ಆದಿಪುರುಷ್ ಚಿತ್ರದ ಎರಡೇ ದೃಶ್ಯಗಳಲ್ಲಿ ನಟಿಸಲು ನಟಿ ಸೋನಲ್ ಚೌಹಾಣ್ ಈ ಪರಿ ಸಂಭಾವನೆ ಕೇಳಿದ್ದಾರೆ ಎನ್ನಲಾಗಿದೆ.
ಓಂ ರಾವತ್ (Om Raut) ನಿರ್ದೇಶನ ಆದಿಪುರುಷ್ ಮೊದಲಿನಿಂದಲೂ ವಿವಾದಗಳ ಕೇಂದ್ರಬಿಂದುವಾಗಿಯೇ ಹೊರಹೊಮ್ಮಿದೆ. ಈ ಸಿನಿಮಾದಲ್ಲಿ ಪ್ರಭಾಸ್ (Prabhas), ಕೃತಿ ಸನೋನ್, ದೇವದತ್ತ ನಾಗೆ, ಸೈಫ್ ಅಲಿ ಖಾನ್, ಸನ್ನಿ ಸಿಂಗ್ ಮುಂತಾದವರು ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆ ಆಗಿದ್ದು, ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲಿ ಪ್ರದರ್ಶನ ಆಗುತ್ತಿದೆ. ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಮುಗಿಬಿದ್ದಿದ್ದಾರೆ. ಟೀಸರ್ ಬಿಡುಗಡೆ ಆದಾಗ ಈ ಸಿನಿಮಾ ಸಖತ್ ಟ್ರೋಲ್ ಆಗಿತ್ತು. ಆದರೆ ಈಗ ಪ್ರೇಕ್ಷಕರಿಂದ ಪಾಸಿಟಿವ್ ಪ್ರತಿಕ್ರಿಯೆ ಸಿಗುತ್ತಿತ್ತು, ಕೆಲವರು ಈಗಲೂ ಸಿನಿಮಾದ ವಿರುದ್ಧ ಮಾತನಾಡುತ್ತಿದ್ದಾರೆ. ಚಿತ್ರದ ಹಲವು ದೃಶ್ಯಗಳಲ್ಲಿ ತಲೆಬುಡವಿಲ್ಲದ ಸಂಭಾಷಣೆಗಳಿದ್ದರೆ, ಹಲವೆಡೆ ಕಾಲ್ಪನಿಕ ದೃಶ್ಯಗಳನ್ನು ರಚಿಸಲಾಗಿದೆ ಎಂದು ಕೆಲವರು ಹೇಳಿದರೆ, ವಿಎಫ್‌ಎಕ್ಸ್ ಎಫೆಕ್ಟ್‌ಗಳು ಇಷ್ಟವಾಗುತ್ತವೆ ಎಂದಿದ್ದಾರೆ ಕೆಲವರು.
ಈ ಚಿತ್ರ ರಾಮಾಯಣವನ್ನು ಆಧರಿಸಿ ಮಾಡಲಾಗಿದೆ ಎಂದೇ ಹೇಳಲಾಗುತ್ತಿತ್ತು. ಆದರೆ ಇದೀಗ ಸಂಭಾಷಣಕಾರ ಮನೋಜ್ ಮುಂತಶೀರ್ ಅವರು ಸೆನ್ಸೇಷನ್ ಹೇಳಿಕೆ ನೀಡಿದ್ದು ಉಲ್ಟಾ ಹೊಡೆದಿದ್ದಾರೆ. ‘ಇದನ್ನು ನಾನು ಮೊದಲೇ ಹೇಳಿದ್ದೇ ಮತ್ತು ಈಗಲೂ ಹೇಳುತ್ತೇನೆ. ಈ ಸಿನಿಮಾದ ಹೆಸರು ಆದಿಪುರುಷ್. ನಾವು ರಾಮಾಯಣವನ್ನು ಸಿನಿಮಾ ಮಾಡಿಲ್ಲ. ಅದರಿಂದ ತುಂಬ ಸ್ಫೂರ್ತಿ ಪಡೆದಿದ್ದೇವೆ. ಡಿಸ್ಕ್ಲೈಮರ್ನಲ್ಲೂ ನಾವು ಅದನ್ನೇ ಹೇಳಿದ್ದೇವೆ’ ಎಂದು ಮನೋಜ್ ಮುಂತಶೀರ್ ಹೇಳಿದ್ದು, ಈ ಚಿತ್ರದ ಬಗ್ಗೆ ಇನ್ನಷ್ಟು ಚರ್ಚೆಗೆ ಗ್ರಾಸವಾಗಿದೆ.
