ಜಹೀರ್ ಇಕ್ಬಾಲ್ ಜೊತೆಗಿನ ರಹಸ್ಯ ಸಂಬಂಧದ ಕುರಿತು ಮೊದಲ ಬಾರಿಗೆ ನಟಿ ಸೋನಾಕ್ಷಿ ಸಿನ್ಹಾ ಓಪನ್​ ಮಾತು

By Suchethana D  |  First Published Sep 29, 2024, 5:06 PM IST

ಆರೇಳು ವರ್ಷ ಡೇಟಿಂಗ್​ನಲ್ಲಿ ಇದ್ದರೂ ಜಹೀರ್​ ಇಕ್ಬಾಲ್​ ಜೊತೆಗಿನ ಸಂಬಂಧ ತಾವು ಯಾಕೆ ಹೇಳಿಕೊಂಡಿರಲಿಲ್ಲ ಎಂದು ನಟಿ ಸೋನಾಕ್ಷಿ ಸಿನ್ಹಾ ರಿವೀಲ್​ ಮಾಡಿದ್ದಾರೆ. ಅವರು ಹೇಳಿದ್ದೇನು? 
 


 ಬಾಲಿವುಡ್‌ ನಟ ಶತ್ರುಘ್ನ ಸಿನ್ಹಾ ಪುತ್ರಿ, ನಟಿ  ಸೋನಾಕ್ಷಿ ಸಿನ್ಹಾ ಮತ್ತು  ಜಹೀರ್ ಇಕ್ಬಾಲ್ ಮದುವೆಯ ಲೈಫ್​ ಎಂಜಾಯ್ ಮಾಡುತ್ತಿದ್ದಾರೆ. ಆದರೂ ಹಿಂದೂ-ಮುಸ್ಲಿಂ ಮದುವೆಯಾದ್ದರಿಂದ ಜೊತೆಗೆ ಅಪ್ಪನಿಗೆ ತಿಳಿಸದೇ ನಟಿ ಮದುವೆಯಾಗಿದ್ದರಿಂದಲೂ ಇವರ ಬಗ್ಗೆ ಇನ್ನೂ ಸುದ್ದಿಯಾಗುತ್ತಲೇ ಇದೆ. ಹೋದಲ್ಲಿ, ಬಂದಲ್ಲಿ ಇವರ ಮೇಲೆ ಕ್ಯಾಮೆರಾ ಕಣ್ಣು ನೆಟ್ಟಿರುತ್ತದೆ. ಅಷ್ಟಕ್ಕೂ ಇವರೇನೂ ದಿಢೀರ್‌ ಮದುವೆಯಾಗಿದ್ದಲ್ಲ. ಆರೇಳು ವರ್ಷ ಒಟ್ಟಿಗೇ ಇದ್ದು, ಡೇಟಿಂಗ್‌ ಮಾಡಿದ ಬಳಿಕ ಮದುವೆಯಾಗಿದ್ದಾರೆ. ಇವರು ಡೇಟಿಂಗ್‌ ಮಾಡುತ್ತಿದ್ದ ವಿಷಯ ಅಷ್ಟೊಂದು ಬೆಳಕಿಗೆ ಬಂದಿರದ ಹಿನ್ನೆಲೆಯಲ್ಲಿ ಮದುವೆಯಾದ ಮೇಲೆ ದಿಢೀರನೆ ಸಾಕಷ್ಟು ಚರ್ಚೆಗಳಿಗೆ ಗ್ರಾಸವಾಗಿದೆ. ಈ ಮದುವೆ ಲವ್‌ ಜಿಹಾದ್‌ ಎನ್ನುವ ಮಟ್ಟಕ್ಕೂ ಚರ್ಚೆಯಾಗಿ ಬಿಟ್ಟಿತು. ಸಾಲದು ಎನ್ನುವುದಕ್ಕೆ ಸೋನಾಕ್ಷಿ ತಮ್ಮ ತಂದೆಗೇ ತಿಳಿಸದೇ ಈ ಮದುವೆಯಾಗಿರುವುದು ಮತ್ತಷ್ಟು ವಿವಾದಕ್ಕೆ ಈಡಾಗಿತ್ತು. ಈಗ ಎಲ್ಲವೂ ಒಂದು ಹಂತಕ್ಕೆ ಬಂದಿದ್ದರೂ, ಸೋನಾಕ್ಷಿ ಮದುವೆಯ ವಿಷಯವನ್ನು ಕೆದಕುವುದು  ನೆಟ್ಟಿಗರಿಗೆ ಇನ್ನಿಲ್ಲದ ಖುಷಿ ಎನ್ನಿಸುತ್ತಿದೆ.

