ಮುಂದಿನ ಜನ್ಮದಲ್ಲಿ ಪ್ರಭಾಸ್ ನನ್ನ ಮಗನಾಗಿ ಹುಟ್ಟಲಿ; ಆಸೆ ಹಂಚಿಕೊಂಡ ಬಾಲಿವುಡ್ ನಟನ ತಾಯಿ

Published : Apr 07, 2025, 01:22 PM ISTUpdated : Apr 07, 2025, 01:25 PM IST
ಮುಂದಿನ ಜನ್ಮದಲ್ಲಿ ಪ್ರಭಾಸ್ ನನ್ನ ಮಗನಾಗಿ ಹುಟ್ಟಲಿ; ಆಸೆ ಹಂಚಿಕೊಂಡ ಬಾಲಿವುಡ್ ನಟನ ತಾಯಿ

ಸಾರಾಂಶ

Bollywood Hero Mother: ಬಹುಭಾಷಾ ನಟಿಯೊಬ್ಬರು ಪ್ರಭಾಸ್ ಅವರ ಸರಳತೆಗೆ ಮನಸೋತಿದ್ದಾರೆ. ಮುಂದಿನ ಜನ್ಮದಲ್ಲಿ ಪ್ರಭಾಸ್ ತಮ್ಮ ಮಗನಾಗಿ ಹುಟ್ಟಬೇಕೆಂದು ಅವರು ಆಸೆ ವ್ಯಕ್ತಪಡಿಸಿದ್ದಾರೆ.

Actor Prabhas: ಡಾರ್ಲಿಂಗ್ ಪ್ರಭಾಸ್  ಅಭಿಮಾನಿಗಳು ಹೆಮ್ಮೆಪಡುವಂತಹ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬಹುಭಾಷಾ ನಟಿಯೊಬ್ಬರು ಪ್ರಭಾಸ್ ಸರಳತೆಗೆ ಫಿದಾ ಆಗಿದ್ದು, ಮುಂದಿನ ಜನ್ಮದಲ್ಲಿ ಬಾಹುಬಲಿ ನನ್ನ ಮಗನಾಗಿ ಹುಟ್ಟಬೇಕು ಎಂದು ಹೇಳಿಕೊಂಡಿದ್ದಾರೆ.  45 ವರ್ಷದ ಪ್ರಭಾಸ್ ಹಲವು ಸೂಪರ್ ಹಿಟ್ ಸಿನಿಮಾಗಳ ಸರದಾರರಾಗಿದ್ದಾರೆ. ಎಲ್ಲಾ ಭಾಷೆಯ ಕಲಾವಿದರೊಂದಿಗೆ ಪ್ರಭಾಸ್ ಕೆಲಸ ಮಾಡಿದ್ದಾರೆ. ಬಾಹುಬಲಿ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಪ್ರಭಾಸ್ ಚಿತ್ರಗಳಿಗೆ ಇಡೀ ದೇಶವೇ ಕಾಯುತ್ತಿರುತ್ತದೆ. ಕಲ್ಕಿ ಪ್ರಭಾಸ್ ನಟನೆಯ ಕೊನೆ ಸಿನಿಮಾ ಆಗಿದ್ದು, ಸಾಲು ಸಾಲು ಚಿತ್ರಗಳಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದಾರೆ. 

ತೆಲಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟಿ ಜರಿನಾ ವಾಹಬ್ ಸಂದರ್ಶನದ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದಿತ್ಯ ಪಾಂಚೋಲಿ ಅವರ ಮಡದಿಯಾಗಿರುವ ಜರಿನಾ ವಾಹಬ್, ಮುಂದಿನ ಜನ್ಮವೊಂದಿದ್ದರೆ ಪ್ರಭಾಸ್ ನನ್ನ ಮಗನಾಗಿ ಹುಟ್ಟಲಿ ಎಂದು ಹೇಳಿದ್ದಾರೆ. ಈ  ವಿಡಿಯೋವನ್ನು ಪ್ರಭಾಸ್ ಅಭಿಮಾನಿಗಳು ಹೆಮ್ಮ ಮತ್ತು ಸಂತೋಷದಿಂದ ಹಂಚಿಕೊಳ್ಳುತ್ತಿದ್ದಾರೆ.  

ಜರಿನಾ ವಾಹಬ್ ಹೇಳಿದ್ದೇನು? 
ನಾನು ಪ್ರಭಾಸ್ ಜೊತೆ 'ರಾಜಾ ಸಾಬ್' ಸಿನಿಮಾದಲ್ಲಿ ನಟಿಸಿದ್ದೇನೆ. ಪ್ರಭಾಸ್‌ನಷ್ಟು ಸಿಂಪಲ್ ಆಗಿರಲು ಯಾರಿಂದಲೂ ಸಾಧ್ಯವಿಲ್ಲ. ಮುಂದಿನ ಜನ್ಮದಲ್ಲಿ ಸೂರಜ್ ಜೊತೆ ಪ್ರಭಾಸ್ ಸಹ ನನಗೆ ಮಕ್ಕಳಾಗಬೇಕೆಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ. ಎಲ್ಲರ ಪ್ರೀತಿಗೂ ಪಾತ್ರವಾಗುವಂತಹ ವ್ಯಕ್ತಿತ್ವ ಪ್ರಭಾಸ್ ಅವರದ್ದಾಗಿದೆ ಎಂದು ಜರಿನಾ ವಾಹಬ್ ಹೇಳಿದ್ದಾರೆ. 

