Vijay Deverakonda on Liger Flop: ಲೈಗರ್ ಸಿನಿಮಾ ಸೋಲಿನ ಬಳಿಕ ವಿಜಯ್ ದೇವರಕೊಂಡ ಮೊದಲ ಬಾರಿಗೆ ಮಾತನಾಡಿದ್ದಾರೆ. ಕಮ್ ಬ್ಯಾಕ್ ಮಾಡಲು ನಾನೆಲ್ಲೂ ಹೋಗಿಲ್ಲ ಎಂದು ದೇವರಕೊಂಡ ಹೇಳಿದ್ದಾರೆ.
ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಇತ್ತೀಚಿಗಷ್ಟೆ ಲೈಗರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಲೈಗರ್ ಭಾರಿ ನಿರೀಕ್ಷೆ ಮೂಡಿಸಿದ ಸಿನಿಮಾವಾಗಿತ್ತು. ಆದರೆ ಲೈಗರ್ ಅಭಿಮಾನಿಗಳ ನಿರೀಕ್ಷೆ ಮಟ್ಟವನ್ನು ವಿಫಲಗೊಳಿಸಿದೆ. ಈ ಸಿನಿಮಾದ ಮೇಲೆ ವಿಜಯ್ ದೇವರಕೊಂಡ ಕೂಡ ನಿರೀಕ್ಷೆ ಇಟ್ಟುಕೊಂಡಿದ್ದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾ ನೆಲಕಚ್ಚಿತು. ಬಾಕ್ಸ್ ಆಫೀಸ್ ನಲ್ಲೂ ಸಿನಿಮಾ ಮಕಾಡೆ ಮಲಗಿತು. ಈ ಸಿನಿಮಾದ ಸೋಲಿನ ಬಳಿಕ ವಿಜಯ್ ದೇವರಕೊಂಡ ಹೆಚ್ಚಾಗಿ ಎಲ್ಲೂ ಕಾಣಿಸಿಕೊಂಡಿಲ್ಲ, ಅಲ್ಲದೇ ಸಿನಿಮಾ ಸೋಲಿನ ಬಗ್ಗೆಯೂ ಎಲ್ಲೂ ಮಾತನಾಡಿಲ್ಲ. ಇದೀಗ ಮೊದಲ ಬಾರಿಗೆ ಸೋಲಿನ ಬಗ್ಗೆ ಮೌನ ಮುರಿದಿದ್ದಾರೆ. ಎಲ್ಲೇ ಹೊದರೂ ಜನ ಕಮ್‌ಬ್ಯಾಕ್ ಮಾಡಿ ಎಂದು ಹೇಳುತ್ತಿದ್ದಾರೆ, ಕಮ್ ಬ್ಯಾಕ್ ಮಾಡಲು ನಾನೆಲ್ಲೂ ಹೋಗಿಲ್ಲ ಎಂದು ದೇವರಕೊಂಡ ಹೇಳಿದ್ದಾರೆ.
ಇತ್ತೀಚಿಗಷ್ಟೆ ಈವೆಂಟ್ ಒಂದರಲ್ಲಿ ಭಾಗಿಯಾಗಿದ್ದ ವಿಜಯ್ ದೇವರಕೊಂಡ ಸೋಲಿನ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. 'ನಾನು ಎಲ್ಲೇ ಹೋದರೂ ಅಭಿಮಾನಿಗಳು ನನಗೆ ಅಣ್ಣ ಕಮ್‌ಬ್ಯಾಕ್ ಮಾಡಿ ಎಂದು ಹೇಳುತ್ತಲೇ ಇದ್ದಾರೆ. ನಾನು ನಿಮಗೆ ಒಂದು ಹೇಳಲು ಬಯಸುತ್ತೇನೆ, ನಾನು ಎಲ್ಲೂ ಹೋಗಿಲ್ಲ ಇಲ್ಲೇ ಇದ್ದೀನಿ' ಎಂದು ಹೇಳಿದರು.
