
ಬಿಗ್‌ಬಾಸ್ ತಮಿಳು ಸೀಸನ್ 1 ವಿನ್ನರ್ ಆರವ್ ನಫೀಸ್ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೀಸನ್ 1 ಕಂಟೆಸ್ಟೆಂಟ್ಸ್ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸೆಪ್ಟೆಂಬರ್ 6ರಂದು ಭಾನುವಾರ ಇಬ್ಬರೂ ವಿವಾಹಿತರಾಗಿದ್ದು, ನಟಿ ಹಾಗೂ ಕಮೇಡಿಯನ್ ಹಾರತಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಆರವ್ ಮತ್ತು ರಾಹಿ ಸ್ನೇಹಿತರಾಗಿದ್ದರು.
ವಿವಾಹಕ್ಕೆ ಮುನ್ನ 1 ವರ್ಷದಿಂದ ಇಬ್ಬರೂ ಪರಸ್ಪರ ಪರಿಚಯವಿದ್ದರು. ಆಪ್ತ ವಲಯದ ಸಮ್ಮುಖದಲ್ಲಿ ವಿವಾಹ ಕಾರ್ಯಕ್ರಮ ನಡೆದಿದೆ. ಕೊರೋನಾ ವೈರಸ್ ಪ್ರೊಟೋಕಾಲ್ ಪ್ರಕಾರ ವಿವಾಹ ಕಾರ್ಯಕ್ರಮ ನಡೆದಿದೆ.
ಆತ್ಮೀಯ ಸ್ನೇಹಿತರೂ ಕುಟುಂಬಸ್ಥರು ಮಾತ್ರವೇ ಭಾಗಿಯಾಗಿದ್ದರು. ಹೊಟೇಲ್ ಒಂದರಲ್ಲಿ ವಿವಾಹ ನೆರವೇರಿದೆ. ಕೊರೋನಾ ಸಂದರ್ಭವಾಗಿದ್ದರೂ ಆರವ್ ಬಿಗ್ ಬಾಸ್ ಸಹಸ್ಪರ್ಧಿಗಳು ಕಾರ್ಯಕ್ಕ್ರಮದಲ್ಲಿ ಭಾಗಿಯಾಗಿ ಎಂಜಾಯ್ ಮಾಡಿದ್ದಾರೆ.
ಕೊರೋನಾ ಲಾಕ್‌ಡೌನ್ ಟೈಂನಲ್ಲಿ ಹಲವು ಸೆಲೆಬ್ರಿಗಳು ವಿವಾಹಿತರಾಗಿದ್ದು, ಇನ್ನು ಕೆಲವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್ನೂ ಹಲವರ ವಿವಾಹಗಳು ಶೆಡ್ಯೂಲ್ ಆಗಿವೆ. ಬಹಳ ಅದ್ಧೂರಿಯಾಗಿ ನಡೆಯಬೇಕಿದ್ದ ವಿವಾಹಗಳು ಸರಳವಾಗಿ ನಡೆಯುತ್ತಿರುವುದು ವಿಶೇಷ. ನಟ ರಾಣಾ ದಗ್ಗುಬಾಟಿ ವಿವಾಹವೂ ಕೊರೋನಾ ಟೈಂನಲ್ಲೇ ಆಪ್ತರ ಸಮ್ಮುಖದಲ್ಲಿ ನೆರವೇರಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.