ರಿಚಾ ಚಡ್ಡಾ- ಅಲಿ ಫಜಲ್‌ ತಾರಾ ಜೋಡಿಗೆ ಹೆಣ್ಣು ಮಗು: ಅಭಿಮಾನಿಗಳಿಗೆ ಮಗಳ ಹೆಸರಿನದ್ದೇ ಚಿಂತೆ, ಕಾರಣ ಇಷ್ಟೇ...

By Suchethana D  |  First Published Jul 18, 2024, 4:54 PM IST

ನಟರಾದ ರಿಚಾ ಚಡ್ಡಾ ಮತ್ತು ಅಲಿ ಫಜಲ್‌  ಜೋಡಿಗೆ ಹೆಣ್ಣು ಮಗು ಹುಟ್ಟಿದೆ. ಮಗು ಹುಟ್ಟುತ್ತಿದ್ದಂತೆಯೇ ಮಗುವಿನ ಹೆಸರಿನ ಬಗ್ಗೆ ಚರ್ಚೆ ಶುರುವಾಗೋದಾ? ಕಾರಣ ಇಷ್ಟೇ... 
 


ಬಾಲಿವುಡ್‌ ನಟಿ ರಿಚಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಿನ್ನೆಯಷ್ಟೇ ಸೆಕ್ಸಿ ಫೋಟೋಶೂಟ್‌ ಮಾಡಿಸಿಕೊಂಡಿದ್ದರು ನಟಿ. ಹೊಟ್ಟೆಯನ್ನು ಕಾಣಿಸುವ ರೀತಿಯುಲ್ಲಿ ಪತಿ  ಅಲಿ ಫಜಲ್‌ ಜೊತೆ ಮಾಡಿಸಿಕೊಂಡಿದ್ದ ಈ ಫೋಟೋಶೂಟ್‌ಗೆ ಸಾಕಷ್ಟು ಟೀಕೆಗಳೂ ಕೇಳಿ ಬಂದಿದ್ದವು. ಗರ್ಭಿಣಿಯೊಬ್ಬಳು ಈ ರೀತಿ ಮಾಡುವುದು ಸರಿಯಲ್ಲ ಎಂದು ಹಲವರು ನಟಿಗೆ ಬುದ್ಧಿಮಾತನ್ನೂ ಹೇಳಿದ್ದರು. ಅದೇನೇ ಇದ್ದರೂ ತುಂಬು ಗರ್ಭಿಣಿಯಾಗುವವರೆಗೂ ಆರೋಗ್ಯದಿಂದಲೇ ಇದ್ದ ನಟಿ, ಇಂದು ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ. 

ಇದೀಗ ಮಗಳಿಗೆ ಏನು ಹೆಸರು ಇಡಬಹುದು ಎನ್ನುವ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳಿಗೆ ಮಕ್ಕಳು ಹುಟ್ಟಿದಾಗ ಹೀಗೆ ಅಭಿಮಾನಿಗಳು ಯೋಚನೆ ಮಾಡುವುದು ಸಹಜವೇ. ಆದರೆ ಇಲ್ಲಿ ಬೇರೆಯ ಕಾರಣಕ್ಕೆ ಚರ್ಚೆ ಶುರುವಾಗಿದೆ. ಅದೇನೆಂದರೆ. ರಿಚಾ ಚಡ್ಡಾ ಮತ್ತು ಅಲಿ ಫಜಲ್‌ ಅವರದ್ದು ಅಂತರ್‌ಧರ್ಮೀಯ ವಿವಾಹ. ಈ ಜೋಡಿ  4 ಅಕ್ಟೋಬರ್ 2022ರಂದು ಮದುವೆಯಾಗಿದ್ದರು.  ಇಕೋ ಫ್ರೆಂಡ್ಲಿ ಥೀಮ್ ಅಡಿ ರಿಚಾ ಮತ್ತು ಅಲಿ ಮದುವೆ ನಡೆದಿತ್ತು.9ನೇ ಫೆಬ್ರವರಿಯಂದು ಪೋಷಕರಾಗುತ್ತಿರುವ ಸಂತಸದ ಸುದ್ದಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಇನ್‌ಸ್ಟಾಗ್ರಾಂನಲ್ಲಿ 1+1=3 ಎಂಬ ಫೋಟೋ ಮತ್ತು ಗರ್ಭಿಣಿ ಎಮೋಜಿ ಚಿತ್ರ ಹಂಚಿಕೊಂಡಿದ್ದರು. ನಮ್ಮ ಜಗತ್ತಿನಲ್ಲಿ ಪುಟಾಣಿ ಹೃದಯ ಬಡಿತ ಆಗಮನ ಆಗುತ್ತಿದೆ. ಈ ಹೃದಯ ಬಡಿತ ನಮ್ಮ ಜಗತ್ತಿನ ಅತಿ ದೊಡ್ಡ ಶಬ್ದವಾಗಿದೆ ಎಂದು ಅಲಿ ಫಜಲ್ ಬರೆದುಕೊಂಡಿದ್ದರು. 

Tap to resize

Latest Videos

ವಿಚ್ಛೇದನ ಸುಲಭವಲ್ಲ... ಆದರೆ ನಿರೀಕ್ಷೆಯೇ ಹುಸಿಯಾದಾಗ.... ಐಷ್‌-ಅಭಿ ಬಿರುಕಿಗೆ ಸಾಕ್ಷಿಯಾದ ಪೋಸ್ಟ್‌?

