ಬಾಲಿವುಡ್‌ ಓಲ್ಡ್ ಸಿನಿಮಾಗಳು ಮತ್ತೆ ತೆರೆಗೆ ಬರುತ್ತಿವೆ, ಸೂಪರ್ ಹಿಟ್ ಆಗ್ತಿವೆ! ಕಾರಣವೇನು..?!

ಕಳೆದ ಕೆಲವು ತಿಂಗಳುಗಳಲ್ಲಿ, ಹಲವು ಕ್ಲಾಸಿಕ್ ಚಿತ್ರಗಳು ಡಿಜಿಟಲ್ ಮಾದರಿಯಲ್ಲಿ ನವೀಕರಿಸಲ್ಪಟ್ಟು ಮತ್ತೆ ಬಿಡುಗಡೆಯಾಗಿವೆ. ಪ್ರೇಕ್ಷಕರು, ಅದರಲ್ಲೂ ಹಳೆಯ ಚಿತ್ರಗಳನ್ನು ಮೆಚ್ಚುವವರು, ಈ ಪ್ರಯತ್ನವನ್ನು ಕೈಮುಗಿದು ಸ್ವಾಗತಿಸಿದ್ದಾರೆ. ಈ ಚಿತ್ರಗಳು..

Bollywood old movies are re releasing and becoming trend now

ಈಗ ಕಾಲ ಬದಲಾಗಿದೆ. ಹಳೆಯದೇ ಮತ್ತೆ ಹೊಸದಾಗುತ್ತಿದೆ. ಅದು ಫ್ಯಾಷನ್ ವಿಷಯದಲ್ಲೂ ಆಗಿರಬಹುದು, ಹಾಗೂ ಸಿನಿಮಾಗಳ ವಿಷಯದಲ್ಲೂ ಕೂಡ. ಈಗ ಹೇಳಹೊರಟಿರುವುದು ಬಾಲಿವುಡ್ ಅಂಗಳದಲ್ಲಿ ನಡೆಯುತ್ತಿರುವ ಸಿನಿಮಾ ವಿದ್ಯಮಾನಗಳ ಕುರಿತು. ಹೌದು, ಸದ್ಯ ಬಾಲಿವುಡ್‌ನಲ್ಲಿ ಹೊಸ ಟ್ರೆಂಡ್ ಸೃಷ್ಟಿಯಾಗಿದೆ. ಅದು ಏನು, ಎತ್ತ ಎಂಬುದನ್ನು ಹೇಳಲಾಗುತ್ತಿದೆ, ಸ್ವಲ್ಪ ಮುಂದೆ ನೋಡಿ.. 

ಹೌದು, ಬಾಲಿವುಡ್‌ನಲ್ಲಿ ಹಳೆಯ ಸಿನಿಮಾಗಳ ಮರು-ಬಿಡುಗಡೆಗಳ ಅಬ್ಬರ ಜೋರಾಗಿದೆ! ಹಳೆಯ ಸೂಪರ್‌ಹಿಟ್ ಚಿತ್ರಗಳನ್ನು ಮತ್ತೆ ತೆರೆಗೆ ತರುವ ಟ್ರೆಂಡ್ ಭರ್ಜರಿಯಾಗಿ ಸದ್ದು ಮಾಡುತ್ತಿದೆ. ವ್ಯಾಪಾರ ತಜ್ಞರ ಪ್ರಕಾರ, ಈ ಮರು ಬಿಡುಗಡೆಗಳು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಗಳಿಕೆ ಮಾಡುತ್ತಿವೆ. ಜೊತೆಗೆ, ಮತ್ತೆ ಹಳೆಯ ನಟನಟಿಯರು ಜನಮನದಲ್ಲಿ ಸ್ಥಾನ ಪಡೆಯತೊಡಗಿದ್ದಾರೆ. ಜೊತೆಗೆ, ಅವರು ಕೂಡ ತಮ್ಮ ಸಿನಿಮಾಗಳನ್ನು ಮತ್ತೊಮ್ಮೆ ಮಗದೊಮ್ಮೆ ನೋಡಬಹುದು. 

