Vijay Deverakonda In Brahmastra 2: ರಾಕಿಂಗ್ ಸ್ಟಾರ್ ಯಶ್, ಪ್ರಭಾಸ್, ಹೃತಿಕ್, ರಣ್ವೀರ್ ರಿಜೆಕ್ಟ್ ಮಾಡಿದ ಹಿಂದಿ ಸಿನಿಮಾದಲ್ಲಿ ವಿಜಯ್ ದೇವರಕೊಂಡ ನಟಿಸುತ್ತಿದ್ದಾರೆ ಎನ್ನಲಾಗಿದೆ.
ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಇತ್ತೀಚಿಗಷ್ಟೆ ಲೈಗರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಅಭಿಮಾನಿಗಳ ನಿರೀಕ್ಷೆ ಮಟ್ಟ ಮುಟ್ಟುವಲ್ಲಿ ವಿಫಲವಾಗಿದೆ. ಬಾಕ್ಸ್ ಆಫೀಸ್ ನಲ್ಲೂ ಸಿನಿಮಾ ಉತ್ತಮ ಕಮಾಯಿ ಮಾಡಿಲ್ಲ. ಲೈಗರ್ ಸೋಲು ವಿಜಯ್ ದೇವರಕೊಂಡ ಅವರಿಗೆ ದೊಡ್ಡ ತಲೆನೋವಾಗಿತ್ತು. ಸೋಲಿನ ಬಳಿಕ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದರು. ಲೈಗರ್ ಸೋಲಿನ ಬಳಿಕ ವಿಜಯ್ ಮತ್ತೆ ನಿರ್ದೇಶಕ ಪುರಿ ಜಗನ್ನಾಥ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಜೊತೆಗೆ ವಿಜಯ್ ಇದೀಗ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಹೌದು ಹಿಂದಿಯ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ವಿಜಯ್ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಬ್ಮಹ್ಮಾಸ್ತ್ರ ಮೊದಲ ಭಾಗ ಈಗಾಗಲೇ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ಹಿಟ್ಟಿಸಿಕೊಂಡಿದೆ. ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಮಾಯಿ ಮಾಡಿದೆ. ಪಾರ್ಟ್ 2ನಲ್ಲಿ ದೇವ್ ಪಾತ್ರ ಮಾಡಲು ವಿಜಯ್ ದೇವರಕೊಂಡ ಅವರಿಗೆ ಅಪ್ರೋಚ್ ಮಾಡಲಾಗಿದೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಅಂದಹಾಗೆ ದೇವ್ ಪಾತ್ರಕ್ಕೆ ಈಗಾಗಲೇ ರಾಕಿಂಗ್ ಸ್ಟಾರ್ ಯಶ್, ಹೃತಿಕ್ ರೋಷನ್ ಮತ್ತು ಪ್ರಭಾಸ್ ಅವರಿಗೂ ಅಪ್ರೋಚ್ ಮಾಡಲಾಗಿತ್ತು. ಆದರೆ ಇವರ್ಯಾರು ದೇವ್ ಪಾತ್ರ ಮಾಡಲು ಗ್ರೀನ್ ಸಿಗ್ನಲ್ ನೀಡಿಲ್ಲ. ಆದರೀಗ ವಿಜಯ್ ದೇವರಕೊಂಡ ಪಾಲಾಗಿದೆ ಎನ್ನಲಾಗಿದೆ.
Vijay Deverakonda: ಕಮ್‌ಬ್ಯಾಕ್ ಮಾಡಲು ನಾನೆಲ್ಲೂ ಹೋಗಿಲ್ಲ; 'ಲೈಗರ್' ಸೋಲಿನ ಬಳಿಕ ವಿಜಯ್ ಖಡಕ್ ಮಾತು
ಬ್ರಹ್ಮಾಸ್ತ್ರ ಸಿನಿಮಾದಲ್ಲಿ ನಟಿಸಲು ವಿಜಯ್ ದೇವರಕೊಂಡ ಗ್ರೀನ್ ಸಿಗ್ನಲ್ ನೀಡಿದ್ದಾರಾ ಎನ್ನುವುದು ಇನ್ನು ರಿವೀಲ್ ಆಗಿಲ್ಲ. ಕರಣ್ ಜೋಹರ್ ಅವರ ಬ್ಯಾನರ್ ನಲ್ಲಿ ಬ್ರಹ್ಮಾಸ್ತ್ರ-2 ಮೂಡಿಬರುತ್ತಿದೆ. ವಿಜಯ್ ದೇವರಕೊಂಡ ಅವರ ಲೈಗರ್ ಹಿಂದಿ ವರ್ಷನ್ ಧರ್ಮ ಪ್ರೊಡಕ್ಷನ್ ಮೂಲಕ ರಿಲೀಸ್ ಆಗಿತ್ತು. ಕರಣ್ ಮತ್ತು ವಿಜಯ್ ನಡುವೆ ಉತ್ತಮ ಬಾಂಧವ್ಯವಿದೆ. ಹಾಗಾಗಿ ವಿಜಯ್ ದೇವರಕೊಂಡಗೆ ಸಿನಿಮಾ ಆಫರ್ ಮಾಡಲಾಗಿದೆ ಎನ್ನಲಾಗಿದೆ.
ಮಾಲ್ಡೀವ್ಸ್‌ನಿಂದ ವಾಪಾಸ್ ಆದ ರಶ್ಮಿಕಾ-ವಿಜಯ್ ದೇವರಕೊಂಡ; ಏರ್ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದು ಹೀಗೆ
ಬ್ರಹ್ಮಾಸ್ತ್ರ ಸಿನಿಮಾ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಇನ್ನು ಉಳಿದಂತೆ ಅಮಿತಾಭ್ ಬಚ್ಚನ್, ಸೌತ್ ಸ್ಟಾರ್ ನಾಗಾರ್ಜುನ್, ಮೌನಿ ರಾಯ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಪಾರ್ಟ್-2 ನಲ್ಲಿ ಮತ್ತಷ್ಟು ಬದಲಾವಣೆ ಮಾಡಿಕೊಳ್ಳಲಾಗುತ್ತಿತ್ತು ಇನ್ನು ಯಾರೆಲ್ಲ ಸ್ಟಾರ್ ಸೇರಿಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕು.