
'ಲೇಡಿ ಸೂಪರ್ ಸ್ಟಾರ್' ನಯನತಾರಾ ಅವರು ಈಗ ಬಾಲಿವುಡ್ ಅಂಗಳಕ್ಕೂ ಕಾಲಿಟ್ಟಿದ್ದಾರೆ. ನಿರ್ದೇಶಕ ವಿಘ್ನೇಶ್ ಶಿವನ್ ಜೊತೆಗೆ ದಾಂಪತ್ಯ ಬದುಕಿಗೆ ಕಾಲಿಟ್ಟಿರುವ ಅವರು, ಇಬ್ಬರು ಗಂಡು ಮಕ್ಕಳ ತಾಯಿ. ದಶಕಗಳಿಂದಲೂ ಚಿತ್ರೋದ್ಯಮದಲ್ಲಿ ಸಕ್ರಿಯರಿರುವ ಈ ನಟಿ, ಅಮ್ಮನಾದ ಮೇಲೂ ಸೌತ್‌ನ ಟಾಪ್ ನಟಿ. ಜೊತೆಗೆ ಬಿಗ್ ಬಜೆಟ್ ಸಿನಿಮಾಗಳಿಗೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಶಾರುಖ್ ಖಾನ್ ಜತೆಗೆ ಜವಾನ್ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿ 1000 ಕೋಟಿಯ ಸಿನಿಮಾವನ್ನೂ ಮುಡಿಗೇರಿಸಿಕೊಂಡಿದ್ದಾರೆ.
ಮೊದಲ ಬಾರಿಗೆ ಹಿಂದಿಯಲ್ಲಿ ನಟಿಸಿರುವ 'ಜವಾನ್' ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿಕೊಂಡಿದೆ. ಹಾಗಾಗಿ, ನಯನತಾರಾಗೆ ಮೊದಲ ಹಿಂದಿ ಸಿನಿಮಾದಲ್ಲೇ ಭಾರಿ ಗೆಲುವು ಸಿಕ್ಕಿದೆ. ಇದರ ಜೊತೆಗೆ ಈಚೆಗೆ ಅವರ 'ಇರೈವನ್' ಸಿನಿಮಾ ಕೂಡ ರಿಲೀಸ್ ಆಗಿದೆ. ನಯನತಾರಾ 75, ಟೆಸ್ಟ್, ಥನಿ ಒರುವನ್ 2 ಸೇರಿದಂತೆ ಒಂದಷ್ಟು ಸಿನಿಮಾಗಳನ್ನು ಅವರು ಒಪ್ಪಿಕೊಂಡಿದ್ದಾರೆ. ಜತೆಗೆ ಇನ್ನೂ ಹಲವು ಸಿನಿಮಾಗಳಿಗೂ ಸಹಿ ಹಾಕಿದ್ದಾರೆ. ಆ ಪೈಕಿ ಹೆಚ್ಚು ಚರ್ಚೆಯಲ್ಲಿರುವ ಸಿನಿಮಾ ಮಣಿರತ್ನಂ ಮತ್ತು ಕಮಲ್ ಹಾಸನ್ ಕಾಂಬಿನೇಷನ್ ಚಿತ್ರ.
