ಕೈಯಲ್ಲಿ ದುಡ್ಡಿರದೇ ರಸ್ತೆ ಬದಿಯ ಬಟ್ಟೆ ತೊಟ್ಟು ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸುಷ್ಮಿತಾ ಸೇನ್ ಅಲ್ಲಿ ಗೆಲುವು ಸಾಧಿಸಿದ್ದಾರೆ. ಆ ರೋಚಕ ಸ್ಟೋರಿ ಇಲ್ಲಿದೆ
ಇಂದು ನೂರಾರು ಕೋಟಿ ರೂಪಾಯಿಗಳ ಒಡತಿ, ಮಾಜಿ ವಿಶ್ವ ಸುಂದರಿ, ಬಾಲಿವುಡ್ ತಾರೆ ಸುಷ್ಮಿತಾ ಸೇನ್ ಅವರು ಹಿಂದೊಮ್ಮೆ ನೂರಾರು ರೂಪಾಯಿ ಕೊಟ್ಟು ಬಟ್ಟೆ ಖರೀದಿ ಮಾಡದ ಬಡತನದಲ್ಲಿದ್ದರು. ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಹೋಗಬೇಕಾದರೂ ಒಳ್ಳೊಳ್ಳೆ ಬಟ್ಟೆ ಖರೀದಿಗೆ ಕೈಯಲ್ಲಿ ದುಡ್ಡು ಇರಲಿಲ್ಲ. ಆದರೆ ಅಂದು ಆದದ್ದೇ ಬೇರೆ. ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಸಾಧನೆ ಮಾಡಬೇಕು ಎನ್ನುವ ಗುರಿ ಇಟ್ಟುಕೊಂಡು ಹೋಗಿದ್ದ ಸುಷ್ಮಿತಾ ಸೇನ್ ಅವರಿಗೆ ಒಳ್ಳೆಯ ಬಟ್ಟೆ ಇಲ್ಲದೇ ಸ್ಪರ್ಧೆಯಲ್ಲಿ ಹೇಗೆ ಭಾಗವಹಿಸಬೇಕು ಎನ್ನುವ ಚಿಂತೆಯಾಗಿತ್ತು. ಆಗ ಧೈರ್ಯ ತುಂಬಿದವರು ಅವರ ಅಮ್ಮ. ನಿನ್ನ ಡಿಸೈನರ್ ಬಟ್ಟೆ ನೋಡಲು ಅವರೇನೂ ಬರುವುದಿಲ್ಲ, ನಿನ್ನನ್ನು ನಿನ್ನ ಜಾಣ್ಮೆಯನ್ನು ನೋಡುತ್ತಾರೆ, ಧೈರ್ಯವಾಗಿ ಹೋಗು ಎನ್ನುತ್ತಲೇ ರೋಡ್ ಸೈಡ್ನಲ್ಲಿ ಸಿಗುವ ಅತ್ಯಂತ ಕಡಿಮೆ ಬೆಲೆಯ ಬಟ್ಟೆ ಖರೀದಿ ಮಾಡಿದರು.
ಮನೆಯ ಬಳಿ ಗ್ಯಾರೇಜಿನಲ್ಲಿ, ಪೆಟ್ಟಿಕೋಟ್ ಮಾಡುವ ಸ್ಥಳೀಯ ಟೈಲರ್ಗೆ ಆ ಬಟ್ಟೆಯನ್ನು ಕೊಟ್ಟು ಈ ಬಟ್ಟೆ ಟಿವಿಯಲ್ಲಿ ಬರುತ್ತದೆ, ಒಳ್ಳೆ ಡ್ರೆಸ್ ಮಾಡು ಎಂದು ಹೇಳಿದರು. ಆತ ಮಾಡಿಕೊಟ್ಟ ಅತ್ಯಂತ ಕಡಿಮೆ ಬೆಲೆಯ ಗೌನ್ ಧರಿಸಿದರು. ಅಳಿದುಳಿದ ಬಟ್ಟೆಯಿಂದ ಸುಷ್ಮಿತಾ ಸೇನ್ ಅವರ ತಾಯಿ ಗುಲಾಬಿ ಹೂವನ್ನು ತಯಾರಿಸಿದರು. ಇದೇ ಬಟ್ಟೆ ತೊಟ್ಟು ಮಿಸ್ ಇಂಡಿಯಾ ಸ್ಪರ್ಧೆಗೆ ಹೋದರು ಸುಷ್ಮಿತಾ ಸೇನ್. ಅವರ ಜಾಣ್ಮೆಯ ಮುಂದೆ ಅವರು ತೊಟ್ಟ ಬಟ್ಟೆಯ ರೇಟ್ ಎಲ್ಲ ಸುಂದರಿಯರು ತೊಟ್ಟ ಸಹಸ್ರ, ಕೋಟಿ ರೂಪಾಯಿ ಬೆಲೆ ಬಾಳುವ ಬಟ್ಟೆ ಎದುರು ಗೌಣವಾಯಿತು. ಸುಷ್ಮಿತಾ ಸೇನ್ ಜಯಗಳಿಸಿದರು. ಮಿಸ್ ಇಂಡಿಯಾ ಕಿರೀಟ ಅವರ ಮುಡಿಲಿಗೇರಿತು!
