
ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಈಗ ನ್ಯಾಷನಲ್ ಸ್ಟಾರ್. ಪ್ಯಾನ್ ಇಂಡಿಯಾ ಸ್ಟಾರ್‌ಗಿರಿಯನ್ನೂ ಮೀರಿರುವ ನಟ ಅಲ್ಲು ಅರ್ಜುನ್ ಅವರು ಸದ್ಯ ಭಾರತವನ್ನೂ ಮೀರಿ ಫೇಮಸ್ ಆಗಿದ್ದಾರೆ. ಪುಷ್ಪಾ, ಪುಷ್ಪಾ 2 ಸಿನಿಮಾ ಮೂಲಕ ಭಾರೀ ಜನಪ್ರಿಯತೆ ಗಳಿಸಿರುವ ಅಲ್ಲು ಅರ್ಜುನ್ ಇನ್ಮುಂದೆ ಅದೇನು ಮಾಡಲಿದ್ದಾರೆ ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ.. ಅದೇನು ಅಂತ ಇಲ್ಲಿದೆ ನೋಡಿ..
ಇದು ಟಾಲಿವುಡ್ ಚಿತ್ರರಂಗ ಮಾತ್ರವಲ್ಲ, ಅಲ್ಲು ಅರ್ಜುನ್ ಅಭಿಮಾನಿಗಳಿಗೂ ಸಿಹಿ ಸುದ್ದಿ ಸಮಾಚಾರ! ಪುಷ್ಪಾ ಹಾಗೂ ಪುಷ್ಪಾ 2 ಸಿನಿಮಾ ಬಳಿಕ ನಟ ಅಲ್ಲು ಅರ್ಜುನ್ ಇದೀಗ 'ಪುಷ್ಪ' ಚಿತ್ರದ ಮೂರನೇ ಭಾಗವೂ ಬರಲಿದೆ ಎಂದು ನಿರ್ಮಾಪಕರು ದೃಢಪಡಿಸಿದ್ದಾರೆ. 'ಪುಷ್ಪ 3' ಚಿತ್ರೀಕರಣದ (Pushpa 3) ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಅಲ್ಲು ಅರ್ಜುನ್ ಮತ್ತೆ ಪುಷ್ಪ ರಾಜ್ ಆಗಿ ಅಬ್ಬರಿಸಲು ಸಜ್ಜಾಗಿದ್ದಾರೆ.
ದೂರದರ್ಶನ ಬಂದ್ಮೆಲೂ ಕನ್ನಡದ ಬಹಳಷ್ಟು ಸಿನಿಮಾಗಳು ಚೆನ್ನಾಗಿಯೇ ಓಡ್ತಿವೆ: ಡಾ ರಾಜ್‌ಕುಮಾರ್
'ಪುಷ್ಪ: ದಿ ರೈಸ್' ಮತ್ತು 'ಪುಷ್ಪ: ದಿ ರೂಲ್' ಗಳ ಗೆಲುವಿನ ನಂತರ, ಮೂರನೇ ಭಾಗದ ನಿರೀಕ್ಷೆ ಗರಿಗೆದರಿದೆ. ಚಿತ್ರದ ನಿರ್ಮಾಪಕರು ಮಾಧ್ಯಮಗಳಿಗೆ ನೀಡಿದ ಮಾಹಿತಿಯ ಪ್ರಕಾರ, ಅಲ್ಲು ಅರ್ಜುನ್ ಸದ್ಯಕ್ಕೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಅವು ಮುಗಿದ ತಕ್ಷಣ, 'ಪುಷ್ಪ 3' ಚಿತ್ರೀಕರಣವು ಭರದಿಂದ ಸಾಗಲಿದೆ. 2028ರ ಕೊನೆಯ ವೇಳೆಗೆ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರ ಅಭಿನಯ ಮತ್ತೊಮ್ಮೆ ಪ್ರೇಕ್ಷಕರನ್ನು ಮೋಡಿ ಮಾಡಲಿದೆ. ನಿರ್ದೇಶಕರು ಈಗಾಗಲೇ ಕಥಾವಸ್ತುವನ್ನು ಇನ್ನಷ್ಟು ರೋಚಕಗೊಳಿಸುವಲ್ಲಿ ನಿರತರಾಗಿದ್ದಾರೆ. 'ಪುಷ್ಪ 3' ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲು ಸಿದ್ಧವಾಗಿದೆ. ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ! ಈ ಚಿತ್ರಕ್ಕೂ ಕನ್ನಡತಿ ರಶ್ಮಿಕಾ ಅವರೇ ಹೀರೋಯಿನ್ನಾ? ಇದಿನ್ನೂ ಕನ್ಫರ್ಮ್ ಆಗಿಲ್ಲ, ಕಾದು ನೋಡಬೇಕಿದೆ.
ಪುನೀತ್ ರಾಜ್‌ಕುಮಾರ್‌ಗೆ ಸಾವಿನ ಸೂಚನೆ ಮೊದಲೇ ಸಿಕ್ಕಿತ್ತು.. ಅದಕ್ಕೇ ಹಾಗೆ ಹೇಳಿದ್ರಾ..?
ಒಟ್ಟಿನಲ್ಲಿ ಹೇಳಬೇಕು ಎಂದರೆ, ಟಾಲಿವುಡ್ ಸಿನಿಮಾ ಪುಷ್ಪಾ ಭಾರತದಲ್ಲಿ ಹಾಗೂ ಜಗತ್ತಿನಲ್ಲಿ ಬಹಳಷ್ಟು ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಸಿನಿಮಾ. ಈ ಸಿನಿಮಾದ ಮೊದಲ ಹಾಗೂ ಎರಡನೇ ಭಾಗ ಬಂದಾಗಿದೆ. ಇನ್ಮುಂದೆ ಬರಲಿರುವ ಮೂರನೇ ಭಾಗ ಈ ಎರಡಕ್ಕಿಂತಲೂ ಹೆಚ್ಚು ಸೌಂಡ್ ಮಾಡಬಹುದು ಎನ್ನಲಾಗುತ್ತಿದೆ. ಕಾರಣ, ಮೂರನೇ ಭಾಗದ ಬಜೆಟ್ ಹಾಗೂ ಸ್ಕ್ರೀನ್ ಸಂಖ್ಯೆಗಳೂ ಕೂಡ ಹೆಚ್ಚಾಗಲಿವೆ ಎಂಬ ನಿರೀಕ್ಷೆಯಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.