ನಾಯಕನ ತೊಡೆ ಮೇಲೆ ಕೂತ್ಕೊ ಅಂದ್ರು, ಆತ ಕಚ್ಚಿದ ಐಸ್ಕ್ರೀಂ ತಿನ್ನು ಅಂದ್ರು: ಆ ದಿನಗಳ ನೆನೆದ ಸುಹಾಸಿನಿ
ಇಂತಿಪ್ಪ ನಟಿ ಭಾರಿ ಸುದ್ದಿಯಾಗ್ತಿರೋದು ಅವರ ಹೊಸ ಚಿತ್ರದ ಬಗ್ಗೆ. ಹೌದು. ಈ ಚಿತ್ರವೇ #KH234. ಕಾಲಿವುಡ್‌ನ ಈ ಚಿತ್ರ ಈಗ ಭಾರಿ ಸುದ್ದಿಯಾಗುತ್ತಿರುವ ಕಾರಣ, ಈ ಚಿತ್ರದಲ್ಲಿ ನಟಿ ನಯನತಾರಾ, ನಟ ಕಮಲ ಹಾಸನ್ ಜೊತೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕಾರಣಕ್ಕೆ. ಇದರಲ್ಲೇನು ಹೊಸತು ಎನ್ನುವಿರಾ? ಇದಾಗಲೇ ನಯನತಾರಾ ಕಾಲಿವುಡ್‌ನ ಬಹುತೇಕ ಸ್ಟಾರ್ ಹೀರೋಗಳ ಜತೆಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಈಗ ಮೊದಲ ಬಾರಿಗೆ ಮಣಿರತ್ನಂ ಸಿನಿಮಾಕ್ಕೆ ನಟಿಸುತ್ತಿದ್ದಾರೆ. ಸದ್ಯ #KH234 ಸಿನಿಮಾ ಪ್ರೀ ಪ್ರೊಡಕ್ಷನ್ ಹಂತದಲ್ಲಿದೆ.
1987ರಲ್ಲಿ ತೆರೆಗೆ ಬಂದ ಮಣಿರತ್ನಂ ನಿರ್ದೇಶನ ನಾಯಗನ್ ಚಿತ್ರದಲ್ಲಿ ಕಮಲ್ ಹಾಸನ್ ನಾಯಕನಾಗಿ ನಟಿಸಿದ್ದರು. 36 ವರ್ಷಗಳ ಬಳಿಕ ಅವರ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಕ್ಕೆ ನಯನತಾರಾ ನಾಯಕಿ. ತ್ರಿಷಾ ಈ ಚಿತ್ರಕ್ಕೆ ನಾಯಕಿ ಎಂದು ಹೇಳಲಾಗಿತ್ತು. ಆದರೆ ಈಗ ನಯನತಾರಾ ಎನ್ನಲಾಗುತ್ತಿದೆ. ಈ ಚಿತ್ರದಲ್ಲಿ ರೊಮ್ಯಾನ್ಸ್ ಹೇರಳವಾಗಿದ್ದು, ನಯನತಾರಾ ಕಮಲ ಹಾಸನ್ ಜೊತೆ ಲಿಪ್‌ಲಾಕ್ ಮಾಡಲು ರೆಡಿ ಇದ್ದಾರೆ ಎನ್ನಲಾಗುತ್ತಿದೆ. ಇದೇ ಈಗ ಬಹಳ ಸುದ್ದಿಯಾಗುತ್ತಿರುವುದು. ಇದಕ್ಕೆ ಕಾರಣ ಕಮಲ ಹಾಸನ್ ಅವರಿಗೆ ಈಗ 70 ವರ್ಷ ವಯಸ್ಸಾದರೆ, ನಟಿ ನಯನತಾರಾಗೆ 38 ವರ್ಷ ವಯಸ್ಸು. ಈಗ ಅವರು ಸುಮಾರು ಅಪ್ಪನ ವಯಸ್ಸಿನ ಕಮಲ ಹಾಸನ್ ಜೊತೆ ತೆರೆ ಹಂಚಿಕೊಳ್ಳಲಿದ್ದು ಲಿಪ್‌ಲಾಕ್‌ಗೂ ರೆಡಿ ಆಗಿದ್ದಾರೆ ಎನ್ನಲಾಗಿದೆ. ಈ ವಿಷಯ ಕೇಳಿ ನಯನತಾರಾ ಫ್ಯಾನ್ಸ್ ಕೊಂಚ ಸಿಟ್ಟಾಗಿದ್ದಾರೆ. ಛೇ ಇದೆಲ್ಲಾ ಅವರಿಗೆ ಯಾಕೆ ಬೇಕಿತ್ತು ಎಂದು ಹೇಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.