
ನಟ ವಿಜಯ್ ದೇವರಕೊಂಡ (Vijay Devarakonda) ಫ್ಯಾನ್ಸ್ ಫುಲ್ ಶಾಕ್ ಆಗಿದ್ದಾರೆ. ಕಾರಣ, ಸಂದರ್ಶನವೊಂದರಲ್ಲಿ ವಿಜಯ್ ದೇವರಕೊಂಡ 'ನಾನು ರಿಲೇಶನ್‌ಶಿಪ್‌ನಲ್ಲಿ (Relationship) ಇದೀನಿ ಎಂದು ಹೇಳಿದ್ದಾರೆ. ಈ ಮಾತು ಈಗ ಹೈದ್ರಾಬಾದ್ ಸಿಟಿ ಸುತ್ತಿ ಆಂಧ್ರ-ತೆಲಂಗಾಣ ದಾಟಿ ಇಡೀ ಭಾರತವನ್ನು ಸುತ್ತುತ್ತಿದೆ. ಈಗಾಗಲೇ ಜಗತ್ತಿನ ಹಲವು ಮೂಲೆಗಳನ್ನೂ ತಲುಪಿರಬಹುದು ಎನ್ನಲಾಗುತ್ತಿದೆ. ಬಹುತೇಕ ಎಲ್ಲರೂ ನಟ ವಿಜಯ್ ದೇವರಕೊಂಡ ಅವರು ನಟಿ ರಶ್ಮಿಕಾ ಮಂದಣ್ಣ (Rashmika Mandanna) ಜೊತೆ ಅವರು ಹೇಳಿದ 'ಸಂಬಂಧ'ದಲ್ಲಿ ಇರಬಹುದು ಎನ್ನುತ್ತಿದ್ದಾರೆ.
ಏಕೆಂದರೆ, ಬಹುತೇಕ ಜನರಿಗೆ ಗೊತ್ತಿರುವಂತೆ ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ನಟನೆಯ 'ಗೀತ ಗೋವಿಂದಂ (Geetha Govindam)' ಚಿತ್ರವು ಸೂಪರ್ ಹಿಟ್ ಆಗಿತ್ತು. ಜತೆಗೆ, ಸಿನಿಮಾದಲ್ಲಿ ಈ ಜೋಡಿಯ ಕೆಮೆಸ್ಟ್ರಿ ತುಂಬಾನೇ ವರ್ಕೌಟ್ ಆಗಿ ಸಿನಿಪ್ರೇಕ್ಷಕರಿಗೆ ಹುಚ್ಚು ಹಿಡಿಸಿತ್ತು. ಹಲವರು 'ನೀವಿಬ್ಬರು ಬೆಸ್ಟ್ ಜೋಡಿ, ರಿಯಲ್ ಲೈಫ್‌ನಲ್ಲೂ ಜೋಡಿಯಾಗಿಬಿಡಿ' ಎಂದು ನೇರವಾಗಿಯೂ ಇಬ್ಬರಿಗೂ ಹೇಳಿದ್ದುಂಟು. ಇನ್ನು ಸೋಷಿಯಲ್ ಮೀಡಿಯಾಗಳಲ್ಲಿಯಂತೂ ಹುಡುಕಿದರೆ ಅಂತಹ ಲಕ್ಷಾಂತರ ಕಾಮೆಂಟ್‌ಗಳು ಸಿಗುವುದು ಗ್ಯಾರಂಟಿ.
ಪ್ರೇಕ್ಷಕರಿಗೆ ಮೋಸ ಮಾಡ್ಬಿಟ್ಟೆ, 'ಆಫ್ರಿಕಾದಲ್ಲಿ ಶೀಲಾ'ನ ಬಂಡೀಪುರಕ್ಕೂ ತಂದ್ಬಿಟ್ಟೆ ಅಂದಿದ್ಯಾಕೆ ದ್ವಾರಕೀಶ್!
ನಟ ವಿಜಯ್ ದೇವರಕೊಂಡ ಹಾಗೂ ಮೃಣಾಲ್ ಠಾಕೂರ್ ಅಭಿನಯದ 'ಫ್ಯಾಮಿಲಿ ಸ್ಟಾರ್ (Family Star)' ಸಿನಿಮಾ ಪ್ಲಾಫ್ ಪಟ್ಟಿ ಸೇರಿಕೊಂಡ ಮೇಲಂತೂ, ವಿಜಯ್-ರಶ್ಮಿಕಾ ಫ್ಯಾನ್ಸ್‌ದು ಒಂದೇ ಮಾತು, ನೀವಿಬ್ಬರೂ ರೀಲ್‌ನಲ್ಲೂ ರಿಯಲ್‌ನಲ್ಲೂ ಜೋಡಿಯಾಗಿರಿ'. ಎಂದು. ಅದಕ್ಕೆ ಈ ಇಬ್ಬರೂ 'ಮೌನ' ಬಿಟ್ಟರೆ ಬೇರೆ ಉತ್ತರವನ್ನು ಇನ್ನೂ ಕೊಟ್ಟಿಲ್ಲ. ಆದರೆ, ಸಂದರ್ಶನವೊಂದರಲ್ಲಿ ನಟ ವಿಜಯ್ ದೇವರಕೊಂಡ 'ನಾನು ರಿಲೇಶನ್‌ಶಿಪ್‌ನಲ್ಲಿ ಇದೀನಿ, ಎಂದಿದ್ದಾರೆ. ಹಾಗಿದ್ದರೆ ಯಾರೊಂದಿಗೆ? ರಶ್ಮಿಕಾ ಜೊತೆ ಆಗಿದ್ದರೆ ಇಬ್ಬರೂ ಈಗಾಗಲೇ ಒಪ್ಪಿಕೊಳ್ಳುವ ಕಾಲ ಸಾಕಷ್ಟು ಬಾರಿ ಬಂದಿತ್ತು!
