
ಬಾಲಿವುಡ್ ನಟ ಅರ್ಜುನ್ ಕಪೂರ್‌ಗೆ ಕೊರೋನಾ ದೃಢಪಟ್ಟ ಕೆಲವೇ ಗಂಟೆಯಲ್ಲಿ ನಟಿ ಮಲೈಕಾ ಅರೋರಾಗೂ ಕೊರೋನಾ ಪಾಟಿಸಿವ್ ಬಂದಿದೆ. ಬಾಯ್‌ಫ್ರೆಂಡ್ ಜೊತೆಗೇ ನಟಿಯ ಪರೀಕ್ಷೆಯೂ ಕೊರೋನಾಗೆ ಪಾಸಿಟಿವ್ ಬಂದಿದೆ.
ನಟಿಯೂ ಈಗ ಹೋಂ ಕ್ವಾರೆಂಟೈನ್‌ನಲ್ಲಿದ್ದಾರೆ. ಮತ್ತೆ ಆರೋಗ್ಯವಂತಳಾಗಿ ಬರುತ್ತೇನೆ ಎಂದಿದ್ದಾರೆ ನಟಿ. ಹೌದು. ನನಗೆ ಕೊರೋನಾ ಪಾಸಿಟಿವ್ ಬಂದಿದೆ. ಸ್ವಲ್ಪ ಲಕ್ಷಣಗಳು ಕಾಣಿಸಿತ್ತು. ಈಗ ನಾನು ಕ್ವಾರೆಂಟೈನ್ ಆಗಿದ್ದೆ. ನಾನು ಆರೋಗ್ಯವಂತಳಾಗಿ ಬರುತ್ತೇನೆ ಎಂದಿದ್ದಾರೆ.
ಬಾಲಿವುಡ್ ನಟ ಅರ್ಜುನ್ ಕಪೂರ್‌ಗೆ ಕೊರೋನಾ ಪಾಸಿಟಿವ್
ಮಲೈಕಾ ಲಾಕ್‌ಡೌನ್ ನಂತರ ಮಾಸ್ಲ್ ಧರಿಸಿ ಹೊರಗೆ ಅಡ್ಡಾಡಿಕೊಂಡಿದ್ದರು. ಅಪರೂಪಕ್ಕೆ ಮನೆಯ ಹೊರಗೆ ವಾಕಿಂಗ್‌ಗೆ ಬರುತ್ತಿದ್ದರು. ಇದೀಗ ಕೊರೋನಾ ಪಾಸಿಟಿವ್ ಬಂದು ಕ್ವಾರೆಂಟೈನ್ ಆಗಿದ್ದಾರೆ.
ಈ ಹಿಂದೆ ನಟ ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್, ನಟಿ ಐಶ್ವರ್ಯಾ ರೈ ಅವರಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು. ಚಿಕಿತ್ಸೆ ನಂತರ ಎಲ್ಲರೂ ಗುಣಮುಖರಾಗಿ ಮನೆಗೆ ಮರಳಿದ್ದರು. ಮೇ ತಿಂಗಳಲ್ಲಿ ಅರ್ಜುನ್ ತಂದೆ ಬೋನಿ ಕಪೂರ್ ಮನೆಯ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ದೃಢ ಪಟ್ಟಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.