ಇವುಗಳ ನಡುವೆಯೇ, ನಟಿ ಸೋನಲ್ ಚೌಹಾಣ್ (Sonal Chauhan) ಸುದ್ದಿ ಆಗುತ್ತಿದ್ದಾರೆ. ‘ಆದಿಪುರುಷ್’ ಸಿನಿಮಾದಲ್ಲಿ ಇವರು ಮಂಡೋದರಿಯ ಪಾತ್ರ ಮಾಡಿದ್ದಾರೆ. ಹಿಂದಿ ಮತ್ತು ತೆಲುಗು ಚಿತ್ರರಂಗದಲ್ಲಿ ಬೇಡಿಕೆ ಹೊಂದಿರೋ ನಟಿ ಸೋನಲ್, ‘ಆದಿಪುರುಷ್’ ಸಿನಿಮಾದಲ್ಲಿ ರಾವಣನ ಹೆಂಡತಿ ಮಂಡೋದರಿಯ ಪಾತ್ರವನ್ನು ಚೆನ್ನಾಗಿಯೇ ನಿಭಾಯಿಸಿದ್ದಾರೆ. ಆದರೆ ಇವರು ಇಡೀ ಚಿತ್ರದಲ್ಲಿ ಕಾಣಿಸಿಕೊಂಡಿದ್ದು ಕೇವಲ ಎರಡು ದೃಶ್ಯಗಳಲ್ಲಿ. ತಮ್ಮ ಪಾತ್ರಕ್ಕೆ ನಟಿ ಜೀವವನ್ನೇನೋ ತುಂಬಿದ್ದಾರೆ. ಆದರೆ ಕುತೂಹಲಕಾರಿ ವಿಷಯ ಏನೆಂದರೆ, ಈ ಎರಡು ದೃಶ್ಯಕ್ಕೆ ಸೋನಲ್ ಬರೋಬ್ಬರಿ 50 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
Adipurush Review: ಸಿನಿಮಾ ನೋಡಿ ಖ್ಯಾತ ಧಾರ್ಮಿಕ ವಿದ್ವಾಂಸರು ಹೇಳಿದ್ದೇನು?
