ಸ್ತ್ರೀ 2 ಯಶಸ್ಸಿನ ಅಲೆಯಲ್ಲಿರುವ ನಟಿ ಶ್ರದ್ಧಾ ಕಪೂರ್ ಇದೀಗ ಹೊಸ ದಾಖಲೆ ನಿರ್ಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯನ್ನೇ ಹಿಂದಿಕ್ಕಿದ್ದಾರೆ. ಇನ್‌ಸ್ಟಾದಲ್ಲಿ ಶ್ರದ್ಧಾ ಮಾಡಿದ ಮೋಡಿ ಏನು?
ಮುಂಬೈ(ಆ.21) ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅಭಿನಯದ ಸ್ತ್ರೀ 2 ಚಿತ್ರ ಭಾರಿ ಯಶಸ್ಸು ಕಂಡಿದೆ. ಬಾಕ್ಸ್ ಅಫೀಸ್‌ನಲ್ಲೂ ಬಾರಿ ಗಳಿಕೆಯೊಂದಿಗೆ ಈ ಚಿತ್ರ ಮುನ್ನುಗ್ಗುತ್ತಿದೆ. ಈ ಯಶಸ್ಸಿನ ಅಲೆಯಲ್ಲಿರುವ ಶ್ರದ್ಧಾ ಕಪೂರ್ ಅಭಿಮಾನಿಗಳ ಬಳಗವೂ ಹೆಚ್ಚಾಗಿದೆ. ಇದೀಗ ಶ್ರದ್ಧಾ ಕಪೂರ್ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ ಬರೋಬ್ಬರಿ 91.4 ಮಿಲಿಯನ್‌ಗೆ ಎರಿಕೆಯಾಗಿದೆ. ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆಯಲ್ಲಿ ಇದೀಗ ನಟಿ ಶ್ರದ್ಧಾ ಕಪೂರ್, ಪ್ರಧಾನಿ ನರೇಂದ್ರ ಮೋದಿಯನ್ನೇ ಹಿಂದಿಕ್ಕಿದ್ದಾರೆ. ಪ್ರಧಾನಿ ಮೋದಿ ಇನ್‌ಸ್ಟಾಗ್ರಾಂನಲ್ಲಿ 91.3 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಟ್ವಿಟರ್‌ನಲ್ಲಿ ಮೋದಿ 101.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
ಇದೀಗ ಇನ್‌ಸ್ಟಾಗ್ರಾಂನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿದ ಭಾರತದ ಸೆಲೆಬ್ರೆಟಿಗಳ ಪೈಕಿ ನಟಿ ಶ್ರದ್ದಾ ಕಪೂರ್ ಮೂರನೇ ಸ್ಥಾನಕ್ಕೇರಿದ್ದಾರೆ. ಮೊದಲ ಸ್ಥಾನದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಬರೋಬ್ಬರಿ 271 ಮಿಲಿಯನ್ ಇನ್‌ಸ್ಟಾ ಫಾಲೋವರ್ಸ್ ಹೊಂದಿದ್ದಾರೆ. ಎರಡನೇ ಸ್ಥಾನದಲ್ಲಿರುವ ನಟಿ ಪ್ರಿಯಾಂಕಾ ಚೋಪ್ರಾ 91.8 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಮೂರನೇ ಸ್ಥಾನವವನ್ನು ಇದೀಗ ಶ್ರದ್ಧ ಕಪೂರ್ ಆಕ್ರಮಿಸಿಕೊಂಡರೆ, ನರೇಂದ್ರ ಮೋದಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ವಿಶ್ವ ನಾಯಕ ಮೋದಿಗೆ 10 ಕೋಟಿ ‘ಎಕ್ಸ್’ ಫಾಲೋವರ್ಸ್: ಮೈಲಿಗಲ್ಲು!
ಬಾಲಿವುಡ್ ನಟಿ ಅಲಿಯಾ ಭಟ್ 85.1 ಮಿಲಿಯನ್ ಫಾಲೋವರ್ಸ್ ಹೊಂದಿದ್ದರೆ, ದೀಪಿಕಾ ಪಡುಕೋಣೆ 79.8 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಕತ್ರಿನಾ ಕೈಪ್ 80.4 ಮಿಲಿಯನ್, ಗಾಯಕಿ ನೇಹಾ ಕಕ್ಕರ್ 78.7 ಮಿಲಿಯನ್, ಊರ್ವಶಿ ರೌಟೇಲಾ 73 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಭಾರತದ ಗರಿಷ್ಠ ಇನ್‌ಸ್ಟಾಗ್ರಾಂ ಫಾಲೋವರ್ಸ್ ಪಟ್ಟಿಯಲ್ಲಿ ನರೇಂದ್ರ ಮೋದಿ 4ನೇ ಸ್ಥಾನದಲ್ಲಿದ್ದಾರೆ. ಆದರೆ ವಿಶ್ವದ ಜನಪ್ರಿಯ ನಾಯಕರ ಪೈಕಿ ನರೇಂದ್ರ ಮೋದಿ ಮೊದಲ ಸ್ಥಾನದಲ್ಲಿದ್ದಾರೆ. ಟ್ವಿಟರ್‌ನಲ್ಲೂ ಪ್ರಧಾನಿ ನರೇಂದ್ರ ಮೋದಿ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
ನಟಿ ಶ್ರದ್ಧಾ ಕಪೂರ್ ಫಾಲೋವರ್ಸ್‌ನಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಅತೀ ಕಡಿಮೆ ಅವಧಿಯಲ್ಲಿ 3ನೇ ಸ್ಥಾನಕ್ಕೇರಿದ ಹೆಗ್ಗಳಿಕೆಗೆ ಪಾತ್ರವಾಗಿದ್ದರೆ. ಶ್ರದ್ಧಾ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸ್ತ್ರೀ 2 ಚಿತ್ರ ಈಗಾಗಲೇ 300 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಇದೀಗ ಬಿಡುಗಡೆಯಾಗಿರುವ ಸ್ತ್ರೀ 2 ಚಿತ್ರ, 2018ರಲ್ಲಿ ಬಿಡುಗಡೆಯಾದ ಸ್ತ್ರೀ ಚಿತ್ರದ 2ನೇ ಭಾಗವಾಗಿದೆ.
ನಾಯಕತ್ವ ಬದಲಾವಣೆಗೆ ಆಕ್ರೋಶ, 1 ತಾಸಿನಲ್ಲಿ 4 ಲಕ್ಷ ಫಾಲೋವರ್ಸ್ ಕಳೆದುಕೊಂಡ ಮುಂಬೈ ಇಂಡಿಯನ್ಸ್!