ಬೆರಳಿಗೆ ಸಣ್ಣ ಗಾಯವಾಗಿದ್ದಕ್ಕೆ ಆಸ್ಪತ್ರೆಗೆ ದಾಖಲಾದ ನಟಿ; ನೀವು ಭಾರತದ ಮೊದಲ ಮಹಿಳೆ ಎಂದ ನೆಟ್ಟಿಗರು!

By Mahmad Rafik  |  First Published Aug 21, 2024, 5:10 PM IST

ಕಳೆದ ಕೆಲವು ದಿನಗಳಿಂದ ಲೀಕ್ ವಿಡಿಯೋದಿಂದಾಗಿ ಈ ನಟಿ ಸುದ್ದಿಯಲ್ಲಿದ್ದರು. ಇದೀಗ ತಾವೇ ಶೇರ್ ಮಾಡಿಕೊಂಡಿರುವ ವಿಡಿಯೋದಿಂದಾಗಿ ಟ್ರೋಲ್ ಆಗುತ್ತಿದ್ದಾರೆ.


ಮುಂಬೈ: ತರಕಾರಿ ಕತ್ತರಿಸುವಾಗ ಎಷ್ಟೇ ಅಲರ್ಟ್ ಆಗಿದ್ರೂ ಕೆಲವೊಮ್ಮೆ ಚಾಕು ತಾಗಿ ಗಾಯವಾಗುತ್ತದೆ. ಸಾಮಾನ್ಯ ಮಹಿಳೆಯರು ಈ ರೀತಿಯ ಗಾಯಗಳಾದ್ರೆ ನೀರಿನಲ್ಲಿ ಕೈ ತೊಳೆದುಕೊಂಡು ತಮ್ಮ ಕೆಲಸ ಮುಂದುವರಿಸುತ್ತಾರೆ. ಗಾಯದಿಂದ ರಕ್ತ ಬಂದ್ರೆ ಮಸಾಲೆ ಡಬ್ಬದಲ್ಲಿರೋ ಅರಿಶಿನ ಪುಡಿ ಹಚ್ಚಿಕೊಳ್ಳುತ್ತಾರೆ. ಬಾಲಿವುಡ್ ನಟಿ ಊರ್ವಶಿ ರೌಥೆಲಾ ಬೆರಳಿಗೆ ಗಾಯವಾಗಿದ್ದಕ್ಕೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ  ಪಡೆದುಕೊಳ್ಳುತ್ತಿದ್ದಾರೆ. ಬೆರಳಿಗೆ ಗಾಯವಾಗಿರುವ ಮತ್ತು  ಐಸಿಯುನ ಚೇರ್‌ನಲ್ಲಿ ಕುಳಿತಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ನಟಿ ನಾನು ಶೀಘ್ರವೇ ಗುಣಮುಖಳಾಗುವಂತೆ ಪ್ರಾರ್ಥಿಸಿ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಅಪ್ಲೋಡ್ ಆಗುತ್ತಿದ್ದಂತೆ ನೆಟ್ಟಿಗರು ನಟಿಯ ವಿಡಿಯೋಗೆ ತಮಾಷೆಯಾಗಿ ಕಮೆಂಟ್ ಮಾಡುತ್ತಿದ್ದಾರೆ. 

ಸುಪ್ರಿಯೋ ಎಂಬ ಖಾತೆಯಿಂದ ಬೆರಳಿಗೆ ಸಣ್ಣ ಗಾಯವಾಗಿ ಆಸ್ಪತ್ರೆಗೆ ದಾಖಲಾದ ಮೊದಲ ಭಾರತೀಯ ಮಹಿಳೆ ಎಂಬ ಕಮೆಂಟ್ ಬಂದಿದೆ. ಈ ಕಮೆಂಟ್‌ಗ ಎರಡು ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿವೆ. ಕೆಲವರು ತಮಾಷೆಯಾಗಿ ಈ ಗಾಯಕ್ಕೆ ಶಸ್ತ್ರಚಿಕಿತ್ಸೆಯ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ. ಇದೊಂದು ಅಂತರಾಷ್ಟ್ರೀಯ ಮಟ್ಟದಲ್ಲಾದ ಗಾಯ ಎಂದಿದ್ದಾರೆ. ಬೆರಳಿಗೆ ಗಾಯ ಮಾಡಿಕೊಂಡು ದೇಶದ ಮೊದಲ ಮಹಿಳೆ ಎಂಬ ಬಿರುದು ನಿಮ್ಮದಾಗಲಿದೆ ಎಂದು ಶುಭಾಶಯಗಳನ್ನು ತಿಳಿಸಿದ್ದಾರೆ. ಊರ್ವಶಿ ಬೆರಳಿಗೆ ಗಾಯ ಆಗಿದ್ದು ಹೇಗೆ ಎಂಬುದರ ಬಗ್ಗೆ ತಿಳಿದು ಬಂದಿಲ್ಲ.

