ಶಾರುಖ್​, ಆಮೀರ್​ ಬಳಿಕ ಸಲ್ಮಾನ್​ ಖಾನ್​ ಬಾಳಲ್ಲೂ 'ಗೌರಿ' ಎಂಟ್ರಿ? ಯಾರೀ ಸುಂದರಿ?

Suchethana D   | AFP
Published : Mar 18, 2025, 01:35 PM ISTUpdated : Mar 18, 2025, 02:42 PM IST
ಶಾರುಖ್​, ಆಮೀರ್​ ಬಳಿಕ ಸಲ್ಮಾನ್​ ಖಾನ್​ ಬಾಳಲ್ಲೂ 'ಗೌರಿ' ಎಂಟ್ರಿ? ಯಾರೀ ಸುಂದರಿ?

ಸಾರಾಂಶ

ಇತ್ತೀಚೆಗೆ ನಟ ಆಮೀರ್ ಖಾನ್ ತಮ್ಮ 60ನೇ ಹುಟ್ಟುಹಬ್ಬದಂದು ಗೆಳತಿ ಗೌರಿ ಸ್ಪ್ರಾಟ್ ಅವರನ್ನು ಪರಿಚಯಿಸಿದರು. ಈಕೆ ಬೆಂಗಳೂರಿನವರಾಗಿದ್ದು, ಆಮೀರ್ ಅವರ ಮೂರನೇ ಪತ್ನಿಯಾಗಲಿದ್ದಾರೆ. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದೇ ವೇಳೆ, ಸಲ್ಮಾನ್ ಖಾನ್ ಅವರ ಜೀವನದಲ್ಲಿಯೂ ಗೌರಿ ಬರುವ ಸಾಧ್ಯತೆಯ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಸಲ್ಮಾನ್ ಮದುವೆಯ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.

ಇತ್ತೀಚಿನ ದಿನಗಳಲ್ಲಿ 60 ವರ್ಷದ ಬಾಲಿವುಡ್​ ನಟ ಆಮೀರ್ ಖಾನ್ ಅವರ ವೈಯಕ್ತಿಕ ಜೀವನವು ಚರ್ಚೆಯ ವಿಷಯವಾಗಿ ಉಳಿದಿದೆ. ಇತ್ತೀಚೆಗೆ, ಅವರು,  ತಮ್ಮ 60 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ತಮ್ಮ ಸ್ನೇಹಿತೆ ಹಾಗೂ ಮೂರನೆಯ ಪತ್ನಿಯಾಗಲಿರುವ   ಗೌರಿ ಸ್ಪ್ರಾಟ್ ಅವರನ್ನು ಪರಿಚಯಿಸಿದರು. ಕೆಲವು ತಿಂಗಳುಗಳಿಂದ ಗೋಪ್ಯವಾಗಿ ಇಟ್ಟಿದ್ದ ಸಂಬಂಧವನ್ನು ಮಾಧ್ಯಮಗಳ ಎದುರು ತೆರೆದಿಟ್ಟರು.  ಈಕೆ ಬೆಂಗಳೂರಿನವರು ಮತ್ತು ಅವರಿಗೆ 6 ವರ್ಷದ ಮಗನೂ ಇದ್ದಾನೆ ಎಂದು ಹೇಳುವ ಮೂಲಕ ಗೌರಿ ಅವರನ್ನು ಪರಿಚಯಿಸಿದರು. ಮೂರನೆಯ ಮದುವೆಗಿಂತಲೂ ಹೆಚ್ಚಾಗಿ ಇವರು ಸದ್ದು ಮಾಡುತ್ತಿರುವುದು ಈಕೆ ಕೂಡ ಹಿಂದೂ ಎನ್ನುವ ಕಾರಣಕ್ಕೆ! ಆಮೀರ್​ ಅವರ ಮೊದಲ ಇಬ್ಬರು ಪತ್ನಿಯರು ಕೂಡ ಹಿಂದೂಗಳೇ. 

