
ಬಣ್ಣದ ಲೋಕದಲ್ಲಿ ದೊಡ್ಡ ಸಾಧನೆ ಮಾಡುವ ಕನಸೊತ್ತು ಬಂದಿದ್ದ ನಟಿ ಚೇತನಾ ರಾಜ್(Chethana Raj) ದುರಂತ ಸಾವು ಕಂಡಿದ್ದಾರೆ. ಚೇತನಾ ಸಾವು ನೋವಿನ ಸಂಗತಿ. ಫ್ಯಾಟ್ ಸರ್ಜರಿಗೆ ಒಳಗಾಗಿದ್ದ ಚೇತನ ಚಿಕಿತ್ಸೆ ವೈಫಲ್ಯದಿಂದ ಮೇ 17ರಂದು ಕೊನೆಯುಸಿರೆಳೆದರು. ಸೊಂಟ ದಪ್ಪಗಿದೆ ಎಂದು ಚೇತನಾ ಸರ್ಜರಿ ಮಾಡಿಸಿಕೊಂಡಿದ್ದರು ಎನ್ನಲಾಗಿದೆ. ಚೇತನಾ ಸಾವಿಗೆ ಅನೇಕರು ಕಂಬನಿ ಮಿಡಿದಿದ್ದಾರೆ. ಈ ಘಟನೆ ಬಗ್ಗೆ ನಟಿ ರಮ್ಯಾ(Ramya) ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರರಂಗದಲ್ಲಿ ಸೌಂದರ್ಯದ ಕುರಿತಂತೆ ನಟಿಯರ ಮೇಲೆ ಯಾವ ರೀತಿ ಒತ್ತಡ ಹೇರಲಾಗುತ್ತದೆ, ಸ್ವಲ್ಪ ದಪ್ಪ ಆದರೂ ಯಾವ ರೀತಿ ಅವಮಾನ ಮಾಡುತ್ತಾರೆ ಎಂಬುದನ್ನು ರಮ್ಯಾ ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ರಮ್ಯಾ ಬರೆದುಕೊಂಡಿದ್ದಾರೆ.
ರಮ್ಯಾ ಹೇಳಿದ ಮಾತಿಗೆ ಅನೇಕರು ಸಹಮತ ಸೂಚಿಸಿದ್ದಾರೆ. ಅವರು ಕನ್ನಡದಲ್ಲಿ ಟ್ವೀಟ್ ಮಾಡಿಲ್ಲ ಎಂದು ಕೆಲವರು ತಕರಾರು ತೆಗೆದಿದ್ದಾರೆ. ಅದೇನೇ ಇರಲಿ, ಒಂದು ಮುಖ್ಯ ವಿಚಾರದ ಬಗ್ಗೆ ರಮ್ಯಾ ಧ್ವನಿ ಎತ್ತಿರುವುದು ಚರ್ಚೆಗೆ ಕಾರಣ ವಾಗಿದೆ. ನಟನೆಯಿಂದ ದೂರ ಉಳಿದುಕೊಂಡಿದ್ದರೂ ಕೂಡ ಚಿತ್ರರಂಗದ ಜೊತೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಚಿತ್ರದ ಎಲ್ಲಾ ಆಗುಹೋಗುಗಳನ್ನು ಗಮನಿಸುತ್ತಾ ಇರುತ್ತಾರೆ. ಈಗ ಕಿರುತೆರೆ ನಟಿ ಚೇತನಾ ರಾಜ್ ಸಾವಿಗೆ ಮರುಕ ವ್ಯಕ್ತಪಡಿಸುವುದರ ಜೊತೆಯಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
RIP chetana raj ಈ ರೀತಿಯ ಸರ್ಜರಿ ಯಾರೂ ಮಾಡಿಸಿಕೊಳ್ಳಬೇಡಿ, ಸಾವಿಗೀಡಾದ ಚೇತನಾ ಸ್ನೇಹಿತನ ಮನವಿ!
