ದೀಪಿಕಾ, ಅನುಷ್ಕಾ, ಅಲಿಯಾ ಯಾರೂ ಅಲ್ಲ: ಭಾರತದ ಅತ್ಯಂತ ಶ್ರೀಮಂತ ನಟಿ ಇವರೆ

Published : Jun 18, 2023, 12:37 PM IST
ದೀಪಿಕಾ, ಅನುಷ್ಕಾ, ಅಲಿಯಾ ಯಾರೂ ಅಲ್ಲ: ಭಾರತದ ಅತ್ಯಂತ ಶ್ರೀಮಂತ ನಟಿ ಇವರೆ

ಸಾರಾಂಶ

ಅನೇಕ ನಟಿಯರು ಕೋಟಿ ಕೋಟಿ ಸಂಭಾವನೆ ಪಡೆಯುವ ಮೂಲಕ ಸ್ಟಾರ್‌ಗಳಾಗಿ ಮರೆಯುತ್ತಿದ್ದಾರೆ. ಆದರೆ ದೀಪಿಕಾ, ಅನುಷ್ಕಾ, ಅಲಿಯಾ ಯಾರೂ ಅಲ್ಲ, ಭಾರತ ಅತ್ಯಂತ ಶ್ರೀಮಂತ ನಟಿ ಇವರೇ ನೋಡಿ.

ಭಾರಾತೀಯ ಸಿನಿಮಾರಂಗ ಪುರುಷ ಪ್ರಧಾನ ಸಿನಿಮಾರಂಗ ಎಂದು ಅನೇಕರು ಕರೆಯುತ್ತಾರೆ. ಹಾಗಂತ ನಟಿಯರು ಇಲ್ಲಿ ಸಾಧನೆ ಮಾಡಿಲ್ಲ, ಗುರುತಿಸಿಕೊಂಡಿಲ್ಲ ಅಂತಲ್ಲ. ಅನೇಕ ನಟಿಯರು ತಮ್ಮದೇ  ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅನೇಕ ಬಾರಿ ಸಂಭಾವನೆ ತಾರತಮ್ಯ ವಿಚಾರ ಚರ್ಚೆಗೆ ಬರುತ್ತದೆ. ಪುರುಷರಷ್ಟು ಸಂಭಾವನೆ ನಟಿಯರಿಗೆ ಕೊಡಲ್ಲ ಎಂದು ಅಸಮಾಧಾನ ಹೊರಹಾಕಿದ್ದು ಇದೆ. ನಟರಿಗೆ ಹೋಲಿಸಿದರೆ ನಟಿಯರ ಸಂಭಾವನೆ ಕಡಿಮೆಯಾದರೂ ಅನೇಕ ನಟಿಯರು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ. ದೀಪಿಕಾ ಪಡುಕೋಣೆ, ಆಲಿಯಾ ಭಟ್, ಐಶ್ವರ್ಯ ರೈ ಬಚ್ಚನ್, ಕರೀನಾ ಕಪೂರ್ ಖಾನ್, ಕಂಗನಾ ರಣಾವತ್ ಸೇರಿದಂತೆ ಅನೇಕ ಜನಪ್ರಿಯ ಹೆಸರುಗಳು ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರು ಲಿಸ್ಟ್‌ನಲ್ಲಿ ಬರುತ್ತೆ. ಬಾಲಿವುಡ್‌ನ ಅತೀ ದೊಡ್ಡ ಶ್ರೀಮಂತ ನಟಿಯರು ಯಾರು? ಇಲ್ಲಿದೆ ಒಂದು ವಿವರ. 

ಐಶ್ವರ್ಯಾ ರೈ ಬಚ್ಚನ್

ಐಶ್ವರ್ಯಾ ರೈ ಬಚ್ಚನ್ ಭಾರತದ ಅತ್ಯಂತ ಶ್ರೀಮಂತ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇವರ ನೆಟ್‌ವರ್ತ್  ಸುಮಾರು  828 ಕೋಟಿ ರೂಪಾಯಿ. ಐಶ್ವರ್ಯಾ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಐಶ್ ಪ್ರತಿ ಚಿತ್ರಕ್ಕೆ ಸುಮಾರು 10 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. 

