ಅವರ ಜೊತೆ ಹೆಚ್ಚು ಮಾತಾಡಿಲ್ಲ ಆದರೆ...: KGF ಸ್ಟಾರ್ ಯಶ್ ಬಗ್ಗೆ ಪೂಜಾ ಹೆಗ್ಡೆ ಹೇಳಿದ್ದು ಹೀಗೆ

By Shruthi KrishnaFirst Published Apr 19, 2023, 10:46 AM IST
Highlights

ಅವರ ಜೊತೆ ಹೆಚ್ಚು ಮಾತಾಡಿಲ್ಲ. ಶೀಘ್ರದಲ್ಲೇ ಅವರ ಜೊತೆ ಸಿನಿಮಾ ಮಾಡುತ್ತೇನೆ ಎಂದು ಭಾವಿಸಿದ್ದೇನೆ ಎಂದು KGF ಸ್ಟಾರ್ ಯಶ್ ಬಗ್ಗೆ ಪೂಜಾ ಹೆಗ್ಡೆ ಹೇಳಿದ್ದಾರೆ. 

ಬಹುಭಾಷಾ ನಟ ಪೂಜಾ ಹೆಗ್ಡೆ ಸದ್ಯ ಸಲ್ಮಾನ್ ಖಾನ್ ಜೊತೆ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಬಾಲಿವುಡ್ ಮತ್ತು ದಕ್ಷಿಣ ಭಾರತ ಎರಡೂ ಕಡೆ ಬ್ಯುಸಿಯಾಗಿರುವ ಪೂಜಾ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ದೊಡ್ಡ ದೊಡ್ಡ ಕಲಾವಿದರ ಜೊತೆ ತೆರೆಹಂಚಿಕೊಳ್ಳುತ್ತಿರುವ ಪೂಜಾ ಕನ್ನಡದ ಖ್ಯಾತ ನಟನ ಜೊತೆ ನಟಿಸುವ ಆಸೆ ಹೊರಹಾಕಿದ್ದಾರೆ. ಅಂದಹಾಗೆ ಪೂಜಾ ಕರ್ನಾಟಕದವರು. ಕರಾವಳಿ ಮೂಲದ ಈ ಸುಂದರಿ ಇದುವರೆಗೂ ಯಾವುದೇ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ. ನಟಿಸುವ ಆಸೆಯನ್ನು ವ್ಯಕ್ತಪಡಿಸಿರಲಿಲ್ಲ. ಆದರೀಗ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಮಾತನಾಡಿ ಅವರ ಜೊತೆ ನಟಿಸಬೇಕು ಎಂದು ಹೇಳಿದ್ದಾರೆ. 

ಪೂಜಾ ಸದ್ಯ ಸಲ್ಮಾನ್ ಖಾನ್ ಜೊತೆ ಕಿಸಿ ಕಿ ಭಾಯ್ ಕಿಸಿ ಕಿ ಜಾನ್ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅನೇಕ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್​ ಒಂದಕ್ಕೆ  ನೀಡಿದ ಸಂದರ್ಶನದಲ್ಲಿ ಪೂಜಾ ಹೆಗ್ಡೆ ರಾಕಿಭಾಯ್ ಯಶ್ ಬಗ್ಗೆ ಮಾತನಾಡಿದ್ದಾರೆ. ಸೌತ್ ಸ್ಟಾರ್‌ಗಳ ಬಗ್ಗೆ ಪ್ರಶ್ನೆ ಪೂಜಾಗೆ ಪ್ರಶ್ನೆ ಎದುರಾಯಿತು. ಮೊದಲಿಗೆ ಕಮಲ್ ಹಾಸನ್ ಫೋಟೋ ತೋರಿಸಲಾಯಿತು. ಲೆಜೆಂಡ್ ಎಂದು ಹೇಳಿದರು. ಬಳಿಕ ಯಶ್ ಚಿತ್ರ ತೋರಿಸಲಾಯಿತು. ಅದಕ್ಕೆ ಪ್ರತಿಕ್ರಿಯೆ ನೀಡಿದ ಪೂಜಾ, 'ಕೆಜಿಎಫ್ ಬಳಿಕ ರಾಕಿ ಭಾಯ್ ಲೆಜಂಡ್. ನಾನು ಅವರೊಂದಿಗೆ ಹೆಚ್ಚು ಮಾತನಾಡಿಲ್ಲ. ಆದರೆ ಇತ್ತೀಚೆಗಷ್ಟೆ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದೆ. ನಾನು ಅವರ ಜೊತೆ ಶೀಘ್ರದಲ್ಲೇ ಕೆಲಸ ಮಾಡುತ್ತೇನೆ ಎಂದು ಭಾವಿಸುತ್ತೇನೆ' ಎಂದು ಪೂಜೆ ಹೇಳಿದ್ದಾರೆ.   