ಇದೀಗ ಸೋನಾಕ್ಷಿ ಸಿನ್ಹಾ ಅವರು ಜಹೀರ್ ಇಕ್ಬಾಲ್ ಅವರೊಂದಿಗಿನ ಸಂಬಂಧವನ್ನು ಏಕೆ ಖಾಸಗಿಯಾಗಿ ಇರಿಸಿಕೊಂಡರು ಎಂಬುದನ್ನು ಇದೇ ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. ಆರೇಳು ವರ್ಷ ತಾವು ಡೇಟಿಂಗ್​ನಲ್ಲಿ ಇದ್ದರೂ ಅದನ್ನು ಯಾಕೆ ಯಾರ ಜೊತೆಯೂ ಹೇಳಿಕೊಳ್ಳಲಿಲ್ಲ ಎಂಬುದನ್ನು ರಿವೀಲ್​ ಮಾಡಿದ್ದಾರೆ. 'ಜನರ ಕೆಟ್ಟ ಕಣ್ಣು ನಮ್ಮ ಮೇಲೆ ಬೀಳಬಾರದು ಎಂದು ನಾವು ಹೀಗೆ ಮಾಡಿದ್ವಿ. ಖಾಸಗಿ ವಿಷಯಗಳನ್ನು ಖಾಸಗಿಯಾಗಿ ಇಡುವುದು ಯಾವಾಗಲೂ ಉತ್ತಮ ಎಂದು ನಾನು ಭಾವಿಸುತ್ತೇನೆ. ನಾನು ಈಗಾಗಲೇ ತುಂಬಾ ಜನರ ಮನಸ್ಸಿನಲ್ಲಿ ಇದ್ದೇನೆ. ಆದ್ದರಿಂದ ನಮ್ಮ ಬಗ್ಗೆ ಎಲ್ಲರಿಗೂ ತಿಳಿಯದೇ ಇರುವುದು ಉತ್ತಮ. ನಮಗೆ ತುಂಬಾ ಪ್ರಿಯವಾದದ್ದನ್ನು ನಮಗಾಗಿ ಇಟ್ಟುಕೊಳ್ಳಬೇಕು, ಅದನ್ನು ತೋರ್ಪಡಿಸಬಾರದು. ನಾನು ಮತ್ತು ಜಹೀರ್​  ಭೇಟಿಯಾದೆವು, ನಾವು ಪ್ರೀತಿಸುತ್ತಿದ್ದೆವು, ನಾವು ಡೇಟಿಂಗ್​ ಮಾಡುತ್ತಿದ್ದೇವೆ. ಇದಾದ ಬಳಿಕ  ನನಗೆ, ಜಹೀರ್​ ಜೊತೆನೇ  ಶಾಶ್ವತ ಜೀವನ ಎಂದು ಅರಿತುಕೊಂಡು ಮದುವೆಯಾದೆ' ಎಂದಿದ್ದಾರೆ.  

Tap to resize

Latest Videos

undefined

ರಣಬೀರ್​ಗಿಂತಲೂ ಮಧ್ಯರಾತ್ರಿ ನನಗೆ ವಿಕ್ಕಿನೇ ಇಷ್ಟ ಎಂದ ತೃಪ್ತಿ ಡಿಮ್ರಿ: ನಟಿ ಕೊಟ್ಟ ಕಾರಣ ಹೀಗಿದೆ ನೋಡಿ!

ಈಚೆಗಷ್ಟೇ ನಟ-ನಟಿ ಪರಸ್ಪರ  ಒಳ್ಳೆಯ ಮತ್ತು ಒಂದು ಕೆಟ್ಟ ಅಭ್ಯಾಸಗಳ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದರು.  , ಜಹೀರ್ ಸೋನಾಕ್ಷಿಯನ್ನು ಹೊಗಳಿ ತನ್ನ ಹೆಂಡತಿಯ ಎರಡು ಅಭ್ಯಾಸಗಳನ್ನು ಇಷ್ಟಪಡುವುದಿಲ್ಲ ಎಂದು ಹೇಳಿದ್ದರು. ಜಹೀರ್ ಮಾತಿಗೆ ಖುಷಿಯಾಗಿದ್ದರು ಸೋನಾಕ್ಷಿ. ಬಳಿಕ ಜಹೀರ್​ ಸೋನಾಕ್ಷಿ ಸಮಯಪಾಲನೆ ಮಾಡುತ್ತಾಳೆ.   ಆದರೆ ಸೋನಾಕ್ಷಿಯಲ್ಲಿ ನನಗೆ ಹೆಚ್ಚು ಇಷ್ಟವಾಗುವುದು ವಿನಯ ಮತ್ತು ಸರಳತೆ ಎಂದು ಹೇಳಿದ್ದರು. ಸೋನಾಕ್ಷಿ, ಪತಿಯ ಬಗ್ಗೆ ಹೇಳುತ್ತಾ,  ಕೆಲವೊಮ್ಮೆ ನಮ್ಮಿಬ್ಬರ ನಡುವೆ ಮನಸ್ತಾಪವಾಗುತ್ತದೆ. ಅವರು ತುಂಬಾ ಗಲಾಟೆ ಮಾಡುತ್ತಾರೆ.  ನನಗೆ ಶಾಂತವಾಗಿರಬೇಕು. ಆದರೆ ಜಹೀರ್ ಇದ್ದಕ್ಕಿದ್ದಂತೆ ಕೂಗಿದಾಗ ಮತ್ತು ಶಿಳ್ಳೆ ಹೊಡೆದಾಗ, ನನಗೆ ಕೋಪ ಬಂದು ಹೊರಕ್ಕೆ ಹೋಗೆಂದು ಹೇಳಿರುವ ಸಂದರ್ಭಗಳೂ ಇವೆ ಎಂದಿದ್ದರು.  

ಇನ್ನು ನಟಿಯ ಸಿನಿಮಾ ಪಯಣದ ಕುರಿತು ಹೇಳುವುದಾದರೆ,  ಸೋನಾಕ್ಷಿ ಅವರ  ಕಕುಡಾ ಕಳೆದ ಜುಲೈನಲ್ಲಿ ತೆರೆ ಕಂಡಿದೆ.  ಆದಿತ್ಯ ಸರ್ಪೋತದಾರ್ ನಿರ್ದೇಶನದ ಈ ಚಿತ್ರವು ಹಾರರ್​ ಹಾಗೂ ಹಾಸ್ಯ ಮಿಶ್ರಿತ ಈ ಸಿನಿಮಾದಲ್ಲಿ  ರಿತೇಶ್ ದೇಶ್‌ಮುಖ್, ಸೋನಾಕ್ಷಿ ಸಿನ್ಹಾ ಮತ್ತು ಸಾಕಿಬ್ ಸಲೀಮ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಮದುವೆಯಾಗಲು ಬಯಸುವ ಯುವ ಜೋಡಿಗಳಾದ ಇಂದಿರಾ (ಸೋನಾಕ್ಷಿ ಸಿನ್ಹಾ) ಮತ್ತು ಸನ್ನಿ (ಸಾಕಿಬ್ ಸಲೀಂ) ಹಲವಾರು  ಅಡೆತಡೆಗಳನ್ನು ಎದುರಿಸುತ್ತಾರೆ.  ಸಂಪ್ರದಾಯಕ್ಕೆ ಅಂಟಿಕೊಂಡಿರುವ ಇಂದಿರಾ ಅವರ ತಂದೆಗೆ ಇಂಗ್ಲಿಷ್ ಮಾತನಾಡುವ ಅಳಿಯ ಬೇಕು. ಸನ್ನಿ ಭಾಷಾ ಪರೀಕ್ಷೆಯಲ್ಲಿ ವಿಫಲವಾದಾಗ, ಅವನು ಮತ್ತು ಇಂದಿರಾ ಓಡಿಹೋಗಲು ನಿರ್ಧರಿಸುತ್ತಾರೆ.  ಆದರೆ ವಿಧಿಯಾಟ ಬೇರೆಯಾಗುತ್ತದೆ. ಮುಂದೇನಾಗುತ್ತದೆ ಎನ್ನುವ ಚಿತ್ರ ಇದಾಗಿದೆ.

ಸೆಲ್ಫಿಗೆ ಬಂದ ಅಭಿಮಾನಿಯನ್ನು ನಗುನಗುತ್ತಲೇ ದೂರ ಮಾಡಿದ ಶಿಲ್ಪಾ ಶೆಟ್ಟಿ! ಭಲೆ ಹೆಣ್ಣೇ ಎಂದ ನೆಟ್ಟಿಗರು
 

click me!