Divya Spandana: ಗೌಡ್ರ ಹುಡುಗನ ಹುಡುಕಾಟದ ನಡುವೆಯೇ ನಟಿ ರಮ್ಯಾ ನಾಯಿ ಮಿಸ್ಸಿಂಗ್​! ಬಹುಮಾನ ಘೋಷಣೆ

Published : May 06, 2023, 03:58 PM IST
 Divya Spandana:  ಗೌಡ್ರ  ಹುಡುಗನ ಹುಡುಕಾಟದ ನಡುವೆಯೇ ನಟಿ ರಮ್ಯಾ ನಾಯಿ ಮಿಸ್ಸಿಂಗ್​! ಬಹುಮಾನ ಘೋಷಣೆ

ಸಾರಾಂಶ

 ಸದ್ಯ  ಬಿರುಸಿನ ಚುನಾವಣಾ ಪ್ರಚಾರದಲ್ಲಿ ನಿರತಾಗಿರುವ ನಟಿ ರಮ್ಯಾ ಅವರ ಮುದ್ದಿನ ನಾಯಿ ಕಾಣೆಯಾಗಿದ್ದು, ಹುಡುಕಿ ಕೊಟ್ಟವರಿಗೆ ಬಹುಮಾನ ಕೊಡುವುದಾಗಿ ಘೋಷಿಸಿದ್ದಾರೆ.  

ರಾಜ್ಯ ವಿಧಾನಸಭಾ ಚುನಾವಣಾ ರಣಕಣ ರಂಗೇರುತ್ತಿದೆ. ಅಭ್ಯರ್ಥಿಗಳು ತಮ್ಮ ಎದುರಾಳಿಗಳ ವಿರುದ್ಧ ಗೆದ್ದು ಬೀಗಲು ರಣತಂತ್ರ ಹೆಣೆಯುತ್ತಿದ್ದಾರೆ. ಈ ಮಧ್ಯೆ ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ದರ್ಶನ್‌ ಧ್ರುವನಾರಾಯಣ್ (Darshan Dhruvanarayana) ಪರ ಕನ್ನಡ ಖ್ಯಾತ ನಟಿ, ಮೋಹಕ ತಾರೆ ರಮ್ಯಾ ಅವರು ಕಾಟೂರು ಗ್ರಾಮದಲ್ಲಿ ಪ್ರಚಾರ ನಡೆಸಿ ಬಹಳ ಸುದ್ದಿಯಾಗಿದ್ದಾರೆ. ಸದ್ಯ ನಟಿ ರಮ್ಯಾ ಸದ್ಯ ಚುನಾವಣಾ ಪ್ರಚಾರ ಕಾರ್ಯದಲ್ಲಿ ಬಿಜಿ ಇದ್ದಾರೆ. ಇಷ್ಟು ದಿನ ರಾಜಕೀಯದಲ್ಲಿ ಕಳೆದು ಹೋಗಿದ್ದ ಸ್ಯಾಂಡಲ್‌ವುಡ್ ಪದ್ಮಾವತಿ ರಮ್ಯಾ ಮತ್ತೆ ಕಾಂಗ್ರೆಸ್‌ಗೆ ಕಲರ್ ಫುಲ್ ಜೋಶ್ ತುಂಬುತ್ತಿದ್ದಾರೆ.  ಎಲೆಕ್ಷನ್ ಟೆನ್ಷನ್ ಮಧ್ಯೆಯೇ ನನಗೊಂದು ವರ ಸಿಕ್ತಾನಾ ಎನ್ನೋ ಮೂಲಕ ಬಹಳ ಸುದ್ದಿಯಲ್ಲಿದ್ದಾರೆ.  ನಿಮ್ಮ ಮದುವೆ ಯಾವಾಗ ಅಂತ ಫ್ಯಾನ್ಸ್‌ ರಮ್ಯಾ ಅವರನ್ನು ಕೇಳಿದ್ದಾಗ,  ಅದಕ್ಕೆ ಉತ್ತರಸಿದ ರಮ್ಯಾ (Ramya) ನನಗೆ ಗಂಡು ಹುಡುಕಿ ಕೊಡಿ. ಗೌಡ್ರು ಹುಡುಗನೇ ಆಗ್ಬೇಕು ಅಂದಿದ್ದಾರೆ. 

