ಹಾಸ್ಯ ನಟ ಅಲ್ಲು ರಮೇಶ್ ಹೃದಯಾಘಾತದಿಂದ ನಿಧನ

Published : Apr 19, 2023, 09:59 AM IST
ಹಾಸ್ಯ ನಟ ಅಲ್ಲು ರಮೇಶ್ ಹೃದಯಾಘಾತದಿಂದ ನಿಧನ

ಸಾರಾಂಶ

ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಹೆಸರಾಂತ ಹಾಸ್ಯ ನಟ ಅಲ್ಲು ರಮೇಶ್. ಭಾವುಕರಾದ ಅಭಿಮಾನಿಗಳು....   

ತೆಲುಗು ಚಿತ್ರರಂಗದಲ್ಲಿ ಹಾಸ್ಯ ಇರ್ಬೇಕು ಹಾಸ್ಯ ಇದೆ ಅಂದ್ರೆ ಅಲ್ಲಿ ಅಲ್ಲು ರಮೇಶ್ ಇರಬೇಕು. ಅಷ್ಟರ ಮಟ್ಟಕ್ಕೆ ಹೆಸರು ಮಾಡಿರುವ ರಮೇಶ್ ಏಪ್ರಿಲ್ 13ರಂದು ವಿಶಾಖಪಟ್ಟಣಂನಲ್ಲಿ ಹೃದಯಾಘಾತದಿಂದ ಅಗಲಿದ್ದಾರೆ. 52 ವರ್ಷ ಇನ್ನಿಲ್ಲ ಅನ್ನೋ ವಿಚಾರ ತಿಳಿದು ಚಿತ್ರರಂಗ ಮತ್ತು ಅಭಿಮಾನಿಗಳು ಕಣ್ಣೀರಿಟ್ಟಿದ್ದಾರೆ. 

ನಿರ್ದೇಶಕ ಆನಂದ್ ರವಿ ಸೋಷಿಯಲ್ ಮೀಡಿಯಾದಲ್ಲಿ ಅಲ್ಲು ರಮೇಶ್ ಇನ್ನಿಲ್ಲ ಅನ್ನೋ ವಿಚಾರವನ್ನು ತಿಳಿಸಿದ್ದಾರೆ. ಇಡೀ ಚಿತ್ರರಂಗವೇ ಶಾಕ್‌ನಲ್ಲಿದೆ. 

'ಚಿತ್ರರಂಗಕ್ಕೆ ಕಾಲಿಟ್ಟ ಮೊದಲ ದಿನದಿಂದ ನನಗೆ ದೊಡ್ಡ ಸಪೋರ್ಟ್‌ ಅಗಿ ನಿಂತವರು ಅಲ್ಲು ರಮೇಶ್ ಸರ್. ನಮ್ಮ ತಲೆಯಲ್ಲಿ ನಿಮ್ಮ ಧ್ವನಿ ಇನ್ನೂ ಓಡುತ್ತಿದೆ. ಎಲ್ಲೋ ಪಕ್ಕದಲ್ಲಿ ನಿಂತುಕೊಂಡು ಕೂಗುತ್ತಿದ್ದೀರಿ ಅನಿಸುತ್ತಿದೆ. ರಮೇಶ್ ಗಾರು ಅಗಲಿರುವ ವಿಚಾರ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ನನ್ನಂತೆ ಅದೆಷ್ಟೋ ಜರ ಮನಸ್ಸು ಮುಟ್ಟಿದ್ದೀರಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಆನಂದ್ ರವಿ ಟ್ವೀಟ್ ಮಾಡಿದ್ದಾರೆ.

ಅಲ್ಲು ರಮೇಶ್ ಮೂಲತಃ ವಿಶಾಖಪಟ್ಟಣಂ ನವರು. ಚಿತ್ರರಂಗಕ್ಕೆ ಕಾಲಿಡುವ ಮುನ್ನ ರಂಗಭೂಮಿಯಲ್ಲಿ ಜರ್ನಿ ಅರಂಭಿಸಿದರು. ಚಿರುಜಲ್ಲು ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು  ಅದಾದ ನಂತರ 'ತೋಳು ಬೊಮ್ಮಲತಾ,' 'ಮಥುರಾ ವೈನ್ಸ್,' 'ವೀಧಿ,' 'ಬ್ಲೇಡ್ ಬಾಬ್ಜಿ,' ಮತ್ತು 'ನೆಪೋಲಿಯನ್' ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 2015ರಲ್ಲಿ ಬಿಡುಗಡೆ ಕಂಡ ಕೇರಿಂತಾ ಸಿನಿಮಾದಲ್ಲಿ ನಾಕಾರಾಜು ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಕೊನೆ ಬಿಡುಗಡೆ ಕಂಡ ಸಿನಿಮಾ ರಾಜೇಂದ್ರ ಪ್ರಸಾದ್ ಅವರ 'ಆನುಕೋನಿ ಪ್ರಯಾಣ.'

ಸ್ಯಾಂಡಲ್‌ವುಡ್‌ಗೆ ಮತ್ತೊಂದು ಶಾಕ್, ಹೃದಯಾಘಾತದಿಂದ ಖ್ಯಾತ ನಿರ್ದೇಶಕ ಕಿರಣ್ ಗೋವಿ ನಿಧನ!

ಇತ್ತೀಚಿಗೆ ಬಿಡುಗಡೆ ಕಂಡ ಮಾ ವಿದಕುಲು ವೆಬ್‌ ಸೀರಿಸ್‌ನಲ್ಲಿ ನಾಯಕಿಯ ತಂದೆ ಪಾತ್ರದಲ್ಲಿ ಮಿಂಚಿದ್ದರು. ಸಣ್ಣ ಪುಟ್ಟ ಪಾತ್ರ ಮಾಡಿಕೊಂಡು ದೊಡ್ಡ ಹಾಸ್ಯ ನಟನಾಗಿ ಗುರುತಿಸಿಕೊಂಡಿರುವ ಅಲ್ಲು ರಮೇಶ್ ಅದ್ಭುತವಾಗಿ ಅಭಿನಯಿಸುತ್ತಾರೆ. 'ನೆಪೋಲಿಯನ್' ಮತ್ತು 'ತೊಳುಬೊಮ್ಮಲತಾ' ಸಿನಿಮಾಗಳಲ್ಲಿ ತಮ್ಮ ಅಭಿನಯಕ್ಕಾಗಿ ಅವರು ಗುರುತಿಸಿಕೊಂಡರು.

ಅಲ್ಲು ರಮೇಶ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?