ರಿತು ಕಪೂರ್ ಡಾನ್ಸ್‌ ಮಾಡಿದ್ರು ಅಂತ ಅತ್ತೆ ಮನೆಯವರ ತರ ಆಡ್ತಿರೋ ಟ್ರೋಲಿಗರು

By Anusha Kb  |  First Published Jun 21, 2022, 10:52 AM IST

ಡಾನ್ಸ್‌ ರಿಯಾಲಿಟಿ ಶೋದ ಪ್ರೋಮೊವೊಂದರಲ್ಲಿ ಕಾರಿನ ಮೇಲೆ ನಿಂತು ನಟಿ  ನೀತು ಕಪೂರ್ ಡಾನ್ಸ್ ಮಾಡುತ್ತಿದ್ದು, ಇದಕ್ಕೆ ನೆಟ್ಟಿಗರು ಅವರನ್ನು ತೀವ್ರವಾಗಿ ಟ್ರೋಲ್ ಮಾಡಿದ್ದಾರೆ. 


ಹಿರಿಯ ನಟಿ ನೀತು ಕಪೂರ್ ಹಲವು ವರ್ಷಗಳಿಂದ ಸಿನಿಮಾ ರಂಗದಿಂದ ದೂರವೇ ಉಳಿದಿದ್ದರು. ಆದರೆ ಪತಿ ರಿಷಿ ಕಪೂರ್ ನಿಧನದ ನಂತರ ಖಿನ್ನತೆಗೆ ಜಾರಿದ ಅವರು ಇತ್ತೀಚೆಗಷ್ಟೇ ಮತ್ತೆ ತೆರೆ ಮೇಲೆ ಬಂದಿದ್ದಾರೆ. ಪ್ರಸ್ತುತ ನೀತು ಕಪೂರ್ ಡಾನ್ಸ್ ದಿವಾನೆ ಜೂನಿಯರ್ ಎಂಬ ರಿಯಾಲಿಟಿ ಶೋಗೆ ತೀರ್ಪುಗಾರರಾಗಿ ಭಾಗವಹಿಸಿದ್ದು, ಈ ಮೂಲಕ ಅವರು ತಮ್ಮ ಪತಿಯ ನಿಧನದ ನೋವಿನಿಂದ ನಿಧಾನವಾಗಿ ಹೊರಗೆ ಬಂದು ಬದುಕನ್ನು ಸಂಭ್ರಮಿಸುತ್ತಿದ್ದಾರೆ. 

ಇತ್ತೀಚೆಗೆ ಸಿನಿಮಾಗಳಲ್ಲಿಯೂ ಮತ್ತೆ ನೀತು ನಟಿಸುತ್ತಿದ್ದಾರೆ. ಅವರು ತೀರ್ಪುಗಾರರಾಗಿರುವ ಡಾನ್ಸ್ ದಿವಾನೆ ಜೂನಿಯರ್ ಶೋದ ಫ್ರೋಮೊವೊಂದು ಬಿಡುಗಡೆಯಾಗಿದೆ. ಅದರಲ್ಲಿ ನೀತು ಕಾರಿನ ಮೇಲೆ ನಿಂತು ಶಮ್ಮಿ ಕಪೂರ್ ನಟನೆಯ ಖ್ಯಾತ ಹಾಡು 'ಓ ಹಸೀನಾ ಜುಲ್ಫೋನ ವಾಲಿ ಜಾನೆ ಜಹಾನ್'  ಹಾಡಿಗೆ ಕಾರ್ಯಕ್ರಮದ ಸಹ ತೀರ್ಪುಗಾರ ಮಾರ್ಜಿ ಪೆಸ್ಟೊಂಜಿ ಅವರೊಂದಿಗೆ ಡಾನ್ಸ್ ಮಾಡುತ್ತಿದ್ದಾರೆ. ಇಬ್ಬರ ಸಮಾನವಾಗಿ ಹೆಜ್ಜೆ ಹಾಕುತ್ತಿದ್ದು, ನೋಡುಗರಿಗೆ ಖುಷಿ ನೀಡುತ್ತಿದೆ. 

Tap to resize

Latest Videos

ನನ್ನ ನಿರ್ಧಾರ ನೋಡಿ ರಿಷಿ ಕಪೂರ್‌ ತುಂಬಾ ಖುಷಿಪಡಲಿದ್ದಾರೆ: ಅಗಲಿದ ಪತಿಯ ನೆನೆದ ನೀತು

ಆದರೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲಿಗರು ಮಾತ್ರ ಡಾನ್ಸ್ ಮಾಡಿದ್ದಕ್ಕಾಗಿ ನೀತು ಅವರಿಗೆ ಸಿಕ್ಕಾಪಟ್ಟೆ ಕಾಲೆಳೆಯುತ್ತಿದ್ದಾರೆ. ತುಂಬಾ ಚೆನ್ನಾಗಿ ನೀತು ಡಾನ್ಸ್ ಮಾಡುತ್ತಿದ್ದು, ತುಂಬಾ ಫ್ಯಾಷನೇಬಲ್ ಆಗಿ ನೀತು ಕಾಣಿಸುತ್ತಿದ್ದಾರೆ. ಆದಾಗ್ಯೂ ಕೂಡ ಈ ಟ್ರೋಲಿಗರು ಮಾತ್ರ ಅವರನ್ನು ಇರುವಂತೆ  ಇರಲು ಬಿಡುತ್ತಿಲ್ಲ. 