Latest Videos

ಪೂಜಾ ಅವರ ಈ ಮಾತುಗಳು ಈಗ ವೈರಲ್ ಆಗಿವೆ. ಶೀಘ್ರದಲ್ಲೇ ಎಂದರೆ ಯಶ್ ಮುಂದಿನ ಸಿನಿಮಾದಲ್ಲಿ ಪೂಜಾ ನಟಿಸುತ್ತಾರಾ ಎನ್ನುವ ಮಾತು ಕೇಳಿ ಬರುತ್ತಿದೆ. ಅಲ್ಲದೇ ಇತ್ತೀಚಿಗಷ್ಟೆ ಕೆಜಿಎಫ್-3 ಬಗ್ಗೆ ಹೊಂಬಾಳೆ ಫಿಲ್ಮ್ಸ್ ಸುಳಿವು ನೀಡಿದೆ. ಹಾಗಾಗಿ ಕೆಜಿಎಫ್-3ನಲ್ಲೂ ಪೂಜಾ ಕಾಣಿಸಿಕೊಂಡರೂ ಅಚ್ಚರಿ ಇಲ್ಲ. 

ಬ್ಯಾಕ್‌ಲೆಸ್ ಬ್ಲೌಸ್‌ನಲ್ಲಿ ಇಫ್ತಾರ್ ಕೂಟಕ್ಕೆ ಹೋದ ಪೂಜಾ; ಇದೇನು ಡಾನ್ಸ್ ಪಾರ್ಟಿನಾ ಎಂದು ಹಿಗ್ಗಾಮುಗ್ಗಾ ಟ್ರೋಲ್

ದಕ್ಷಿಣ ಭಾರತದ ಅನೇಕ ಕಲಾವಿದ ಬಗ್ಗೆ ಪೂಜಾ ಮಾತನಾಡಿದ್ದಾರೆ. ಮೆಗಾ ಸ್ಟಾರ್ ಚಿರಂಜೀವಿ, ರಾಮ್ ಚರಣ್, ಜೂ.ಎನ್ ಟಿ ಆರ್, ರಜನಿಕಾಂತ್  ಸೇರಿದಂತೆ ಅನೇಕರ ಬಗ್ಗೆ ಪೂಜಾ ಉತ್ತಮ ಮಾತುಗಳನ್ನು ಹೇಳಿದ್ದಾರೆ. ಮೆಗಾಸ್ಟಾರ್ ಡಾನ್ಸ್ ಹಾಗೂ ಸೆಟ್ ‌ನಲ್ಲಿ ಎಲ್ಲರ ಜೊತೆ ಕುಳಿತು ಮಾತನಾಡುವ ರೀತಿ ತುಂಬಾ ಇಷ್ಟ ಎಂದು ಹೇಳಿದ್ದಾರೆ. ಸೂಪರ್ ರಜನಿಕಾಂತ್ ಅವರ ಮಾನವೀಯ ಗುಣ, ಸರಳ ವ್ಯಕ್ತಿತ್ವ ತುಂಬಾ ಇಷ್ಟವಾಗುತ್ತದೆ ಎಂದು ಹೇಳಿದ್ದಾರೆ. 

ಸಲ್ಮಾನ್ ಖಾನ್ ಜೊತೆ ಡೇಟಿಂಗ್ ವದಂತಿ; ಮೊದಲ ಬಾರಿಗೆ ಮೌನ ಮುರಿದ ಕರಾವಳಿ ಸುಂದರಿ

ತಮಿಳಿನ ಮುಗಮುಡಿ ಸಿನಿಮಾ ಮೂಲಕ ನಟನೆಗೆ ಕಾಲಿಟ್ಟ ಪೂಜಾ ಹೆಗ್ಡೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಹೃತಿಕ್ ರೋಷನ್, ರಣ್ವೀರ್ ಸಿಂಗ್, ಮಹೇಷ್ ಬಾಬು, ಜೂ.ಎನ್ ಟಿ ಆರ್, ದಳಪತಿ ವಿಜಯ್, ಅಲ್ಲು ಅರ್ಜುನ್ ಸೇರಿದಂತೆ ಅನೇಕ ಸ್ಟಾರ್ ಕಲಾವಿದರ ಜೊತೆ ಪೂಜಾ ನಟಿಸಿದ್ದಾರೆ. ಸದ್ಯ ಸಾಲು ಸಾಲು ಸಿನಿಮಾಗಳ ಸೋಲಿನ ಸುಳಿಯಲ್ಲಿರುವ ಪೂಜಾ ಕಿಸಿ ಕಿ ಭಾಯ್ ಕಿಸಿ ಕಿ ಜಾನ್ ಸಿನಿಮಾ ಮೂಲಕ ಸಕ್ಸಸ್ ಎದುರು ನೋಡುತ್ತಿದ್ದಾರೆ. 

click me!