ಅಪ್ಪ-ಅಮ್ಮನಿಂದಾಗಿ ಕುಡಿತದ ದಾಸಳಾದೆ, ಹುಚ್ಚಿಯೂ ಆಗಿದ್ದೆ ಎಂದು ತಮ್ಮ ಜೀವನದ ಕರಾಳ ಅಧ್ಯಾಯವನ್ನು ತೆರೆದಿಟ್ಟಿದ್ದಾರೆ ನಟಿ ಶ್ರುತಿ ಹಾಸನ್.
ಕೂಡು ಕುಟುಂಬ ಎನ್ನುವ ಕಲ್ಪನೆ ಮರೆಯಾಗಿ ದಶಕಗಳೇ ಕಳೆದುಹೋಗಿವೆ. ಆದರೆ ಈಗಂತೂ ಅಪ್ಪ-ಅಮ್ಮ ಮಕ್ಕಳಲ್ಲಿಯೂ ಒಡಕು. ವಿಚ್ಛೇದನ ಎನ್ನುವುದು ತೀರಾ ಮಾಮೂಲಾಗಿ ಹೋಗಿರುವ ಈ ಕಾಲಘಟ್ಟದಲ್ಲಿ ಅದರ ಕೆಟ್ಟ ಯಾತನೆ ಅನುಭವಿಸುವುದು ಮಕ್ಕಳು. ಅಪ್ಪ-ಅಮ್ಮನ ಜಗಳದಲಿ ಕೂಸು ಬಡವಾಯ್ತು ಎಂಬ ಗಾದೆ ಮಾತು ಅತ್ಯಂತ ಹಿಂದಿನದ್ದಾದರೂ ಇಂದು ಈ ಮಾತು ಅಕ್ಷರಶಃ ಅನ್ವಯ ಆಗುತ್ತಿದೆ. ಪಾಲಕರ ಜಗಳ, ಕೋಪ, ಕಿತ್ತಾಟ, ಮುನಿಸು, ವಿಚ್ಛೇದನ ಇವೆಲ್ಲವೂ ಮಕ್ಕಳ ಮೇಲೆ ಅಗಾಧ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಅಂಥದ್ದೇ ಒಂದು ನೋವಿನ ಕುರಿತು ಮಾತನಾಡಿದ್ದಾರೆ ನಟ ಕಮಲ್ ಹಾಸನ್ ಅವರ ಪುತ್ರಿ ಬಾಲಿವುಡ್ ನಟಿ ಶ್ರುತಿ ಹಾಸನ್. ಅಪ್ಪ-ಅಮ್ಮನ ವಿಚ್ಛೇದನದಿಂದ ತಮ್ಮ ಬದುಕು ಹೇಗೆ ಸರ್ವನಾಶ ಆಯಿತು ಎಂಬ ಬಗ್ಗೆ ನಟಿ ಬಹಿರಂಗ ಹೇಳಿಕೆ ನೀಡಿದ್ದಾರೆ.
ಈ ಕುರಿತು ಸಂದರ್ಶನವೊಂದನ್ನು ನೀಡಿರುವ ನಟಿ, ಅಪ್ಪ-ಅಮ್ಮನ ಕಿತ್ತಾಟದ ಕುರಿತು ಹೇಳಿಕೆ ನೀಡಿದ್ದಾರೆ. ಕಮಲ ಹಾಸನ್ ಮತ್ತು ನಟಿ ಸಾರಿಕಾ ಪ್ರೀತಿಸಿ ಮದುವೆಯಾದವರು. ಆದರೆ 2004ರಲ್ಲಿ ಇವರ ವಿಚ್ಛೇದನವಾಗಿತ್ತು. 1986ರಲ್ಲಿ ಹುಟ್ಟಿರೋ ಶ್ರುತಿ ಹಾಸನ್ ಅವರಿಗೆ ಅಪ್ಪ-ಅಮ್ಮ ಬೇರೆಯಾದಾಗ ಇನ್ನೂ 18 ವರ್ಷ ವಯಸ್ಸು. ಬಾಲ್ಯಾವಸ್ಥೆಯಿಂದ ಯೌವನಕ್ಕೆ ಕಾಲಿಡುವ ಸಮಯದಲ್ಲಿ ಅಪ್ಪ-ಅಮ್ಮನ ಈ ರೀತಿಯ ಅಗಲಿಕೆಯಿಂದ ತಾವು ಹೇಗೆ ಕುಗ್ಗಿ ಹೋಗಿದ್ದೆ ಎಂಬುದನ್ನು ನಟಿ ಹೇಳಿದ್ದಾರೆ. ಈ ಘಟನೆಗಳಿಂದ ನಾನು ಮದ್ಯವ್ಯಸನಿಯಾಗಿದ್ದೆ. ಖಿನ್ನತೆಗೆ ಜಾರಿ ಹುಚ್ಚಿಯೂ ಆಗಿದ್ದೆ ಎಂದು ನಟಿ ಹೇಳಿದ್ದಾರೆ. ನನ್ನ ಮಾನಸಿಕ ಆರೋಗ್ಯ ಹದಗೆಟ್ಟಿತ್ತು ಎನ್ನುವ ಸುದ್ದಿ ಆಗ ಹಬ್ಬಿತ್ತು. ಅದು ನಿಜವೂ ಆಗಿತ್ತು. ಆದರೆ ಇದಕ್ಕೆ ಕಾರಣ ಮಾತ್ರ ಹೆಚ್ಚಿನವರಿಗೆ ತಿಳಿದಿಲ್ಲ. ಇದಕ್ಕೆ ಮುಖ್ಯ ಕಾರಣ ಅಪ್ಪ-ಅಮ್ಮನ ಡಿವೋರ್ಸ್ ವಿಚಾರವೇ ಆಗಿತ್ತು. ಇದು ನನ್ನ ಮನಸ್ಸಿಗೆ ತುಂಬಾ ಘಾಸಿ ಉಂಟು ಮಾಡಿತ್ತು ಎಂದು ಶ್ರುತಿ ಹೇಳಿದ್ದಾರೆ.
undefined
ರಾಜಕೀಯಕ್ಕೆ ನಟಿ ಶ್ರುತಿ ಹಾಸನ್ ಎಂಟ್ರಿ? ಅಪ್ಪ ಕಮಲ್‌ರ ಹಾದಿ ಹಿಡಿದ್ರಾ ಬಾಲಿವುಡ್ ತಾರೆ?
ಈ ನೋವು ನನ್ನನ್ನು ತುಂಬಾ ಕಾಡಿತು. ಇದು ಹೆಚ್ಚಾಗಿ 2017ರಲ್ಲಿ ಚಿಕಿತ್ಸೆಗಾಗಿ ಲಂಡನ್ಗೆ ಹೋದೆ. ಆದರೆ ಅದಾಗಲೇ ಮದ್ಯ ವ್ಯಸನಿಯೂ ಆಗಿಬಿಟ್ಟಿದ್ದೆ. ಇದರಿಂದ ಹೊರ ಬರುವ ಪಣ ತೊಟ್ಟೆ. ಅದು ತುಂಬಾ ಕಷ್ಟವಾಗಿತ್ತು. ಆದರೆ ಮನಸ್ಸನ್ನು ಗಟ್ಟಿ ಮಾಡಿಕೊಂಡಿದ್ದೆ. ನಾನು ಆಲ್ಕೋಹಾಲ್ ಬಿಟ್ಟುಬಿಡಲು ನನಗೆ ನನ್ನ ಮನಸ್ಥಿತಿಯೇ ಹೆಚ್ಚು ಸಹಾಯ ಮಾಡಿದೆ ಎಂದು ನಟಿ ಹೇಳಿದ್ದಾರೆ. ನನ್ನ ಬಗ್ಗೆ ಏನೇನೋ ಸುದ್ದಿಗಳನ್ನು ಹರಡಲಾಯಿತು. ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿರುವ ನಟಿ, ನನ್ನಂಥ ಸನ್ನಿವೇಶದಲ್ಲಿ ಇರುವ ಪ್ರತಿಯೊಬ್ಬರೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಮಾನಸಿಕ ತಜ್ಱರ ಬಳಿ ಹೋಗಿ ಸಲಹೆ ಪಡೆಯುವುದರಲ್ಲಿ ಯಾವುದೇ ತಪ್ಪು ಇಲ್ಲ ಎಂದಿರುವ ನಟಿ, ಇಲ್ಲದಿದ್ದರೆ ನಿಮ್ಮ ಬದುಕನ್ನೇ ಮುಗಿಸುವ ಹಂತಕ್ಕೂ ಬರಬಹುದು ಎನ್ನುವ ಎಚ್ಚರಿಕೆ ನೀಡಿದ್ದಾರೆ.
ಮಾನಸಿಕ ವೈದ್ಯರ ಬಳಿ ಹೋಗುವವರು ಹುಚ್ಚರಲ್ಲ, ಬದಲಿಗೆ ಕೆಟ್ಟ ಮನಸ್ಥಿತಿಯಿಂದ ಹೊರಕ್ಕೆ ಬರಲು ಇದು ನೆರವಾಗುತ್ತದೆ ಎಂದಿದ್ದಾರೆ. ಶ್ರುತಿ. ಸದ್ಯ ನಟಿ ಶ್ರುತಿ, ವೈಯಕ್ತಿಕ ವಿಚಾರಕ್ಕೂ ಸುದ್ದಿಯಲ್ಲಿದ್ದಾರೆ. ಇವರು ಶಂತನು ಹಜಾರಿಕಾ ಜೊತೆ ಸಹಜೀವನ ನಡೆಸುತ್ತಿದ್ದಾರೆ. ಶಂತನು ತನ್ನ ಜೀವನದಲ್ಲಿ ಬಂದ ನಂತರ ನನ್ನ ಜೀವನದಲ್ಲಿ ಅನೇಕ ಬದಲಾವಣೆಗಳು ಆಗಿದೆ. ನಾವಿಬ್ಬರೂ ಒಂದೇ ರೀತಿಯ ಆಲೋಚನೆಗಳನ್ನು ಹೊಂದಿದ್ದೇವೆ ಎಂದು ಹಿಂದೊಮ್ಮೆ ನಟಿ ಹೇಳಿದ್ದರು. ಅದೇ ವೇಳೆ ಅಪ್ಪನಂತೆ ಶ್ರುತಿ ಕೂಡ ರಾಜಕೀಯಕ್ಕೆ ಪ್ರವೇಶ ಮಾಡುತ್ತಾರೆ ಎನ್ನುವ ಸುದ್ದಿ ಕೂಡ ಇದೆ.
UT 69: ಜೈಲಲ್ಲಿ ರಾಜ್ಕುಂದ್ರಾ- ಪೊಲೀಸ್ರು ನಗ್ನಗೊಳಿಸಿದ್ರು, ಕೈದಿಗಳು ಛೀಮಾರಿ ಹಾಕಿದ್ರು! ವಿಡಿಯೋ ರಿಲೀಸ್