ಈ ಬಗ್ಗೆ ರಮ್ಯಾ, ‘ಪ್ಲಾಸ್ಟಿಕ್ ಸರ್ಜರಿ ಬಳಿಕ ಮೃತರಾದ ಯುವ ನಟಿಯ ಬಗ್ಗೆ ಸುದ್ದಿ ಓದಿ ತಿಳಿದುಕೊಂಡೆ. ಮಹಿಳೆಯರ ಮೇಲೆ ಅಸಹಜವಾದ ಸೌಂದರ್ಯದ ಮಾನದಂಡಗಳನ್ನು ಹೇರಲಾಗುತ್ತದೆ. ಯಾವ ರೀತಿ ಕಾಣಬೇಕು ಎಂಬ ಬಗ್ಗೆ ಮಹಿಳೆಯರ ಮೇಲೆ ತೀವ್ರ ಒತ್ತಡ ಇದೆ. 2018ರಲ್ಲಿ ಕಾಲಿನ ಟ್ಯೂಮರ್ ಸರ್ಜರಿ ಬಳಿಕ ನಾನು ಕೂಡ ದೇಹದ ತೂಕದ ಸಮಸ್ಯೆಯಿಂದ ಕಷ್ಟ ಅನುಭವಿಸಿದೆ. ನಾನು ನನ್ನದೇ ಆದಂತಹ ಮಾರ್ಗದ ಮೂಲಕ ತೂಕ ಕಡಿಮೆ ಮಾಡಿಕೊಂಡೆ. ಅನೇಕ ಶೀಘ್ರ ಪರಿಹಾರಗಳಿಗೆ ಆಕರ್ಷಿತರಾಗುವುದು ಸುಲಭ’ ಎಂದು ರಮ್ಯಾ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಪುರುಷರಿಗೆ ಈ ಬ್ಯೂಟಿ ಸ್ಟ್ಯಾಂಡರ್ಡ್ ಅನ್ವಯ ಆಗಲ್ಲ. (ಯಾರಿಗೂ ಕೂಡ ಅನ್ವಯ ಆಗಬಾರದು). ದಪ್ಪಹೊಟ್ಟೆ ಇಟ್ಟುಕೊಂಡು, ತಲೆಗೆ ವಿಗ್ ಹಾಕಿಕೊಂಡಿರುವ 65 ವರ್ಷ ವಯಸ್ಸಿನ ನಟರನ್ನು ಈಗಲೂ ಹೀರೋ ಅಂತ ಪರಿಗಣಿಸಲಾಗುತ್ತದೆ. ಆದರೆ ಮಹಿಳೆಯ ವಿಚಾರದಲ್ಲಿ ಹಾಗಿಲ್ಲ. ಆಕೆಯ ದೇಹದ ತೂಕ ಸ್ವಲ್ಪ ಹೆಚ್ಚಿದರೂ ಕೂಡ ಅವಳನ್ನು ಆಂಟಿ, ಅಜ್ಜಿ ಅಂತ ಟ್ರೋಲ್ ಮಾಡಲಾಗುತ್ತದೆ. ಮಹಿಳೆಯರು ಹೇಗಿರಬೇಕು ಎಂಬುದನ್ನು ಜಗತ್ತು ಹೇಳುವುದು ಬೇಡ. ಚಿತ್ರರಂಗ ಬದಲಾಗಬೇಕಿರುವ ಕಾಲ ಇದು. ಸಂಭಾವನೆ ತಾರತಮ್ಯ, ಬ್ಯೂಟಿ ಸ್ಟ್ಯಾಂಡರ್ಡ್, ಪಾತ್ರಗಳ ತಾರತಮ್ಯದ ವಿರುದ್ಧ ಮಹಿಳೆಯರು ಮತ್ತು ಪುರುಷರು ಒಟ್ಟಾಗಿ ಹೋರಾಡಬೇಕು’ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.
1 ಲಕ್ಷ 60 ಸಾವಿರ ರೂ. ಫ್ಯಾಟ್ ಬರ್ನಿಂಗ್ ಆಪರೇಷ್; ಚೇತನಾಗೆ ಹಾರ್ಟ್ ಅಟ್ಯಾಕ್ ಆಗಿದ್ಯಾ?
ಇನ್ನು ಚೇತನಾ ರಾಜ್ ಸಾವಿನ ಕುರಿತು ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಆರಂಭ ಆಗಿದೆ. ಮೇ 17ರ ಸಂಜೆ ಚೇತನಾ ಹುಟ್ಟೂರಿನಲ್ಲೇರ ಅಂತ್ಯಕ್ರಿಯೆ ನೆರವೇರಿದೆ. ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಅದರ ವರದಿಗಾಗಿ ನಿರೀಕ್ಷಿಸಲಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.