2-3 ದಶಕಗಳ ಕಾಲ ಚಿತ್ರರಂಗವನ್ನು ಆಳಿ ಈಗಲೂ ಸಿನಿಮಾಗಳಲ್ಲಿ ಸಕ್ರಿಯವಾಗಿರುವ ನಟಿ ಡಿಂಪಲ್ ಕಪಾಡಿಯಾ ಕುಷ್ಠರೋಗಿಯಾಗಿದ್ದರಂತೆ! ನೋವಿನ ಕಥೆಯನ್ನು ರಿವೀಲ್ ಮಾಡಿದ್ದಾರೆ ನಟಿ
ಡಿಂಪಲ್ ಕಪಾಡಿಯಾ. 80-90ರ ದಶಕದಲ್ಲಿ ಬಾಲಿವುಡ್ ಆಳಿದ್ದ ನಟಿ ಈಕೆ. ಬಾಲಿವುಡ್ ಸೂಪರ್ ಸ್ಟಾರ್ ಎಂದೂ ಎನಿಸಿಕೊಂಡವರು. ತಮ್ಮ ನಟನೆಯ ಮಾಂತ್ರಿಕತೆಯಿಂದ ಕೋಟ್ಯಂತರ ಜನರ ಹೃದಯವನ್ನು ಆಳಿದ ಡಿಂಪಲ್ ಕಪಾಡಿಯಾ ಈಗಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ನಟಿಗೆ ಈಗ 67 ವರ್ಷ ವಯಸ್ಸು. ಇದೇ ಜೂನ್ 8ರಂದು 67ನೇ ವಯಸ್ಸಿಗೆ ಅಡಿ ಇಟ್ಟಿರುವ ನಟಿ ಡಿಂಪಲ್ ಅವರ ಕಥೆಯೇ ರೋಚಕ! ಕುಷ್ಠರೋಗಿಯಾಗಿದ್ದ ಬಾಲೆಯೊಬ್ಬಳು ಬಾಲಿವುಡ್ನ ಸೂಪರ್ ಸ್ಟಾರ್ ಪಟ್ಟಕ್ಕೇರಿದ ಕುತೂಹಲದ ಪಯಣವಿದು. ಈ ವಿಷಯವನ್ನು ಸ್ವತಃ ಡಿಂಪಲ್ ಕಪಾಡಿಯಾ ಕಾರ್ಯಕ್ರಮವೊಂದರಲ್ಲಿ ಈಗ ರಿವೀಲ್ ಮಾಡಿದ್ದಾರೆ.
ಆಗ ನನಗೆ 12 ವರ್ಷ ವಯಸ್ಸು. ಕುಷ್ಠ ರೋಗ ನನ್ನ ಮೊಣಕೈಯಿಂದ ಶುರುವಾಗಿತ್ತು. ಅದೇನು ಎನ್ನುವುದೇ ಅರಿಯದ ವಯಸ್ಸು ಅದು. ನನ್ನ ತಂದೆ ಚುನ್ನಿಭಾಯ್ ಕಪಾಡಿಯಾ ಮತ್ತು ಆ ದಿನಗಳಲ್ಲಿ ಪ್ರಸಿದ್ಧ ನಿರ್ದೇಶಕರಾಗಿದ್ದವರೊಬ್ಬರು ಸ್ನೇಹಿತರಾಗಿದ್ದರು. ಅವರು ಒಮ್ಮೆ ಮನೆಗೆ ಬಂದಾಗ ನನ್ನನ್ನು ನೋಡಿದರು. ಕುಷ್ಠರೋಗ ಇರುವುದು ತಿಳಿದು, ಶಾಲೆಯಿಂದ ಹೊರಹಾಕಿಸುವುದಾಗಿ ಹೇಳಿದ್ದರು. ನನ್ನ ಕುಷ್ಠರೋಗ ಎಲ್ಲರಿಗೂ ಹರಡುತ್ತದೆ ಎನ್ನುವ ಕಾರಣದಿಂದ ಶಾಲೆಯಿಂದ ಬಹಿಷ್ಕರಿಸುವಲ್ಲಿ ಅವರು ಯಶಸ್ವಿಯೂ ಆಗಿದ್ದರು. ಆದರೆ ನನಗೆ ಆಗ ಏನು ಆಗುತ್ತಿದೆ ಎನ್ನುವುದೇ ಅರ್ಥವಾಗಿರಲಿಲ್ಲ, ಅವರು ಅಷ್ಟು ನಿರ್ದಯಿಯಾಗಿ ನಡೆದುಕೊಂಡರು ಎಂದು ಸಂದರ್ಶನವೊಂದರಲ್ಲಿ ಡಿಂಪಲ್ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಡಿಂಪಲ್ ಕಪಾಡಿಯಾ ತಮ್ಮ ವೃತ್ತಿಜೀವನದ ಆರಂಭದಲ್ಲಿಯೇ ಸೂಪರ್ ಸ್ಟಾರ್ ಎನಿಸಿಕೊಂಡವರು. ರಾಜ್ ಕಪೂರ್ ಅವರ 'ಬಾಬಿ' ಚಿತ್ರದಲ್ಲಿ ರಿಷಿ ಕಪೂರ್ ಎದುರು ಪ್ರಮುಖ ಪಾತ್ರದಲ್ಲಿ ನಟಿಸಿದಾಗ ಅವರು ನಟಿಸಿದ್ದಾಗ ಅವರಿಗೆ ಕೇವಲ 16 ವರ್ಷ ವಯಸ್ಸು. ಈ ಬಗ್ಗೆ ಹೇಳಿಕೊಂಡಿರುವ ಡಿಂಪಲ್, ನಾನು 'ಬಾಬಿ' ಪಾತ್ರವನ್ನು ಪಡೆದುದ್ದೇ ರೋಚಕ. ಆ ಯುಗವು ನನ್ನ ಜೀವನದ ಅತ್ಯಂತ 'ಮಾಂತ್ರಿಕ' ಯುಗ ಎಂದರು. ಆ ಸಮಯದಲ್ಲಿಯೂ ನಾನು ಕುಷ್ಠರೋಗದಿಂದ ಬಳಲುತ್ತಿದ್ದೆ. ಈ ವಿಷಯ ರಾಜ್ ಕಪೂರ್ ಅವರಿಗೆ ತಿಳಿಯಿತು. ಕುಷ್ಠರೋಗದಿಂದ ಬಳಲುತ್ತಿರುವ ಒಬ್ಬ ಸುಂದರ ಹುಡುಗಿ ಇದ್ದಾಳೆ ಎಂದು ರಾಜ್ ಕಪೂರ್‌ಗೆ ಯಾರೋ ಹೇಳಿದ್ದರಂತೆ. ಅವರು ಆಗ ಬಾಬಿ ಚಿತ್ರಕ್ಕಾಗಿ ಹೊಸ ಮುಖವನ್ನು ಹುಡುಕುತ್ತಿದ್ದರು. ಇದಕ್ಕಾಗಿ ರಾಜ್ ಕಪೂರ್ ಪತ್ರಿಕೆಯಲ್ಲಿ ಜಾಹೀರಾತು ಕೂಡ ಪ್ರಕಟಿಸಿದ್ದರು. ರಾಜ್ ಕಪೂರ್ ಆಡಿಷನ್ಗೆ ಬರಲು ಹೇಳಿದ್ದರಿಂದ ಹೋಗಿದ್ದೆ ಎಂದು ಆ ದಿನಗಳನ್ನು ನೆನಪಿಸಿಕೊಂಡರು ಡಿಂಪಲ್.