'ಉತ್ತರಕಾಂಡ' ಸೇರಿಕೊಂಡ ಚೈತ್ರ ಆಚಾರ್, ದಿಗಂತ್ & ಯೋಗರಾಜ್ ಭಟ್; ರಮ್ಯಾ ಜಾಗಕ್ಕೆ ಈ ಲಚ್ಚಿ?
ಟ್ವಿಸ್ಟ್ ಇರುವದೇ ಇಲ್ಲಿ.. ವಿಜಯ್ ದೇವರಕೊಂಡ ಅವರಿಗೆ ಸಂದರ್ಶಕರು 'ನೀವು ರಿಲೀಶನ್‌ಶಿಪ್‌ನಲ್ಲಿ ಇದೀರಾ' ಎಂದು ಪ್ರಶ್ನೆ ಕೇಳಿದ ತಕ್ಷಣವೇ, ನಟ 'ಹೌದು ನಾನು ಖಂಡಿತವಾಗಿಯೂ ರಿಲೇಶನ್‌ಶಿಪ್‌ನಲ್ಲಿ ಇದೀನಿ. ನಾನು ನನ್ನ ಪೇರೆಂಟ್ಸ್ ಜತೆ ರಿಲೇಶನ್‌ಶಿಪ್‌ನಲ್ಲಿ ಇದೀನಿ, ನನ್ನ ಬ್ರದರ್ ಜೊತೆ ರಿಲೇಶನ್‌ಶಿಪ್‌ನಲ್ಲಿ ಇದೀನಿ, ನಿಮ್ ಜತೆನೂ, ನಾವೆಲ್ಲರೂ ರಿಲೇಶನ್‌ಶಿಪ್‌ನಲ್ಲಿ ಇದೀವಿ..' ಎನ್ನುತ್ತಾರೆ. ಅದನ್ನು ಕೇಳಿ ಸಂದರ್ಶಕರು 'ನೀವು ಈಗ ಒಳ್ಳೆಯ ಮಾತುಗಾರರಾಗಿದ್ದೀರಿ..' ಎನ್ನುತ್ತಾರೆ.
ಕಲ್ಟ್ ಬಿಟ್ಟು 'ಪೃಥ್ವಿ ಅಂಬಾರ್' ಜತೆ ಸೇರಿ ಫ್ಯಾಮಿಲಿ ಕಥೆ ಹೇಳಲು ಸಜ್ಜಾದ ಚಂದ್ರಶೇಖರ್ ಬಂಡಿಯಪ್ಪ
ಅದಕ್ಕೆ ನಟ ವಿಜಯ್ ದೇವರಕೊಂಡ ಅವರು 'ಹೌದು, ಈಗ ಆಗಿದ್ದೇನೆ. ಆದರೆ ಇಷ್ಟು ದಿನ ನಾನು ಮಾತನಾಡಿದಾಗಲೆಲ್ಲ ಪ್ರಾಬ್ಲಂನಲ್ಲಿ ಸಿಕ್ಕಿಹಾಕಿಕೊಂಡಿದ್ದೀನಿ.. ಈ ಇಂಟರ್‌ವ್ಯೂನಲ್ಲಿ ನಾನು ಆಡಿದ ಮಾತಿನಿಂದ ಕೂಡ ನಾನು ಸಮಸ್ಯೆಯನ್ನು ಮೈ ಮೇಲೆ ಎಳೆದುಕೊಂಡರೂ ನನಗೆ ಅಚ್ಚರಿಯೇನೂ ಇಲ್ಲ' ಎಂದಿದ್ದಾರೆ. ಅದಕ್ಕೂ ಮೊದಲು ಕೇಳಿದ 'ನೀವು ಸೌತ್ ಇಂಡಿಯನ್ನಾ?' ಎಂಬ ಪ್ರಶ್ನೆಗೆ ನಟ ವಿಜಯ್ ದೇವರಕೊಂಡ 'ಹೌದು, ನಾನು ಹೈದ್ರಾಬಾದ್‌ನಲ್ಲಿ ಹುಟ್ಟಿದ್ದೇನೆ. ತೆಲುಗು ಅಪ್ಪ-ಅಮ್ಮನಿಗೆ ಮಗನಾಗಿ ಹುಟ್ಟಿದ್ದೇನೆ. ಹೀಗಾಗಿ ನಾನು ಪಕ್ಕಾ ಸೌತ್ ಇಂಡಿಯನ್' ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.