ನೀತು ಅವರೇ ನೀವು ತುಂಬಾ ಚೆನ್ನಾಗಿದ್ದೀರಾ ಆದರೆ ಯಾಕೆ ಇಂತದ್ದನ್ನೆಲ್ಲಾ ಮಾಡುತ್ತಿದ್ದೀರಾ? ನನಗೆ ತುಂಬಾ ಚೀಪ್ ಎನಿಸುತ್ತಿದೆ ನೀವು ಈ ರೀತಿ ಮಾಡುವುದನ್ನು ನೋಡಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನೀವು ಬೇರೆ ವ್ಯಕ್ತಿಯೊಂದಿಗೆ ಡಾನ್ಸ್ ಮಾಡುತ್ತಿರುವುದು ನೋಡಿ ನನಗೆ ಅಸಹ್ಯವಾಗುತ್ತಿದೆ. ರಿಷಿ ನಿಮ್ ಬಗ್ಗೆ ಏನು ಯೋಚನೆ ಮಾಡಬಹುದು. ಸದಾ ಚಟುವಟಿಕೆಯಿಂದ ಇರಬೇಕು ನಿಜ ಆದರೆ ಹೀಗೆ ಬೇರೆಯವರೊಂದಿಗೆ ಡಾನ್ಸ್ ಮಾಡುತ್ತಿರುವುದು ಎಷ್ಟು ಸರಿ ಎಂದು ಅವರು ಇನ್ಯಾರೋ ಕಾಮೆಂಟ್ ಮಾಡಿದ್ದಾರೆ. ನೀತು ತುಂಬಾ ಎಳೆಯ ಪ್ರಾಯ ತನಗೆ ಎಂದು ಭಾವಿಸಿರಬೇಕು ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ. 

ಸೊಸೆ ಬಂದಮೇಲೆ ಮಗ Ranbir Kapoor ತುಂಬಾ ಬದಲಾಗಿದ್ದಾನೆ: ನೀತು ಕಪೂರ್‌

ಒಟ್ಟಿನಲ್ಲಿ ಇವತ್ತಿನ ಸಾಮಾಜಿಕ ಜಾಲತಾಣಗಳು ಅನೇಕರ ಪಾಲಿಗೆ ಎಷ್ಟು ಅದೃಷ್ಟಶಾಲಿಯೋ ಹಾಗೆಯೇ ಸಿನಿಮಾ ಹಾಗೂ ಗಣ್ಯರ ವೈಯಕ್ತಿಕ ಬದುಕಿಗೆ ಮಾರಕವಾಗಿ ಸಂಭವಿಸುತ್ತದೆ. ಅವರು ಏನು ಮಾಡಬೇಕು ಏನು ಮಾಡಬಾರದು ಎಂಬುದನ್ನು ತಾವೇ ನಿರ್ಧರಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅನಾರೋಗ್ಯಕರವಾಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅವರು ಹೇಗಿದ್ದಾರೋ ಹಾಗೆ ಅವರನ್ನು ಬಿಡಲು ಜನ ಸಿದ್ಧರಿಲ್ಲ. ಅವರು ಹೀಗೆಯೇ ಜೀವಿಸಬೇಕು ಎಂಬ ಚೌಕಟ್ಟನ್ನು ನಿರ್ಮಿಸಲಾಗುತ್ತಿದೆ.

ನೀತು ಕೊನೆಯದಾಗಿ 2013 ರ ಬೇಷರಮ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲಿ ಅವರು ದಿವಂಗತ ನಟ ಮತ್ತು ಅವರ ಪತಿ ರಿಷಿ ಕಪೂರ್ ಮತ್ತು ಅವರ ಮಗ ರಣಬೀರ್ ಕಪೂರ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಪತಿ ರಿಷಿ ಕಪೂರ್ ಅಗಲಿಕೆಯ ನಂತರ ಖಿನ್ನತೆಗೆ ಜಾರಿದ ನಟಿ ನೀತು ಕಪೂರ್ ದೀರ್ಘ ಬ್ರೇಕ್ ಪಡೆದು ಜಗ್‌ಜಗ್ ಜೀಯೋ (JugJugg Jeeyo) ಸಿನಿಮಾ ಮೂಲಕ ಮತ್ತೆ ಬಂದಿದ್ದಾರೆ. 

ಇದರ ಟ್ರೈಲರ್‌ ರಿಲೀಸ್ ವೇಳೆ ಮನಬಿಚ್ಚಿ ಮಾತನಾಡಿದ ನೀತು ಕಪೂರ್, ಪ್ರಸ್ತುತ ನನ್ನನ್ನು ನೋಡಿ ನನ್ನ ಪತಿ ರಿಷಿ ಕಪೂರ್ ತುಂಬಾ ಖುಷಿ ಪಡಲಿದ್ದಾರೆ ಎಂದು ಹೇಳಿದ್ದರು. ನೀತು ಅವರು ಈ ಚಿತ್ರದಲ್ಲಿ ಅನಿಲ್ ಕಪೂರ್ (Anil Kapoor), ವರುಣ್ ಧವನ್ (Varun Dhawan) ಮತ್ತು ಕಿಯಾರಾ ಅಡ್ವಾಣಿ (Kiara Advani) ಅವರೊಂದಿಗೆ ಸ್ಕ್ರೀನ್  ಹಂಚಿಕೊಂಡಿದ್ದಾರೆ. ಮೇ.22 ರಂದು ನಡೆದ  ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನೀತು ಕಪೂರ್ ಬೆಳ್ಳಿತೆರೆಗೆ ಮರಳಿದ ತಮ್ಮ ನಿರ್ಧಾರ ಹಾಗೂ ಇದರಿಂದ ರಿಷಿ ಕಪೂರ್ ಅತ್ಯಂತ ಖುಷಿ ಪಡಲಿದ್ದಾರೆ ಎಂದು ಹೇಳಿದ್ದರು.

click me!