Tap to resize

Latest Videos

ಅಯ್ಯೋಯ್ಯೋ ತುಂಬಾ ರಕ್ತಸ್ರಾವ ಆಗಿದೆ ಅಲ್ಲವಾ? ನಿಮ್ಮದು ಯಾವ ಗ್ರೂಪ್ ಅಂತೇಳಿ, ರಕ್ತದಾನಿಗಳನ್ನು ಹುಡುಕೋಣ. ಒಂದು ಸಾರಿ ಕಮೆಂಟ್‌ ಬಾಕ್ಸ್‌ಗೆ ಬಂದು ನೋಡಿ. ಇಷ್ಟು ಗಾಯವಾಗಿದ್ದಕ್ಕೆ ಪೋಸ್ಟ್ ಮಾಡಿಕೊಂಡಿದ್ದಕ್ಕೆ ನಿಮಗೆ ನಾಚಿಕೆ ಆಗಲ್ಲವೇ ಎಂದು ನೆಟ್ಟಿಗನೋರ್ವ ತರಾಟೆ ತೆಗೆದುಕೊಂಡಿದ್ದಾರೆ. ಸಿಮ್ರನ್‌ಪ್ರೀತ್ ಎಂಬವರು, ಹುಡುಗಿಯರು ಹುಡುಗರ ರಕ್ತವನ್ನು ಇದಕ್ಕಿಂತ ಹೆಚ್ಚು ಕುಡಿದಿರುತ್ತಾರೆ. ಒಂದು ಹನಿ ರಕ್ತ ಹೋದ್ರೆ ಏನೂ ಆಗಲ್ಲ. ಈ ರೀತಿಯ ಪೋಸ್ಟ್‌ಗಳನ್ನು ಹಂಚಿಕೊಂಡು ಟ್ರೋಲ್ ಆಗಬೇಡಿ ಎಂದಿದ್ದಾರೆ. ಈ ಕಮೆಂಟ್‌ಗೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು, ಊರ್ವಶಿಗೆ ಸದಾ ಸುದ್ದಿಯಲ್ಲಿರಬೇಕೆಂಬ ಆಸೆ ಇದ್ದಂತೆ ಕಾಣಿಸುತ್ತದೆ ಎಂದಿದ್ದಾರೆ. ನಿಮ್ಮ ಬೆರಳಿನ ರಕ್ತ ನೋಡಿ ನನಗೆ ಹೃದಯಾಘಾತ ಆಯ್ತು ಎಂದು ತಮಾಷೆ ಮಾಡಿದ್ದಾರೆ. ಅಡುಗೆ ಮನೆಯಲ್ಲಿ ಮಹಿಳೆಯರು ಎಷ್ಟು ಬಾರಿ ಇಂತಹ ಗಾಯಗಳನ್ನು ಮಾಡಿಕೊಂಡಿರುತ್ತಾರೆ. ಇದಕ್ಕೆ ಲೆಕ್ಕವೇ ಇರಲ್ಲ ಎಂದಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ದರ್ಶನ್ ಸಿನಿಮಾ ನಟಿಯ ಸ್ನಾನದ ವಿಡಿಯೋ

ಬಾತ್‌ರೂಮ್ ವಿಡಿಯೋ ಲೀಕ್!

ಒಂದು ತಿಂಗಳ ಹಿಂದೆಯಷ್ಟೇ ಊರ್ವಶಿ ರೌಥೆಲಾರದ್ದು ಎನ್ನಲಾದ ಬಾತ್‌ರೂಮ್ ವಿಡಿಯೋ ಲೀಕ್ ಆಗಿತ್ತು. ಈ ವಿಡಿಯೋ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಮೊದಲು ಇದೊಂದು ಸಿನಿಮಾದ ವಿಡಿಯೋ ಕ್ಲಿಪ್ ಎಂದು ಹೇಳಲಾಗಿತ್ತು. ಇದಾದ ಬಳಿಕ ಮ್ಯಾನೇಜರ್ ಜೊತೆ ಊರ್ವಶಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ಹೊರೆಗೆ ಬಂದಿತ್ತು. ಈ ಆಡಿಯೋದಲ್ಲಿ ಕೋಪದಿಂದ ಊರ್ವಶಿ, ವಿಡಿಯೋ ಕ್ಲಿಪ್ ಹೇಗೆ ಹೊರಗೆ ಬಂತು ಎಂದು ಕೇಳುತ್ತಾರೆ. ಏನಾಗುತ್ತಿದೆ ಅಲ್ಲಿ ಎಂದು ಪ್ರಶ್ನೆ ಮಾಡಿದ್ದರು. ಇಷ್ಟೆಲ್ಲಾ ಘಟನೆ ನಡೆದರೂ ಊರ್ವಶಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ. ವಿಡಿಯೋ ನೋಡಿ, ಆಡಿಯೋ ಕೇಳಿದ್ದ ನೆಟ್ಟಿಗರು, ಪೂನಂ ಪಾಂಡೆ ರೀತಿ ಧೈರ್ಯವಾಗಿ ಕಾಮಪ್ರಚೋದಕ ಸಿನಿಮಾಗಳಲ್ಲಿ ನಟಿಸುವೆ ಎಂದು ಹೇಳಿಕೊಳ್ಳಿ. ನೀವು ಬಾಲಿವುಡ್‌ನ ಎರಡನೇ ಪೂನಂ ಪಾಂಡೆ ಎಂದು ಕಮೆಂಟ್ ಮಾಡಲಾಗಿತ್ತು. 

ನೀವ್ ಬಿಡಿ ಎರಡನೇ ಪೂನಂ ಪಾಂಡೆ; ಬಾಲಿವುಡ್ ನಟಿಗೆ ಹಿಂಗಾ ಅನ್ನೋದಾ?

click me!