ಹಿಂದಿಯ ಗೋವಿಂದ ಅಪ್ಪು ಬಗ್ಗೆ ಏನಂದ್ರು, ಜಗತ್ತಿಗೇ ಗೊತ್ತಿಲ್ಲದ ಸೀಕ್ರೆಟ್ ಒಂದು ಹೊರಬಿತ್ತು!

By Shriram Bhat  |  First Published Jul 31, 2024, 12:58 PM IST

ಮೀಡಿಯಾ ಮೈಕ್ ಮುಂದೆ ಮಾತನಾಡಿರುವ ಬಾಲಿವುಡ್ ನಟ ಗೋವಿಂದ ಅವರು 'ನಂಗೆ ಸ್ವಲ್ಪ ಸ್ವಲ್ಪ ಕನ್ನಡ ಬರುತ್ತೆ..' ಎಂದು ಕನ್ನಡದಲ್ಲಿ ಹೇಳಿ ಅಲ್ಲಿದ್ದ ಎಲ್ಲರನ್ನೂ ಖುಷಿಯಲ್ಲಿ ತೇಲಿಸಿದರು. 'ಡಾ ರಾಜ್‌ಕುಮಾರ್ ಅವರು ದೈವಿಕ ಪುರುಷರು, ಭಾರತದಲ್ಲಿ..


ಬಾಲಿವುಡ್ ನಟ ಗೋವಿಂದ (Govinda) ಅವರು ಕನ್ನಡದ ಬಗ್ಗೆ, ಕರ್ನಾಟಕದ ಬಗ್ಗೆ ಅದರಲ್ಲೂ ಮುಖ್ಯವಾಗಿ ಕರುನಾಡ ಅಣ್ಣಾವ್ರು ಡಾ ರಾಜ್‌ಕುಮಾರ್ ಬಗ್ಗೆ ಮಾತನಾಡಿದ್ದಾರೆ. 'ಎಂದೆಂದೂ ನಿನ್ನನು ಮರೆತು ಬದುಕಿರಲಾರೆ.. ' ಎಂಬ ಜನಪ್ರಿಯ ಗೀತೆಯನ್ನು ಮೈಕ್-ಕ್ಯಾಮೆರಾ ಮುಂದೆ ಹಾಡಿ, ನಟ ಗೋವಿಂದ ಅವರು ತಮ್ಮ ಕನ್ನಡ ಅಭಿಮಾನವನ್ನೂ ಮರೆದಿದ್ದಾರೆ. ಜೊತೆಗೆ, ದಿವಂಗತ ಪುನೀತ್ ರಾಜ್‌ಕುಮಾರ್ ಹಾಗೂ ಅವರ ಕುಟುಂಬದ ಎಲ್ಲರನ್ನೂ ನೆನಪಿಸಿಕೊಂಡಿದ್ದಾರೆ. 

ಮೀಡಿಯಾ ಮೈಕ್ ಮುಂದೆ ಮಾತನಾಡಿರುವ ಬಾಲಿವುಡ್ ನಟ ಗೋವಿಂದ ಅವರು 'ನಂಗೆ ಸ್ವಲ್ಪ ಸ್ವಲ್ಪ ಕನ್ನಡ ಬರುತ್ತೆ..' ಎಂದು ಕನ್ನಡದಲ್ಲಿ ಹೇಳಿ ಅಲ್ಲಿದ್ದ ಎಲ್ಲರನ್ನೂ ಖುಷಿಯಲ್ಲಿ ತೇಲಿಸಿದರು. 'ಡಾ ರಾಜ್‌ಕುಮಾರ್ (Dr Rajkumar) ಅವರು ದೈವಿಕ ಪುರುಷರು, ಭಾರತದಲ್ಲಿ ಆಗಿಹೋದ ಮಹಾಪುರುಷರಲ್ಲಿ ಅವರಿಗೂ ಒಂದು ಉನ್ನತ ಸ್ಥಾನವಿದೆ' ಎಂದರು. ಅದಕ್ಕಿಂತ ಹೆಚ್ಚಾಗಿ ಕನಾಟಕದಲ್ಲಿ ನನ್ನ ಹಲವು ಸಿನಿಮಾಗಳ ಶೂಟಿಂಗ್ ನಡೆದಿದೆ ಎಂದು ಜ್ಞಾಪಿಸಿಕೊಂಡರು ಗೋವಿಂದ!

Tap to resize

Latest Videos

undefined

ಟ್ರಾಪ್ ಆಗೋದು ಆಮೇಲೆ ಒದ್ದಾಡೋದು ನಂಗೆ ಆಗಿಬರಲ್ಲ: ಶಾಕಿಂಗ್ ಹೇಳಿಕೆ ಕೊಟ್ಟ ಯಶ್..!