ಆಗಲೇ ಸೋಷಿಯಲ್‌ ಮೀಡಿಯಾದಲ್ಲಿ ಮಗುವಿನ ಹೆಸರಿನ ಬಗ್ಗೆ ಚರ್ಚೆ ಶುರುವಾಗಿತ್ತು. ಸಾಮಾನ್ಯವಾಗಿ ಹಿಂದೂ ಮಹಿಳೆಯರನ್ನು ಮದುವೆಯಾಗಿರುವ ಬಹುತೇಕ ಎಲ್ಲಾ ಮುಸ್ಲಿಂ ನಟರು, ತಮ್ಮ ಮಕ್ಕಳಿಗೆ ಮುಸ್ಲಿಂ ಹೆಸರುಗಳನ್ನೇ ಇಟ್ಟಿದ್ದಾರೆ.  ಇದೇ ಕಾರಣಕ್ಕೆ ರಿಚಾ ಮಗುವಿನ ಮೇಲೆ ಸದ್ಯ ನೆಟ್ಟಿಗರ ಕಣ್ಣು ನೆಟ್ಟಿದೆ. ಅಷ್ಟಕ್ಕೂ ಇವರ ಮದುವೆಯ ಸಂದರ್ಭದಲ್ಲಿಯೂ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದರು. ಹಿಂದೂ-ಮುಸ್ಲಿಂ ಮದುವೆಯಾಗುವ ಸಂದರ್ಭದಲ್ಲಿ ಅದೂ ಸೆಲೆಬ್ರಿಟಿಗಳು ಮದುವೆಯಾಗುತ್ತಿದ್ದಾರೆ ಎಂದರೆ ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಆಗ ಪ್ರತಿಕ್ರಿಯೆ ನೀಡಿದ್ದ ನಟಿ ನಮ್ಮದು ಅಮರವಾದ ಪ್ರೀತಿ. ಯಾರ ಮಾತಿಗೂ ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮದು ಶಾಂತಿಯುತ ಜೀವನ. ಅಪೂರ್ವ ಪ್ರೀತಿ, ನಮ್ಮ ಪ್ರೀತಿಯ ಬಗ್ಗೆ ಯಾರು ಏನು ಬೇಕಾದರೂ ಹೇಳಿಕೊಳ್ಳಲಿ, ಅದು ನಮ್ಮ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದರು. ಈಗ ಮತ್ತೆ ಅದು ಮುನ್ನೆಲೆಗೆ ಬಂದಿದ್ದು, ಮಗುವಿಗೆ ಏನು ಹೆಸರು ಇಡುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ.

ನಿಮ್ಮ ಪ್ರೀತಿ ಅಷ್ಟೆಲ್ಲಾ ನಿಜವೇ ಆಗಿದ್ದರೆ, ಮಗಳಿಗೆ ಹಿಂದೂ ಹೆಸರು ಇಟ್ಟು ನೋಡಿ ಎಂದು ಕೆಲವರು ಚಾಲೆಂಜ್‌ ಮಾಡಿದ್ದಾರೆ. ಈ ಹಿಂದೆ ನಟಿ ಸ್ವರಾ ಭಾಸ್ಕರ್‌ ಅವರಿಗೂ ಇದೇ ರೀತಿ ಚಾಲೆಂಜ್‌ ಮಾಡಿದ್ದರು. ಆದರೆ ಅವರು ಕೊನೆಗೆ ಮಗುವಿಗೆ ರಾಬಿಯಾ ಎನ್ನುವ ಹೆಸರು ಇಟ್ಟಿದ್ದಾರೆ. ಅಂದಹಾಗೆ ನಿನ್ನೆಯಷ್ಟೇ ಗರ್ಭಿಣಿಯ ಫೋಟೋಶೂಟ್‌ ಮಾಡಿಸಿಕೊಂಡಿದ್ದ ನಟಿ ರಿಚಾ, ಇಷ್ಟು ಶುದ್ಧವಾದ ಪ್ರೀತಿ ಈ ಜಗತ್ತಿಗೆ ಏನು ಕೊಡಲು ಸಾಧ್ಯ? ಇಂತಹ ಅತ್ಯದ್ಭುತವಾದ ಜೀವನದ ಪಯಣದಲ್ಲಿ ನನ್ನ ಸಂಗಾತಿಯಾಗಿರೋದಕ್ಕೆ ಅಲಿ ಫಜಲ್‌ಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.  ನಮ್ಮ ಮಗುವಿನ ಮೇಲೆ ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆ ಇರಲಿ ಎಂದು ಬರೆದು ಕೊನೆಗೆ ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ಪೂರ್ಣಮುದ್ಚ್ಯತೇ. ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಶಿಷ್ಯತೇ" ಎಂಬ ಸಂಸ್ಕೃತ ಶ್ಲೋಕ ಬರೆದಿದ್ದರು. ಅದಕ್ಕಾಗಿ ಸಂಸ್ಕೃತದ ಹೆಸರು ಇಡಿ ಎನ್ನುತ್ತಿದ್ದಾರೆ ನೆಟ್ಟಿಗರು.  

ಊರ್ವಶಿ ಸ್ನಾನದ ವಿಡಿಯೋ ಲೀಕ್‌ ಬೆನ್ನಲ್ಲೇ ಮ್ಯಾನೇಜರ್‌ ಜೊತೆಗಿನ ಆಡಿಯೋನೂ ಬಹಿರಂಗ! ನಟಿ ಹೇಳಿದ್ದೇನು?

click me!