56 weds 33! ಮಂಟಪಕ್ಕೆ ಬಂದ 56ರ ಮದುಮಗ ಅರ್ಬಾಜ್ ಖಾನ್: ಮದ್ವೆಮನೆ ವಿಡಿಯೋ ವೈರಲ್
ಹೌದು. ಈ ಕುರಿತು ನಟಿ ಸಂದರ್ಶನವೊಂದರಲ್ಲಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಸಾಧಿಸುವ ಛಲ, ಮನೋಸ್ಥೈರ್ಯ, ಸ್ಪಷ್ಟ ಗುರಿಯೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು. ಎಲ್ಲವೂ ಇದ್ದರೂ ಛಲ ಇಲ್ಲದಿದ್ದರೆ ಏನೂ ಸಾಧನೆ ಮಾಡಲಾಗುವುದಿಲ್ಲ ಎನ್ನುವ ಮೂಲಕ ಅಂದಿನ ದಿನಗಳನ್ನು ಮೆಲುಕು ಹಾಕಿದ್ದಾರೆ ನಟಿ. ಅಂದಹಾಗೆ ನಟಿಗೆ ಈಗ 48 ವರ್ಷ ವಯಸ್ಸು. ಅವರು ಮಿಸ್ ಇಂಡಿಯಾ ಗೆದ್ದಾಗ 18 ವರ್ಷ ವಯಸ್ಸಾಗಿತ್ತು. ನಂತರ 1994ರಲ್ಲಿ ಮಿಸ್ ಯೂನಿವರ್ಸ್ ಕಿರೀಟ ಪಡೆದುಕೊಂಡರು.
ಸದ್ಯ ನಟಿ ತಮ್ಮ ರಿಲೆಷನ್‌ಶಿಪ್‌ಗಳ ಕಾರಣದಿಂದ ಸುದ್ದಿಯಾಗುತ್ತಿದ್ದಾರೆ. ಮಾಜಿ ಪ್ರೇಮಿ ರೋಹ್ಮನ್ ಶಾಲ್ (Rohman Shawl) ಅವರ ವೀಡಿಯೋ ಒಂದು ವೈರಲ್ ಆಗಿದ್ದು ಮತ್ತೆ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗುತ್ತಿದೆ. ಸುದೀರ್ಘ ಸಂಬಂಧದ ನಂತರ, ಡಿಸೆಂಬರ್ 2021 ರಲ್ಲಿ ಸುಶ್ಮಿತಾ ಸೇನ್ ರೋಹ್ಮನ್ ಶಾಲ್ ಅವರೊಂದಿಗೆ ಬ್ರೇಕಪ್ ಆಗಿರವ ವಿಷಯ ಘೋಷಿಸಿದ್ದರು. ಅವರ ಬ್ರೇಕಪ್ ನಂತರವೂ ಇಬ್ಬರು ಸ್ನೇಹಿತರಾಗಿ ಮುಂದುವರೆದರು. ರೋಹ್ಮನ್ ಅವರು ಹೆಚ್ಚಾಗಿ ಸೇನ್ ಕುಟುಂಬದೊಂದಿಗೆ ಕಾಣಿಸಿಕೊಂಡರು. ಆದರೆ ಇತ್ತೀಚಿನ ವೀಡಿಯೊವೊಂದರಲ್ಲಿ ಇಬ್ಬರು ಮತ್ತೆ ಒಂದಾಗಿರುವಂತೆ ಕಾಣುತ್ತಿದೆ. ಅದೇ ಇನ್ನೊಂದೆಡೆ, ಇವರ ಹೆಸರು ಐಪಿಎಲ್ ಸಂಸ್ಥಾಪಕ, ಉದ್ಯಮಿ ಲಲಿತ್ ಮೋದಿ ಜೊತೆಗೂ ಥಳಕು ಹಾಕಿಕೊಳ್ಳುತ್ತಿದೆ. ಈಗ ಲೈಫ್ ಏನೇ ಟರ್ನ್ ತೆಗೆದುಕೊಂಡಿದ್ದರೂ, ಅಂದು ಮಿಸ್ ಇಂಡಿಯಾ ಗೆದ್ದ ಕಥೆ ಮಾತ್ರ ಎಲ್ಲರಿಗೂ ಸ್ಫೂರ್ತಿದಾಯಕವೇ ಸರಿ.
ಐಶ್-ಅಭಿ ಡಿವೋರ್ಸ್ ಸುದ್ದಿ ಬೆನ್ನಲ್ಲೇ ಪರಿಹಾರದ ಮೊತ್ತದ ಭಾರಿ ಚರ್ಚೆ ಶುರು: ಲೆಕ್ಕ ಹಾಕಿದವರು ಫುಲ್ ಸುಸ್ತು!