ಪ್ರಭಾಸ್‌ನಲ್ಲಿ ತಾನೋರ್ವ ದೊಡ್ಡ ಸ್ಟಾರ್ ಅನ್ನೋ ಗರ್ವ ಇಲ್ಲ. ಶೂಟಿಂಗ್‌ ಸೆಟ್‌ನಲ್ಲಿ ಎಲ್ಲರೊಂದಿಗೂ ಪ್ರಭಾಸ್ ತುಂಬಾನೇ ಆತ್ಮೀಯವಾಗಿರುತ್ತಾರೆ. ಪ್ಯಾಕಪ್ ಬಳಿಕ ಹಿರೋಯಿನ್, ಡೈರೆಕ್ಟರ್ ಮಾತ್ರವಲ್ಲ ಸೆಟ್‌ನಲ್ಲಿರೋ ಎಲ್ಲರಿಗೂ ಶೇಕ್ ಹ್ಯಾಂಡ್ ಮಾಡುತ್ತಾ ಬೈ ಹೇಳುತ್ತಾರೆ. ಈ ರೀತಿ ಎಲ್ಲರಿಗೂ ಹೇಳಿ ಹೋಗುವ ಅವಶ್ಯಕತೆ ಪ್ರಭಾಸ್‌ಗಿಲ್ಲ. ಅದು ಅವರ ಸರಳತೆ ಎಂದು ಜರಿನಾ ಹೇಳುತ್ತಾರೆ. 

ಇದನ್ನೂ ಓದಿ: ಪ್ರಭಾಸ್‌ಗೆ 'ಅಂಥವ್ರು ಅಂದ್ರೆ ಇಷ್ಟ ಆಗಲ್ಲ' ಅಂದ ದೊಡ್ಡಮ್ಮ; ಮತ್ತೆ ಹೆಂಡ್ತಿ ಹೇಗಿರಬೇಕಂತೆ ಗೊತ್ತಾ?

ತಮ್ಮ ದೃಶ್ಯದ ಶೂಟ್ ಇಲ್ಲ ಅಂದ್ರು ಸ್ಪಾಟ್‌ನಲ್ಲಿ ಕುಳಿತು ಎಲ್ಲರೊಂದಿಗೆ ಮಾತನಾಡುತ್ತಾರೆ. ಬೇರೆ ಸ್ಟಾರ್ ಗಳಾದ್ರೆ ತಮ್ಮ ಶೂಟ್ ಇಲ್ಲಾಂದ್ರೆ ವ್ಯಾನ್‌ನೊಳಗೆ ಓಡಿ ಹೋಗುತ್ತಾರೆ. ಆದ್ರೆ ಪ್ರಭಾಸ್ ಹಾಗಲ್ಲ, ಎಲ್ಲರೊಂದಿಗೆ ಬೆರಯುವ ವ್ಯಕ್ತಿ. ಯಾರಾದ್ರು ಹಸಿವು ಅಥವಾ ಏನಾದ್ರು ತಿನ್ನಬೇಕೆಂದ್ರೆ ಮನೆಗೆ ಫೋನ್ ಮಾಡಿ ಎಲ್ಲರಿಗೂ ಊಟ ತರಿಸುತ್ತಾರೆ. ನಂತರ ಎಲ್ಲರೊಂದಿಗೆ ಕುಳಿತು ಊಟ ಮಾಡುತ್ತಾರೆ. ಈ ಕಾರಣಗಳಿಂದ ಪ್ರಭಾಸ್ ಎಲ್ಲರಿಗೂ ಇಷ್ಟವಾಗುತ್ತಾರೆ ಎಂದು ಜರಿನಾ ಚಿತ್ರೀಕರಣದ ದಿನಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಜರಿನಾ ಮಾತುಗಳನ್ನು ಕೇಳಿ ನಿರೂಪಕಿಯೂ ಶಾಕ್ ಆಗುತ್ತಾರೆ. 

ಜರಿನಾ ವಾಹಬ್ ಪುತ್ರ ಸೂರಜ್ ಪಾಂಚೋಲಿ ಸಹ ಬಣ್ಣದ ಲೋಕದಲ್ಲಿಯೇ ಗುರುತಿಸಿಕೊಂಡಿದ್ದಾರೆ. 2015ರಲ್ಲಿ ಬಿಡುಗಡೆಯಾದ ಹೀರೋ ಸಿನಿಮಾ ಮೂಲಕ ಸೂರಜ್ ಚಿತ್ರರಂಗಕ್ಕೆ ಪ್ರವೇಶಿಸಿದರು. ಸ್ಯಾಟ್‌ಲೈಟ್ ಶಂಕರ್, ಟೈಮ್ ಟು ಡ್ಯಾನ್ಸ್ ಸಿನಿಮಾಗಳಲ್ಲಿಯೂ ನಟಿಸಿದರೂ ಸೂರಜ್ ಪಾಂಚೋಲಿಗೆ ಬಿಗ್‌ ಸಕ್ಸಸ್ ಸಿಕ್ಕಿಲ್ಲ. ಹೃತಿಕ್ ರೋಷನ್ ಅಭಿನಯದ ಗುಜಾರಿಷ್, ಸಲ್ಮಾನ್ ಖಾನ್ ನಟನೆಯ ಏಕ್ ಥಾ ಟೈಗರ್ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿಯೂ ಸೂರಜ್ ಪಾಂಚೋಲಿ ಕೆಲಸ ಮಾಡಿದ್ದಾರೆ. 

ಇದನ್ನೂ ಓದಿ: ರಾಜಮೌಳಿ ಅಂದಾಜನ್ನೇ ಕಮ್ಮಿ ಮಾಡಿದ ಪ್ರಭಾಸ್: ಆ ಬ್ಲಾಕ್ ಬಸ್ಟರ್ ಸಿನಿಮಾ ಬೇಡ ಅಂದಿದ್ದಕ್ಕೆ ಬೇಜಾರಾದ ಡಾರ್ಲಿಂಗ್‌!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?