Latest Videos

ದೂರದರ್ಶನ ಬಂದ್ಮೆಲೂ ಕನ್ನಡದ ಬಹಳಷ್ಟು ಸಿನಿಮಾಗಳು ಚೆನ್ನಾಗಿಯೇ ಓಡ್ತಿವೆ: ಡಾ ರಾಜ್‌ಕುಮಾರ್

ಕಳೆದ ಕೆಲವು ತಿಂಗಳುಗಳಲ್ಲಿ, ಹಲವು ಕ್ಲಾಸಿಕ್ ಚಿತ್ರಗಳು ಡಿಜಿಟಲ್ ಮಾದರಿಯಲ್ಲಿ ನವೀಕರಿಸಲ್ಪಟ್ಟು ಮತ್ತೆ ಬಿಡುಗಡೆಯಾಗಿವೆ. ಪ್ರೇಕ್ಷಕರು, ಅದರಲ್ಲೂ ಹಳೆಯ ಚಿತ್ರಗಳನ್ನು ಮೆಚ್ಚುವವರು, ಈ ಪ್ರಯತ್ನವನ್ನು ಕೈಮುಗಿದು ಸ್ವಾಗತಿಸಿದ್ದಾರೆ. ಈ ಚಿತ್ರಗಳು ಬಿಡುಗಡೆಯಾದ ಸಂದರ್ಭದಲ್ಲಿ ಸಿಕ್ಕ ಪ್ರತಿಕ್ರಿಯೆಗಿಂತಲೂ ಹೆಚ್ಚಿನ ಪ್ರೀತಿಯನ್ನು ಈಗ ಪಡೆಯುತ್ತಿವೆ ಎಂದು ಹೇಳಲಾಗುತ್ತಿದೆ.

ಈ ಯಶಸ್ಸಿಗೆ ಮುಖ್ಯ ಕಾರಣವೆಂದರೆ, ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡುವ ಶಕ್ತಿ. ಹೊಸ ತಲೆಮಾರಿನ ಪ್ರೇಕ್ಷಕರಿಗೆ ಈ ಚಿತ್ರಗಳನ್ನು ದೊಡ್ಡ ಪರದೆಯ ಮೇಲೆ ನೋಡುವ ಅವಕಾಶ ಸಿಗುತ್ತಿದೆ. ಬಾಲಿವುಡ್‌ನ ಈ ತಂತ್ರವು ಗಲ್ಲಾಪೆಟ್ಟಿಗೆಯಲ್ಲಿ ಗೆಲುವಿನ ನಾಗಾಲೋಟ ಮುಂದುವರಿಸುವ ಸೂಚನೆ ನೀಡುತ್ತಿದೆ. ಚಿತ್ರೋದ್ಯಮದಲ್ಲಿ ಇದು ಹೊಸ ಟ್ರೆಂಡ್ ಆಗಿ ಸ್ಥಾಪಿತವಾಗುವ ಸಾಧ್ಯತೆಗಳಿವೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಹಳೆಯ ಚಿನ್ನ ಮತ್ತೆ ಹೊಳೆಯುತ್ತಿದೆ!.. ಇದು ಈ ಕಾಲದ ಹೊಸ ಅಧ್ಯಾಯವೇ? 

ಅಲ್ಲು ಅರ್ಜುನ್‌ ನಟನೆಯಲ್ಲಿ 'ಪುಷ್ಪಾ 3' ಬರೋದು ಕನ್ಫರ್ಮ್, ಜೊತೆಯಲ್ಲಿ ರಶ್ಮಿಕಾ ಇರ್ತಾರಾ?

ಹೌದು, ಇತ್ತೀಚೆಗೆ ಹಬ್ಬಿರುವ ಈ ಟ್ರೆಂಡ್ ಬಾಲಿವುಡ್‌ಗೆ ಮಾತ್ರ ಸೀಮಿತವಾಗಿದೆ ಎಂದು ಹೇಳಲಾಗದು. ಇದು ಈಗ ಬಾಲಿವುಡ್‌ನಲ್ಲಿ ಹೆಚ್ಚು ಎನ್ನಿಸಬಹುದು. ಆದರೆ, ಕನ್ನಡದಲ್ಲಿ ಕೂಡ ಇದು ಇದೆ. ಈ ಮೊದಲೂ ಇತ್ತು, ಈಗಲೂ ಇದೆ, ಇನ್ಮುಂದೆ ಕೂಡ ಇರುತ್ತೆ.. 

 

click me!