ರಣಬೀರ್ ಬಳಿಕ ರಾಮ್ ಚರಣ್: ಪ್ರಭಾಸ್ 'ಆದಿಪುರುಷ್' ಚಿತ್ರದ 10 ಸಾವಿರ ಟಿಕೆಟ್ ಖರೀದಿಸಿದ RRR ಸ್ಟಾರ್

Published : Jun 11, 2023, 11:02 AM IST
ರಣಬೀರ್ ಬಳಿಕ ರಾಮ್ ಚರಣ್: ಪ್ರಭಾಸ್ 'ಆದಿಪುರುಷ್' ಚಿತ್ರದ 10 ಸಾವಿರ ಟಿಕೆಟ್ ಖರೀದಿಸಿದ RRR ಸ್ಟಾರ್

ಸಾರಾಂಶ

ರಣಬೀರ್ ಬಳಿಕ ಇದೀಗ ರಾಮ್ ಚರಣ್, ಪ್ರಭಾಸ್ ನಟನೆಯ 'ಆದಿಪುರುಷ್' ಚಿತ್ರದ 10 ಸಾವಿರ ಟಿಕೆಟ್ ಖರೀದಿಸಿದ್ದಾರೆ. 

ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಸಿನಿಮಾತಂಡ ಭರ್ಜರಿ ಪ್ರಚಾರ ಮಾಡುತ್ತಿದ್ದು ಪ್ರಭಾಸ್ ಮತ್ತು ಇಡೀ ತಂಡ ಅನೇಕ ರಾಜ್ಯಗಳಲ್ಲಿ ಭೇಟಿ ನೀಡಿ ಭರ್ಜರಿ ಪ್ರಮೋಷನ್ ಮಾಡುತ್ತಿದ್ದಾರೆ. ಈಗಾಗಲೇ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದ್ದು ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಮಹಾಕಾವ್ಯವನ್ನು ತೆರೆಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಕೆಲವು ಸ್ಟಾರ್ಸ್ ಆದಿಪುರುಷ್ ಸಿನಿಮಾದ ಟಿಕೆಟ್ ಖರೀದಿಸುತ್ತಿದ್ದಾರೆ. ಸಾವಿರಗಟ್ಟಲೆ ಟಿಕೆಟ್ ಖರೀದಿಸಿ ಮಕ್ಕಳಿಗೆ, ವೃದ್ಧರಿಗೆ ಸಿನಿಮಾ ತೋರಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಬರೋಬ್ಬರಿ 10 ಸಾವಿರ ಟಿಕೆಟ್ ಬುಕ್ ಮಾಡಿದ್ದರು. ಇದೀಗ ತೆಲುಗು ಸ್ಟಾರ್ ರಾಮ್ ಚರಣ್ ಸರದಿ. 

ಆರ್ ಆರ್ ಆರ್ ಸ್ಟಾರ್ ರಾಮ್ ಚರಣ್ ಕೂಡ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾದ 10 ಸಾವಿರ ಟಿಕೆಟ್ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಅಭಿಮಾನಿಗಳಿಗಾಗಿ ಹಾಗೂ ಮಕ್ಕಳಿಗಾಗಿ ಟಿಕೆಟ್ ಖರೀದಿಸಿದ್ದಾರೆ ಎನ್ನಲಾಗಿದೆ. ದಿ ಕಾಶ್ಮೀರ್ ಫೈಲ್ಸ್ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಕೂಡ 10 ಸಾವಿರ ಟಿಕೆಟ್ ಬುಕ್ ಮಾಡಿದ್ದರು. 