ಹಿಂದಿ ನಟ ಗೋವಿಂದ ಅವರು ಒಂದು ವೈಯಕ್ತಿಕ ಕಾರ್ಯಕ್ರಮದ ಸಲುವಾಗಿ ಬೆಂಗಳೂರಿಗೆ ಬಂದಿದ್ದು, ಇಲ್ಲಿ ಹಲವು ಸ್ಥಳಗಳನ್ನು ಭೇಟಿ ಮಾಡಿ ಸಂತೋಷ ಹಂಚಿಕೊಂಡರು. ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟ ಗೋವಿಂದ 'ನಾನು ಪುನೀತ್ ರಾಜ್‌ಕುಮಾರ್ (Puneeth rajkumar) ಅವರ ಅಕಾಲಿಕ ನಿಧನದಿಂದ ತುಂಬಾ ನೋವು ಅನುಭವಿಸಿದ್ದೇನೆ. ಡಾ ರಾಜ್ ಫ್ಯಾಮಿಲಿಯ ಎಲ್ಲರಿಗೂ ನನ್ನ ಸಂತಾಪವನ್ನು ತಿಳಿಸುತ್ತೇನೆ. ಅಷ್ಟೇ ಅಲ್ಲ, ಅವರಿಗೆ ಈಶ್ವರ ಈ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ' ಎಂದಿದ್ದಾರೆ. 

ಮೀಡಿಯಾದವರು ಕೇಳಿದ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ನಟ ಗೋವಿಂದ ಅವರು 'ನನಗೆ ತುಂಬಾ ಹಿಂದೆ ಕನ್ನಡದಲ್ಲಿ ನಟಿಸಲು ಆಫರ್ ಬಂದಿತ್ತು. ನಾನು ಆಗ ಬ್ಯುಸಿ ಇದ್ದ ಕಾರಣ ಸಾಧ್ಯವಾಗಿಲ್ಲ. ಆದರೆ ಈಗ ನಾನು ಫ್ರೀ ಇದ್ದೇನೆ, ಆದರೆ ನನಗೆ ಅವಕಾಶ ಬರುತ್ತಿಲ್ಲ' ಎಂದು ಮಾರ್ಮಿಕವಾಗಿ ಉತ್ತರಿಸಿ ಎಲ್ಲರ ಮುಖದಲ್ಲಿ ಮುಗುಳ್ನಗೆ ಮೂಡಿಸಿದರು. ನಟ ಗೋವಿಂದ ಅವರು ಈ ಮೂಲಕ ಕನ್ನಡದ ನಿರ್ಮಾಪಕರು ಹಾಗೂ ನಿರ್ದೇಶಕರಿಗೆ ತಮಗೆ ಆಫರ್ ನೀಡಿ ಎಂದು ಕೇಳಿಕೊಂಡರೇ? ಗೊತ್ತಿಲ್ಲ!

ಶಂಕರ್‌ ನಾಗ್ ಕಂಡ್ರೆ ಡಾ ರಾಜ್‌ಕುಮಾರ್‌ಗೆ ಆಗ್ತಾ ಇರ್ಲಿಲ್ಲ ಅನ್ನೋದು ಶುದ್ಧ ಸುಳ್ಳು, ಇಲ್ಲಿ ನೋಡಿ!

ಒಟ್ಟಿನಲ್ಲಿ, ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಸ್ಟಾರ್ ನಟರಾಗಿ ಮೆರೆದಿದ್ದ ನಟ ಗೋವಿಂದ ಅವರು, ಈಗ ನಟನೆಯಲ್ಲಿ ಅಷ್ಟೇನೂ ಸಕ್ರಿಯರಾಗಿಲ್ಲ. ಆದರೆ, ಅವರ ಡಾನ್ಸ್ ಹಾಗೂ ಕಾಮಿಡಿ ಟೈಮಿಂಗ್ ನಟನೆಯನ್ನಂತೂ ಯಾರೂ ಮರೆಯಲು ಸಾಧ್ಯವೇ ಇಲ್ಲ ಬಿಡಿ. ಅಷ್ಟರಮಟ್ಟಿಗೆ ನಟ ಗೋವಿಂದ ಅವರು ಭಾರತವನ್ನೂ ಮೀರಿ ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ನಟ ಗೋವಿಂದ ಕನ್ನಡದಲ್ಲಿ ಆದಷ್ಟು ಬೇಗ ನಟಿಸಲಿ ಎಂಬ ಹಾರೈಕೆ ಎಲ್ಲರದು, ಏನಂತೀರಾ? 

ಇದೊಂದು ಹಳೆಯ ವೀಡಿಯೋ. ಆದರೆ, ಈಗ ಸಖತ್ ವೈರಲ್ ಆಗುತ್ತಿದೆ. ಈ ಸೋಷಿಯಲ್ ಮೀಡಿಯಾಗಳೇ ಹಾಗೆ. ಯಾವಾಗ ಯಾವುದನ್ನು ತಂದು ಮೇಲಕ್ಕೆ ಎತ್ತಿ ಬಿಸಾಡುತ್ತವೆ ಎಂದು ಹೇಳಲಾಗದು. ಜೊತೆಗೆ, ಇಲ್ಲಿ ಯಾವುದನ್ನೂ ಕೂಡ ಹೈಡ್ ಮಾಡಲು ಸಹ ಆಗದು. ಇದ್ದಿದ್ದು ಇದ್ದಂತೆ ಹರಬರುತ್ತದೆ, ಕೆಲವೊಮ್ಮೆ ರೂಪ ಬದಲಾಯಿಸಿಕೊಂಡೂ ಬರುತ್ತದೆ ಎಂಬುದು ನೆನಪಿರಲಿ!

ಒಂದೆರಡು ತಲೆಮಾರಿಗೆ ಸೌಜನ್ಯ, ಸಂಸ್ಕಾರ ಕಲಿಸಿದ ಪುಣ್ಯಾತ್ಮ ಡಾ ರಾಜ್‌ಕುಮಾರ್; ಪೋಸ್ಟ್ ವೈರಲ್!

click me!