ಇಂತಿಪ್ಪ ನಟಿ ಈಗ ನಾಯಿಯ ವಿಷಯದಲ್ಲಿ ಸದ್ದು ಮಾಡುತ್ತಿದ್ದಾರೆ.  ಏಕೆಂದರೆ,  ಅವರ ನೆಚ್ಚಿನ ನಾಯಿ ಕಾಣೆಯಾಗಿದ್ದು, ನಟಿ ಬಹಳ ದುಃಖದಲ್ಲಿದ್ದಾರೆ. ನಾಯಿ ಎಂದರೆ ನಟಿ ರಮ್ಯ ಅವರಿಗೆ ಬಹಳ ಅಚ್ಚುಮೆಚ್ಚು. ನಟಿ ರಮ್ಯಾ ಅವರು ತಮ್ಮ ನಾಯಿಗಳ ಜೊತೆ ಫೋಟೋ ಶೇರ್ ಮಾಡುತ್ತಲೇ ಇರುತ್ತಾರೆ. ನಾಯಿಯ ಕುರಿತಾಗಿ ಬರೆಯುತ್ತಲೇ ಇರುತ್ತಾರೆ.  ಇತ್ತೀಚೆಗೆ ನಟಿ ರಮ್ಯಾ, ರಾಣಿ ಎನ್ನುವ ನಾಯಿಯ ಬಗ್ಗೆ ತಮ್ಮ  ಇನ್​ಸ್ಟಾಗ್ರಾಮ್ (Instagram) ಖಾತೆಯಲ್ಲಿ ಶೇರ್ ಮಾಡಿದ್ದರು.  ಇದರ ಜೊತೆ ಒಂದು ನೋಟ್  ಬರೆದಿದ್ದ ಅವರು, 'ರಾಣಿಯೊಂದು ಬೀದಿನಾಯಿಯಾಗಿದ್ದು, ಅದನ್ನು ನಾನು ಸಾಕುತ್ತಿದ್ದೇನೆ. ಇದು ನಮ್ಮ ಜೊತೆಗಿರುವುದು  ವರ್ಷವಾಗುತ್ತಾ ಬಂತು' ಎಂದಿದ್ದರು. 'ರಾಣಿ ಮೇಲೆ ಕಾರು ಹರಿದು ಹೋಗಿ ರಸ್ತೆಯಲ್ಲಿ ಬಿದ್ದಿತ್ತು. ಗೋವಾದಲ್ಲಿ ಶೆಲ್ಟರ್ ಹೌಸ್​ ಒಂದರಲ್ಲಿ ಒಂದು ತಿಂಗಳ ಕಾಲ ಶುಶ್ರೂಶೆ ಮಾಡಿದ ನಂತರ ರಾಣಿ ಹುಷಾರಾದಳು. ನಮ್ಮಲ್ಲಿ ವಯಸ್ಸಾದ ಎರಡು ನಾಯಿಗಳಿದ್ದವು. ಹಾಗಾಗಿ ರಾಣಿಯನ್ನು ಸಾಕಬಹುದು ಎನ್ನುವ ಬಗ್ಗೆ ನನಗೆ ಖಚಿತವಿರಲಿಲ್ಲ. ಆದರೆ ರಾಣಿ (Rani) ನಮ್ಮನೆಗೆ ಬಂದಳು. ನಾನು ಜೀವನದಲ್ಲಿ ಏನನ್ನೂ ನಿರ್ಧರಿಸಬೇಕಾಗಿಲ್ಲ, ಜೀವನವೇ ಎಲ್ಲವನ್ನೂ ನಿರ್ಧರಿಸುತ್ತದೆ ಎಂದು ಪೋಸ್ಟ್​ನಲ್ಲಿ ಬರೆದಿದ್ದರು. ಥಾಂಕ್ಯೂ ಮೈ ರಾನು., ಮೈ ಬೇಬಿ ಗರ್ಲ್, ನನ್ನ ಹೃದಯ ತೆರೆದಿದ್ದಕ್ಕೆ ಧನ್ಯವಾದಗಳು. ಐ ಲವ್ ಯೂ ಲವ್ ಯೂ ಲವ್ ಯೂ ಎಂದು ಬರೆದಿದ್ದರು. 