ಅಮ್ಮನಾಗಲು ಎರಡೇ ತಿಂಗಳು ಬಾಕಿ: ನಟಿ ದೀಪಿಕಾ ಪಡುಕೋಣೆ ಸೀಮಂತದ ಫೋಟೋಗಳು ವೈರಲ್
ಆಗ ನನಗೆ 16 ವರ್ಷ ವಯಸ್ಸು. ರಿಷಿ ಕಪೂರ್ ಅವರಿಗೆ 20 ವರ್ಷ ವಯಸ್ಸು. ಆಡಿಷನ್ನಲ್ಲಿ ಚೆನ್ನಾಗಿ ಮಾಡಿದರೂ ಅದರ ಹೀರೋ ರಿಷಿ ಕಪೂರ್ ಅವರಿಗಿಂತಲೂ ನಾನು ತುಂಬಾ ದೊಡ್ಡವಳಂತೆ ಕಾಣುತ್ತೇನೆ ಎನ್ನುವ ಕಾರಣಕ್ಕೆ ಮೊದಲಿಗೆ ರಿಜೆಕ್ಟ್ ಆದೆ. ಆದರೆ ರಾಜ್ಕಪೂರ್ ನನ್ನನ್ನು ಬಳಿಗೆ ಕರೆದರು. ನನ್ನ ನಟನೆ ಅವರಿಗೆ ಇಷ್ಟವಾಯಿತು. ಅವರು ಸಿಕ್ಕಿದ್ದು ನನ್ನ ಜೀವನದ ಟರ್ನಿಂಗ್ ಪಾಯಿಂಟ್. ಬಾಬಿಯಲ್ಲಿ ಸೆಲೆಕ್ಟ್ ಆದೆ. ಆ ಬಳಿಕ ಹಲವಾರು ಅವಕಾಶಗಳು ನನ್ನನ್ನು ಹುಡುಕಿ ಬಂದವು ಎಂದು ರಿವೀಲ್ ಮಾಡಿದ್ದಾರೆ ನಟಿ. ಕುಷ್ಠರೋಗವೇ ಬಹುಶಃ ನನಗೆ ಅಂದು ವರದಾನವಾಯಿತು. ಇದರಿಂದಾಗಿಯೇ ನಾನು ರಾಜ್ಕಪೂರ್ ಅವರ ಕಣ್ಣಿಗೆ ಬಿದ್ದಿದ್ದೆ ಎನ್ನುತ್ತಲೇ ಆಗುವುದೆಲ್ಲವೂ ಒಳ್ಳೆಯದ್ದಕ್ಕೇ ಎಂದಿದ್ದಾರೆ.
1973 ರಲ್ಲಿ ಬಿಡುಗಡೆಯಾದ ಬಾಬಿ ಚಿತ್ರವು ಹೊಸ ಪೀಳಿಗೆಯ ಯುವ, ಬಂಡಾಯ ಮತ್ತು ಸ್ವತಂತ್ರ ಮನಸ್ಸಿನ ಸ್ತ್ರೀ ಪಾತ್ರಗಳಿಗೆ ದಾರಿ ಮಾಡಿಕೊಟ್ಟಿತು. ಡಿಂಪಲ್ ಕಪಾಡಿಯಾ ಉತ್ಸಾಹಭರಿತ ಹುಡುಗಿಯ ಪಾತ್ರಕ್ಕೆ ಜೀವ ತುಂಬಿದರು, ಅವರು ಸಾಮಾಜಿಕ ನಿಯಮಗಳಿಗೆ ಸವಾಲು ಹಾಕಿದರು. ಬಾಬಿ ಚಿತ್ರ ಬ್ಲಾಕ್ಬಸ್ಟರ್ ಆಯಿತು. ಆಗಿನ ಕಾಲದಲ್ಲಿಯೇ 5.45 ಕೋಟಿ ಗಳಿಸಿ ಗಲ್ಲಾಪೆಟ್ಟಿಗೆಯಲ್ಲಿ ಹಿಟ್ ಆಯಿತು. ಇದು 1973 ರ ಅತಿ ಹೆಚ್ಚು ಚಿತ್ರಗಳ ಭಾರತೀಯ ಚಲನಚಿತ್ರವಾಯಿತು. ಡಿಂಪಲ್ ರಾತ್ರೋರಾತ್ರಿ ಸೂಪರ್ ಸ್ಟಾರ್ ಪಟ್ಟಕ್ಕೇರಿದರು.
7 ಕೋಟಿ ಖರ್ಚು ಮಾಡಿ ಮದ್ವೆ ಮಾಡ್ದೆ, ಅಯ್ಯೋ... ಅನ್ನೋಕಾಗತ್ತಾ? ಡಿವೋರ್ಸ್ ಕುರಿತು ಅನು ಮನದ ಮಾತು