ದುಡ್ಡಿಗಾಗಿ ಎಲ್ಲಾ ತೋರಿಸೋ ನಟಿಯರಿಗೆ ಮಹಿಳಾ ಸುರಕ್ಷತೆ ಪ್ರಶ್ನೆ ಕೇಳ್ತೀರಾ? ಪ್ರಶ್ನೆಗೆ ಸಮಂತಾ ಕಕ್ಕಾಬಿಕ್ಕಿ

By Suchethana D  |  First Published Aug 21, 2024, 5:39 PM IST

ಮಹಿಳಾ ಸುರಕ್ಷತೆಯ ಬಗ್ಗೆ ನಟಿ ಸಮಂತಾ ಅವರಿಗೆ ಪ್ರಶ್ನೆ ಕೇಳಿದಾಗ ಕಕ್ಕಾಬಿಕ್ಕಿಯಾದ ನಟಿ ಹೇಳಿದ್ದೇನು? ಇದನ್ನು ನೋಡಿ ನೆಟ್ಟಿಗರು ಹೇಳ್ತಿರೋದೇನು?
 


ಚಿತ್ರ ತಾರೆಯರು ಅದರಲ್ಲಿಯೂ ಹೆಚ್ಚಾಗಿ ಬಾಲಿವುಡ್‌ನ ಬಹುತೇಕ ನಟಿಯರು ಇಂದು ಯಾವ ಮಟ್ಟಿಗೆ ಇಳಿದಿದ್ದಾರೆ ಎನ್ನುವುದು ಬೇರೆ ಹೇಳಬೇಕಾಗಿಲ್ಲ. ಮೈಮುಚ್ಚಬೇಕು ಎನ್ನುವ ಕಾರಣಕ್ಕೆ ನಾಮ್‌ಕೇವಾಸ್ತೆ ಎನ್ನುವಂತೆ ತುಂಡು ಬಟ್ಟೆ ಹಾಕಿಕೊಳ್ಳುವುದು ಸ್ಟಾರ್‌ ನಟಿಯರು ಎನಿಸಿಕೊಂಡವರಿಗೆ ಮಾಮೂಲಾಗಿಬಿಟ್ಟಿದೆ. ಇನ್ನು ಚಿತ್ರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧ ಎನ್ನುವ ಕಾರಣ ನೀಡಿ ಸಂಪೂರ್ಣ ಬೆತ್ತಲಾಗಿ ನ್ಯಾಷನಲ್‌ ಕ್ರಷ್‌ ಎನಿಸಿಕೊಂಡವರೂ ನಮ್ಮ ಕಣ್ಣಮುಂದೆಯೇ ಇದ್ದಾರೆ. ಇನ್ನು ಇಂಟಿಮೇಟ್‌ ದೃಶ್ಯಗಳಲ್ಲಿ ಹುಡುಗರೇ ನಾಚಿಕೊಳ್ಳುವಂತೆ ನಟಿಯರು ನಟಿಸುವುದು ಬಹುತೇಕ ಚಿತ್ರಗಳನ್ನು ನೋಡಿದರೆ ತಿಳಿದುಬರುತ್ತದೆ. ಇಂಥ ನಟಿಯರನ್ನೇ ಅನುಸರಿಸಿ ಸಮಾಜದಲ್ಲಿ ಹಲವಾರು ಮಂದಿ ಫ್ಯಾಷನ್‌ ಹೆಸರಿನಲ್ಲಿ ಬಟ್ಟೆ ತೊಡುವುದೂ ಕೂಡ ನಡೆದೇ ಇದೆ.

ಇದರ ನಡುವೆಯೇ, ಈಗ ಮಹಿಳಾ ಸುರಕ್ಷತೆಯ ಬಗ್ಗೆ ಪ್ರಶ್ನೆ ಶುರುವಾಗಿದೆ. ಕೋಲ್ಕತಾದಲ್ಲಿ ವೈದ್ಯೆಯ ಮೇಲೆ ಬರ್ಬರ ಅತ್ಯಾಚಾರ- ಕೊಲೆ ಪ್ರಕರಣದ ನಂತರ ಮತ್ತೆ ಮಹಿಳೆಯರ ಸುರಕ್ಷತೆಯ ಪ್ರಶ್ನೆ ಎತ್ತಲಾಗುತ್ತಿದೆ. ಇಂಥ ಘಟನೆಗಳು ಸಂಭವಿಸಿದಾಗ ಒಂದಷ್ಟು ದಿನ ಇಂಥ ಪ್ರಶ್ನೆ ಸಮಾಜದಲ್ಲಿ, ಸೋಷಿಯಲ್‌ ಮೀಡಿಯಾಗಳಲ್ಲಿ, ಮಾಧ್ಯಮಗಳಲ್ಲಿ ಸದ್ದು ಮಾಡುತ್ತಲೇ ಇರುತ್ತವೆ. ಇನ್ನು ಸೆಲೆಬ್ರಿಟಿಗಳಿಗೆ ಇದರ ಪ್ರಶ್ನೆ ಕೇಳಿದರೆ ಪಾಪರಾಜಿಗಳಿಗೂ ಲೈಕ್, ಶೇರ್‍ ಹೆಚ್ಚು ಬರುತ್ತದೆ ಎನ್ನುವ ಕಾರಣಕ್ಕೆ ಅವರ ಮುಂದೆ ಹೋಗಿ ಮೈಕ್‌ ಹಿಡಿಯಲಾಗುತ್ತದೆ.