ಪ್ರಿಯಾಂಕಾ ಚೋಪ್ರಾ 

ಪ್ರಿಯಾಂಕಾ ಚೋಪ್ರಾ ಜೋನಾಸ್ ಅವರ ನಿವ್ವಳ ಮೌಲ್ಯ ಅಂದಾಜು 580 ಕೋಟಿ ರೂಪಾಯಿ. ಪ್ರಿಯಾಂಕಾ ಕೆಲವು ಕಂಪನಿಗಳಲ್ಲಿ ಷೇರುಗಳನ್ನು ಹೊಂದಿದ್ದಾರೆ. ನ್ಯೂಯಾರ್ಕ್‌ನಲ್ಲಿರುವ ರೆಸ್ಟೋರೆಂಟ್ ಸೇರಿದಂತೆ ಅನೇಕ ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದಾರೆ.

ಅಲಿಯಾ ಭಟ್ 

ಆಲಿಯಾ ಭಟ್ ಅವರ ನಿವ್ವಳ ಮೌಲ್ಯ ಸುಮಾರು 557 ಕೋಟಿ ಎಂದು ಅಂದಾಜಿಸಲಾಗಿದೆ. ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಅಲಿಯಾ ಭಟ್ ಕೂಡ ಒಬ್ಬರು. ಆಲಿಯಾ ಭಟ್ ಪ್ರತಿ ಚಿತ್ರಕ್ಕೆ ಸುಮಾರು 10-15 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಿದ್ದಾರೆ. 

ಕರೀನಾ ಕಪೂರ್ 

ಕರೀನಾ ಕಪೂರ್ ಖಾನ್ ಇಂದಿಗೂ ಭಾರತದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ಕರೀನಾ ನಿವ್ವಳ ಮೌಲ್ಯ ಸುಮಾರು 440 ಕೋಟಿ ರೂಪಾಯಿ.

 Aishwarya Rai Bachchan: ಐಶ್‌ ಬೇಬಿ ಮರೆಯಲಾಗದ ಐದು ಪಾತ್ರಗಳು
 
ದೀಪಿಕಾ ಪಡುಕೋಣೆ 

ದೀಪಿಕಾ ಪಡುಕೋಣೆ ಅವರ ನಿವ್ವಳ ಮೌಲ್ಯ ಸುಮಾರು 314 ಕೋಟಿ ರೂಪಾಯಿ. ದೀಪಿಕಾ ಹಲವಾರು ಸ್ಟಾರ್ಟ್‌ಅಪ್‌ಗಳು ಮತ್ತು F&B ಬ್ರ್ಯಾಂಡ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಸುಮಾರು ಒಂದು ಸಿನಿಮಾಗೆ 10 ರಿಂದ 15 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಿದ್ದಾರೆ. 

ಅನುಷ್ಕಾ ಶರ್ಮಾ 

ಅನುಷ್ಕಾ ಶರ್ಮಾ ಅವರ ನಿವ್ವಳ ಮೌಲ್ಯ ಸುಮಾರು 255 ಕೋಟಿ ರೂ.. ಅನುಷ್ಕಾ ಶರ್ಮಾ ಸಹ ಬಟ್ಟೆ ಬ್ರಾಂಡ್ NUSH ಅನ್ನು ಹೊಂದಿದ್ದಾರೆ. ಅದರ ಮಾರುಕಟ್ಟೆ ಮೌಲ್ಯ ಸುಮಾರು 65 ಕೋಟಿ ರೂಪಾಯಿ. ಸದ್ಯ ಸಿನಿಮಾದಿಂದ ಬ್ರೇಕ್ ಪಡೆದಿರುವ ಅನುಷ್ಕಾ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

ಮಗಳು ನನ್ನ ಕೆಲಸ ಅರ್ಥ ಮಾಡಿಕೊಂಡು ಗೌರವಿಸುತ್ತಿರುವುದೇ ಹೆಚ್ಚು: ಐಶ್ವರ್ಯ ರೈ

ಕತ್ರಿನಾ ಕೈಫ್

ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಕೈಫ್ ನೆಟ್ ವರ್ತ್ 217 ಕೋಟಿ ರೂಪಾಯಿ. ಕತ್ರಿನಾ ಕೂಡ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ. 

ಸೌತ್ ಸ್ಟಾರ್ಸ್

ನಟಿ  ಸಮಂತಾ ಅವರ ನೆಟ್ ವರ್ತ್ 89 ಕೋಟಿ ರೂಪಾಯಿ. ನಯನತಾರಾ ಅವರ ನೆಟ್ ವರ್ತ್ 165 ಕೋಟಿ ರೂಪಾಯಿ ಹಾಗೂ ಅನುಷ್ಕಾ ಶೆಟ್ಟಿ ಅವರ ನೆಟ್ ವರ್ತ್ 120 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?