ್ಕೆ ಐಶ್ವರ್ಯಾ ರೈ ಹಾಗೂ ಟಬು ನಿರ್ವಹಿಸಿರುವ ಪಾತ್ರಕ್ಕೆ ಸುಶ್ಮಿತಾ ಸೇನ್ ಅವರನ್ನು ಆಯ್ಕೆ ಮಾಡಲಾಗಿತ್ತು. ವಿಶೇಷ ಪಾತ್ರಕ್ಕೆ ಅಭಿಷೇಕ್ ಬಚ್ಚನ್ ಅವರನ್ನು ಕರೆತರುವ ಪ್ಲಾನ್ ಮಾಡಲಾಗಿತ್ತು. ಆದರೆ ಯಶ್ ರಾಜ್  ಸಂಸ್ಥೆಯ ಈ ಪ್ಲಾನ್ ವರ್ಕೌಟ್ ಆಗಿಲ್ಲ. ನಿರ್ದೇಶಕ ಕುನಾಲ್ ಮೊದಲು ಕಥೆಯನ್ನು ಆಮೀರ್ ಖಾನ್‌ಗೆ ಹೇಳಿದರು. ಕಥೆ ಕೇಳಿ ಫಿದಾ ಆದ ಮಿಸ್ಟರ್ ಪರ್ಫೆಕ್ಷನಿಸ್ಟ್ ದಿಢೀರ್ ಅಂತ ಸಿನಿಮಾ ಒಪ್ಪಿಕೊಂಡರು. ನಾಯಕಿ ಯಾರಾಗಬಹುದು ಎಂದು ಕೇಳಿದ್ದಕ್ಕೆ ಆಮೀರ್ ಖಾನ್ 3 ಹೆಸರನ್ನು ಸೂಚಿಸಿದ್ದರು. ಅದು ಕಾಜೋಲ್, ಕಾಜೋಲ್, ಕಾಜೋಲ್ ಎಂದು ಆಮೀರ್ ಖಾನ್ ಹೇಳಿದರು. ಬಳಿಕ ಕಾಜೋಲ್ ಫೈನಲ್ ಆದರು.  

Aishwarya Rai Bachchan: ಐಶ್‌ ಬೇಬಿ ಮರೆಯಲಾಗದ ಐದು ಪಾತ್ರಗಳು

2017 ರಲ್ಲಿ ನೀಡಿದ ಸಂದರ್ಶನದಲ್ಲಿ ನಿರ್ದೇಶಕ ಕುನಾಲ್ ಕೊಹ್ಲಿ ಚಿತ್ರದ ಕಾಸ್ಟಿಂಗ್ ಪ್ರಕ್ರಿಯೆ ಬಗ್ಗೆ ಮಾತನಾಡಿದ್ದರು. 'ನಾವು ಮೊದಲು ಅಮೀರ್ ಬಳಿಗೆ ಹೋದೆವು ಮತ್ತು ಝೂನಿ ಪಾತ್ರವನ್ನು ಯಾರು ಉತ್ತಮವಾಗಿ ನಿರ್ವಹಿಸುತ್ತಾರೆ ಎಂದು ಅವರನ್ನು ಕೇಳಿದಾಗ, ಅವರು 'ನಾನು ನಿಮಗೆ ಮೂರು ಹೆಸರುಗಳನ್ನು ನೀಡುತ್ತೇನೆ ಎಂದು ಕಾಜೋಲ್, ಕಾಜೋಲ್ ಮತ್ತು ಕಾಜೋಲ್' ಎಂದು ಹೇಳಿದರು. ಆದರೆ ಕಾಜೋಲ್ ಒಪ್ಪಿಗೆ ನೀಡುತ್ತಾರಾ ಎನ್ನುವ ಬಗ್ಗೆ ಯಾರಿಗೂ ನಂಬಿಕೆ ಇರಲಿಲಿಲ್ಲ. ಯಾಕೆಂದರೆ  ಅಮೀರ್ ಜೊತೆ ಎಂದಿಗೂ ಕಾಜೋಲ್ ಕೆಲಸ ಮಾಡಿರಲಿಲ್ಲ' ಎಂದು ಹೇಳಿದ್ದರು. 

ಕಾನ್ ಫೆಸ್ಟಿವಲ್‌ ಮುಗಿಸಿ ತವರಿಗೆ ಮರಳಿದ ಐಶ್ವರ್ಯಾ ರೈ; ಅಭಿಮಾನಿಗಳ ಹೃದಯ ಗೆದ್ದ ಆರಾಧ್ಯಾ ವರ್ತನೆ

ಅದೇ ಸಮಯಕ್ಕೆ ಕರಣ್ ಜೋಹರ್ ಕಭಿ ಅಲ್ವಿದಾ ನಾ ಕೆಹನಾ ಸಿನಿಮಾಗೆ ನಾಯಕಿ ಆಯ್ಕೆ ಮಾಡುತ್ತಿದ್ದರು. ಹಾಗಾಗಿ ಎಲ್ಲರೂ ಕಾಜೋಲ್ ಫನಾ ಬದಲಿಗೆ ಕರಣ್  KANK ಸಿನಿಮಾ ಆಯ್ಕೆ ಮಾಡುತ್ತಾರೆ ಅಂತ ಎಂದುಕೊಂಡಿದ್ವಿ. ಆದರೆ ಆ ಸಿನಿಮಾವನ್ನು ಕಾಜೋಲ್ ಇಷ್ಟಪಡಲಿಲ್ಲ. ಬಳಿಕ ಕಾಜೋಲ್ ಅಮೀರ್ ಖಾನ್ ಜೊತೆಗಿನ ಫನಾ ಚಿತ್ರ ಆಯ್ಕೆ ಮಾಡಿಕೊಂಡರು. ಬಳಿಕ ಫನಾ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು. ಸಿನಿಮಾ ಕಥೆ, ಹಾಡುಗಳು, ನಟನೆ, ನಿರ್ದೇಶನ ಪ್ರತಿಯೊಂದು ಕೂಡ ಅಭಿಮಾನಿಗಳ ಹೃದಯ ಗೆದ್ದಿತು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?
ಅಪರಿಚಿತನಿಗೆ ಬಿಸ್ಕಿಟ್‌ ನೀಡಲು ಹೋಗಿ ಪೇಚಿಗೆ ಸಿಲುಕಿದ ಸಾರಾ ಅಲಿ ಖಾನ್