ಟಿಕೆಟ್ ಬುಕ್ ಮಾಡಿದ ರಣಬೀರ್ ಕಪೂರ್ 

ಓಂ ರಾವುತ್ ನಿರ್ದೇಶನದ ಆದಿಪುರುಷ ಜೂನ್ 16 ರಂದು ಅದ್ದೂರಿಯಾಗಿ ರಿಲೀಸ್ ಆಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರಭಾಸ್ ಆದಿಪುರುಷ್ ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ಪ್ರಭಾಸ್ ರಾಘವ ಪಾತ್ರದಲ್ಲಿ ನಟಿಸಿದ್ದರೆ, ಕೃತಿ ಸನೊನ್ ಜಾನಕಿಯಾಗಿ ಕಾಣಿಸಿಕೊಂಡಿದ್ದಾರೆ. ಬಹುನಿರೀಕ್ಷೆಯ ಸಿನಿಮಾ ಇದಾಗಿದ್ದು ಈ ಸಿನಿಮಾವನ್ನು ಎಲ್ಲಾ ಮಕ್ಕಳು ನೋಡಬೇಕು ಎನ್ನುವುದು ಸಿನಿಮಾತಂಡದ ಬಯಕೆ. ಆದರೆ ಎಲ್ಲಾ ಮಕ್ಕಳಿಗೂ ಸಿನಿಮಾ ಟಿಕೆಟ್ ಖರೀದಿ ಮಾಡಿ ನೋಡಲು ಸಾಧ್ಯವಾಗದ ಕಾರಣ ರಣಬೀರ್ ಕಪೂರ್ ಅಂತ ಮಕ್ಕಳ ಬೆಂಬಲಕ್ಕೆ ನಿಂತಿದ್ದಾರೆ. 

ರಾಮನ ಲುಕ್ ಹೀಗಿರುತ್ತಾ? ಪ್ರಭಾಸ್ 'ಆದಿಪುರುಷ್' ಗೆಟಪ್ ಕೆಣಕಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ನಟಿ

 10 ಸಾವಿರ ಟಿಕೆಟ್ ಬುಕ್ ಮಾಡಿದ ನಿರ್ಮಾಪಕ

ಇನ್ನೂ ನಿರ್ಮಾಪಕ ಮತ್ತು ವಿತರಕ ಅಭಿಷೇಕ್ ಅಗರ್ವಾಲ್ ಕೂಡ 10 ಸಾವಿರ ಟಿಕೆಟ್ ಬುಕ್ ಮಾಡಿದ್ದಾರೆ. ಅನಾಥ ಮಕ್ಕಳು, ವೃದ್ಧಾಶ್ರಮ ಹಾಗೂ ಸರ್ಕಾರಿ ಶಾಲಾ ಮಕ್ಕಳಿಗಾಗಿ 10 ಸಾವಿರ ಟಿಕೆಟ್ ಬುಕ್ ಮಾಡಿದ್ದಾರೆ. ಅಭಿಷೇಕ್ ಬೆನ್ನಲ್ಲೇ ರಣಬೀರ್ ಕಪೂರ್ ಹಾಗೂ ರಾಮ್ ಚರಣ್ ಟಿಕೆಟ್ ಬುಕ್ ಮಾಡಿರುವುದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. 

Adipurush ಮುಟ್ಟಾದವ್ರು ನೋಡ್ಬೋದಾ? ಬಟ್ಟೆ ಬಿಚ್ಚಿ ಹೋಗ್ಬೇಕಾ? ಕಾಯಿ ಒಡೀತಾರಾ? ಪ್ರಸಾದ ಕೊಡ್ತಾರಾ?

ಒಂದು ಆಸನ ಹನುಮನಿಗೆ ಮೀಸಲು

ಆದಿಪುರುಷ್ ಸಿನಿಮಾ ಪ್ರದರ್ಶನವಾಗುವ ಪ್ರತಿಯೊಂದು ಚಿತ್ರಮಂದಿರಗಳಲ್ಲಿ ಒಂದು ಆಸನವನ್ನು ಹನುಮನಿಗೆ ಮೀಸಲಿಡಲಾಗುತ್ತಿದೆ. ಈ ಬಗ್ಗೆ ಸಿನಿಮಾತಂಡ ಇತ್ತೀಚೆಗಷ್ಟೆ ಬಹಿರಂಗ ಪಡಿಸಿದೆ.  ಒಂದು ಆಸನವನ್ನು ಹನುಮನಿಗೆ ಅರ್ಪಿಸಲು ಸಿನಿಮಾತಂಡ ನಿರ್ಧರಿಸಿದೆ. ಜೂನ್ 16ರಂದು ತೆರೆಗ ಬರುತ್ತಿರುವ ಆದಿಪುರುಷ್ ಸಿನಿಮಾ ಹೇಗಿದೆ, ವಿವಾದಗಳನ್ನು ಬಿದಿಗೊತ್ತಿ ಸೂಪರ್ ಸಕ್ಸಸ್ ಕಾಣುತ್ತಾ ಕಾದು ನೋಡಬೇಕಿದೆ
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!