ವಿಜಯ್ ವಿಡಿಯೋಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಅನೇಕರು ಬೆಂಕಿ ಇಮೋಜಿ ಹಾಕಿ ವಿಜಯ್ ಅವರಂತೆ ತಾವು ಕೂಡ ಆತ್ಮವಿಶ್ವಾಸ ಹೊಂದಬೇಕು ಎಂದು ಹೇಳುತ್ತಿದ್ದಾರೆ.
'ಲೈಗರ್' ಹೀನಾಯ ಸೋಲು; ನಿರ್ದೇಶಕ ಪುರಿ ಜಗನ್ನಾಥ್‌ಗೆ ಬೆದರಿಕೆ, ಆಡಿಯೋ ಕ್ಲಿಪ್ ವೈರಲ್
ಲೈಗರ್ ಸಿನಿಮಾ ವಿಜಯ್ ದೇವರಕೊಂಡಗೆ ಭಾರಿ ನಿರಾಸೆ ಮೂಡಿಸಿದೆ. ಈ ಸಿನಿಮಾಗೆ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಆಕ್ಷನ್ ಕಟ್ ಹೇಳಿದ್ದಾರೆ. ವಿಜಯ್ ಮತ್ತು ಪುರಿ ಜಗನ್ನಾಥ್ ಕಾಂಬಿನೇಷನ್ ನಲ್ಲಿ ಬಂದ ಮೊದಲ ಸಿನಿಮಾವಾಗಿತ್ತು. ಈ ಸಿನಿಮಾ ರಿಲೀಸ್‌ಗೂ ಮೊದಲೇ ಪುರಿ ಜಗನ್ನಾಥ್ ಜೊತೆ ವಿಜಯ್ ದೇವರಕೊಂಡ ಮತ್ತೊಂದು ಸಿನಿಮಾಗೆ ಸಹಿ ಮಾಡಿದ್ದಾರೆ. ಆಗಲೇ ಶೂಟಿಂಗ್ ಕೂಡ ಪ್ರಾರಂಭಿಸಿದ್ದರು. ವಿಜಯ್ ದೇವರಕೊಂಡ ಸೈನಿಕನಾಗಿ ನಟಿಸುತ್ತಿದ್ದಾರೆ. ಲೈಗರ್ ಸಿನಿಮಾದ ಸೋಲು ಇದೀಗ ವಿಜಯ್ ಮತ್ತು ಪುರಿ ಜಗನ್ನಾಥ್ ಮುಂದಿನ ಸಿನಿಮಾದ ಮೇಲು ಪರಿಣಾಮ ಬೀಳುವ ಸಾದ್ಯತೆ ಇದೆ.
ಲೈಗರ್ ಸೋತಿದ್ದಕ್ಕೆ ನಿರ್ಮಾಪಕರಿಗೆ 6 ಕೋಟಿ ಹಣ ಹಿಂದಿರುಗಿಸಿದ Vijay Deverakonda!
ಸಿನಿಮಾ ಸೋಲಿನ ಬಳಿಕ ವಿತರಕರು ನಷ್ಟ ತುಂಬಿಕೊಡವಂತೆ ಒತ್ತಾಯ ಮಾಡಿದ್ದರು. ಪುರಿ ಜಗನ್ನಾಥ್ ತಮಗಾದ ನಷ್ಟ ತುಂಬಿ ಕೊಡದಿದ್ದರೇ ಪ್ರತಿಭಟನೆ ಮಾಡುವ ಎಚ್ಚರಿಕೆ ಕೂಡ ನೀಡಿದ್ದರು. ಇನ್ನು ನಟ ವಿಜಯ್ ದೇವರಕೊಂಡ ತನ್ನ ಸಂಭಾವನೆಯ ಒಂದಿಷ್ಟು ಭಾಗ ಪಾವಾಸ್ ನೀಡಿದ್ದರು ಎನ್ನುವ ಸುದ್ದಿ ವೈರಲ್ ಆಗಿತ್ತು. ವಿಜಯ್ ದೇವರಕೊಂಡ ಮತ್ತೆ ಪುರಿ ಜಗನ್ನಾಥ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ.