
ಸಿನಿಮಾರಂಗದಲ್ಲಿ ಪ್ರೀತಿ, ಡೇಟಿಂಗ್, ಬ್ರೇಕಪ್, ಮದುವೆ ವಿಚಾರಗಳು ಆಗಾಗ ಸುದ್ದಿಯಾಗುತ್ತಲ್ಲೇ ಇರುತ್ತೆ. ಹಾಗೆ ಪ್ರೀತಿಗೆ ಯಾವುದೇ ಮಿತಿ ಇಲ್ಲ. ಜಾತಿ, ಧರ್ಮ, ಗಡಿಗೂ ಮೀರಿರುತ್ತೆ. ಇದೀಗ ದಕ್ಷಿಣ ಭಾರತದ (South India Film) ಸಿನಿಮಾರಂಗದಲ್ಲಿ ಹಿರಿಯ ನಟನ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೌದು, ಟಾಲಿವುಡ್‌ನ ಹಿರಿಯ ನಟ 62 ವರ್ಷದ ವಿಕೆ ನರೇಶ್ ಬಾಬು (VK Naresh Babu) ಹಾಗೂ ಕನ್ನಡದ ಖ್ಯಾತ ನಟಿ, ತೆಲುಗು ಚಿತ್ರರಂಗದಲ್ಲೂ ಅಪಾರವಾಗಿ ಮಿಂಚಿರುವ 43 ವರ್ಷದ ಪವಿತ್ರಾ ಲೋಕೇಶ್ (pavitra lokesh)ಮದುವೆಯಾಗಿದ್ದಾರೆ ಎನ್ನುವ ಗಾಸಿಪ್ ವ್ಯಾಪಕವಾಗಿ ಹರಿದಾಡುತ್ತಿದೆ.
ನಟಿ ಪವಿತ್ರಾ ಲೋಕೇಶ್ ಮತ್ತು ನರೇಶ್ ಬಾಬು ಇಬ್ಬರೂ ಪ್ರೀತಿಸುತ್ತಿದ್ದಾರೆ ಎನ್ನುವ ಮಾತು ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿದೆ. ಅಲ್ಲದೇ ಇಬ್ಬರೂ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು ಎನ್ನಲಾಗಿತ್ತು. ಆದರೀಗ ಇವರಿಬ್ಬರು ಗುಟ್ಟಾಗಿ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಪವಿತ್ರಾ ಮತ್ತು ನರೇಶ್ ಇಬ್ಬರು ಅನೇಕ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಸಿನಿಮಾದಿಂದ ಪ್ರಾರಂಭವಾದ ಸ್ನೇಹ ಬಳಿಕ ಪ್ರೀತಿಗೆ ತಿರುಗಿತ್ತು. ನಂತರ ಇಬ್ಬರು ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು. ಇದೀಗ ಮದುವೆಯಾಗಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಪವಿತ್ರಾ ಲೋಕೇಶ್ ಮತ್ತು ನರೇಶ್ ಬಾಬು ಇಬ್ಬರು ಮಹಾಬಲೇಶ್ವರ ದೇವಸ್ಥಾನಕ್ಕೆ ಜೊತೆಯಾಗಿ ಭೇಟಿ ನೀಡಿದ್ದರು. ಇಬ್ಬರು ಸ್ವಾಮೀಜಿಯನ್ನು ಭೇಟಿಯಾಗಿ ಬಳಿಕ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಪವಿತ್ರಾ ಲೇಕೇಶ್ ಹೆಚ್ಚಾಗಿ ನರೇಶ್ ಜೊತೆ ಕಾಣಿಸಿಕೊಳ್ಳುತ್ತಿದ್ದರು. ಯಾವುದೇ ಕ್ರಾರ್ಯಕ್ರಮಕ್ಕಾದರೂ ಜೊತೆಯಲ್ಲೇ ಎಂಟ್ರಿ ಕೊಡುತ್ತಿದ್ದರು. ಅಲ್ಲದೇ ಇತ್ತೀಚಿಗೆ ನಡದೆ ಪವಿತ್ರಾ ಲೋಕೇಶ್ ಹುಟ್ಟುಹಬ್ಬದ ಸಂಭ್ರಮದಲ್ಲೂ ನರೇಶ್ ಜೊತೆಗಿದ್ದರು. ಇಬ್ಬರು ಒಟ್ಟಿಗೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವ ಅನೇಕ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಈಗಾಗಲೇ ಮೂರು ಮದುವೆಯಾಗಿರುವ ನಟನೊಂದಿಗೆ ಪವಿತ್ರಾ ಲೋಕೇಶ್ ಮ್ಯಾರೇಜ್?
ಈಗಾಗಲೇ 3 ಮದುವೆಯಾಗಿರುವ ನರೇಶ್ ಬಾಬು
ತೆಲುಗು ನಟ ನರೇಶ್ ಬಾಬು ತೆಲುಗಿನ ಸೂಪರ್ ಸ್ಟಾರ್ ಕೃಷ್ಣ ಮತ್ತು ವಿಜಯ ನಿರ್ಮಲಾ ಅವರ ಪುತ್ರ. ಈಗಾಗಲೇ ನರೇಶ್‌ಗೆ ಮೂರು ಮದುವೆಯಾಗಿದೆ. ಆದರೆ ಈ ಮೂರು ಮದುವೆಯೂ ಮುರಿದು ಬಿದ್ದಿದೆ. ಮೂವರಿಗೂ ನರೇಶ್ ವಿಚ್ಛೇದನ ನೀಡಿದ್ದಾರೆ. ಇದೀಗ ಪವಿತ್ರಾ ಲಕೋಶ್ ಜೊತೆ ನಾಲ್ಕನೇ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಆದರೆ ಪವಿತ್ರಾ ಲೋಕೇಶ್ ಅವರು ಪತಿಯಿಂದ ವಿಚ್ಛೇದನ ಪಡೆಯದೆ ಇರುವ ಕಾರಣ ಅಧಿಕೃತ ಗೊಳಿಸುತ್ತಿಲ್ಲ ಎನ್ನಲಾಗಿದೆ.
2007ರಲ್ಲಿ ಪವಿತ್ರಾ ಲೋಕೇಶ್ ಮದುವೆ
ಸ್ಯಯಾಂಡಲ್ ವುಡ್ ನಟಿ ಪವಿತ್ರಾ ಲೋಕೇಶ್ 2007ರಲ್ಲಿ ನಟ ಸುಚೇಂದ್ರ ಪ್ರಸಾದ್ ಅವರನ್ನು ಮದುವೆಯಾಗಿದ್ದರು. ಪವಿತ್ರಾ ಲೋಕೇಶ್ ಹಾಗೂ ಸುಚೇಂದ್ರ ಪ್ರಸಾದ್ ಇಬ್ಬರಿಗೂ ಅದು ಎರಡನೇ ಮದುವೆಯಾಗಿತ್ತು. ಆದರೂ ಇಬ್ಬರ ವೈವಾಹಿಕ ಜೀವನದಲ್ಲಿ ಸಾಮರಸ್ಯವಿಲ್ಲದ ಕಾರಣ ಇಬ್ಬರು ಕಳೆದ ನಾಲ್ಕೈದು ವರ್ಷಗಳಿಂದ ಬೇರೆ ಬೇರೆ ವಾಸಿಸುತ್ತಿದ್ದಾರೆ ಎನ್ನುವ ಗುಸು ಗುಸು ಸ್ಯಾಂಡಲ್ ವುಡ್‌ನಲ್ಲಿ ಕೇಳಿಬರುತ್ತಿದೆ. ಸುಚೇಂದ್ರ ಪ್ರಸಾದ್ ಅವರಿಂದ ವಿಚ್ಛೇದನ ಪಡೆದ ಬಳಿಕ ನರೇಶ್ ಜೊತೆಗಿನ ಮದುವೆಯನ್ನು ಅಧಿಕೃತಗೊಳಿಸಲು ಕಾಯುತ್ತಿದ್ದಾರೆ ಎನ್ನಲಾಗಿದೆ.
ಗಂಡನ ಮನೆಯಿಂದ ನನಗೆ ಏನೂ ಸಿಗೋಲ್ಲ, ನಿಜವಾದ ಪ್ರೀತಿಗೆ ಬೆಲೆ ಇಲ್ಲ: ನಟಿ Pavitra Lokesh
ಆದಿ ಲೋಕೇಶ್ ಹೇಳಿದ್ದೇನು?
ಸಹೋದರಿ ಪವಿತ್ರಾ ಮದುವೆ ವಿಚಾವನ್ನು ಆದಿ ಲೋಕೇಶ್ ತಳ್ಳಿ ಹಾಕಿದ್ದಾರೆ. ಈ ಬಗ್ಗೆ ಹೆಚ್ಚು ಮಾತನಾಡಲು ನಿರಾಕರಿಸುವ ಆದಿ ಲೋಕೇಶ್ ಇದು ಸುಳ್ಳು, ಈ ಎಲ್ಲಾ ನಾನ್‌ಸೆನ್ಸ್‌ನಿಂದ ಹೊರಬರಲು ಬಯಸುತ್ತೇನೆ. ಕ್ಷಮಿಸಿ ಎಂದು ಹೇಳಿದ್ದಾರೆ. ಆದರೆ ಪವಿತ್ರಾ ಲೋಕೇಶ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಇಷ್ಟು ದೊಡ್ಡ ಮಟ್ಟದಲ್ಲಿ ಮದುವೆ ಸುದ್ದಿ ವೈರಲ್ ಆಗಿರುವುದರಿಂದ ಪವಿತ್ರಾ ಪ್ರತಿಕ್ರಿಯೆ ಏನಾಗಿರಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಮದುವೆಯಾಗಿಲ್ಲ ಎಂದ ನರೇಶ್ ಬಾಬು ಪಿಆರ್‌ಓ
ಈ ಕುರಿತಾಗಿ ನರೇಶ್ ಬಾಬು ಅವರ ಪಿಆರ್‌ಓ ಅವರನ್ನು ಏಷ್ಯಾನೆಟ್ ನ್ಯೂಸ್ ಸಂಪರ್ಕ ಮಾಡಿದ್ದು, ಇದು ಪೂರ್ತಿ ಸುಳ್ಳು. ನರೇಶ್ ಬಾಬು ಅವರ ಮದುವೆಯಾಗಿಲ್ಲ ಎಂದು ಹೇಳಿದ್ದಾರೆ. ಆದರೆ, ತೆಲುಗಿನ ಬಹುತೇಕ ಎಲ್ಲಾ ಸಿನಿಮಾ ಪತ್ರಿಕೆಗಳು ನರೇಶ್ ಬಾಬು ಹಾಗೂ ಪವಿತ್ರಾ ಲೋಕೇಶ್ ಈಗಾಗಲೇ ಮದುವೆಯಾಗಿದ್ದಾರೆ ಎಂದು ವರದಿ ಮಾಡಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.