ಐಶ್ವರ್ಯಾ ರೈ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಪ್ಯಾರಿಸ್ ಫ್ಯಾಷನ್ ವೀಕ್ ನಂತರ ಈಗ ಐಫಾ ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ಅಬುಧಾಬಿಗೆ ತೆರಳಿದ್ದಾರೆ. ಈ ಸಮಾರಂಭದಲ್ಲಿ ದಕ್ಷಿಣ ಭಾರತದ ಅನೇಕ ತಾರೆಯರು ಭಾಗವಹಿಸಲಿದ್ದಾರೆ.
ನವದೆಹಲಿ: ಕೆಲ ದಿನಗಳ ಹಿಂದಷ್ಟೇ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ಮಗಳೊಂದಿಗೆ ದುಬೈಗೆ ತೆರಳಿದ್ದ ಐಶ್ವರ್ಯಾ ರೈ ನಂತರ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿಯೂ ಭಾಗಿಯಾಗಿ ಬಳಿಕ ಭಾರತಕ್ಕೆ ಮರಳಿದ್ದರು. ಈಗ ಮತ್ತೆ ಐಫಾ ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ಮತ್ತೊಂದು ಅರಬ್ ರಾಷ್ಟ್ರ ಅಬುಧಾಬಿಗೆ ಹಾರಿದ್ದಾರೆ. ಹೀಗಾಗಿ ಐಶ್ವರ್ಯಾ ರೈ ಪಾಲಿಗೆ ಸೆಪ್ಟೆಂಬರ್ ಸಂಪೂರ್ಣ ಬ್ಯುಸಿಯಾದ ತಿಂಗಳಾಗಿ ಬಿಟ್ಟಿದೆ.
ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವಿ ಅವರ್ಡ್ ಸಮಾರಂಭಕ್ಕಾಗಿ ಕೆಲ ದಿನಗಳ ಹಿಂದಷ್ಟೇ ಐಶ್ವರ್ಯಾ ರೈ ಪುತ್ರಿ ಆರಾಧ್ಯ ಜೊತೆ ದುಬೈಗೆ ತೆರಳಿದ್ದರು. ಆ ಸಮಾರಂಭದಲ್ಲಿ ಅವರು ನಟಿಸಿದ ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿನ ನಟನೆಗಾಗಿ ಉತ್ತಮ ನಟಿ ಪ್ರಶಸ್ತಿಯೂ ಸಿಕ್ಕಿತ್ತು, ಇದಾದ ನಂತರ ಪ್ಯಾರಿಸ್ ಫ್ಯಾಷನ್ ವೀಕ್‌ಗೆ ತೆರಳಿದ ಐಶ್ವರ್ಯಾ ರೈ ಅಲ್ಲೂ ಲೋರಿಯಲ್ ಬ್ರಾಂಡ್‌ಗಾಗಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದರು. ಈಗ ಐಫಾ ಸರದಿ, ಅಬುಧಾಬಿ ಯಾಸ್ ದ್ವೀಪದಲ್ಲಿ ಮೂರು ದಿನಗಳ ಐಫಾ ಉತ್ಸವ ಆರಂಭವಾಗಲಿದ್ದು, ಇದು ಕೂಡ ಸೌತ್ ಸಿನಿಮಾ ಇಂಡಸ್ಟ್ರಿಗೆ ಸಂಬಂಧಿಸಿದ ಕಾರ್ಯಕ್ರಮವಾಗಿದೆ, ತಮಿಳು, ತೆಲುಗು, ಮಲೆಯಾಂ ಹಾಗೂ ಕನ್ನಡ ಸಿನಿಮಾ ನಟರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಇದಕ್ಕಾಗಿ ಈಗ ನಟಿ ಐಶ್ವರ್ಯಾ ರೈ ಕೂಡ ಮಗಳು ಆರಾಧ್ಯ ಜೊತೆ ಅಬುಧಾಬಿಗೆ ಹಾರಿದ್ದಾರೆ.
ಐಶ್ವರ್ಯ ರೈ ಮೈತುಂಬಾ ಬಟ್ಟೆ ಧರಿಸ್ತಿರೋ ಹಿಂದಿದೆ ಗಂಭೀರ ಆರೋಗ್ಯ ಸಮಸ್ಯೆ? ತೂಕ ಹೆಚ್ಚಲೂ ಇದೇ ಕಾರಣ!
ಹಾಗೆಯೇ ದಕ್ಷಿಣದ ವಿವಿಧ ಸಿನಿಮಾರಂಗದ ವಿವಿಧ ತಾರೆಯರು ಒಬ್ಬೊಬ್ಬರಾಗಿ ವಿಮಾನವೇರುತ್ತಿದ್ದಾರೆ, ತೆಲುಗು ನಟ ರಾಣಾ ದಗ್ಗುಬಟ್ಟಿ ತೇಜಾ ಸಜ್ಜಾ ಅವರು ಈ ಕಾರ್ಯಕ್ರಮವನ್ನು ಹೋಸ್ಟ್ ಮಾಡಲಿದ್ದಾರೆ. ಹಾಗೆಯೇ ತಮಿಳು ನಟ ಚೀಯಾನ್ ವಿಕ್ರಂ ಕೂಡ ಅಬುಧಾಬಿಗೆ ಬಂದಿಳಿದಿದ್ದಾರೆ. ಇವರು ಕೂಡ ಐಶ್ವರ್ಯಾ ರೈ ಜೊತೆ ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು ಈ ಐಫಾ ಸಮಾರಂಭದಲ್ಲಿ ರೆಜಿನಾ ಕಸ್ಸಾಂಡ್ರಾ, ರಾಶಿ ಖನ್ನಾ, ಪ್ರಭುದೇವ್ ಹಾಗೂ ರಾಕ್‌ಸ್ಟಾರ್ ಡಿಎಸ್‌ಪಿ ಮುಂತಾದವರು ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ.
ರಿಂಗ್ ತೋರಿಸಿ ಕಣ್ಣು ಹೊಡೆದ ಐಶ್, ಟ್ರೋಲ್ ಆಯ್ತು ಹೇರ್ ಸ್ಟೈಲ್