ಮಂಡ್ಯದಲ್ಲಿ ಮತ್ತೆ ಶುರುವಾಯ್ತು ರಮ್ಯಾ ಚೈತ್ರ ಕಾಲ: ಎಲೆಕ್ಷನ್ ಟೆನ್ಷನ್ ಮಧ್ಯೆ ವರ ಹುಡುಕಾಟದಲ್ಲಿ ಪದ್ಮಾವತಿ !

ಈಗ ಅವರು ಹೇಳುತ್ತಿರುವುದು ಈ ನಾಯಿಯ ಬಗ್ಗೆ ಅಲ್ಲ, ಬದಲಿಗೆ ಮತ್ತೊಂದು ನಾಯಿ ಚಾಂಪ್​ ಬಗ್ಗೆ. ಈಗ ಅವರ ಫೆವರೆಟ್​ ನಾಯಿ ಚಾಂಪ್ (Champ) ಕಾಣೆಯಾಗಿದ್ದು,  ಅದನ್ನು ಹುಡುಕಲು ಸಹಾಯ ಮಾಡುವಂತೆ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ನನ್ನ ನಾಯಿ ಕಾಣೆಯಾಗಿದೆ. ಅದನ್ನು ಹುಡುಕಲು ದಯವಿಟ್ಟು ನನಗೆ ಸಹಾಯ ಮಾಡಿ ಎಂದು ನಟಿ ಹೇಳಿಕೊಂಡಿದ್ದಾರೆ. ನಾಪತ್ತೆ! ನಮ್ಮ ಪ್ರೀತಿಯ ನಾಯಿಯನ್ನು ಹುಡುಕಲು ಸಹಾಯ ಮಾಡಿ ಎಂದು ಅವರು ಬರೆದುಕೊಂಡಿದ್ದಾರೆ.  ಚಾಂಪ್ ಹೆಸರಿನ ನಾಯಿ ಇದಾಗಿದ್ದು ಕಪ್ಪು ಬಣ್ಣದಲ್ಲಿದೆ. ಇದಕ್ಕೆ ಭಾಗಶಃ ಕಣ್ಣು ಕಾಣಿಸುವುದಿಲ್ಲ. ಸುರಕ್ಷಿತವಾಗಿ ನಾಯಿಯನ್ನು ಮರಳಿಸುವವರಿಗೆ ಬಹುಮಾನ ನೀಡಲಾಗುತ್ತದೆ ಎಂದು ನಟಿ ಬರೆದಿದ್ದಾರೆ.
 
ಮೇ 6ರಂದು ಕೊನೆಯಬಾರಿಗೆ ನೋಡಲಾಗಿದೆ. ತಾಜ್ ವೆಸ್ಟ್ ಎಂಡ್, ರೇಸ್ ಕೋರ್ಸ್ ರೋಡ್ ಬೆಂಗಳೂರಿನಿಂದ ನಾಪತ್ತೆಯಾಗಿದೆ. ನಿಮಗೆ ಮಾಹಿತಿ ಸಿಕ್ಕಿದರೆ 7012708137 ಇಲ್ಲಿ ಸಂಪರ್ಕಿಸಿ ಎಂದು ನಟಿ ಟ್ವಿಟರ್​ನಲ್ಲಿ ಬರೆದಿದ್ದಾರೆ.   

Divya Datta: ರೆಡ್​ಲೈಟ್​ ಏರಿಯಾದಲ್ಲಿ ಸಿಕ್ಕಿಬಿದ್ದ ನಟಿ ಬಿಚ್ಚಿಟ್ಟ ಭಯಾನಕ ಅನುಭವ
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?