ಮೊದಲ ಪತ್ನಿಯ ಹೆಸರು ರೀನಾ ದತ್ತಾ. 1986 ರಿಂದ 2002ರ ತನಕ ಇವರ ಜೊತೆ ಆಮೀರ್​ ಖಾನ್​ ಸಂಸಾರ ಮಾಡಿದ್ದರೆ, 2005 ರಿಂದ 2021ರ ವರೆಗೆ ಕಿರಣ್​ ರಾವ್​ ಜೊತೆ ಸಂಸಾರ ಮಾಡಿದ್ದರು. ಮಗಳು ಇರಾ ಖಾನ್​ ಮದುವೆಯಾಗಿದೆ. ಮಗ ಜುನೈದ್ ಖಾನ್​ ಕೂಡ ಮದುವೆಗೆ ಸಿದ್ಧರಾಗಿದ್ದಾರೆ. ಇದೀಗ ಆಮೀರ್​ ಖಾನ್​ ಗೌರಿ ಸ್ಪ್ರಾಟ್ ಎನ್ನುವವರ ಜೊತೆ ಮದುವೆಗೆ ಸಿದ್ಧರಾಗಿದ್ದಾರೆ. ಇವರ ಹೆಸರು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಇದಕ್ಕೆ ಕಾರಣ, ನಟ ಶಾರುಖ್​ ಖಾನ್​ ಅವರ ಪತ್ನಿ ಕೂಡ ಗೌರಿ. ಅವರೀಗ ಗೌರಿ ಖಾನ್​​ ಎಂದೇ ಫೇಮಸ್ಸು. ಆಮೀರ್​ ಖಾನ್​ ಪತ್ನಿ ಕೂಡ ಇನ್ನು ಮುಂದೆ ಗೌರಿ ಖಾನ್​ ಆಗಲಿದ್ದಾರೆ. ಬಾಲಿವುಡ್​ನ ಖಾನ್​ ತ್ರಯರು ಎಂದೇ ಫೇಮಸ್​ ಆಗಿರುವವರು ಆಮೀರ್​, ಶಾರುಖ್​  ಮತ್ತು ಸಲ್ಮಾನ್​ ಖಾನ್​. ಆದರೆ ಸಲ್ಮಾನ್​ ಖಾನ್​ ಇದಾಗಲೇ ಹಲವು ನಟಿಯರ ಜೊತೆ ಸಂಬಂಧ ಹೊಂದಿದ್ದಾರೆ ಎನ್ನಲಾಗುತ್ತಿದ್ದರೂ ಇನ್ನೂ ಮದುವೆಯಾಗಲಿಲ್ಲ ಎನ್ನುವುದು ಬಿಟ್ಟರೆ ಉಳಿದವರಿಗೆ ಹಿಂದೂ ಹುಡುಗಿಯರೇ ಯಾಕೆ ಬೇಕು ಎನ್ನುವ ಚರ್ಚೆಯನ್ನು ಜಾಲತಾಣದಲ್ಲಿ ಹುಟ್ಟುಹಾಕಲಾಗಿದೆ. 

ಶಾರುಖ್​ಗೂ ಗೌರಿ, ಆಮೀರ್​ಗೂ ಗೌರಿ! 'ಗೌರಿ'ಗಳೇ ಖಾನ್​ ನಟರಿಗೆ ಯಾಕಿಷ್ಟು ಪ್ರಿಯ? ಬಿಸಿಬಿಸಿ ಚರ್ಚೆ