ಹೌದು! ಹಲವು ನಟಿಯರು ಸಂಪೂರ್ಣ ಚಿತ್ರಕ್ಕೂ ಇಷ್ಟು ಸಂಭಾವನೆ ಪಡೆಯುವುದಿಲ್ಲ. ಆದರೆ ನಟಿ ಸೋನಲ್ ಎರಡು ದೃಶ್ಯದಲ್ಲಿ ಕಾಣಿಸಿಕೊಳ್ಳಲು 50 ಲಕ್ಷ ರೂಪಾಯಿ ಪಡೆದಿರುವುದು ಬಹಳ ಚರ್ಚೆಗೆ ಗ್ರಾಸವಾಗಿದೆ. ಆದಿಪುರುಷ್ ಚಿತ್ರವನ್ನು 500 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರು ಮಾಡಲಾಗಿದೆ. ಇದರಲ್ಲಿ ನಟ-ನಟಿಯರಿಗೂ ಚೆನ್ನಾಗಿಯೇ ಸಂಭಾವನೆ ನೀಡಲಾಗಿದೆ ಎನ್ನಲಾಗುತ್ತಿದೆ. ಇವೆಲ್ಲಾ ಸರಿ, ಆದರೆ ಕೇವಲ ಎರಡು ದೃಶ್ಯಗಳಿಗೆ ಇಷ್ಟೊಂದು ಹಣ ನೀಡುವ ಅಗತ್ಯವಿತ್ತಾ ಎನ್ನುವ ಚರ್ಚೆ ಶುರುವಾಗಿದೆ. ಆದರೆ ಈ ಸಂಭಾವನೆ ಕುರಿತಂತೆ ಚಿತ್ರತಂಡದ ಕಡೆಯಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ಅಷ್ಟಕ್ಕೂ ‘ಆದಿಪುರುಷ್’ (Adipurush) ಸಿನಿಮಾದಲ್ಲಿ ನಟಿಯರ ಪಾತ್ರಗಳಿಗೆ ಹೇಳಿಕೊಳ್ಳುವಂತಹ ಸ್ಕೋಪ್ ಸಿಕ್ಕಿಲ್ಲ. ಸೀತೆ ಪಾತ್ರದಲ್ಲಿ ಕೃತಿ ಸನೋನ್ ನಟಿಸಿದ್ದಾರೆ. ಅವರು ಕೂಡ ಬೆರಳೆಣಿಕೆಯ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಶೂರ್ಪನಖಿ ಪಾತ್ರದಲ್ಲಿ ತೇಜಸ್ವಿನಿ ಪಂಡಿತ್ ಅವರು ಅಭಿನಯಿಸಿದ್ದಾರೆ. ಅವರು ಸಹ ಎರಡೇ ದೃಶ್ಯಕ್ಕೆ ಸೀಮಿತವಾಗಿದ್ದಾರೆ. ಅದೇ ರೀತಿ ಸೋನಲ್ ಕೂಡ ಎರಡೇ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಸೋನಲ್ ಚೌಹಾಣ್ ಅವರ ಬಗ್ಗೆ ಹೇಳುವುದಾದರೆ, ಈಕೆ 2008ರಲ್ಲಿ ಇವರು ಚಿತ್ರರಂಗಕ್ಕೆ ಪದಾರ್ಪಣೆ ಮಅಡಿದರು. ಇವರು ಹಿಂದಿ ಮತ್ತು ತೆಲುಗು ಮಾತ್ರವಲ್ಲದೇ ಕನ್ನಡದಲ್ಲಿಯೂ ನಟಿಸಿದ್ದಾರೆ. ಶಿವರಾಜ್ಕುಮಾರ್ ಜೊತೆ ‘ಚೆಲುವೆಯೇ ನಿನ್ನ ನೋಡಲು’ ಚಿತ್ರದಲ್ಲಿ ಸೋನಲ್ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಆ ಸಿನಿಮಾ 2010ರಲ್ಲಿ ಬಿಡುಗಡೆಯಾಗಿತ್ತು. ಇದನ್ನು ಹೊರತುಪಡಿಸಿದರೆ ಸೋನಲ್ ಕೆಲವು ಮ್ಯೂಸಿಕ್ ವಿಡಿಯೋಗಳಲ್ಲೂ ಸೋನಲ್ ಚೌಹಾಣ್ ಅವರು ಕಾಣಿಸಿಕೊಂಡಿದ್ದಾರೆ. ‘ಆದಿಪುರುಷ್’ ಚಿತ್ರದಲ್ಲಿನ ಮಂಡೋದರಿ ಪಾತ್ರದಿಂದ ಅವರಿಗೆ ಖ್ಯಾತಿ ಹೆಚ್ಚಾಗಿದೆ.
Tejaswini Pandit: ಮನೆ ಮಾಲೀಕ ಮಂಚಕ್ಕೆ ಕರೆದ ಕರಾಳ ಅನುಭವ ಬಿಚ್ಚಿಟ್ಟ ಆದಿಪುರುಷ್ 'ಶೂರ್ಪನಖಿ'