ನಟಿ ಸಮಂತಾ ಮೆಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವುದು ಗೊತ್ತೇ ಇದೆ. ಆದರೆ, ಆಕೆ ಅದನ್ನೇ ತಲೆಯಲ್ಲಿಟ್ಟುಕೊಂಡು ಕೂತಿಲ್ಲ. ಬದಲಿಗೆ ಒಂದು ಕಡೆ ಕಾಯಿಲೆಗೆ ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತ, ಇನ್ನೊಂದು ಕಡೆ ವೃತ್ತಿ ಜೀವನ, ಫ್ಯಾಷನ್ ಹೀಗೆ ವಿಭಿನ್ನ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ನಟಿ ಸಮಂತಾ ಋತ್ ಪ್ರಭು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದ್ದಾರೆ. ಸೂಕ್ಷ್ಮ ಝರಿ ಎಂಬ್ರಾಯಿಡರಿ ಹೊಂದಿರುವ ರೀಗಲ್ ಓಡಿಸ್ಸಿ ಐವರಿ ಸಾರಿ ಉಟ್ಟು, ಕತ್ತಿಗೆ ಚೆಂದದ ಮುತ್ತಿನ ಹಾರ ತೊಟ್ಟಿರುವ ಸಮಂತಾ ಅಂದದ ಗೊಂಬೆಯಂತೆ ಕಂಗೊಳಿಸುತ್ತಿದ್ದಾರೆ. ದಂತದ ಬಣ್ಣದ ಸೀರೆಯಲ್ಲಿ ಮಿರಮಿರ ಮಿಂಚುತ್ತಿರುವ ಸಮಂತಾ ಕೊರಳಲ್ಲಿರುವ ಮುತ್ತಿನಹಾರ ಅವರ ಚೆಂದವನ್ನು ಇನ್ನೂ ಹೆಚ್ಚಾಗಿಸಿದೆ.
ನಟಿ ಸಮಂತಾ ಮೆಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವುದು ಗೊತ್ತೇ ಇದೆ. ಆದರೆ, ಆಕೆ ಅದನ್ನೇ ತಲೆಯಲ್ಲಿಟ್ಟುಕೊಂಡು ಕೂತಿಲ್ಲ. ಬದಲಿಗೆ ಒಂದು ಕಡೆ ಕಾಯಿಲೆಗೆ ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತ, ಇನ್ನೊಂದು ಕಡೆ ವೃತ್ತಿ ಜೀವನ, ಫ್ಯಾಷನ್ ಹೀಗೆ ವಿಭಿನ್ನ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜತೆಗೆ, ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಆಗುಹೋಗುಗಳನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಫ್ಯಾನ್ಸ್ ಜತೆ ಯಾವತ್ತೂ ಕನೆಕ್ಟ್ ಆಗಿರುತ್ತಾರೆ.
ರೂಟ್ ಬದಲಿಸಿದ ಕಾರ್ತಿಕ್ ಮಹೇಶ್, ಸಂಗೀತಾ ಸ್ನಾನಕ್ಕೆ ಹೋದಾಗ ನಮ್ರತಾ ಜತೆ ಲವ್ವಿ ಡವ್ವಿ
ಸೋಷಿಯಲ್ ಮೀಡಿಯಾದಲ್ಲಿ ಸಮಂತಾ ಈ ಫೋಟೋ ನೋಡಿದ ಅಭಿಮಾನಿಗಳು ವಿಭಿನ್ನವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ನಿಮಗಿಂತ ಚೆನ್ನಾಗಿರುವ ನಟಿ ಫಿಲ್ಲ್ ಇಂಡಸ್ಟ್ರಿಯಲ್ಲಿ ಯಾರೂ ಇಲ್ಲ. ನೀವು ಎಲ್ಲರಿಗಿಂತ ಚೆಂದ ಮತ್ತು ಅಂದವಾಗಿದ್ದೀರ' ಎಂದು ಒಬ್ಬರು ಅಭಿಮಾನಿ ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬರು 'ನೆನಪಿರಲಿ, ಇಡೀ ಜಗತ್ತನ್ನು ಸೂರ್ಯಕಿರಣಗಳಿಂದ ತುಂಬಿಸುತ್ತಿರುವ ಏಕೈಕ ನಟಿ ನೀವು.. ಲವ್ ಯೂ ಪ್ರಿನ್ಸೆಸ್ ಸಮಂತಾ' ಎಂದು ಇನ್ನೊಬ್ಬರು ಮೆಸೇಜ್ ಮಾಡಿದ್ದಾರೆ.
ರಾಮ್ ಲೀಲಾ ಚಿತ್ರಕ್ಕೆ ರಣವೀರ್ ಸಿಂಗ್ ಜೋಡಿ ಕರೀನಾ ಆಗಬೇಕಿತ್ತು, ದೀಪಿಕಾ ಎಂಟ್ರಿ ಹಿಂದಿನ ಸೀಕ್ರೆಟ್ ರಿವೀಲ್!
ನಟಿ ಸಮಂತಾ ಟ್ರೇಟ್‌ಮೆಂಟ್ ಸಲುವಾಗಿ ಅಮೆರಿಕಾದಲ್ಲಿ ಇದ್ದಾರೆ. ಆದರೆ, ಅವರು ತಮ್ಮ ಬಿಡುವಿನ ವೇಳೆಯಲ್ಲಿ ಹಲವು ಕೆಲಸಗಳಲ್ಲಿ ಬ್ಯುಸಿ ಆಗಿದ್ದು, ಇತ್ತೀಚೆಗೆ ದಂತದ ಬಣ್ಣದ ಸೀರೆ ಉಟ್ಟು ಟ್ರೆಂಡ್ ಸೃಷ್ಟಿ ಮಾಡಿದ್ದಾರೆ. ರೀಗಲ್ ಓಡಿಸ್ಸಿ ಐವರಿ ಸಾರಿ ಉಟ್ಟಿರುವ ಸಮಂತಾ ಫೋಟೋಸ್ ಈಗ ಟ್ರೆಂಡ್ ಆಗಿದೆ. ಒಟ್ಟಿನಲ್ಲಿ, ಸಮಂತಾ ಕುಳಿತರೂ ನಿಂತರೂ ಸುದ್ದಿಯಾಗುತ್ತಿದ್ದಾರೆ ಎನ್ನಬಹುದು. ಅದರಲ್ಲೂ ಇಂತಹ ಚೆಂದದ ಸೀರೆ ಕೊರಳಿಗೊಂದು ಮುತ್ತಿನ ಹಾರ ತೊಟ್ಟರೆ ಸಮಂತಾ ನೋಡದಿರಲು, ನೋಡಿಯೂ ಸುಮ್ಮನಿರಲು ಸಾಧ್ಯವಾಗುವುದೇ?