ಇದರ ನಡುವೆಯೇ ಇದೀಗ ಸಲ್ಮಾನ್​ ಖಾನ್​ ಬಾಳಲ್ಲಿಯೂ ಗೌರಿ ಎಂಟ್ರಿ ಕೊಡಲಿದ್ದಾರೆಯೇ ಎನ್ನುವ ವಿಷಯವೊಂದು ತಿಳಿದುಬರುತ್ತಿದೆ. ಏಕೆಂದರೆ, ಆಮೀರ್​ ಖಾನ್​ ತಮ್ಮ ಹೊಸ ಸ್ನೇಹಿತೆಯನ್ನು ಪರಿಚಯ ಮಾಡಿಸಿದ್ದಾಗ, ಅಲ್ಲಿದ್ದ ಪತ್ರಕರ್ತರು ಮಿಸ್ಟರ್ ಪರ್ಫೆಕ್ಷನಿಸ್ಟ್ ಅವರ ಗೆಳತಿ ಗೌರಿಯ ಹೆಸರನ್ನು ಶಾರುಖ್ ಖಾನ್‌ಗೆ ಜೋಡಿಸಿ, ಸಲ್ಮಾನ್ ಖಾನ್ ಅವರ ಮದುವೆಯ ವಿಷಯವೂ ಪ್ರಸ್ತಾಪಿಸಿದವರು. ಶಾರುಖ್​ ಪತ್ನಿ ಗೌರಿ, ಈಗ ಆಮೀರ್​ ಪತ್ನಿಯೂ ಗೌರಿ. ಇನ್ನು ಸಲ್ಮಾನ್​ಗೂ ಗೌರಿ ಇದ್ದಾರೆಯೇ ಎಂದು ಪ್ರಶ್ನಿಸಿದರು. ಆಗ ಆಮೀರ್​ ಖಾನ್​, ಸಲ್ಮಾನ್ ಖಾನ್​ ಕೂಡ ಗೌರಿಯನ್ನು ಹುಡುಕಬೇಕು, ಇನ್ನೂ ನಾವು ಆಸೆ ಬಿಟ್ಟಿಲ್ಲ. ಈಗಲೂ ಟೈಮ್​ ಇದೆ. ಗೌರಿಯನ್ನು ಹುಡುಕೊಳ್ಳಬಹುದು, ಗೌರಿ ಇದ್ದಿರಬೇಕಲ್ಲವೇ ಎಂದು ಸಲ್ಮಾನ್​ ಹತ್ತಿರ ತುಂಟತನದಿಂದ ನೋಡಿದಾಗ, ಸಲ್ಮಾನ್​ ಖಾನ್​ ಏನೂ ಹೇಳದೇ ಮೌನಂ ಸಮ್ಮತಿ ಲಕ್ಷಣಂ ಎನ್ನುವಂತೆ ನಸುನಕ್ಕು ಸುಮ್ಮನಾದರು.   ಆಗ ಆಮೀರ್​ ಖಾನ್​ ಅವರು ಮಾಧ್ಯಮದವರನ್ನು ಉದ್ದೇಶಿಸಿ,  "ಸಲ್ಮಾನ್​ಗೆ ಏನು ಒಳ್ಳೆಯದು ಎನ್ನುವುದು ಗೊತ್ತು,  ತನಗೆ ಏನು ಒಳ್ಳೆಯದೋ ಅದನ್ನು ಮಾಡುತ್ತಾನೆ" ಎಂದು ಹೇಳಿ ಯಾವುದೇ ಒಂದು ವಿಷಯವನ್ನು ಮರೆಮಾಚಿದರು.

ಆದ್ದರಿಂದ ಸಲ್ಮಾನ್​ ಖಾನ್​ ಬಾಳಿನಲ್ಲಿ ಕೊನೆಗೂ ಬರುವ ಈ ಗೌರಿ ಯಾರು ಎನ್ನುವ ಕುತೂಹಲ ಹಲವರದ್ದು. ಅಷ್ಟಕ್ಕೂ,  ಬಾಲಿವುಡ್‌ನ ಮೋಸ್ಟ್​ ಎಲಿಜಿಬಲ್​  ಬ್ಯಾಚುಲರ್ ಎಂದೇ ಕರೆಸಿಕೊಳ್ತಿರೋ ಸಲ್ಮಾನ್​ ಖಾನ್​ ಅವರ  ಜೀವನದಲ್ಲಿ ಪ್ರೀತಿ ಎನ್ನುವುದು ಹಲವು ಬಾರಿ ಆಗಿ ಹೋಗಿದೆ. ಐಶ್ವರ್ಯ ರೈ ಜೊತೆಗಿನ ಸಂಬಂಧ ಒಂದು ಹಂತ ಮೀರಿ ಹೋಗಿತ್ತು ಎನ್ನುವುದು ಗುಟ್ಟಾಗಿ ಏನೂ ಉಳಿದಿಲ್ಲ.  ಆದರೆ ಜೀವನ ಸಂಗಾತಿಯಾಗುವ ಹಂತವನ್ನು ಅವರು ಇನ್ನೂ ತಲುಪಲಿಲ್ಲ. ಐಶ್ವರ್ಯ ರೈ ಅವರಿಂದಾಗಿಯೇ ಸಲ್ಮಾನ್​ ಇನ್ನೂ ಸಿಂಗಲ್​  ಆಗಿಯೇ ಇರುವುದು ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಈ 50ರ ದಶಕದಲ್ಲಾದರೂ ಸಲ್ಲು ಬಾಳಲ್ಲಿ ಯಾರಾದರೂ ಬರಲಿ ಎನ್ನುವುದು ಅಭಿಮಾನಿಗಳ ಆಸೆ.  

23 ವರ್ಷಗಳ ಬಳಿಕ ಶಾರುಖ್​ ಪತ್ನಿ ಗೌರಿ ಮತಾಂತರ? ವೈರಲ್​ ಫೋಟೋಗಳ ಹಿಂದೆ ಭಯಾನಕ ಸತ್ಯ!

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?