ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ಸೇವಿಂಗ್ಸ್ ಖಾಲಿ | 18 ಸಾವಿರ ಮಾತ್ರ ಬ್ಯಾಲೆನ್ಸ್ | ಬೈಕ್ ಮಾರಬೇಕಷ್ಟೆ ಎಂದ ಸಿಂಗರ್
ಕೊರೋನಾ ಸಂಕಷ್ಟ, ಲಾಕ್‌ಡೌನ್ ಮಧ್ಯೆ ಎದುರಿಸುತ್ತಿರುವ ಆರ್ಥಿಕ ಸಮಸ್ಯೆ ಬಗ್ಗೆ ಆದಿತ್ಯ ನಾರಾಯಣ್ ಮಾತನಾಡಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಗಾಯಕ ಅಕ್ಷರಶಃ ನನ್ನ ಸೇವಿಂಗ್ಸ್ ಖಾಲಿಯಾಗಿದೆ ಎಂದಿದ್ದಾರೆ.
ಗಾಯಕ ಮತ್ತು ನಿರೂಪಕನಾಗಿರುವ ಆದಿತ್ಯ ನಾರಾಯಣ್, ಗರ್ಲ್‌ಫ್ರೆಂಡ್ ಶ್ವೇತಾ ಅಗರ್ವಾಲ್ ಅವರನ್ನು ವಿವಾಹವಾಗಲಿದ್ದಾರೆ. ಆದರೆ ಎಕೌಂಟ್‌ನಲ್ಲಿ ಬರೀ 18 ಸಾವಿರ ಇದೆ ಎಂದಿದ್ದಾರೆ ಆದಿತ್ಯ.
ದುಡಿಯೋಕೆ ಬಾಲಿವುಡ್, ವಾಸಿಸೋಕೆ ಫಾರಿನ್: ಈ ಸೆಲೆಬ್ರಿಟಿಗಳ ದೇಶ ಯಾವ್ದು ಗೊತ್ತಾ?
ಒಂದು ವರ್ಷದ ತನಕ ಕೆಲಸ ಮಾಡದೆ ಇರಬಹುದೆಂದು ನಾನು ಎಂದೂ ಯೋಚಿಸಿರಲಿಲ್ಲ. ಆದರೆ ಲಾಕ್‌ಡೌನ್ ಎಲ್ಲವನ್ನೂ ಬದಲಾಯಿಸಿತು. ಇನ್ನೂ ಪರಿಸ್ಥಿತಿ ಸರಿಯಾಗದಿದ್ದರೆ ನನ್ನ ವಸ್ತುಗಳನ್ನು ಮಾರಬೇಕಷ್ಟೆ ಎಂದಿದ್ದಾರೆ.
ಇನ್ನೂ ಲಾಕ್‌ಡೌನ್ ಮುಂದುವರಿದರೆ ಜನ ಹಸಿವಿನಿಂದ ಸಾಯುತ್ತಾರೆ. ನನ್ನ ಎಲ್ಲ ಸೇವಿಂಗ್ಸ್ ಮುಗಿದಿದೆ. ಮ್ಯೂಚುವಲ್ ಫಂಡ್‌ಗೆ ಹಾಕಿದ್ದ ಅಷ್ಟೂ ಹಣ ಜೀವನಕ್ಕಾಗಿ ಡ್ರಾ ಮಾಡಿಯಾಗಿದೆ. ನನ್ನ ಎಕೌಂಟ್‌ನಲ್ಲಿ 18 ಸಾವಿರ ಅಷ್ಟೇ ಉಳಿದಿದೆ ಎಂದಿದ್ದಾರೆ.
ಪ್ರೆಗ್ನೆಂಸಿ ಸುದ್ದಿಯನ್ನು ಡಿಫ್ರೆಂಟಾಗಿ ಆನೌನ್ಸ್ ಮಾಡಿದ ನಟಿಯರು!
ಅಕ್ಟೋಬರ್‌ನಲ್ಲಿಯೂ ಕೆಲಸ ಆರಂಭಿಸದಿದ್ದರೆ ನಾನು ಬೈಕ್ ಅಥವಾ ಬೇರೇನಾದರೂ ಮಾರಬೇಕಾದೀತು ಎಂದಿದ್ದಾರೆ. ನಟನ ಹೇಳಿಕೆ ವೈರಲ್ ಆಗಿದ್ದು ಬಹಳಷ್ಟು ಇಂಡಸ್ಟ್ರಿ ಜನ ನೆರವಿಗೆ ಧಾವಿಸಿದ್ದಾರೆ. ಇತ್ತೀಚಿನ ಬೆಳವಣಿಗೆಯಲ್ಲಿ ಸಂಪೂರ್ಣ ದಿವಾಳಿಯಾಗಿರುವುದನ್ನು ತಳ್ಳಿ ಹಾಕಿದ ನಟ, ಇಂಡಸ್ಟ್ರಿ ಗೆಳೆಯರು ನೆರವಿಗೆ ಧಾವಿಸಿದ್ದನ್ನು ಕಂಡು ಭಾವುಕನಾದೆ ಎಂದಿದ್ದಾರೆ.