
ನಟಿ-ಚಲನಚಿತ್ರ ನಿರ್ಮಾಪಕಿ ಪೂಜಾ ಭಟ್ ಅವರು ಮತ್ತೆ ಪ್ರಚಾರದಲ್ಲಿದ್ದಾರೆ. ಬಿಗ್ ಬಾಸ್ OTT 2 ನಲ್ಲಿ ಭಾಗವಹಿಸಿದ ನಂತರ ಅವರ ಫಾಲೋಯರ್ಸ್ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿರುವ ಪೂಜಾ ಭಟ್, ತಾನು ಚಿಕ್ಕ ವಯಸ್ಸಿನಲ್ಲಿ ನಟನೆಯನ್ನು ತ್ಯಜಿಸಿದ ಬಗ್ಗೆಯೂ ಮೌನ ಮುರಿದಿದ್ದಾರೆ. ಕೇವಲ 17ನೇ ವಯಸ್ಸಿನಲ್ಲಿ ನಟನೆಗೆ ಬಂದ ಪೂಜಾಳ ಚೊಚ್ಚಲ ಚಿತ್ರ ಡ್ಯಾಡಿಯನ್ನು ಅವರ ತಂದೆ ಮಹೇಶ್ ಭಟ್ ಅವರೇ ನಿರ್ದೇಶಿಸಿದ್ದರು. ಅಪ್ಪನೊಂದಿಗೆ ಲಿಪ್‌ಲಾಕ್ ಪೋಟೋ ಶೇರ್ ಮಾಡಿಕೊಂಡ ಪೂಜಾ ದೊಡ್ಡ ಸುದ್ದಿಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ!
ಪೂಜಾ ನಟನೆಯ ಡ್ಯಾಡಿ, ದಿಲ್ ಹೈ ಕಿ ಮಾಂತಾ ನಹಿ ನಂತರ, ಸಡಕ್ ಹ್ಯಾಟ್ರಿಕ್ ಹಿಟ್ ಆಗಿದ್ದವು. 19ನೇ ವಯಸ್ಸಿಗೆ ಸೂಪರ್ ಸ್ಟಾರ್ ಆಗಿದ್ದ ನಾನು 24ನೇ ವಯಸ್ಸಿಗೆ ಇಂಡಸ್ಟ್ರಿಗೆ ಗುಡ್ ಬೈ ಹೇಳಬೇಕಾಗಿ ಬಂದಾಗ ಯೇ ಹೈ ದುನಿಯಾ ಅಂದೆ. 24 ನೇ ವಯಸ್ಸಿನಲ್ಲಿ ಹೆಚ್ಚಿನ ಜನರು ಆಗಷ್ಟೇ ತಮ್ಮ ಕೆರಿಯರ್ ಪ್ರಾರಂಭಿಸುತ್ತಿರುವಾಗ, ನೀವು ಸ್ಟಾರ್‌ಡಮ್‌ನ ಉತ್ತಂಗ ತಲುಪಿದ್ದೀರಿ. ನಿಮ್ಮ ಅಗತ್ಯ ಬಾಲಿವುಡ್‌ಗಿಲ್ಲ ಎನ್ನುವಂತೆ ಸಿನಿ ಇಂಡಸ್ಟ್ರಿ ನನ್ನನ್ನು ದೂರ ಎಸೆಯಿತು, ಎಂದು ಹೇಳಿದ್ದಾರೆ.
ಸಂದರ್ಶನದ ವೇಳೆ ಪೂಜಾ ಅವರು, ತಾನು 25ನೇ ವಯಸ್ಸಿನಲ್ಲಿಯೇ ನಟನೆಯನ್ನು ತೊರೆದು, ನಿರ್ದೇಶಕಿಯಾಗಲು ಏಕೆ ನಿರ್ಧರಿಸಿದೆ ಎಂಬುದನ್ನೂ ಬಹಿರಂಗಪಡಿಸಿದ್ದಾರೆ. 25ನೇ ವಯಸ್ಸಿನಲ್ಲಿ, ನಾನು ನನ್ನ ಸ್ವಂತ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದೆ. ನಾನು ನನ್ನ ಮೊದಲ ರಾಷ್ಟ್ರೀಯ ಪ್ರಶಸ್ತಿಯನ್ನು (National Award) ಗೆದ್ದಿದ್ದೇನೆ. ನನ್ನ ಕೆಲಸದಲ್ಲಿ ಆತ್ಮತೃಪ್ತಿಯ ಭಾವನೆಯನ್ನು (Self Satisfaction) ಹೊಂದಿದ್ದೇನೆ. ನಾನು ದೇಶಾದ್ಯಂತ ಜನರನ್ನು ಭೇಟಿ ಮಾಡಿದ್ದೇನೆ. ಆ ಚಿತ್ರದಲ್ಲಿ ಸಂಗ್ರಹವಾದ ಹಣವನ್ನು ದಾನ ಮಾಡಲು ನಿರ್ಧರಿಸಿದ್ದೆ. ಅದಕ್ಕೆ ರಾಷ್ಟ್ರೀಯ ಪ್ರಶಸ್ತಿಯೂ ನನಗೆ ಸಿಕ್ಕಿತು. ನಂತರ ನಾನು ಕಾಜೋಲ್ ಜೊತೆ ದುಷ್ಮನ್ ಸಿನಿಮಾ ಮಾಡಿದೆ. ನಂತರ ನಾನು ಝಖ್ಮ್ ಅನ್ನು ನಿರ್ದೇಶಿಸಿದೆ ಎಂದು ಅವರು ತಮ್ಮ ಸಿನಿ ಜರ್ನಿಯ ಕಷ್ಟ ಸುಖಗಳನ್ನು ಈ ಸಂದರ್ಶನದಲ್ಲಿ ಹೇಳಿ ಕೊಂಡಿದ್ದಾರೆ.
ಇದಲ್ಲದೇ ಕೇವಲ ಸಿನಿಮಾ ನಿರ್ಮಾಣ ಮತ್ತು ನಿರ್ದೇಶನ ಮಾಡುತ್ತಿದ್ದು 21 ವರ್ಷಗಳಿಂದ ಕ್ಯಾಮೆರಾ ಎದುರಿಸಿರಲಿಲ್ಲ ಎಂದು ಪೂಜಾ ಭಟ್ ಹೇಳಿದ್ದಾರೆ. ಅವರ ಪ್ರಕಾರ, ಅವರು ತಮ್ಮ ಸ್ಟಾರ್‌ಡಮ್ ಯುಗ ಮುಗಿದಿದೆ ಮತ್ತು ಚಲನಚಿತ್ರ ನಿರ್ಮಾಪಕರಾಗಿ ಜೀವನದ ಹೊಸ ಹಂತವನ್ನು ಪ್ರವೇಶಿಸಿದ್ದಾರೆ. ನಿರ್ಮಾಪಕಿಯಾಗಿ (Producer) ಪೂಜಾ ಅವರ ಕೊನೆಯ ಚಿತ್ರ ಜಿಸ್ಮ್ 2, ಇದು ಸನ್ನಿ ಲಿಯೋನ್ ಅವರ ಚೊಚ್ಚಲ ಚಿತ್ರವೂ ಹೌದು. ಆ ನಂತರ ಬಾಲಿವುಡ್‌ನಲ್ಲಿ ಸನ್ನಿ ಲಿಯೋನ್ ಮೂಡಿಸಿದ ಹೆಜ್ಜೆ ಗುರುತು ಏನೆಂಬುದು ಪ್ರತಿಯೊಬ್ಬ ಚಿತ್ರ ರಸಿಕನಿಗೂ ಗೊತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.