Tap to resize

Latest Videos

ಜನ ಮೆಚ್ಚಿದ ಸಂಸಾರ ಅವಾರ್ಡ್‌ಗೆ ನಿವೇದಿತಾ ಗೌಡ ಎಂಟ್ರಿ! ವಿಡಿಯೋ ನೋಡಿ ಬಿಸಿಬಿಸಿ ಚರ್ಚೆ ಶುರು

ಇದೀಗ ಮಹಿಳಾ ಸುರಕ್ಷತೆ ಕುರಿತು ನಟಿ ಸಮಂತಾ ರುತ್‌ ಪ್ರಭು ಅವರಿಗೆ ಪ್ರಶ್ನೆ ಕೇಳಲಾಗಿದೆ. ಯಾವುದೋ ಸಿನಿಮಾದ ಪ್ರಶ್ನೆಯ ನಿರೀಕ್ಷೆಯಲ್ಲಿದ್ದಂತಿದ್ದ ನಟಿ ಮಹಿಳೆಯರ ಸುರಕ್ಷತೆಯ ಪ್ರಶ್ನೆ ಕೇಳುತ್ತಿದ್ದಂತೆಯೇ ಮುಖ ತಿರುಚಿಕೊಂಡಿದ್ದಾರೆ. ಏಕಾಏಕಿ ಎದುರಾಗಿರುವ ಈ ಪ್ರಶ್ನೆಗೆ ಏನು ಉತ್ತರಿಸುವುದು ಎಂದು ತಿಳಿಯದೇ ಒದ್ದಾಡಿದ್ದಾರೆ. ಮಹಿಳೆಯರ ಸುರಕ್ಷಿತೆ ಇಂದಿನ ಆದ್ಯತೆ ಆಗಿದೆ ಎನ್ನುವ ವಾಕ್ಯವನ್ನೇ ತಿರುಗಾ ಮುರುಗಾ ನಾಲ್ಕೈದು ಸಲ ಹೇಳಿದ್ದಾರೆ ಬಿಟ್ಟರೆ, ಸುರಕ್ಷತೆಯ ಬಗ್ಗೆ ಏನು ಹೇಳಬೇಕು ಎನ್ನುವುದೇ ಅವರಿಗೆ ತೋಚದ ಸ್ಥಿತಿ ಆಗಿದ್ದು, ಅದರ ವಿಡಿಯೋ ವೈರಲ್‌ ಆಗಿದೆ.

ಈ ವಿಡಿಯೋಗೆ ನೆಟ್ಟಿಗರು ಗರಂ ಆಗಿದ್ದಾರೆ. ಸಮಂತಾ ಅವರ ಊ ಆಂಟಾವಾ ಹಾಡನ್ನು ನೆನಪಿಸಿರೋ ನೆಟ್ಟಿಗರು, ನಟಿಯರ ಉಡುಗೆ ತೊಡುಗೆ ನೋಡಿದ ಮೇಲೂ ಮಹಿಳೆಯರ ಸುರಕ್ಷತೆಯ ಬಗ್ಗೆ ಅವರಿಗೆ ಪ್ರಶ್ನೆ ಕೇಳುತ್ತೀರಾ ಎಂದು ಪ್ರಶ್ನಿಸುತ್ತಿದ್ದಾರೆ. ಈ ಪ್ರಶ್ನೆ ಕೇಳಿದಾಗ ನಟಿಯ ಮುಖದಲ್ಲಾದ ಬದಲಾವಣೆಯನ್ನು ಉಲ್ಲೇಖಿಸಿರುವ ನೆಟ್ಟಿಗರು, ಇಂಥದ್ದೊಂದು ಚಿಕ್ಕ ಪ್ರಶ್ನೆಗೆ ಉತ್ತರಿಸಲು ಇವರಿಗೆ ಸಾಧ್ಯವಾಗಲಿಲ್ಲ. ಅವರ ಮುಖದ ಬದಲಾವಣೆ ನೋಡಿ. ಇಂಥ ನಟಿಯರು ಹಾಗೂ ಇವರಿಂದ ಪ್ರೇರೇಪಿತರಾಗಿ ಕೆಲವು ಹೆಣ್ಣುಮಕ್ಕಳು ತೊಡುವ ಅಸಭ್ಯ ಎನಿಸುವ ಬಟ್ಟೆ- ಬರೆ ನೋಡಿಯೇ ಪ್ರಚೋದನೆಗೆ ಒಳಗಾಗುವವರು ಅಮಾಯಕರ ಮೇಲೆ ಅತ್ಯಾಚಾರ ಎಸಗುತ್ತಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. 

ಪ್ರೀತಿ ಜಿಂಟಾಗೆ ಗರ್ಭಿಣಿ ಮಾಡುವೆ ಎಂದ ಶಾರುಖ್​! ವೈರಲ್​ ವಿಡಿಯೋ ಕೇಳಿ ಥೂ ಅಸಹ್ಯ ಅಂತಿರೋ ಫ್ಯಾನ್ಸ್​

 

click me!